Monday, October 18, 2010

PSI ನೇಮಕಾತಿ ಪರೀಕ್ಷೆ - 2009

ನಮ್ಮನ್ನು ಜೀವಂತವಾಗಿರಿಸಿರುವ ಆಮ್ಲಜನಕವು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.  ಇದು ಬರುವುದು
ಎ) ಇಂಗಾಲದ ಡೈ ಆಕ್ಸೈಡ್ ನಿಂದ,  ಬಿ) ಮಣ್ಣಿನಿಂದ ತೆಗೆಯಲ್ಪಟ್ಟ ಇಂಗಾಲದಿಂದ,  ಸಿ) ಖನಿಜದ ಆಕ್ಸೈಡ್ ನಿಂದ,  ಡಿ) ನೀರಿನಿಂದ

ಸಾಮಾನ್ಯ ಬಳಕೆಯ ಸಾಂಬಾರ ವಸ್ತು ಲವಂಗವು ದೊರೆಯುವುದು
ಎ) ಬೇರಿನಿಂದ,  ಬಿ) ಕಾಂಡದಿಂದ,  ಸಿ) ಮೊಗ್ಗಿನಿಂದ,  ಡಿ) ಹಣ್ಣಿನಿಂದ

14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
ಎ) ಸಸಾರಜನಕ,  ಬಿ) ಜೀವಸತ್ವ,  ಸಿ) ಕೊಬ್ಬು,  ಡಿ) ಹಾಲು, 

ಹೃದಯಘಾತವಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆ
ಎ) ಬಾಯಿಯಿಂದ ಬಾಯಿಯ ಉಸಿರಾಟ,  ಬಿ) ಎದೆನೀವುವುದು,  ಸಿ) ವೈದ್ಯರನ್ನು ಕರೆಯುವುದು,  ಡಿ) ಇಂಜೆಕ್ಷನ್ ಕೊಡುವುದು

ಸಮುದ್ರ ನೀರಿನಿಂದ ಸ್ವಚ್ಛನೀರನ್ನು ಈ ಕ್ರಮದಿಂದ ಪಡೆಯಬಹುದು
ಎ) ಸೋಸುವಿಕೆ,  ಬಿ) ಭಟ್ಟಿಇಳಿಸುವಿಕೆ,  ಸಿ) ಆವಿಯಾಗುವಿಕೆ,  ಡಿ) ಭಾಗಶ: ಭಟ್ಟಿಇಳಿಸುವಿಕೆ

ಅಡುಗೆ ಸೋಡಾದ ರಾಸಾಯನಿಕ ಹೆಸರು
ಎ) ಕ್ಯಾಲ್ಶಿಯಂ ಫಾಸ್ಫೇಟ್,  ಬಿ) ಸೋಡಿಯಂ ಬೈ ಕಾರ್ಬೊನೇಟ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಬೇಕರ್ಸ್ ಈಸ್ಟ್

ಅಡುಗೆ ಅನಿಲ ವಿತರಕರು ವಿತರಿಸುವ ಸಿಲಿಂಡರಿನ ಅನಿಲದ ಸ್ವರೂಪ
ಎ) ದ್ರವ,  ಬಿ) ಅನಿಲ,  ಸಿ) ಘನ,  ಡಿ) ದ್ರಾವಣ

ಶರೀರದ ಭಾರವು
ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಸಮನಾಗಿರುತ್ತದೆ,  ಬಿ) ದೃವಗಳಲ್ಲಿ ಹೆಚ್ಚಾಗಿರುತ್ತದೆ,  ಸಿ) ಭೂಮಧ್ಯ ರೇಖೆಯಲ್ಲಿ ಹೆಚ್ಚಾಗಿರುತ್ತದೆ,  ಡಿ)  ಸಮತಟ್ಟು ಪ್ರದೇಶಕ್ಕಿಂತ ಬೆಟ್ಟದ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ

ವಾಯು ಒತ್ತಡವನ್ನು ಅಳೆಯುವುದು
ಎ) ಹೈಡ್ರೋಮೀಟರ್,  ಬಿ) ಬ್ಯಾರೋಮೀಟರ್,  ಸಿ) ಹೈಗ್ರೋಮೀಟರ್,  ಡಿ) ಆಲ್ಟೀ ಮೀಟರ್

ಮೂರು ಪ್ರಾಥಮಿಕ ಬಣ್ನಗಳೆಂದರೆ
ಎ) ನೀಲಿ, ಹಸಿರು, ಕೆಂಪು,  ಬಿ) ನೀಲಿ ಹಳದಿ, ಕೆಂಪು,  ಸಿ) ಹಳದಿ, ಕಿತ್ತಳೆ,  ಕೆಂಪು,  ಡಿ) ನೇರಳೆ, ಬೂದು,  ನೀಲಿ

ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
ಎ) ರಾಜ ರಾಜ ಚೋಳ-1,  ಬಿ) ರಾಜೇಂದ್ರ ಚೋಳ-2,  ಸಿ) ಸಮುದ್ರ ಗುಪ್ತ,  ಡಿ) ವಿಕ್ರಮಾದಿತ್ಯ

ಹೊಯ್ಸಳ ರಾಜ್ಯವನ್ನು ಅಂತಿಮವಾಗಿ ವಶಪಡಿಸಿಕೊಂಡವರು ಯಾರು
ಎ) ಬಹಮನಿ ಸುಲ್ತಾನರು,  ಬಿ) ವಿಜಯನಗರ,  ಸಿ) ಪ್ರತಿಹಾರರು,  ಡಿ) ಪಲ್ಲವರು

1857ರ ದಂಗೆಯ ಸಂದರ್ಭದಲ್ಲಿ ಸ್ನೇಹಿತನ ಕುತಂತ್ರದಿಂದ ಬ್ರಿಟೀಷರಿಗೆ ಬಲಿಯಾದವರು
ಎ) ನಾನಾ ಸಾಹೇಬ್,  ಬಿ) ಕುನ್ವರ್ ಸಿಂಗ್,  ಸಿ) ಖಾನ್ ಬಹದ್ದೂರ್ ಖಾನ್,  ಡಿ) ತಾಂತ್ಯಾ ಟೋಪಿ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಕಸ್ತೂರಿಬಾ ಗಾಂಧಿ,  ಬಿ) ಆನಿಬೆಸೆಂಟ್,  ಸಿ) ಸರೋಜಿನಿ ನಾಯ್ಡು,  ಡಿ) ವಿಜಯಲಕ್ಷ್ಮಿ ಪಂಡಿತ್

1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ,  ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ,  ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,  ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ

1857ರ ಭಾರತದ ಪ್ರಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಗುಂಡು ಹಾರಿಸಿದ ಮುಖಂಡ
ಎ) ರಾಣಿ ಲಕ್ಷ್ಮಿಬಾಯಿ,  ಬಿ) ಭಕ್ತ್ ಖಾನ್,  ಸಿ) ಮಂಗಲ್ ಪಾಂಡೆ,  ಡಿ) ಶಿವಾಜಿ

ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
ಎ) ಖಾನ್ ಅಬ್ದುಲ್ ಗಫರ್ ಖಾನ್,  ಬಿ) ರಾಜಗೋಪಾಲ ಚಾರಿ,  ಸಿ) ಲಾಲಾ ಲಜಪತರಾಯ್,  ಡಿ) ದಾದಾಬಾಯಿ ನವರೋಜಿ

ಡಬ್ಲ್ಯೂ.ಜಿ.ಗ್ರೇಸ್ ಅವರು ಭಾಗವಹಿಸಿರುವ ಕ್ರೀಡೆ
ಎ) ಹಾಕಿ,  ಬಿ) ಬಿಲಿಯರ್ಡ್ಸ್,   ಸಿ) ಕ್ರಿಕೇಟ್,  ಡಿ) ಗಾಲ್ಫ್

1854ರ ಸ್ ಚಾರ್ಲ್ಸ್ ವುಡ್ಸ್ ನಿರ್ಗಮನ ಪ್ರಮುಖವಾಗಿ ಸಂಬಂಧಿಸಿದ್ದು
ಎ) ಆಡಳಿತಾತ್ಮಕ ಸುಧಾರಣೆಗಳು,  ಬಿ) ಸಾಮಾಜಿಕ ಸುಧಾರಣೆಗಳು,  ಸಿ) ಆರ್ಥಿಕ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು

1893ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು ----  ಈ ವಾಕ್ಯಕ್ಕೆ ಸಂಬಂಧಿಸಿದ್ದು ಯಾರು
ಎ) ವಿಷ್ಣು ಶಾಸ್ತ್ರಿ ಚೆಂಪ್ಲುಕರ್,  ಬಿ) ವಿ.ಡಿ.ಸಾವರ್ಕರ್,  ಸಿ) ಗೋಪಾಲ ಕೃಷ್ಣಗೋಖಲೆ,  ಡಿ) ಬಾಲಗಂಗಾಧರ ತಿಲಕರು

ರಾಜ್ಯಪಾಲರ ಆಜ್ಞೆಯ ಪರಮಾವಧಿ
ಎ) ಒಂದು ವರ್ಷ,  ಬಿ) ಮೂರು ತಿಂಗಳು,  ಸಿ) ಆರು ತಿಂಗಳು,  ಡಿ) ದೀರ್ಘಾವಧಿ

ಸದಸ್ಯನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪದಲ್ಲಿ ಯಾರು ಭಾಗವಹಿಸಬಹುದು
ಎ) ಉಪಾಧ್ಯಕ್ಷ,  ಬಿ) ಮುಖ್ಯ ನ್ಯಾಯಾಧೀಶ,  ಸಿ) ಅಟಾರ್ನಿಜನರಲ್,  ಡಿ) ಮುಖ್ಯ ಚುನಾವಣಾ ಆಯುಕ್ತ

ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನಿನಲ್ಲಿ ಯಾರು ಹೊರಡಿಸಬಹುದು
ಎ) ಭೂಸೈನ್ಯದ, ನೌಕಾಪಡೆಯ ಹಾಗೂ ವಾಯುಸೇನೆಗಳ ಮುಖ್ಯಸ್ಥರು,  ಬಿ) ಭಾರತದ ಪ್ರಧಾನ ಮಂತ್ರಿಗಳು,  ಸಿ) ಭಾರತದ ರಾಷ್ಟ್ರಪತಿ,  ಡಿ) ರಕ್ಷಣಾಸಚಿವರು

ವ್ಯಕ್ತಿಸ್ವಾತಂತ್ರದ ಬಹುದೊಡ್ಡ ಚಿನ್ಹೆ
ಎ) ಆಜ್ಞಾಪತ್ರ,  ಬಿ) ಸರ್ಟಿಯೋರರಿ,  ಸಿ) ಕೋ ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್

ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1956ರಲ್ಲಿ ಬಲವಂತ್ರಯ್ ಜಿ ಮೆಹ್ತಾ ತಂಡವನ್ನು ಆರಂಭಿಸಿದ ಕಾರಣ
ಎ) ಅಂದಿನ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳನ್ನು ವರದಿ ಮಾಡಲು,  ಬಿ) ಹೊಸ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯ ಸ್ಥಾಪಿಸಲು ಇರುವ ಸಾದ್ಯತೆಗಳ ಬಗ್ಗೆ ಪರಿಶೀಲನೆ,  ಸಿ) ಪ್ರಜಾಪ್ರಭುತ್ವದ ವಿಕೇಂದ್ರಿಕರಣಕ್ಕೆ ಸಲಹೆ ನೀಡಲು,  ಡಿ) ಸಾಮಾಜಿಕ ಅಭಿವೃದ್ಧಿ
ಯೋಜನೆಗಳ ಉತ್ತಮ ರೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆ ನೀಡಲು

ಬಿರ್ಸಾಮುಂಡಾರವರು ಬುಡಕಟ್ಟು ಜನಾಂಗದ ಹೋರಾಟದಲ್ಲಿ ಪಾಲುಗೊಂಡಿದ್ದ  ಪ್ರದೇಶ
ಎ) ಈಶಾನ್ಯ ಪ್ರದೇಶ,  ಬಿ) ಜಾರ್ಖಂಡ್,  ಸಿ) ನಗರ ವಿಭಾಗ,  ಡಿ) ಡೆಕ್ಕನ್

ಮಹಿಳಾ ರಾಷ್ಟ್ರೀಯ ಆಯೋಗ ರಚನೆಯಾದದ್ದು
ಎ) ಸಂವಿಧಾನದಲ್ಲಿ ಮಾಡಿದ ಬದಲಾವಣೆಯಿಂದ,  ಬಿ) ಸಚಿವ ಸಂಪುಟದ ನಿರ್ಣಯದಿಂದ,  ಸಿ) ಸಂಸತ್ತಿನ ನಿಬಂಧನೆಯಿಂದ,  ಡಿ) ಭಾರತದ ಅಧ್ಯಕ್ಷರ ಆಜ್ಞೆಯಿಂದ

ಕೆಳಗಿನ ಪ್ರಧನಮಂತ್ರಿಗಳಲ್ಲಿ ಯಾರು ಅಲ್ಪಸಂಖ್ಯಾತರ ಮುಖ್ಯಸ್ಥರಾಗಿರಲಿಲ್ಲ
ಎ) ಐ.ಕೆ.ಗುಜ್ರಾಲ್,  ಬಿ) ವಿ.ಪಿ.ಸಿಂಗ್,  ಸಿ) ಚಂದ್ರಶೇಖರ್,  ಡಿ) ಮುರಾರ್ಜಿ ದೇಸಾಯಿ

ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿನ ಸ್ಥಳೀಯ ಸ್ವಯಂ-ಸರ್ಕಾರವನ್ನು ಪರಿಚಯಿಸಿದವರು ಯಾರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಲಾರ್ಡ್ ರಿಪ್ಪನ್,  ಸಿ) ಲಾರ್ಡ್ ಕ್ಯಾನಿಂಗ್,  ಡಿ) ಲಾರ್ಡ್ ಮೆಕಾಲೆ

ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ,  ಬಿ) ಸಂತತಿ,  ಸಿ) ಆಸ್ತಿಗಳಿಕೆ,  ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು

ಗಾಂಧೀಜಿಯವರು ಯಾರ ಕಾನ್ಸೆನ್ಸ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಆರ್.ಟ್ಯಾಗೂರ್,  ಸಿ) ವಿ.ಪಾಟೇಲ್,  ಡಿ) ಜಿ.ಕೆ.ಗೋಖಲೆ

ಕ್ವಿಟ್ ಇಂಡಿಯಾ ಚಳುವಳಿಯನ್ನು ನ್ಯಾಷನಲ್ ಕಾಂಗ್ರೆಸ್ ಆರಂಭಿಸಿದ್ದು ಯಾವ ವೈಫಲ್ಯದ ನಂತರ
ಎ) ಕ್ರಿಪ್ಸ್ ಮಿಷನ್,  ಬಿ) ಲಾರ್ಡ್ ವೇವಲ್ ರ ಸಿಮ್ಲಾ ಸಭೆ ನಡೆದ ಸಂದರ್ಭ,  ಸಿ) ಕ್ಯಾಬಿನೆಟ್ ಮಿಷನ್,  ಡಿ) ಯಾವುದು ಅಲ್ಲ

ಗಾಂದೀಜಿಯವರ ರಾಮರಾಜ್ಯದ ಎರಡು ನಿಯಮಗಳು
ಎ) ಸತ್ಯ ಮತ್ತು ಅಹಿಂಸೆ,  ಬಿ) ನ್ಯಾಯ ಮಾರ್ಗ ಮತ್ತು ಉತ್ತಮ ಗುರಿ,  ಸಿ) ಖಾದಿ ಮತ್ತು ಅಹಿಂಸೆ,  ಡಿ) ಪ್ರಜಾಪ್ರಭುತ್ವ ಮತ್ತು
ಸಮಾಜವಾದ

ಮಹದೇವ ಗೋವಿಂದ ರಾನಡೆಯವರು ಸದಸ್ಯರಾಗಿದ್ದುದು
ಎ) ಆರ್ಯ ಸಮಾಜ,  ಬಿ) ಪ್ರಾರ್ಥನಾ ಸಮಾಜ,  ಸಿ) ಇಂಡಿಯಾ ಲೀಗ್,  ಡಿ) ಥಿಯಾಸಫಿಕಲ್ ಸೊಸೈಟಿ

ವೃತ್ತಿಪರ ನಾಗರೀಕ ಅವಿಧೇಯತಾ ಚಳುವಳಿ ಆರಂಭಗೊಂಡದ್ದು
ಎ) 1942,  ಬಿ) 1940,  ಸಿ) 1945,  ಡಿ) 1947

ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಎಂ.ಕೆ.ಗಾಂಧಿ,  ಸಿ) ಜೆ.ಎಲ್.ನೆಹರು,  ಡಿ) ಎಂ.ಎ.ಜಿನ್ನಾ

ಈ ಪ್ರಭಲ ಹಿಂದುಸ್ತಾನಿ ಗಾಯಕರು ಶ್ರೀ. ಅಲ್ಲಾಡಿಯ ಖಾನ್ ಅವರ ಶಿಷ್ಯರು
ಎ) ಗಂಗೂಬಾಯಿ ಹಾನಗಲ್,  ಬಿ) ಮಲ್ಲಿಕಾರ್ಜುನ ಮನ್ಸೂರ್,  ಸಿ) ಬಸವರಾಜ ರಾಜಗುರು,  ಡಿ) ಪಂಡಿತ್ ಭೀಮಸೇನ ಜೋಷಿ

ಭಾರತದಲ್ಲಿ ಬ್ರಿಟೀಷರ ಕೊನೆಯ ಎರಡು ವರ್ಷಗಳಲ್ಲಿ ಅನೇಕ ಚಳುಗಳಿಗಳು ಜರುಗಿದವು ಇದಕ್ಕೆ ಸೇರದಿರುವುದು
ಎ) ತಿರುವನಂತಪುರದ ಪುನ್ನಪ್ರ ವಯಲಾರ್,  ಬಿ) ಬಂಗಾಳದ ತೆಂಗ,  ಸಿ) ಹೈದರಾಬಾದಿನ ತೆಲಂಗಾಣ ಚಳುವಳಿ,  ಡಿ) ಅವಧ್ ನಲ್ಲಿನ ಏಕಾ ಚಳುವಳಿ

ಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
ಎ) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,  ಬಿ) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ,  ಸಿ) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ,  ಡಿ) 1919-22 ರ ಮೊದಲ ಅಸಹಕಾರ ಚಳುವಳಿ

ಅವರಿಗಿಂತ ಹೆಚ್ಚಾಗಿ ನನಗೆ ಸೋಲಾದದ್ದು  ಗಾಂಧಿಯವರು ಈ ಹೇಳಿಕೆ ನೀಡಿದ್ದು ಯಾರಿಗೆ
ಎ) ಸಿ.ಆರ್.ದಾಸ್,  ಬಿ) ಸರ್ದಾರ್ ವಲ್ಲಭ ಭಾಯಿ ಪಟೇಲ್,  ಸಿ) ಪಟ್ಟಾಭಿ ಸೀತಾರಾಮಯ್ಯ,  ಡಿ) ಸಿ. ರಾಜಗೋಪಾಲ ಚಾರಿ

ಭೂಮಿಯಿಂದ ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಪ್ರಮಾಣ
ಎ) ಜ್ಯೋತಿವರ್ಷ,  ಬಿ) ಮಾರು,  ಸಿ) ಸಮುದ್ರಯಾನದ ಮೈಲಿಗಳು,  ಡಿ) ಕಿಲೋ ಮೀಟರ್ಗಳು

1, 4, 9, 16, 25 ______ ?
ಎ) 36,  ಬಿ) 30,  ಸಿ) 35,  ಡಿ) 40

ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ
ಎ) ಅಮಾವಾಸ್ಯೆಯಂದು,  ಬಿ) ಶುಕ್ಲಪಕ್ಷದ ಮೊದಲ ವಾರ,  ಸಿ) ಶೂಕ್ಲ ಪಕ್ಷದ ಮೂರನೆ ವಾರ,  ಡಿ) ಹುಣ್ಣಿಮೆಯಂದು

ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು
ಎ) ಮೀಥೇನ್,  ಬಿ) ನೈಟ್ರೋಜನ್,  ಸಿ) ಓಝೋನ್,  ಡಿ) ಹೀಲಿಯಂ

ಪದರುಗಲ್ಲುಗಳನ್ನು ಗುರುತಿಸಿ
1) ಬಸಾಲ್ಟ್,  2) ಸುಣ್ಣದ ಕಲ್ಲು,  3) ಷೇಲ್,  4) ಗ್ರಾನೈಟ್,  5) ಕ್ವಾರ್ಟ್ಸ್
ಎ) 1ಹಾಗೂ2,  ಬಿ) 2ಹಾಗೂ3,  ಸಿ) 2ಹಾಗೂ5,  ಡಿ) 3ಹಾಗೂ4

ತೇವಾಂಶ ಅಳೆಯಲು ಬಳಸುವ ಸಾಧನ
ಎ) ಬಾರೋ ಮೀಟರ್,  ಬಿ) ಥರ್ಮಾ ಮೀಟರ್,  ಸಿ) ಹೈಗ್ರೋ ಮೀಟರ್,  ಡಿ) ಹೈಡ್ರೋಮೀಟರ್

ಪ್ರಪಂಚದ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರ
ಎ) ಚೀನ,  ಬಿ) ರಷ್ಯ,  ಸಿ) ಜಪಾನ್,  ಡಿ) ನಾರ್ವೆ

ರೇಬಿಸ್ ನಿಂದ ತೊಂದರೆಗೊಳಗಾಗುವುದು
ಎ) ಮೇಕೆ,  ಬಿ) ದನಗಳು,  ಸಿ) ಕೋಳಿಗಳು,  ಡಿ) ಎಲ್ಲಾ ಪ್ರಾಣಿಗಳು

ತೆಂಗಿನ ಅತಿ ದೊಡ್ಡ ಉತ್ಪಾದಕ ರಾಜ್ಯ ಯಾವುದು
ಎ) ಅಸ್ಸಾಂ,  ಬಿ) ಕೇರಳ,  ಸಿ) ತಮಿಳುನಾಡು,  ಡಿ) ಕರ್ನಾಟಕ

ಕುಂದ ಜಲವಿದ್ಯುತ್ ಯೋಜನೆ ಅನುಷ್ಟಾನ ಗೊಳಿಸಿರುವ ರಾಜ್ಯ ಯಾವುದು
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಕರ್ನಾಟಕ,  ಡಿ) ತಮಿಳುನಾಡು

ವಿಚಾರ ಸರಣಿಯಲ್ಲಿ ಹಣದುಬ್ಬರವೆಂದರೆ
ಎ) ಅಗತ್ಯ ವಸ್ತುಗಳ ಬೆಲೆ ಅದಾಯಕ್ಕಿಂತ ಹೆಚ್ಚಾದಾಗ,  ಬಿ) ಜಿ.ಡಿ.ಪಿ.ಗಿಂತ ಹಣದ ಸರಬರಾಜು ಹೆಚ್ಚಾದಾಗ,  ಸಿ) ಹಣ ವಿನಿಮಯದಲ್ಲಿ ರುಪಾಯಿ ಮೌಲ್ಯ ಕುಸಿದಾಗ,  ಡಿ) ರಾಜ್ಯಾದಾಯ ಕೊರತೆ ನಿಶ್ಚಿತ ಸಂದಾಯದ ಕೊರತೆಗಿಂತ ಹೆಚ್ಚಾದಾಗ

ಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆಯೆಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಢಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೆ. _______ ಕ್ಕಿಂತ ಕಡಿಮೆಯಿದ್ದರೆ
ಎ) 100,  ಬಿ) 75,  ಸಿ) 50,  ಡಿ) 25

ಉದ್ಯಮದ ಅಸ್ವಸ್ಥತೆಗೆ ಕಾರಣವಾಗುವ ಆಂತರಿಕ ಕಾರಣ ಇದಲ್ಲ
ಎ) ಅವ್ಯವಸ್ಥೆ,  ಬಿ) ವಿದ್ಯುತ್ ಕಡಿತ,  ಸಿ) ತಪ್ಪಾದ ಡಿವಿಡೆಂಡ್ ಪಾಲಿಸಿ,  ಡಿ) ಬಂಡವಾಳದ ವಿಂಗಡಣೆ

ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಂದಾಯದ ಅದಾಯ ಬರುವುದು
ಎ) ಅದಾಯ ತೆರಿಗೆ,  ಬಿ) ಎಜುಕೇಷನ್ ಸೆಸ್,  ಸಿ) ಕೇಂದ್ರ ಸುಂಕ ತೆರಿಗೆ,  ಡಿ) ಆಯಾತ ಸುಂಕ

ನ್ಯಾಷನಲ್ ಸೆಕ್ಯುರಿಟೀಸ್ ಡೆಪೋಸಿಟರಿ ಲಿಮಿಟೆಡ್ (ಎನ್.ಎಸ್.ಡಿ.ಎಲ್) ವ್ಯವಹಾರ ನೆಡೆಸುವುದು
ಎ) ಬೇರರ್ ಬಾಂಡ್,  ಬಿ) ಜಿ.ಡಿ.ಆರ್.ಗಳು,  ಸಿ) ಎಲೆಕ್ಟ್ರಾನಿಕ್ ಷೇರುಗಳು,  ಡಿ) ಡಿಬೆಂಚರುಗಳು

ಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ
ಎ) ಜಾನ್ ಮಥಾಯಿ,  ಬಿ) ಎಂ.ಎನ್.ರಾಯ್,  ಸಿ) ಎಂ.ವಿಶ್ವೇಶ್ವರಯ್ಯ,  ಡಿ) ಶ್ರೀಮನ್ ನಾರಾಯಣ್

ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
ಎ) ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,  ಬಿ) ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,  ಸಿ) ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,  ಡಿ) ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ

ಸಂಸ್ಕಾರಿ ಅಧೀನಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದಾಗಿದ್ದರೆ ಬಹುಪಾಲು ನೀರಾವರಿ ಯೋಜನೆಗಳೆನ್ನಬಹುದು
ಎ) 5000 ಹೆಕ್ಟೇರ್,  ಬಿ) 2000 ಹೆಕ್ಟೇರ್,  ಸಿ) 1500 ಹೆಕ್ಟೇರ್,  ಡಿ) 10000 ಹೆಕ್ಟೇರ್

ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923ರ ಬ್ರಿಟೀಷ್ ಇಂಡಿಯನ್  ಪಾಲಿಸಿಯ ರದ್ದುವಿಕೆಗೆ ಕಾರಣ
ಎ) ಮಾಂಟೆಗೊ-ಚೆಲ್ಮ್ಸಫೋರ್ಡ್ ಸುಧಾರಣೆ,  ಬಿ) ರಾಜ್ಯಾದಾಯ ಆಯುಕ್ತರ ಶಿಫಾರಸ್ಸು,  ಸಿ) ಸ್ವದೇಶಿ ಚಳುವಳಿ,  ಡಿ) ಅಮೇರಿಕ ವ್ಯಾಪಾರದಲ್ಲಿನ ಬದಲಾವಣೆ

ಶಕ ವರ್ಷದ ಪ್ರಕಾರ ರಾಷ್ಟ್ರೀಯ ಕ್ಯಾಲೆಂಡರಿನ ಕೊನೆಯ ತಿಂಗಳು ಯಾವುದು
ಎ) ಚೈತ್ರ,  ಬಿ) ಮಾಘ,  ಸಿ) ಶ್ರಾವಣ,  ಡಿ) ಫಾಲ್ಗುಣ

ಶಬ್ದದ ಪುನರಾವೃತ್ತಿಗೆ ಸಿಡಿ ಬಳಸುವುದು
ಎ) ಕ್ವಾರ್ಟ್ಸ್ ಹರಳು,  ಬಿ) ಟೈಟಾನಿಯಂ ಸೂಜಿ,  ಸಿ) ಲೇಸರ್ ಕಿರಣ,  ಡಿ) ಬೇರಿಯಂ ಟೈಟಾನಿಯಂ ಸೆರಾಮಿಕ್ಸ್

ವರ್ಡ್ ಪ್ರೊಸೆಸಿಂಗ್ ವ್ಯವಸ್ಥೆಗೆ ಬಳಸುವ ಸಾಧನ
ಎ) ಫ್ಲಾಪಿ ಡಿಸ್ಕ್,  ಬಿ) ಮ್ಯಾಗ್ನೆಟಿಕ್ ಕಾರ್ಡ್ ರೀಡರ್,  ಸಿ) ಸಿ.ಆರ್.ಟಿ,  ಡಿ) ಮೇಲಿನ ಎಲ್ಲವು

ಎಂ.ಎಸ್ ಡಾಸ್ ಇದು
ಎ) ಅನ್ವಯಿಕ ಸಾಫ್ಟ್ ವೇರ್,  ಬಿ) ಹಾರ್ಡ್ವೇರ್,  ಸಿ) ಸಿಸ್ಟಂ ಸಾಫ್ಟ್ವೇರ್,  ಡಿ) E.R.P.ಸಾಫ್ಟ್ ವೇರ್

ಈ ಕೆಳಗಿನವುಗಳಲ್ಲಿ ಯಾವುದನ್ನು ಯೂರೋಪಿನ ಆಟದಮೈದಾನ ಎಂದು ಕರೆಯುತ್ತಾರೆ
ಎ) ಇಟಲಿ,  ಬಿ) ಫ್ರಾನ್ಸ್,  ಸಿ) ಸ್ವಿರ್ಟರ್ಲ್ಯಾಂಡ್,  ಡಿ) ಜರ್ಮನಿ

ಕೆ.ಎಲ್.ಎಂ ರಾಯಲ್ ಏರ್ಲೈನ್ಸ್ ಸೇರಿರುವುದು
ಎ) ಇಟಲಿಗೆ,  ಬಿ) ಜಪಾನ್,  ಸಿ) ನೆದರ್ಲ್ಯಾಂಡ್,  ಡಿ) ಆಸ್ಟ್ರಿಯಾ

ಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ.  ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ 
ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.  ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
ಎ) 2,  ಬಿ) 3,  ಸಿ) 4,  ಡಿ) 5

Knowing is every thing ಎನ್ನುವ ವಾಕ್ಯವನ್ನು ಬಳಸುವ ಕಂಪನಿಯಾವುದು
ಎ) ಬಿಬಿಸಿ ವರ್ಲ್ಡ್,  ಬಿ) ಸ್ಟಾರ್,  ಸಿ) ಸೋನಿ,  ಡಿ) ಝೀ

ಭಾರತದಲ್ಲಿ ಅತಿಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು
ಎ) ತಮಿಳುನಾಡು,  ಬಿ) ಅಸ್ಸಾಂ,  ಸಿ) ಕೇರಳ,  ಡಿ) ಕರ್ನಾಟಕ

ದಕ್ಷಿಣ ಕೊರಿಯಾದ ಅತಿ ದೊಡ್ಡಕಾರು ತಯಾರಿಸುವ ಸಂಸ್ಥೆಯಾವುದು
ಎ) ಹ್ಯುಂಡೈ,  ಬಿ) ಹೊಂಡ,  ಸಿ) ಸುಝುಕಿ,  ಡಿ) ಟಯೋಟ

ಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಶೇರುದಾರರನ್ನು ಹೀಗೆ ಕರೆಯುವರು
ಎ) ಪ್ರಿಫೆರೆನ್ಸ್ ಷೇರು,  ಬಿ) ಈಕ್ವಿಟಿ ಷೇರು,  ಸಿ) ಮುಖಬೆಲೆ ಷೇರು,  ಡಿ) ಡೆಫರ್ಡ್ ಷೇರು

ಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು
ಎ) ಭಾರತ್ ಪೆಟ್ರೋಲಿಯಂ,  ಬಿ) ಇಂಡಿಯನ್ ಆಯಿಲ್,  ಸಿ) ಹಿಂದುಸ್ತಾನ್ ಪೆಟ್ರೋಲಿಯಂ,  ಡಿ) ರಿಲಯನ್ಸ್

ಅಣುಶಕ್ತಿಯ ವಿದ್ಯುತ್ ಸ್ಥಾವರ ಕರ್ನಾಟಕದಲ್ಲಿ ಎಲ್ಲಿದೆ
ಎ) ಸಾಗರ,  ಬಿ) ಬೀದರ್,  ಸಿ) ಕೈಗಾ,  ಡಿ) ದಾಂಡೇಲಿ

ಗೌರಿಬಿದನೂರು ಪ್ರಸಿದ್ಧಿಗೆ ಬರಲು ಕಾರಣ
ಎ) ಅಣೆಕಟ್ಟು,  ಬಿ) ಸಿಸ್ಮೋಗ್ರಾಫಿಕ್ ಅಳವಡಿಕೆ,  ಸಿ) ಹೊಯ್ಸಳ ದೇವಸ್ಥಾನಗಳು,  ಡಿ) ಮಿಶ್ರಧಾತು ಸ್ಥಾವರ

ಹಟ್ಟಿ ಚಿನ್ನದ ಗಣಿ ಇರುವುದು ಎಲ್ಲಿ
ಎ) ಗುಲ್ಬರ್ಗಾ,  ಬಿ) ರಾಯಚೂರು,  ಸಿ) ಕೊಪ್ಪಳ,  ಡಿ) ಬೀದರ್

ನಿಶ್ಯಬ್ದ ಗೋಪುರ ಹೊಂದಿಕೊಂಡಿರುವುದು
ಎ) ಜೈನರಿಗೆ,  ಬಿ) ಬೌದ್ಧರಿಗೆ,  ಸಿ) ಹಿಂದುಗಳಿಗೆ,  ಡಿ) ಪಾರ್ಸಿಗಳಿಗೆ

ಐ.ಎಲ್.ಓ. ಪ್ರಧಾನ ಕಛೇರಿ ಇರುವುದು ಎಲ್ಲಿ
ಎ) ರೋಮ್,  ಬಿ) ಜಿನಿವಾ,  ಸಿ) ವಾಷಿಂಗ್ಟನ್,  ಡಿ) ನ್ಯೂಯಾರ್ಕ್

ಅರಣ್ಯ ನಾಶದಿಂದ ಕಡಿಮೆಯಾಗುವುದು
ಎ) ಮಳೆ,  ಬಿ) ಮಣ್ಣಿನ ಸವೆತ,  ಸಿ) ಸುಂಟರಗಾಳಿ,  ಡಿ) ಭೂಸವೆತ

ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುವುದು ಈ ಅದಿರಿನಿಂದ
ಎ) ಬಾಕ್ಸೈಟ್,  ಬಿ) ಝಿಂಕ್,  ಸಿ) ಟಿನ್,  ಡಿ) ಲೆಡ್ & ಝಿಂಕ್

ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಯಿರುವುದು
ಎ) ಯಲಹಂಕ,  ಬಿ) ಕೊಲ್ಕತ್ತ,  ಸಿ) ಮುಂಬೈ,  ಡಿ) ನವದೆಹಲಿ

ಶಬ್ಧ ಅಳೆಯುವ ಪ್ರಮಾಣ ಯಾವುದು
ಎ) ನ್ಯೂಟನ್,  ಬಿ) ಜೌಲ್,  ಸಿ) ಡೆಸಿಬಲ್,  ಡಿ) ವ್ಯಾಟ್

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ 'ಮೂನ್ ಮಿಷನ್' ಯಾವುದು
ಎ) ಜಟಾಯು,  ಬಿ) ಪುಷ್ಪಕ್,  ಸಿ) ಆರ್ಯಭಟ,  ಡಿ) ಚಂದ್ರಯಾನ

ಎಜುಸ್ಯಾಟ್ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದು
ಎ) ಇಸ್ರೋ ಉಡಾಯಿಸಿರುವ ಅತಿ ಭಾರದ ಉಪಗ್ರಹ ಇದಾಗಿದೆ,  ಬಿ) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಪ್ರಥಮ ಉಪಗ್ರಹ,  ಸಿ) ಜಿ.ಎಸ್.ಎಲ್.ವಿ-ಎಫ್ 01 ರಿಂದ ಇದನ್ನು ಉಡಾಯಿಸಲಾಗಿದೆ,  ಡಿ) ಎಲ್ಲವೂ ಸರಿ

ಸುನಾಮಿ ಎಂದರೆ
ಎ) ಕರಾಟೆಯ ಒಂದು ಪ್ರಕಾರ,  ಬಿ) ಹೂ ಜೋಡಣಾ ಕಲೆ,  ಸಿ) ಸಮುದ್ರದಲ್ಲಿನ ಅಬ್ಬರದ ಅಲೆ ಸರಣಿ,  ಡಿ) ಗಿಡ್ಡಗಿಡಗಳನ್ನು ಬೆಳೆಸುವ ಕಲೆ

ದೇಶದ ಮೊದಲ ಜಲವಿದ್ಯುತ್ ಸ್ಥಾವರ
ಎ) ಶಿವನ ಸಮುದ್ರ,  ಬಿ) ಜೋಗ್ ಫಾಲ್ಸ್,  ಸಿ) ಗೋಕಾಕ್ ಫಾಲ್ಸ್,  ಡಿ) ಅಬ್ಬಿ ಫಾಲ್ಸ್

GIGO ಸಂಬಂಧಿಸಿರುವುದು
ಎ) ರಾಕೆಟ್ಗಳಿಗೆ,  ಬಿ) ಆಟೊಮೊಬೈಲ್ ಗಳಿಗೆ,  ಸಿ) ಕಂಪ್ಯೂಟರ್ ಗಳಿಗೆ,  ಡಿ) ಸಂಚಾರಿ ಸಂಕೇತಗಳಿಗೆ

ಸಿಗ್ನೋಮೊನೋಮೀಟರನ್ನು ಬಳಸುವುದು
ಎ) ಹೃದಯ ಸಂಬಂಧಿ ವ್ಯಾಧಿ ಗುರುತಿಸಲು,  ಬಿ) ರಕ್ತದೊತ್ತಡ ಅಳೆಯಲು,  ಸಿ) ನಾಡಿ ಮಿಡಿತ(ಹೃದಯದ ಬಡಿತ) ತಿಳಿಯಲು,  ಡಿ) ದೇಹದಲ್ಲಿನ ಕೊಬ್ಬಿನಾಂಶ ತಿಳಿಯಲು

ಐರಾವತದಲ್ಲಿ ಪ್ರಯಾಣಿಸಿದೆ ಎಂದು ಯಾರಾದರು ಹೇಳಿದರೆ ಅವರು ಪ್ರಯಾಣಿಸಿದ್ದು
ಎ) ಹಡಗು,  ಬಿ) ವಿಮಾನ,  ಸಿ) ಬಸ್,  ಡಿ) ಆನೆ

ಕೆ.ಎಸ್.ಐ.ಸಿ ಎಂದರೆ
ಎ) ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್,  ಬಿ) ಕರ್ನಾಟಕ ಸ್ಟೀಲ್ ಅಂಡ್ ಐರನ್ ಕಾರ್ಪೊರೇಷನ್,  ಸಿ) ಕರ್ನಾಟಕ ಸ್ಟೇಟ್ ಐರನ್ ಕಂಪನಿ,  ಡಿ) ಕರ್ನಾಟಕ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಕಂಪ್ಯೂಟರ್ಸ್

ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ಥಿ ದೊರೆಯಲು ಕಾರಣ
ಎ) ಸಾಪೇಕ್ಷ ಸಿದ್ದಾಂತ,  ಬಿ) ಗುರುತ್ವಾಕರ್ಷಣ ನಿಯಮ,  ಸಿ) ನ್ಯೂಕ್ಲಿಯರ್ ಬಿರಿತ,  ಡಿ) ಪರಮಾಣುಗಳಿಂದ ಬೆಳಕಿನ ಚದುರುವಿಕೆ

ಯುನೈಟೆಡ್ ನೇಷನ್ಸ್ ನಲ್ಲಿ ಮಕ್ಕಳ ವಿಷಯವಾಗಿ ಇರುವ ನಿಯೋಗ ಯಾವುದು
ಎ) ಯೂನಿಸೆಫ್,  ಬಿ) ಯು.ಎನ್.ಡಿ.ಪಿ,  ಸಿ) ಯು.ಎನ್.ಎಫ್.ಪಿ.ಎ,   ಡಿ) ಯು.ಎನ್.ಈ.ಎಸ್.ಸಿ.ಓ

ರಫ್ತು ಸಾಗಣೆ ವಲಯವನ್ನು ವಿಶೇಷ ಅರ್ಥಿಕ ವಲಯವನ್ನಾಗಿ ಪರಿವರ್ತಿಸಲಾಗಿದೆ, ಈ ಕೆಳಕಂಡ ಸ್ಥಳಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯವಲ್ಲ
ಎ) ನೋಯ್ಡಾ,  ಬಿ) ಸೂರತ್,  ಸಿ) ವಡೋದರ,  ಡಿ) ವಿಶಾಖಪಟ್ಟಣಂ

ಕೆಳಗಿನ ಯಾವುದು ಚಹ ಎಲೆ ಸಂಸ್ಕರಣೆಗೆ ಪ್ರಮುಖವಾದುದಲ್ಲ
ಎ) ಉರುಳುವಿಕೆ,  ಬಿ) ಒಣಗಿಸುವಿಕೆ,  ಸಿ) ಹುಳಿಯುವಿಕೆ,  ಡಿ) ಇಂಗಿಸುವಿಕೆ

ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಎಲ್ಲಿದೆ
ಎ) ಡೆಹ್ರಾಡೂನ್,  ಬಿ) ವೆಲ್ಲಿಂಗ್ ಟನ್,  ಸಿ) ಪುಣೆ,  ಡಿ) ಸಿಕಂದರಾಬಾದ್

ಚಂಪಾರಣ್ ಸತ್ಯಾಗ್ರಹವನ್ನು ಮಹಾತ್ಮಗಾಂಧಿಯವರು ಆರಂಭಿಸಿದ ವರ್ಷ
ಎ) 1915,  ಬಿ) 1917,  ಸಿ) 1919,  ಡಿ) 1923

ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪ್ರಶಸ್ಥಿಯಲ್ಲ
ಎ) ಅರ್ಜುನ ಪ್ರಶಸ್ಥಿ,  ಬಿ) ಅಶೋಕ ಚಕ್ರ,  ಸಿ) ಪರಮವೀರ ಚಕ್ರ,  ಡಿ) ಶೌರ್ಯ ಚಕ್ರ

ನ್ಯಾಷನಲ್ ಕೆಡೆಟ್ ಕಾರ್ಪ್ ಎಂಬುದು __________ ಸಂಸ್ಥಯಾಗಿದೆ
ಎ) ಕಾರ್ಖಾನೆ ನೌಕರರ,  ಬಿ) ಶಾಲಾ ಕಾಲೇಜಿನ ವಿದ್ಯಾರ್ಥಿಗಳ,  ಸಿ) ಕೃಷಿ ನಿರತ ರೈತರ,  ಡಿ) ವಿಶ್ವವಿದ್ಯಾಲಯ ಅಧ್ಯಾಪಕರ

ಕೆಳಗಿನವುಗಳಲ್ಲಿ ಯಾವುದು ಜೀವ ಮಂಡಲ ನಿಕ್ಷೇಪವಲ್ಲ
ಎ) ಅಗಸ್ತ್ಯಮಾಲ,  ಬಿ) ಪಂಚಮಾರ್ಹಿ,  ಸಿ) ನಲ್ಲಮಾಲ,  ಡಿ) ನೀಲಗಿರಿ

NABARD ಎಂದರೆ
ಎ) ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ & ರೀಜನಲ್ ಡೆವಲಪ್ ಮೆಂಟ್,  ಬಿ) ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್ ಮೆಂಟ್,  ಸಿ) ನ್ಯಾಷನಲ್ ಬ್ಯೂರೋ ಆಫ್ ಏರೊನಾಟಿಕಲ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್,
ಡಿ) ನ್ಯಾಷನಲ್ ಅಗ್ರಿಕಲ್ಚರ್ ಬ್ಯಾಂಕ್ ಆಂಡ್ ಅಸೋಸಿಯೇಟೆಡ್ ರೂರಲ್ ಡೆವೆಲಪ್ ಮೆಂಟ್

ಬೇಡಿಕೆ ನಿಯಮದಲ್ಲಿ 'ಉಳಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂಬ ವಾಕ್ಯದ ಅರ್ಥ
ಎ) ಬಳಕೆದಾರನ ಆದಾಯದಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಬಿ) ಇತರೆ ವಸ್ತುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಸಿ) ಬಳಕೆದಾರನ ಅಭಿರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಡಿ) ಮೇಲಿನ ಎಲ್ಲವೂ

ವರಿಷ್ಠ ಪಿಂಚಣಿ ವಿಮಾ ಯೋಜನೆಯನ್ನು ಜಾರಿಗೆ ತಂದವರು
ಎ) ನ್ಯಾಷನಲ್ ಇನ್ಶೂರೆನ್ಸ್ ಕಂಪನಿ,  ಬಿ) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ,  ಸಿ) ಎಲ್.ಐ.ಸಿ.ಇಂಡಿಯಾ,  ಡಿ) ಓರಿಯಂಟಲ್  ಇನ್ಶೂರೆನ್ಸ್ ಕಂಪನಿ

Wednesday, October 6, 2010

ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ - 2010

ಪೂರ್ವ ದೇಶಗಳ ಪವಿತ್ರ ಗ್ರಂಥಗಳು (ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್) ಬರೆದಂತಹ ಜರ್ಮನ್ ವಿದ್ವಾಂಸನ ಹೆಸರೇನು?
ಎ) ಮ್ಯಾಕ್ಸ್ ಮುಲ್ಲರ್,  ಬಿ) ವಿಲಿಯಂ ಶೇಕ್ಸ್ ಪಿಯರ್, ಸಿ) ಕಾರ್ಲ್ಮಾರ್ಕ್ಸ್ ಡಿ) ಮ್ಯಾಕ್ಸ್ ವೆಬರ್

ಸಂಪ್ರದಾಯದ ಪ್ರಕಾರ ಮುಖ್ಯವಾದ ಪುರಾಣಗಳೆಷ್ಟು
ಎ) 12,  ಬಿ) 14,  ಸಿ) 16,  ಡಿ) 18

ಇವುಗಳಲ್ಲಿ ಯಾವುದು ಕಾಳಿದಾಸ ರಚಿತ ಕೃತಿಯಲ್ಲ
ಎ) ಅಭಿಜ್ಞಾನ ಶಾಕುಂತಲಮ್,  ಬಿ) ಸ್ವಪ್ನ ವಾಸವದತ್ತಂ, ಸಿ) ರಘುವಂಶಮ್,  ಡಿ) ವಿಕ್ರಮೋರ್ವಶೀಯಮ್

ಏ ಎಂಬಾತನು ಅಂಕಗಣಿತದಲ್ಲಿ ಪಡೆದ ಅಂಕಗಳಲ್ಲಿ ಮೂರನೇ ಒಂದು ಭಾಗವು ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳ ಅರ್ಧದಷ್ಟಕ್ಕೆ ಸಮಾನವಾಗಿದೆ.  ಒಂದು ವೇಳೆ ಈ ಎರಡೂ ವಿಷಯಗಳಲ್ಲಿ ಆತನು ಗಳಿಸಿದ ಒಟ್ಟು ಅಂಕಗಳು 150 ಆಗಿದ್ದಲ್ಲಿ ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳೆಷ್ಟು
ಎ) 90,  ಬಿ) 60,  ಸಿ) 30,  ಡಿ) 80

ಅಕೌಸ್ಟಿಕ್ಸ್ ಈ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂದಿಸಿದೆ
ಎ) ಅಕೌಂಟ್ಸ್,  ಬಿ) ಭೌತಶಾಸ್ತ್ರ,  ಸಿ) ಶಬ್ದ, ಡಿ) ವಿದ್ಯುಚ್ಛಕ್ತಿ

ಭಾರತದ ಮೇಲೆ ಬಾಬರನು ಆಕ್ರಮಣವೆಸಗಿದಾಗ ದೆಹಲಿಯಲ್ಲಿ ಯಾವ ಅರಸೊತ್ತಿಗೆಯ ಆಳ್ವಿಕೆ ಇತ್ತು
ಎ) ಗುಲಾಮ,  ಬಿ) ಖಿಲ್ಜಿ,  ಸಿ) ಲೋಧಿ, ಡಿ) ತುಘಲಕ್

ಚುಚ್ಚುಮದ್ದಿನ  (ವ್ಯಾಕ್ಸಿನೇಶನ್) ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡುಹಿಡಿದವರು ಯಾರು
ಎ) ಎಡ್ವರ್ಡ್ ಜನ್ನರ್,  ಬಿ) ಲೂಯಿಪಾಶ್ವರ್, ಸಿ) ಜೋಸೆಫ್ ಲಿಸ್ಟರ್,  ಡಿ) ಅಲೆಗ್ಸಾಂಡರ್ ಫ್ಲೆಮಿಂಗ್

ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
ಎ) ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ,  ಬಿ) ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ,  ಸಿ) ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,  ಡಿ) ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.

ಇವುಗಳಲ್ಲಿ ಯಾವುದು ಪಂಚಾಯತಿ ರಾಜ್ ಸಂಸ್ಥೆಯಲ್ಲ
ಎ) ಗ್ರಾಮ ಸಭಾ,  ಬಿ) ಗ್ರಾಮ ಪಂಚಾಯತ್,  ಸಿ) ನ್ಯಾಯ ಪಂಚಾಯತ್,  ಡಿ) ಗ್ರಾಮ ಸಹಕಾರ ಸಂಘ

2012ರ ಒಲಂಪಿಕ್ ಕ್ರೀಡಾಕೂಟವನ್ನು ನೆಡೆಸಲು ನಿರ್ಧರಿಸಲಾಗಿರುವ ಸ್ಥಳ ಯಾವುದು
ಎ) ಲಂಡನ್,  ಬಿ) ದೆಹಲಿ,  ಸಿ) ಬೀಜಿಂಗ್, ಡಿ) ಪ್ಯಾರಿಸ್

ಯಾವ ದಿನದಂದು ವಿಶ್ವ ಏಡ್ಸ್ ದಿನ ಆಚರಿಸಲಾಗುವುದು
ಎ) 8ನೇ ಅಕ್ಟೋಬರ್,  ಬಿ) 2ನೇ ಏಪ್ರಿಲ್,  ಸಿ) 1ನೇ ಡಿಸೆಂಬರ್,  ಡಿ) 14ನೇ ಫೆಬ್ರವರಿ

ಒಂದು ವೇಳೆ 10 ಸಂಖ್ಯೆಯ ವಸ್ತುಗಳ ಮೂಲ ಬೆಲೆಯು 9 ಸಂಖ್ಯೆಯ ವಸ್ತುಗಳ ಮಾರಾಟ ಬೆಲೆಗೆ ಸಮಾನವಾಗಿದ್ದಲ್ಲಿ ದೊರಕುವ ಲಾಭ 
ಎ) 12%,  ಬಿ) 10%  ಸಿ) 9 1/11%  ಡಿ) 11 1/9%

ಇವರಲ್ಲಿ ಯಾರನ್ನು ಏಷ್ಯಾದ ಬೆಳಕು ಎಂದು ಕರೆಯುತ್ತಾರೆ
ಎ) ಮದರ್ ತೆರೆಸಾ,  ಬಿ) ಮಹಾವೀರ,  ಸಿ) ಕನ್ ಫ್ಯೂಷಿಯಸ್,  ಡಿ) ಗೌತಮ ಬುದ್ಧ

ಎನ್.ಸಿ.ಇ.ಆರ್.ಟಿ. ಇದರ ವಿಸ್ತೃತ ರೂಪ
ಎ) ನ್ಯಾಶನಲ್ ಕೌನ್ಸಿಲ್ ಆಫ್ ಎನ್ವೈರಾನಮೆಂಟ್ ರಿಸರ್ಚ್ ಅಂಡ್ ಟ್ರೈನಿಂಗ್,  ಬಿ) ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್, ಸಿ) ನ್ಯಾಶನಲ್ ಕೌನ್ಸಿಲ್ ಆಪ್ ಇಕಾಲಾಜಿಕಲ್ ರಿಸರ್ಚ್ ಅಂಡ್ ಟ್ರೈನಿಂಗ್,  ಡಿ) ನ್ಯಾಶನಲ್
ಕೌನ್ಸಿಲ್ ಆಫ್ ಎಲೆಕ್ಟ್ರಾನಿಕ್ ರಿಸರ್ಚ್ ಅಂಡ್ ಟ್ರೈನಿಂಗ್

ಇವರಲ್ಲಿ ಯಾವು 20 ನೇ ಶತಮಾನದಲ್ಲಿ ಬದುಕಿದ್ದ ಭಾರತದ ಮಹಾನ್ ಗಣಿತಜ್ಞ
ಎ) ಸರ್.ಸಿ.ವಿ.ರಾಮನ್,   ಬಿ) ಶ್ರೀನಿವಾಸ ರಾಮಾನುಜಂ,  ಸಿ) ಚಂದ್ರಶೇಖರ ಸುಬ್ರಮಣ್ಯಂ,  ಡಿ) ಜಯಂತ ನಾರ್ಳೀಕರ್

400ರಕ್ಕೆ ಬಳಸುವ ರೋಮನ್ ಸಂಖ್ಯಾ ವಾಚಕ ಯಾವುದು
ಎ) DC,  ಬಿ) CD,  ಸಿ) CM, ಡಿ) MC

ಕ್ರಿಕೇಟ್ ಅಂಗಳದ ಪಿಚ್ ಉದ್ದವೆಷ್ಟು
ಎ) 21 ಗಜಗಳು,  ಬಿ) 20 ಗಜಗಳು,  ಸಿ) 22 ಗಜಗಳು,  ಡಿ) 25 ಗಜಗಳು

ಇವುಗಳಲ್ಲಿ ಯಾವುದರೊಂದಿಗೆ ಡಾ|| ಪ್ರಮೋದ್ ಕರಣ್ ಸೇಠಿ ಗುರುತಿಸಲ್ಪಡುತ್ತಾರೆ
ಎ) ಜಯಪುರ ಕಾಲು,  ಬಿ) ಹೃದಯದ ಶಸ್ತ್ರಚಿಕಿತ್ಸೆ, ಸಿ) ಭೌತ ಶಾಸ್ತ್ರ,  ಡಿ) ನರವಿಜ್ಞಾನ

ಸಂಕೇತ ಭಾಷೆಯಲ್ಲಿ APPEAR ಎನ್ನುವ ಪದವನ್ನು PAEPRA ಎಂದು ಬರೆಯಲಾಗಿದ್ದರೆ ಆಗ PROVIDENCE ಎನ್ನುವ ಪದವನ್ನು  ಹೇಗೆ ಬರೆಯಬೇಕಾಗುವುದು
ಎ) PORIVEDCNE,  ಬಿ) RPOVPINECE,  ಸಿ) RPVODINEECಡಿ) EORIVEDCEP

ಮಹಾಭಾರತದ ಮಹಾಕಾವ್ಯದಲ್ಲಿ ಭೀಷ್ಮನ ಮುಂಚಿನ ಹೆಸರೇನಾಗಿತ್ತು
ಎ) ದೇವದತ್ತ,  ಬಿ) ದೇವವ್ರತ,  ಸಿ) ದೇವಸಿಂಹ, ಡಿ) ದೇವವರ್ಮ

ಭಾರತದಲ್ಲೇ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕಿನ ಹೆಸರು
ಎ) ಭೀಮ,  ಬಿ) ಪೃಥ್ವಿ,  ಸಿ) ಅರ್ಜುನ್,  ಡಿ) ಬ್ರಹ್ಮೋಸ್

ಈ ಕೆಳಗಿನವರಲ್ಲಿ ಯಾರು ಖ್ಯಾತ ಯಕ್ಷಗಾನ ಕಲಾವಿದರು
ಎ) ಕಯ್ಯಾರ ಕಿಇ್ಇಣ್ಣರೈ ಬಿ) ಕೆರೆಮನೆ ಶಂಭುಹೆಗಡೆ, ಸಿ) ಪ್ರಕಾಶ ರೈ,  ಡಿ) ಗುರುಕಿರಣ

ಕರ್ನಾಟಕದ ಜನಪ್ರಿಯ ಜಾನಪದ ನೃತ್ಯಶೈಲಿಯ ಡೊಳ್ಳು ಕುಣಿತವನ್ನು ಯಾವ ದೇವತೆಯ ಸುತ್ತ ಹೆಣೆಯಲಾಗಿದೆ
ಎ) ಭಗವಾನ್ ವಿಷ್ಣು,  ಬಿ) ಬೀರೇಶ್ವರ,  ಸಿ) ಮಾರಮ್ಮ,  ಡಿ) ಅಣ್ಣಮ್ಮ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಯಾರು
ಎ) ಸರ್. ಎಂ.ವಿಶ್ವೇಶ್ವರಯ್ಯ,  ಬಿ) ಬಿ.ಎಂ.ಶ್ರೀಕಂಠಯ್ಯ,  ಸಿ) ಎಚ್.ವಿ.ನಂಜುಂಡಯ್ಯ,  ಡಿ) ಕೆ.ಶ್ರೀನಿವಾಸರಾವ್

ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಪಾಡ್ದನಗಳು ಸಂಬಂಧಿಸಿವೆ
ಎ) ಕೊಡಗಿನ ವಿಶಿಷ್ಟ ಆಹಾರದ ಬಗೆ,  ಬಿ) ಕರಾವಳಿ ಕರ್ನಾಟಕದ ನೃತ್ಯದ ವಿಧ,  ಸಿ) ತುಳುಭಾಷೆಯ ಮಹಾಕಾವ್ಯದ ಮೌಖಿಕ ರೂಪ,  ಡಿ) ಒಂದು ಜನಪ್ರಿಯ ವಚನ

ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು
ಎ) ಅದರ ಎತ್ತರವನ್ನು ಅಳೆಯುವುದರಿಂದ  ಬಿ) ಅದರ ವ್ಯಾಸವನ್ನು ಅಳೆಯುವುದರಿಂದ  ಸಿ) ಅದರ ಒಳತಿರುಳನ್ನು ವಿಶ್ಲೇಸುವುದರಿಂದ,  ಡಿ) ಅದರ ಕಾಂಡದ ವಾರ್ಷಿಕ ಬೆಳವಣಿಗೆ ಸುರುಳಿಗಳನ್ನು ಎಣಿಸುವುದರಿಂದ

ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರೆಂದು ಹೆಸರಿಸಿ
ಎ) ಸುಚೇತಾ ಕೃಪಲಾನಿ,  ಬಿ) ಸರೋಜಿನಿ ನಾಯ್ಡು, ಸಿ) ನಂದಿನಿ ಸತ್ಪತಿ,  ಡಿ) ಮಾಯಾವತಿ

ಇವುಗಳಲ್ಲಿ ಯಾವುದನ್ನು ಭೂಕಂಪವೊಂದರ ಮೂಲ ಬಿಂದುವೆಂದು ಕರೆಯಲಾಗುತ್ತದೆ
ಎ) ಎಪಿಸೆಂಟರ್,  ಬಿ) ಸಿಸ್ಮಿಕ್ ಫೋಕಸ್,  ಸಿ) ಕ್ವೇಕ್ ಸೆಂಟರ್,  ಡಿ) ಟೆಕ್ಟೋನಿಕ್ ಪಾಯಿಂಟ್

ಇವುಗಳಲ್ಲಿ ಯಾವುದು ಮಂಡಲ್ ಆಯೋಗದ ವರದಿಯಲ್ಲಿ ಪ್ರಮುಖ ಶೀಫಾರಸ್ಸುಗಳಲ್ಲೊಂದಾಗಿದೆ
ಎ) ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ,  ಬಿ) ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ,  ಸಿ) ಚುನಾವಣಾ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು

ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು
ಎ) ನವೀನ್ ಚಾವ್ಲಾ,  ಬಿ) ಎಸ್.ವೈ.ಖುರೇಷಿ,  ಸಿ) ಎನ್.ಗೋಪಾಲಸ್ವಾಮಿ,  ಡಿ) ಸುದಾಕರ ರಾವ್,

ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ
ಎ) ಸಾಯಣ,  ಬಿ) ಕುಮಾರವ್ಯಾಸ,  ಸಿ) ರತ್ನಾಕರವರ್ಣಿ,  ಡಿ) ವಿದ್ಯಾರಣ್ಯ

ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ಸ್ಥಳ
ಎ) ಕೂಡಲ ಸಂಗಮ,  ಬಿ) ಬಸವನ ಬಾಗೇವಾಡಿ,  ಸಿ) ಬಸವ ಕಲ್ಯಾಣ,  ಡಿ) ನಂದಿಕೇಶ್ವರ

ಮೋಹನ ತರಂಗಿಣಿ ಕೃತಿ ರಚಿಸಿದವರು
ಎ) ಪುರಂದರದಾಸರು,  ಬಿ) ಕನಕದಾಸರು,  ಸಿ) ತುಕಾರಮ,  ಡಿ) ಜಯದೇವ

ಇವರಲ್ಲಿ ಯಾರ ಕಾಲಘಟ್ಟಕ್ಕೆ ಮಯೂರ ಸಿಂಹಾಸನ ಸೇರಿದೆ
ಎ) ಜಹಂಗೀರ್,  ಬಿ) ಶಹಜಹಾನ್,  ಸಿ) ಅಕ್ಬರ್,  ಡಿ) ಔರಂಗಜೇಬ್

ಸಂಸ್ಕೃತ ಕೃತಿ 'ಲೀಲಾವತಿ' ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ತಂತ್ರಜ್ಞಾನ,  ಬಿ) ಗಣಿತಶಾಸ್ತ್ರ,  ಸಿ) ವಿಜ್ಞಾನ,  ಡಿ) ವೈದ್ಯಕೀಯ ಶಾಸ್ತ್ರ

ಎಲ್ಲ ಆಮ್ಲಗಳಿಗೂ ಸಾಮಾನ್ಯವಾಗಿರುವ ಮೂಲವಸ್ತು
ಎ) ಇಂಗಾಲ,  ಬಿ) ಜಲಜನಕ,  ಸಿ) ಆಮ್ಲಜನಕ,  ಡಿ) ಗಂಧಕ

ಈ ಕೆಳಗಿನ ಮೊಘಲ್ ದೊರೆಗಳಲ್ಲಿ ಯಾರು ಅನಕ್ಷರಸ್ಥ ಎಂದು ತಿಳಿಯಲಾಗಿದೆ
ಎ) ಬಾಬರ್,  ಬಿ) ಹುಮಾಯೂನ್,  ಸಿ) ಅಕ್ಬರ್,  ಡಿ) ಜಹಾಂಗೀರ್

ಹಿಜ್ರಾ ಶಕವನ್ನು ಯಾವಾಗಿನಿಂದ ಪರಿಗಣಿಸಲಾಗುತ್ತದೆ
ಎ) ಕ್ರಿ.ಶ.632,  ಬಿ) ಕ್ರಿ.ಶ.712,  ಸಿ) ಕ್ರಿ.ಶ.722,  ಡಿ) ಕ್ರಿ.ಶ.622

ಇವುಗಳಲ್ಲಿ ಯಾವುದನ್ನು ಸಂವಿಧಾನದ ಕೇಂದ್ರಪಟ್ಟಿಯು ಒಳಗೊಂಡಿಲ್ಲ
ಎ) ಅರಣ್ಯ,  ಬಿ) ರಕ್ಷಣೆ,  ಸಿ) ಅರ್ಥ,  ಡಿ) ರೈಲ್ವೆ

ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)
ಎ) 18-08-1947,  ಬಿ) 26-01-1950,  ಸಿ) 9-12-1946,  ಡಿ) 26-11-1949

ಯಾವ ಕ್ರೀಡೆಯಲ್ಲಿ ಸಾಧನೆಗಾಗಿ ಅರ್ಜುನ್ ಅತ್ವಾಲ್ ಖ್ಯಾತರಾಗಿದ್ದಾರೆ
ಎ) ಟೆನ್ನಿಸ್,  ಬಿ) ಚೆಸ್,  ಸಿ) ಗಾಲ್ಫ್,  ಡಿ) ಸ್ನೂಕರ್

ಯಾವ ನದಿಗೆ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ
ಎ) ನರ್ಮದಾ,  ಬಿ) ಮಹಾನದಿ,  ಸಿ) ಗೋದಾವರಿ,  ಡಿ) ಕೃಷ್ಣಾ

ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಔದ್ಯಾಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಎ) ಎರಡನೇ ಪಂಚೆವಾರ್ಷಿಕ ಯೋಜನೆ,  ಬಿ) ಮೂರನೆ ಪಂಚವಾರ್ಷಿಕ ಯೋಜನೆ,  ಸಿ) ನಾಲ್ಕನೇ ಪಂಚವಾರ್ಷಿಕ ಯೋಜನೆ,  ಡಿ) ಆರನೆ ಪಂಚವಾರ್ಷಿಕ ಯೋಜನೆ

ಗಂಟೆಗೆ 30 ಮೈಲಿ ವೇಗದಲ್ಲಿ ಓಡುತ್ತಿರುವ ರಯಲೊಂದು ಗಂಟೆಗೆ 50 ಮೈಲಿ ವೇಗದಲ್ಲಿ ಓಡುತ್ತಿರುವ ರೈಲಿಗಿಂತ ಮುಂದೆಯಿದೆ.  ಇವುಗಳಲ್ಲಿ ವೇಗವಾಗಿ ಓಡುತ್ತಿರುವ ರೈಲಿಗೆ ನಿಧಾನವಾಗಿ ಓಡುತ್ತಿರುವ ರೈಲನ್ನು ಹಿಡಿಯಲು ಒಂದು ವೇಳೆ 15 ನಿಮಿಷಗಳು ಬೇಕಾಗುವುದಾದರೆ ಅವೆರಡೂ ರೈಲುಗಳು ಪರಸ್ಪರ ಎಷ್ಟು ದೂರದಲ್ಲಿವೆ
ಎ) 5 ಮೈಲಿ,  ಬಿ) 20 ಮೈಲಿ,  ಸಿ) 10 ಮೈಲಿ,  ಡಿ) 15 ಮೈಲಿ

ಜವಾಹರ್ ರೋಜ್ಗಾರ್ ಯೋಜನೆಯ ಉದ್ದೇಶ
ಎ) ಗ್ರಾಮೀಣ ಜನರಿಗೆ ವಸತಿಗಳನ್ನು ಕಲ್ಪಿಸುವುದು,  ಬಿ) ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು,  ಸಿ) ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು, ಡಿ) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು

ಇವರಲ್ಲಿ ಯಾರು ಭಾರತದ ಸಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದರು
ಎ) ಡಾ|| ರಾಜೇಂದ್ರ ಪ್ರಸಾದ್,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ಕೆ.ಎಂ.ಮುನ್ಶಿ,  ಡಿ) ಶ್ರೀಮತಿ ಸರೋಜಿನಿ ನಾಯ್ಡು

ಇವುಗಳಲ್ಲಿ ಯಾವ ವರ್ಷದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ
ಎ) 1962,  ಬಿ) 1967,  ಸಿ) 1971,  ಡಿ) 1975

ಒಂದು ವೇಳೆ 2X3=36, 5X4=400, 6X2=144, 3X3=81 ಆದ ಪಕ್ಷದಲ್ಲಿ ಇವುಗಳಲ್ಲಿ ಯಾವುದು 5X5=? ಕ್ಕೆ ಸರಿಯಾದ ಉತ್ತರಯಾವುದು
ಎ) 225,  ಬಿ) 625,  ಸಿ) 125,  ಡಿ) 25

ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ
ಎ) ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ,  ಬಿ) ಲೋಕಸಭೆ, ಸಿ) ರಾಜ್ಯ ಸಭೆ,  ಡಿ) ಲೋಕಸಭೆ & ರಾಜ್ಯಸಭೆ

ಭಾರತದ ನೌಕಾಪಡೆಯ ಮುಖ್ಯಸ್ಥರನ್ನು ಹೀಗೆಂದು ಕರೆಯುತ್ತಾರೆ
ಎ) ಬ್ರಿಗೇಡಿಯರ್,  ಬಿ) ಜನರಲ್,  ಸಿ) ಅಡ್ಮಿರಲ್,  ಡಿ) ಏರ್ ಚೀಫ್ ಮಾರ್ಷಲ್

ಯಾರಿಂದ ಸಾರೆ ಜಹಾಸೆ ಅಚ್ಛಾ ಎನ್ನುವ ದೇಶಭಕ್ತಿಗೀತೆಯು ಬರೆಯಲ್ಪಟ್ಟಿದೆ
ಎ) ರವೀಂದ್ರ ನಾಥ ಠ್ಯಾಗೋರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮೊಹಮ್ಮದ್ ಇಕ್ಬಾಲ್,  ಡಿ) ಜಾವೆದ್ ಅಖ್ತರ್

ಫತೇಪುರ ಸಿಕ್ರಿ ನಗರದ ನಿರ್ಮಾತೃ
ಎ) ಅಕ್ಬರ್,  ಬಿ) ಹುಮಾಯೂನ್,  ಸಿ) ಶಹಜಹಾನ್,  ಡಿ) ಜಹಂಗೀರ್

ಸ್ಮೃತಿ ನಾಶ - ಸ್ಮರಣೆಯ ನಾಶವನ್ನು ಸೂಚಿಸಲು ಬಳಸುವ ವೈದ್ಯಕೀಯಪದ
ಎ) ಆಂಬ್ರೋಸಿಯಾ,  ಬಿ) ಅಮ್ನೀಸಿಯಾ,  ಸಿ) ಅನೀಮಿಯಾ,  ಡಿ) ಅನೆಸ್ತೇಸಿಯಾ

ಎಷ್ಟು ವರ್ಷಗಳಿಗೆ ಪ್ಲಾಟೀನಂ ಮಹೋತ್ಸವವನ್ನು ಆಚರಿಸಲಾಗುವುದು
ಎ) 100,  ಬಿ) 50,  ಸಿ) 60,  ಡಿ)
75ವರ್ಷಗಳು

ಹಳೇಬೀಡಿನ ಹಿಂದಿನ ಹೆಸರೇನು
ಎ) ಭೀಮಸಮುದ್ರ,  ಬಿ) ಭರಮಸಾಗರ,  ಸಿ) ದ್ವಾರಸಮುದ್ರ,  ಡಿ) ಧರ್ಮಸಾಗರ

ಇವುಗಳಲ್ಲಿ ಯಾವುದು ಕೆಂಪುರಕ್ತಕಣಗಳ ಸ್ಮಶಾಣವೆಂದು ತಿಳಿಯಲ್ಪಟ್ಟಿದೆ
ಎ) ಅಸ್ಥಿಯ ಮಜ್ಜೆ,  ಬಿ) ಯಕೃತ್(ಲಿವರ್),  ಸಿ) ಪ್ಲೀಹ(ಸ್ಪ್ಲೀನ್),  ಡಿ) ಅಪೆಂಡಿಕ್ಸ್

ಇವುಗಳಲ್ಲಿ ಯಾವುದು ರಕ್ತಹೆಪ್ಪುಗಟ್ಟುವಿಕೆಗೆ ಅತ್ಯಾವಶ್ಯ
ಎ) ಕೆಂಪುರಕ್ತಕಣ,  ಬಿ) ಬಿಳಿರಕ್ತಕಣ,  ಸಿ) ಲಿಂಪೊಸೈಟ್,  ಡಿ) ರಕ್ತದ ಪ್ಲೇಟ್ ಲೆಟ್ಗಳು

ಇವುಗಳಲ್ಲಿ ಯಾವುದು ಪ್ರಾಥಮಿಕ ವರ್ಣಬಣ್ಣಗಳು
ಎ) ಕೆಂಪು, ಹಸಿರು, ನೀಲಿ,  ಬಿ) ಕೆಂಪು, ಹಳದಿ, ನೀಲಿ, ಸಿ) ಹಳದಿ, ನೀಲಿ, ಹಸಿರು,  ಡಿ) ಹಳದಿ, ಹಸಿರು,ಕೆಂಪು

ಇವುಗಳಲ್ಲಿ ಯಾವುದಕ್ಕೆ ಆಪ್ಟಿಕಲ್ ಫೈಬರನ್ನು ಬಳಸುತ್ತಾರೆ
ಎ) ನೇಯ್ಗೆ,  ಬಿ) ಸಂಪರ್ಕ,  ಸಿ) ಸಂಗೀತೋಪಕರಣಗಳು,  ಡಿ) ಕಣ್ಣಿನ ಶಸ್ತ್ರಕ್ರಿಯೆ

ಇವುಗಳನ್ನು ಹೊಂದಿಸಿ

ಎ)

ಎಪಿಕಲ್ಚರ್

1)

ದ್ರಾಕ್ಷಿಬಳ್ಳಿ

ಬಿ)

ಸಿಲ್ವಿಕಲ್ಚರ್

2)

ಮೀನು

ಸಿ)

ವಿಟಿಕಲ್ಚರ್

3)

ಜೇನು

ಡಿ)

ಪಿಸಿಕಲ್ಚರ್

4)

ವೃಕ್ಷಗಳು





ಬಿ

ಸಿ

ಡಿ

a

1

4

3

2

b

3

4

1

2

c

2

1

3

4

d

4

3

2

1

ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
14, 16, 13, 17, 12, 18, 11, ?
ಎ) 12,  ಬಿ) 19,  ಸಿ) 22, ಡಿ) 14

ಇವುಗಳಲ್ಲಿ ಯಾವುದಕ್ಕೆ ಕಪ್ಪುಪೆಟ್ಟಿಗೆ (ಬ್ಲಾಕ್ ಬಾಕ್ಸ್) ಸಂಬಂಧಿಸಿದೆ
ಎ) ಸಿನೆಮಾ,  ಬಿ) ವಿಮಾನ, ಸಿ) ಉಪಗ್ರಹ, ಡಿ) ಛಾಯಾಗ್ರಹಣ

2010 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ
ಎ) ಸೈನಾ ನೆಹ್ವಾಲ್,  ಬಿ) ಸಾನಿಯಾ ಮಿರ್ಜಾ,  ಸಿ) ಪಂಕಜ್ ಅದ್ವಾನಿ,  ಡಿ) ಅಭಿನವ್ ಬಿಂದ್ರಾ

ಒಂದು ಶ್ರೇಣಿಯ ಮೊದಲ ನಾಲ್ಕು ಸಂಖ್ಯೆಗಳ ಸರಾಸರಿ 20 ಹಾಗು ಕೊನೆಯ ನಾಲ್ಕು ಸಂಖ್ಯೆಗಳ ಸರಾಸರಿ19 ಆಗಿದ್ದು, ಒಂದು ವೇಳೆ ಶ್ರೇಣಿಯ 5 ನೇ ಸಂಖ್ಯೆ 18 ಆಗಿದ್ದಲ್ಲಿ ಮೊದಲನೇ ಸಂಖ್ಯೆ ಯಾವುದು
ಎ) 22,  ಬಿ) 21,  ಸಿ) 19,  ಡಿ) 20

ಇವರಲ್ಲಿ ಯಾವು ಶೀಘ್ರಲಿಪಿಯ ಸಂಶೋಧಕರು
ಎ) ಧಾಮಸ್ ಆಳ್ವಾ ಎಡಿಸನ್,  ಬಿ) ಐಸಾಕ್ ನ್ಯೂಟನ್, ಸಿ) ಆಲ್ಬರ್ಟ್ ಐಸ್ಸ್ಟೀನ್,  ಡಿ) ಐಸಾಕ್ ಪಿಟ್ ಮನ್

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಯಾರು
ಎ) ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್,  ಬಿ) ನ್ಯಾಯಮೂರ್ತಿ ಜೆ.ಎಸ್.ವರ್ಮಾ,  ಸಿ) ನ್ಯಾಯಮೂರ್ತಿ ಆರ್.ಎಸ್.ಲಹೋಟಿ,  ಡಿ) ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್

ಟೆಸ್ಟ್ ಕ್ರಿಕೇಟ್ ನಲ್ಲಿ ವೈಯುಕ್ತಿಕ ಗರಿಷ್ಠಮೊತ್ತದ(ಸ್ಕೋರ್) ದಾಖಲೆ ಯಾರ ಹೆಸರಿನಲ್ಲಿದೆ
ಎ) ಸಚಿನ್ ತೆಂಡೂಲ್ಕರ್,  ಬಿ) ಗ್ಯಾರಿ ಸೋಬರ್ಸ್,  ಸಿ) ಬ್ರಿಯಾನ್ ಲಾರಾ,  ಡಿ) ವೀರೇಂದ್ರ ಸೆಹವಾಗ್

ಜಲಾಂತರರ್ಗಾಮಿಯಿಂದ ಸಮುದ್ರದ ಮೇಲ್ಮೈಯಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಬಳಸುವ ಉಪಕರಣ ಯಾವುದು
ಎ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್), ಬಿ) ದೂರದರ್ಶಕ (ಟೆಲಿಸ್ಕೋಪ್), ಸಿ) ಪೆರಿಸ್ಕೋಪ್,  ಡಿ) ಎಲೆಕ್ಟ್ರೋಸ್ಕೋಪ್

ಮಲ್ಲಯುದ್ಧ(ಕುಸ್ತಿ)ದಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬಂಗಾರದ ಪದಕ ಗಳಿಸಿದ ಪ್ರಥಮ ಭಾರತೀಯ ಕುಸ್ತಿಪಟು ಯಾರು
ಎ) ದಾರಾಸಿಂಗ್,  ಬಿ) ಸತ್ಪಾಲ್ ಸಿಂಗ್,  ಸಿ) ಸುಶೀಲ್ ಕುಮಾರ್,  ಡಿ) ವಿಜೇಂದರ್ ಸಿಂಗ್

2010ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲ್ಪಟ್ಟ ಕರ್ನಾಟಕದ ಜನಪ್ರಿಯ ಸಿನಿಮಾ ಮತ್ತು ರಂಗಕರ್ಮಿ ಇವರಲ್ಲಿ ಯಾರು
ಎ) ಉಮಾಶ್ರಿ,  ಬಿ) ಸರೋಜಾದೇವಿ,  ಸಿ) ಬಿ.ಜಯಶ್ರೀ,  ಡಿ) ಜಯಮಾಲ

ಇವರಲ್ಲಿ ಯಾರು ನಮಗೆ ಯೋಗ ಸೂತ್ರ ಗಳನ್ನು ನೀಡಿದವರು ಯಾರು
ಎ) ಕಣಾದ,  ಬಿ) ವ್ಯಾಸ,  ಸಿ) ಪತಂಜಲಿ,  ಡಿ) ಗೌತಮ

ಮಲೇಷ್ಯಾ ದೇಶದ ಹಣದ ಹೆಸರು
ಎ) ಬಾಟ್,  ಬಿ) ರಿಂಗಿಟ್,  ಸಿ) ಯೆನ್,  ಡಿ) ಡಾಲರ್

ಮಿಸ್ ವರ್ಲ್ಡ್ - ವಿಶ್ವಸುಂದರಿ ಪಟ್ಟವನ್ನು ಗಳಿಸಿದ ಪ್ರಥಮ ಭಾರತೀಯಳು
ಎ) ಐಶ್ವರ್ಯ ರೈ,  ಬಿ) ರೀಟಾ ಫಾರಿಯಾ,  ಸಿ) ಸುಷ್ಮಿತಾ ಸೇನ್,  ಡಿ) ಲಾರಾದತ್ತ

ಈ ಕೆಳಕಾಣಿಸಿದ ದೇಶಗಳಲ್ಲಿ ಡೆಮಾಸ್ಕಸ್ ಯಾವುದರ ರಾಜಧಾನಿ
ಎ) ಲೆಬನಾನ್,  ಬಿ) ಇರಾಕ್,  ಸಿ) ಇರಾನ್,  ಡಿ) ಸಿರಿಯಾ

ಈ ಕೆಳಗಿನವುಗಳಲ್ಲಿ 1961ರಲ್ಲಿ ಭಾರತೀಯ ಸೈನ್ಯದಿಂದ ಪೋರ್ಚುಗೀಸರ ನಿಯಂತ್ರಣದಿಂದ ಸ್ವತಂತ್ರಗೊಳಿಸಲ್ಪಟ್ಟ ಪ್ರದೇಶ ಯಾವುದು
ಎ) ಪಾಂಡಿಚೇರಿ,  ಬಿ) ಹೈದರಾಬಾದ್,  ಸಿ) ಗೋವಾ,  ಡಿ) ಜುನಾಗಢ

20 ಪುರುಷರು 40 ಗುಣಿಗಳನ್ನು 60 ದಿನಗಳಲ್ಲಿ ಅಗೆಯುವುದಾದರೆ 10 ಪುರುಷರು 20 ಗುಣಿಗಳನ್ನು ಎಷ್ಟು ದಿನಗಳಲ್ಲಿ ಅಗೆಯುವರು
ಎ) 30 ದಿನಗಳು,  ಬಿ) 45 ದಿನಗಳು,  ಸಿ) 60 ದಿನಗಳು,  ಡಿ) 75 ದಿನಗಳು

ಇವರಲ್ಲಿ ಯಾರ ಹೆಸರಿನೊಂದಿಗೆ ಬೇಲೂರು ಮಥ ಗುರುತಿಸಲ್ಪಟ್ಟಿದೆ
ಎ) ಈಶ್ವರ ಚಂದ್ರ ವಿದ್ಯಾಸಾಗರ,  ಬಿ) ಶಂಕರಾಚಾರ್ಯ,  ಸಿ)  ವಿವೇಕಾನಂದ,  ಡಿ) ರಾಜಾರಾಮ ಮೋಹನ ರಾಯ್,

ಇವರಲ್ಲಿ ಯಾರಿಂದ ಕನ್ನಡದ ಕಾದಂಬರಿ ಕವಲು ಬರೆಯಲ್ಪಟ್ಟಿದೆ 
ಎ) ಕುವೆಂಪು,  ಬಿ) ಎಸ್.ಎಲ್.ಬೈರಪ್ಪ,  ಸಿ) ಲಂಕೇಶ್,  ಡಿ) ಯು.ಆರ್.ಅನಂತಮೂರ್ತಿ

ಫೋರ್ತ್ ಎಸ್ಟೇಟ್ ಎಂದರೆ
ಎ) ಮಾಧ್ಯಮಗಳು,  ಬಿ) ಹಿಂದುಳಿದ ರಾಜ್ಯಗಳು,  ಸಿ) ನ್ಯಾಯಾಂಗ  ಡಿ) ಟೀ ಎಸ್ಟೇಟ್

ಇವುಗಳಲ್ಲಿ ಯಾವುದು ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ
ಎ) ಆಂಗ್ಲಭಾಷೆ,  ಬಿ) ಹಿಂದಿ ಭಾಷೆ,  ಸಿ) ಅಸ್ಸಾಮಿ ಭಾಷೆ,  ಡಿ) ನಾಗಾ ಭಾಷೆ

ಈ ಕೆಳಕಾಣಿಸಿದ ಕ್ರಿಯೆಗಳಲ್ಲಿ ಯಾವುದರಲ್ಲಿ ಉಷ್ಣಬಿಡುಗಡೆಯಾಗುವುದು
ಎ) ಮಂಜುಗಡ್ಡೆ ಕರಗುವಾಗ,  ಬಿ) ಅನಿಲ ಸಾಂದ್ರಗೊಳ್ಳುವಾಗ,  ಸಿ) ನೀರು ಕುದಿಯುವಾಗ,  ಡಿ) ನೀರಿನ ಉಷ್ಣತೆಯನ್ನು ಹೆಚ್ಚಿಸಿದಾಗ

ಹಲ್ಲು ಮತ್ತು ಮೂಳೆಗಳಿಗೆ ಅವಶ್ಯಕವಾದ ಖನಿಜಗಳು
ಎ) ಕ್ಯಾಲ್ಶಿಯಂ ಮತ್ತು ಸೋಡಿಯಂ,  ಬಿ) ಕ್ಯಾಲ್ಶಿಯಂ ಮತ್ತು ಪೊಟಾಶಿಯಂ,  ಸಿ) ಕ್ಯಾಲ್ಶಿಯಂ ಮತ್ತು ಫಾಸ್ಫರಸ್,  ಡಿ) ಕ್ಯಲ್ಶಿಯಂ ಮತ್ತು ಕಬ್ಬಿಣ

ಇವರಲ್ಲಿ ಯಾರ ಹೆಸರಿನೊಂದಿಗೆ ಪೌನಾರ್ ಆಶ್ರಮ ಸೇರಿಕೊಂಡಿದೆ
ಎ) ಮಹಾತ್ಮ ಗಾಂಧಿ,  ಬಿ) ಅರವಿಂದರು,  ಸಿ) ವಿನೋಭ ಭಾವೆ,  ಡಿ) ರವಿಶಂಕರ್

ಈಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ
ಎ) ಕೊಲ್ಕತ್ತ,  ಬಿ) ನವದೆಹಲಿ,  ಸಿ) ಮುಂಬೈ,  ಡಿ) ಚೆನೈ

ತುಲಸಿದಾಸರು ಯಾವ ಭಾಷೆಯಲ್ಲಿ ರಾಮಚರಿತ ಮಾನಸವನ್ನು ಬರೆದಿದ್ದಾರೆ
ಎ) ಭೋಜಪುರಿ, ಬಿ) ಹಿಂದಿ,  ಸಿ) ಪಾಲಿ,  ಡಿ) ವ್ರಜ (ಬೃಜ) ಭಾಷೆ

ಸತ್ಯ ಶೋಧಕ ಸಮಾಜದ ಸ್ಥಾಪಕರು
ಎ) ಜ್ಯೋತಿಬಾ ಫುಲೆ,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ರಾಮಸ್ವಾಮಿ ನಾಯ್ಕರ್,   ಡಿ) ರವೀಂದ್ರನಾಥ ಠ್ಯಾಗೂರ್

ಪತ್ರಿಕಾ ಸ್ವಾತಂತ್ರವು ಸಂವಿಧಾನದ ಯಾವ ವಿಧಿಯನ್ನು ಆಧರಿಸಿ ರೂಪುಗೊಂಡಿದೆ
ಎ) ವಿಧಿ 21,  ಬಿ) ವಿಧಿ 14,  ಸಿ) ವಿಧಿ 19  ಡಿ) ವಿಧಿ 16

ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
ಎ) ವರ್ಸೆಲ್ಸ್ ಒಪ್ಪಂದ,  ಬಿ) ಪ್ಯಾರಿಸ್ ಒಪ್ಪಂದ,  ಸಿ) ವಾಷಿಂಗ್ಟನ್ ಒಪ್ಪಂದ,  ಡಿ) ಲಂಡನ್ ಒಪ್ಪಂದ

ಇವುಗಳಲ್ಲಿ ಯಾವುದಕ್ಕೆ ಕ್ಯೂಟೋ ಪ್ರೊಟೊಕೋಲ್ ಸಂಬಂಧಿಸಿದೆ
ಎ) ಇಂಧನಕ್ಕೆ ಸರಿಯಾದ ಮಾರುಕಟ್ಟೆ ದರ ಸಿಗುವಂತೆ ಮಾಡಲು,  ಬಿ) ಲ್ಯಾಂಡ್ ಮೈನ್ ( ನೆಲಸ್ಪೋಟಕ) ಗಳ ಬಳಕೆಯನ್ನು ಕಡಿಮೆ ಮಾಡಲು,  ಸಿ) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ,  ಡಿ) ಹಸಿರುಮನೆ ಪರಿಣಾಮವನ್ನುಂಟು ಮಾಡುವ ಅನಿಲಗಳನ್ನು ಕಡಿಮೆ ಮಾಡುವ ಬಗ್ಗೆ

ಇವುಗಳಲ್ಲಿ ಯಾವುದರಿಂದ ಡೆಂಗ್ಯು ಜ್ವರ ಬರುತ್ತದೆ
ಎ) ಏಡಿಸ್ ಸೊಳ್ಳೆ,  ಬಿ) ಕ್ಯೂಲೆಕ್ಸ್ ಸೊಳ್ಳೆ,  ಸಿ) ಅನಾಫಿಲಿಸ್ ಸೊಳ್ಳೆ,  ಡಿ) ಟ್ಸೆ-ಟ್ಸೆ ನೊಣ

ತೇನ್ಸಿಂಗ್ ನಾರ್ಗೆ ಮತ್ತು ಎಡ್ಮಂಡ್ ಹಿಲರಿ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವರ್ಷ
ಎ) 1965,  ಬಿ) 1954,  ಸಿ) 1953,  ಡಿ) 1966

ಯಾವ ದೇಶವು 2010ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಜಯಗಳಿಸಿದೆ
ಎ) ಸ್ಪೇಯ್ನ್,  ಬಿ) ಇಟಲಿ,  ಸಿ) ನೆದರ್ ಲ್ಯಾಂಡ್,  ಡಿ) ಬ್ರೆಜಿಲ್

ವಿಶ್ವಸಂಸ್ಥೆ (ಯು.ಎನ್.ಓ) ಅಸ್ತಿತ್ವಕ್ಕೆ ಬಂದ ವರ್ಷ
ಎ) 1943,  ಬಿ) 1944,  ಸಿ) 1945,  ಡಿ) 1946

ಕುಸುಮ ಬಾಲೆ ಈ ಕೃತಿಯ ಕರ್ತೃ
ಎ) ದೇವನೂರು ಮಹದೇವ,  ಬಿ) ಎಸ್.ಎಲ್ ಬೈರಪ್ಪ,  ಸಿ) ಯು.ಆರ್.ಅನಂತಮೂರ್ತಿ,  ಡಿ) ಲಂಕೇಶ್

ಇವುಗಳಲ್ಲಿ ಯಾವುದರಿಂದ ಅಂಡಮಾನ್ ಸಮೂಹದ ಮತ್ತು ನಿಕೋಬಾರ್ ಸಮೂಹದ ದ್ವೀಪಗಳು ಪರಸ್ಪರ ಬೇರ್ಪಡಿಸಲ್ಪಟ್ಟಿವೆ
ಎ) ಗ್ರೇಟ್ ಚಾನೆಲ್,  ಬಿ) ಟೆನ್ ಡಿಗ್ರಿ ಚಾನೆಲ್,  ಸಿ) ಬಂಗಾಳ ಕೊಲ್ಲಿ,  ಡಿ) ಅಂಡಮಾನ್ ಸಮುದ್ರ

ಸೀ ಬರ್ಡ್ ನೌಕಾನೆಲೆ ಇಲ್ಲಿದೆ
ಎ) ಕೊಚ್ಚಿನ್,  ಬಿ) ಕಾರವಾರ,  ಸಿ) ವಿಶಾಖ ಪಟ್ಟಣ, ಡಿ) ಪಾಂಡಿಚೇರಿ

ಗಾಂಧೀಜಿಯನ್ನು ಮಹಾತ್ಮ ಎಂದು ಪ್ರಥಮ ಬಾರಿಗೆ ಕರೆದಿದ್ದುಯಾರು
ಎ) ಲೋಕಮಾನ್ಯ ತಿಲಕರು,  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಜವಾಹರ ಲಾಲ್ ನೆಹರು,  ಡಿ) ರವೀಂದ್ರ ನಾಥ ಟ್ಯಾಗೂರ್

ಒಂದು ವೇಳೆ HKUJ ಏನ್ನುವುದು FISH ಎಂದಾದರೆ UVCD ಎನ್ನುವುದು ಏನಾಗುವುದು
ಎ) STAR,   ಬಿ)STAK,  ಸಿ)STAL,  ಡಿ)STAB

ಭಾರತವು ಸ್ವತಂತ್ರವಾದಾಗ ಇವರಲ್ಲಿ ಯಾರು ಬ್ರಿಟನ್ನಿನ (ಇಂಗ್ಲೆಂಡಿನ) ಪ್ರಧಾನಮಂತ್ರಿಯಾಗಿದ್ದವರು
ಎ) ವಿನ್ಸ್ಟನ್ ಚರ್ಚಿಲ್,  ಬಿ) ಕ್ಲೆಮೆಂಟ್ ಅಟ್ಲಿ,  ಸಿ) ಲಾರ್ಡ್ ಮೌಂಟ್ ಬ್ಯಾಟನ್,  ಸಿ) ನೆವಿಲ್ ಚೇಂಬರ್ ಲೇನ್

ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನ ಮಂತ್ರಿ
ಎ) ಸಿರಿಮಾವೋ ಬಂದಾರನಾಯಕೆ,  ಬಿ) ಇಂದಿರಾ ಗಾಂಧಿ,  ಸಿ) ಗೊಲ್ಡಾಮೀರ್,  ಡಿ) ಮಾರ್ಗರೆಟ್ ಥ್ಯಾಚರ್


Wednesday, September 15, 2010

GK15

ಮುಂಬೈ ಥಾಣೆ ನಡುವೆ ಮೊದಲ ರೈಲು ಮಾರ್ಗ ಯಾವಾಗ ಪ್ರಾರಂಭವಾಯಿತು
ಎ) 1904,  ಬಿ) 1853,  ಸಿ) 1875,  ಡಿ) 1857

 ಡೀಸಲ್ ಲೊಕೊಮೋಟಿವ್ ತಯಾರಿಸಲ್ಪಡುವುದು
ಎ) ಬೆಂಗಳೂರು,  ಬಿ) ಪೆರಂಬೂರು,  ಸಿ)ವಾರಣಾಸಿ,  ಡಿ) ಯಾವುದು ಅಲ್ಲ

ಮೊದಲ ರೈಲ್ವೆ ಮಾರ್ಗ ಯಾವ ಗೌರ್ನರ್ ಜನರಲ್ ಕಾಲದಲ್ಲಿ ಪ್ರಾರಂಭವಾಯಿತು
ಎ)ಡಾಲ್ ಹೌಸಿ, ಬಿ) ವೆಲ್ಲೆಸ್ಲಿ,  ಸಿ) ಕಾರ್ನ್ವಾಲೀಸ್,  ಡಿ) ಯಾರು ಅಲ್ಲ

 ಮೊದಲ ವಿದ್ಯುತ್ ಚಾಲಿತ ರೈಲ್ವೆ ಪ್ರಾರಂಭವಾದದ್ದು
ಎ) 1853,  ಬಿ) 1905,  ಸಿ) 1911,  ಡಿ)1929

ಮೊದಲ TV ಕೇಂದ್ರ ಪ್ರಾರಂಭವಾದದ್ದು
ಎ)1959,  ಬಿ) 1969,  ಸಿ) 1972,  ಡಿ) 1981

ಪರ್ಲ್ ಸಿಟಿ ರೈಲು ಯಾವ ನಿಲ್ದಾಣಗಳ ಮದ್ಯೆ ಓಡಾಡುತ್ತದೆ
ಎ) ದೆಹಲಿ-ಉದಯಪುರ,  ಬಿ) ಚೆನೈ-ಟುಟಿಕೋರನ್,  ಸಿ) ದೆಹಲಿ-ಜೋಧ್ಪುರ,  ಡಿ) ಬೆಂಗಳೂರು-ಚೆನೈ

ಭಾರತದಲ್ಲಿ ರೈಲ್ವೆ ಆರ್ಥಿಕತೆಯು ಇತರೆ ಆರ್ಥಿಕತೆಯಿಂದ ಬೇರೆಯಾದದ್ದು
ಎ)1924,  ಬಿ) 1954,  ಸಿ) 1947,  ಡಿ) 1950

ಭಾರತದ ವೇಗದ ರೈಲು ಓಡುವ ವೇಗ ಗಂಟೆಗೆ
ಎ) 120 ಕಿಮೀ,  ಬಿ) 125 ಕಿಮೀ,  ಸಿ)140 ಕಿಮೀ,  ಡಿ) 150 ಕಿಮೀ


ಭಾರತದ ಅತಿ ದೂರ ಸಂಚರಿಸುವ ರೈಲು
ಎ) ಶತಾಬ್ದಿ ಎಕ್ಸ್ಪ್ರೆಸ್,  ಬಿ) ಜಿ.ಟಿ.ಎಕ್ಸ್ ಪ್ರೆಸ್,  ಸಿ) ರಾಜಧಾನಿ ಎಕ್ಸ್ ಪ್ರೆಸ್,  ಡಿ)ಹಿಮಗಿರಿ ಎಕ್ಸ್ ಪ್ರೆಸ್

ಭಾರತದಲ್ಲಿ ಸುಮಾರು 20 ಲಕ್ಷ ಕಿ.ಮೀ ವ್ಯಾಪಿಸಿರುವ ರಸ್ತೆ ಸಾರಿಗೆಯು ಶೇಕಡಾ ಎಷ್ಟು ಪ್ರಮಾಣ ವ್ಯಾಪಿಸಿದೆ
ಎ) 40,  ಬಿ) 50,  ಸಿ)54, ಡಿ) 60

ಕರ್ನಾಟಕದಲ್ಲಿ ಮೊದಲ TV ಕೇಂದ್ರ ಪ್ರಾರಂಭವಾದದ್ದು

ಭಾರತದ ಮೊದಲ ವೃತ್ರ ಪತ್ರಿಕೆ
ಎ) ಬೆಂಗಾಲ್ ಗೆಜೆಟ್, ಬಿ) ಇಂಡಿಯನ್ ಎಕ್ಸ್ಪ್ರೆಸ್,  ಸಿ) ದಿ.ಹಿಂದು,  ಡಿ) ಯಾವುದು ಅಲ್ಲ

MODVAT ಇದಕ್ಕೆ ಸಂಬಂಧಿಸಿದೆ
ಎ) ಮಾರಾಟ ತೆರಿಗೆ,  ಬಿ) ಆಸ್ತಿ ತೆರಿಗೆ,  ಸಿ) ಆದಾಯ ತೆರಿಗೆ,  ಡಿ)ಎಕ್ಸೈಸ್ ಡ್ಯೂಟಿ


ಭಾರತಕ್ಕೆ ತೆರಿಗೆ ಆದಾಯಗಳಲ್ಲಿ ಅತಿ ಹೆಚ್ಚು ಕೊಡುಗೆ ನೀಡುತ್ತಿರುವುದುಎ) ಆದಾಯ ತೆರಿಗೆ,  ಬಿ) ಮಾರಾಟ ತೆರಿಗೆ,  ಸಿ) ಎಕ್ಸೈಸ್ ಡ್ಯೂಟಿ,  ಡಿ)ಕಾರ್ಪೋರೇಷನ್ ತೆರಿಗೆ


ಇವುಗಳಲ್ಲಿ ಯಾವುದು ಭಾರತಕ್ಕೆ ಅತಿಹೆಚ್ಚು ವಿದೇಶಿವಿನಿಮಯಗಳಿಸಿ ಕೊಡುತ್ತದೆ
ಎ) ಕಬ್ಬಿಣ & ಉಕ್ಕು,  ಬಿ) ಆಹಾರ ರಫ್ತು,  ಸಿ) ಪೆಟ್ರೋಲಿಯಂ ಡಿ)ಟೀ



ಭಾರತದ ಹಣ ಚಲಾವಣೆಯಲ್ಲಿ 1 ರೂ ನಾಣ್ಯದ ಚಲಾವಣೆ ಶೇಕಡಾ ಎಷ್ಟು
ಎ) 1.2,  ಬಿ) 2.2,  ಸಿ)2.3, ಡಿ) 3.3

ಇದರಲ್ಲಿ ನೇರ ತೆರಿಗೆ ಯಾವುದು
ಎ) ಎಕ್ಸೈಸ್ ಡ್ಯೂಟಿ,  ಬಿ) ಮಾರಾಟ ತೆರಿಗೆ,  ಸಿ)ಆದಾಯ ತೆರಿಗೆ,  ಡಿ) ಯಾವುದು ಅಲ್ಲ

ಇದರಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತರುವ ತೆರಿಗೆ ಯಾವುದು
ಎ)ಮಾರಾಟ ತೆರಿಗೆ,  ಬಿ) ಭೂತೆರಿಗೆ,  ಸಿ) ಆದಾಯ ತೆರಿಗೆ,  ಡಿ) ನೊಂದಣಿ ತೆರಿಗೆ


ಇದರ ರಫ್ತಿನಿಂದ ಭಾರತ ಅತಿ ಹೆಚ್ಚು ಆದಾಯ ಗಳಿಸುತ್ತಿದೆ
ಎ) ಚರ್ಮ ವಸ್ತುಗಳು,  ಬಿ)ಕರಕುಶಲ ವಸ್ತುಗಳು,  ಸಿ) ಎಲೆಕ್ಟ್ರಾನಿಕ್ ವಸ್ತುಗಳು,  ಡಿ) ಆಹಾರ ವಸ್ತುಗಳು


1 ರೂ ನಾಣ್ಯವು ಮೊದಲು ಅಚ್ಚಾದದ್ದು
ಎ)1542,  ಬಿ) 1601,  ಸಿ) 1809,  ಡಿ) 1677


ಕಾಗದದ ಹಣ ಭಾರತದಲ್ಲಿ ಮೊದಲ ಬಾರಿಗೆ ಚಲಾವಣೆಗೆ ಬಂದದ್ದು
ಎ)1861,  ಬಿ) 1542,  ಸಿ) 1601,  ಡಿ) 1680


ಭಾರತದಲ್ಲಿ ಹಣವು ಎಷ್ಟುಬಾರಿ ಅಪಮೌಲ್ಯ ಆಗಿದೆ
ಎ) ಒಂದು,  ಬಿ) ಎರಡು,  ಸಿ) ಮೂರು,  ಡಿ) ನಾಲ್ಕು

ಭಾರತದಲ್ಲಿ ಹಣವು ಮೊದಲ ಬಾರಿಗೆ ಅಪಮೌಲ್ಯವಾದದ್ದು
ಎ) 1974,  ಬಿ)1949,  ಸಿ) 1950,  ಡಿ) 1969


ಭಾರತವು IMF ಸದಸ್ಯನಾದದ್ದು
ಎ)1947,  ಬಿ) 1950,  ಸಿ) 1951,  ಡಿ) 1955


ಭಾರತದ ರಿಸರ್ವ್ ಬ್ಯಾಂಕಿನ ಮೊದಲ ಗೌರ್ನರ್
ಎ)ಸಿ.ಡಿ.ದೇಶಮುಖ್,  ಬಿ) ಸಚೀಂದ್ರ ರಾಯ್,  ಸಿ) ಎಸ್ ಮುಖರ್ಜಿ,  ಡಿ) ಯಾರು ಅಲ್ಲ


EXIM ಬ್ಯಾಂಕ್ ಪ್ರಾರಂಭವಾದದ್ದು
ಎ) 1980,  ಬಿ)1982,  ಸಿ) 1981,  ಡಿ) 1989


NABARD ಪ್ರಾರಂಭವಾದದು
ಎ) 1985,  ಬಿ) 1965,  ಸಿ) 1979, ಡಿ)1982

Some type of file extensions

.doc
Word 97–2003 Document
.docm
Word Macro-Enabled Document
.docx
Word Document 2007 & above
.dot
Word 97–2003 Template
.htm, .html
Web Page
.mht; .mhtml
Single File Web Page
.odt
OpenDocument Text 
.pdf
Portable Document Format
.rtf
Rich Text Format
.txt
Plain Text Format
.xml
Word  XML Document
.csv
CSV (Comma Separated Value)
.dbf
Dbase III and Dbase IV
.htm, .html
Web Page Hypertest Markup Language.
.mht, .mhtml
Single File Web Page
.ods
OpenDocument Spreadsheet
.txt
Text (Tab delimited)
.xls
Excel 97–Excel 2003 Workbook
.xlsx
Excel Workbook Office 2007 & above
.xlt
Excel 97 - Excel 2003 Template
.xltx
Excel Template Office 2007 & above
.bmp
Device Independent Bitmap
.gif
GIF Graphics Interchange Format 
.jpg or .jpeg
Joint Photographic Experts Group  
.pdf
Portable Document Format
.png
PNG Portable Network Graphics Format
.pot
PowerPoint 97–2003 Template
.potx
PowerPoint Template
.ppam
PowerPoint Add-In
.pps
PowerPoint 97–2003 show
.ppt
PowerPoint 97–2003 Presentation
.pptx
PowerPoint Picture Presentation
.rtf
Rich Text Format
.tif
Tag Image File Format
.wmv
Windows Media Video 
.xps
XML Paper Specification