Tuesday, September 7, 2010

GK Science

ಶೀತ ವಲಯದಲ್ಲಿ ಉಷ್ಣತೆಯು 0ಡಿಗ್ರಿ ಗಿಂತಲೂ ಕಮ್ಮಿಯಿದ್ದಾಗ ಅಲ್ಲಿನ ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ತಮ್ಮ ಗದ್ದೆಗಳಿಗೆ ನೀರನ್ನು ಹಾಯಿಸಲು ಕಾರಣ
ಎ) ಶೀತವಲಯದಲ್ಲಿ ನೀರು ಹೆಚ್ಚಾಗಿ ಸಿಗುತ್ತದೆ,  ಬಿ) ನೀರು ಹೆಚ್ಚು ನಿರ್ದಿಷ್ಟ ತಾಪಮಾನ ಹೊಂದಿದೆ,  ಸಿ) ನೀರು ಕಡಿಮೆ ನಿರ್ದಿಷ್ಟ ತಾಪಮಾನ ಹೊಂದಿದೆ,  ಡಿ) ಬೆಳಗಳಿಗೆ ಹೆಚ್ಚುನೀರು ಬೇಕಾಗುತ್ತದೆ

ಒಬ್ಬ ವ್ಯಕ್ತಿಯ ಪ್ರತಿಬಿಂಬವು ಒಂದು ಕನ್ನಡಿಯಲ್ಲಿ ಪೂರ್ಣವಾಗಿ ಕಾಣಬೇಕಾದರೆ ಕನ್ನಡಿಯ ಕನಿಷ್ಟ ಎತ್ತರ ಎಷ್ಟಿರಬೇಕು
ಎ) ವ್ಯಕ್ತಿಯ ಎತ್ತರಕ್ಕೆ ಸಮನಾಗಿರಬೇಕು,  ಬಿ) ವ್ಯಕ್ತಿಯ ಎತ್ತರಕಿಂತಲೂ ಹೆಚ್ಚಿರಬೇಕು,  ಸಿ) ವ್ಯಕ್ತಿಯ ಎತ್ತರಕ್ಕೆ ಅರ್ಧದಷ್ಟಿರಬೇಕು,  ಡಿ) ವ್ಯಕ್ತಿಯ ಎತ್ತರದ ಕಾಲು ಭಾಗದಷ್ಟಿರಬೇಕು

ರೋಗಿಯ ಹೊಟ್ಟೆಯ ಒಳಭಾಗವನ್ನು ಪರೀಕ್ಷಿಸಲು ವೈದ್ಯರು ಮಾಡುವ ಎಂಡೋಸ್ಕೋಪ್ ಚಿಕಿತ್ಸೆಯು ಈ ವಿಧಾನವನ್ನು ಅನುಸರಿಸಿದೆ
ಎ) ಬೆಳದಿನ ಪ್ರತಿಫಲನ,  ಬಿ) ಬೆಳಕಿನ ಚದುರುವಿಕೆ,  ಸಿ) ಬೆಳಕಿನ ಒಟ್ಟಾದ ಆಂತರಿಕ ಪ್ರತಿಫಲನ,  ಡಿ) ಬೆಳಕಿನ ಹೀರುವಿಕೆ

ಮರೀಚಿಕೆಯು ಈ ಕಾರಣದಿಂದ ಉಂಟಾಗುತ್ತದೆ
ಎ) ಅತಿ ಉಷ್ಣಾಂಶವು ಬೆಳಕನ್ನು ಹೀರುವುದರಿಂದ,  ಬಿ) ಅತಿ ಉಷ್ಣಾಂಶವು ಬೆಳಕನ್ನು ಚದುರಿಸುವುದರಿಂದ,  ಸಿ) ಒಟ್ಟಾದ ಆಂತರಿಕ ಪ್ರತಿಫಲನ,  ಡಿ) ಉಷ್ಣಾಂಶವು ಬೆಳಕಿನ ವೇಗ ಕಡಿಮೆ ಗೊಳಿಸುವುದರಿಂದ

ವಾತಾವರಣದಲ್ಲಿ ಅತಿ ಹೆಚ್ಚು ಒತ್ತಡವಿದ್ದರೂ ನಮ್ಮ ಗಮನಕ್ಕೆ ಬರದಿರಲು ಕಾರಣ
ಎ) ನಾವು ಆ ಒತ್ತಡವನ್ನು ತಾಳುವುದರಿಂದ,  ಬಿ) ನಮ್ಮ ಮೂಳೆಗಳು ಗಟ್ಟಿಯಿರುವುದರಿಂದ,  ಸಿ) ನಮ್ಮ ರಕ್ತದ ಒತ್ತಡವು ಮಾತಾವರಣದ ಒತ್ತಡಕ್ಕಿಂತಲೂ ಸ್ವಲ್ಪ ಹೆಚ್ಚಾದ ಒತ್ತಡವನ್ನು ಕಾಯ್ದುಕೊಳ್ಳುವುದರಿಂದ,  ಡಿ) ಯಾವುದು ಅಲ್ಲ

ಒಂದು ಚಾಪೆಯನ್ನು ಕೋಲಿನಿಂದ ಹೊಡೆದು ಶುಚಿಗೊಳಿಸುವ ವಿಧಾನವು ಈ ಕೆಳಕಂಡ ಯಾವ ನಿಯಮಕ್ಕೆ ಸಂಬಂಧಿಸಿದೆ
ಎ) ಚಲನೆಯ ಮೊದಲ ನಿಯಮ,  ಬಿ) ಚಲನೆಯ 2ನೇ ನಿಯಮ,  ಸಿ) ಶಕ್ತಿಯ ಸಂರಕ್ಷಣಾ ನಿಯಮ,  ಡಿ) ಗುರುತ್ವ ನಿಯಮ

ಹಗ್ಗದ ಮೇಲೆ ನೆಡೆಯುವ ಮನುಷ್ಯನು ಒಂದು ಉದ್ದವಾದ ಕೋಲನ್ನು ಕೈಯಲ್ಲಿ ಹಿಡಿದು ನೆಡೆಯಲು ಕಾರಣ
ಎ) ಬೀಳುವ ಸಂದರ್ಭದಲ್ಲಿ ಕೋಲಿನ ಮೂಲಕ ಕೆಳಗಿಳಿಯಲು,  ಬಿ) ಕೋಲಿನ ಸಹಾಯದಿಂದ ಹಗ್ಗದ ಮೇಲಿರುವ ತನ್ನ ಭಾರವನ್ನು ಕಡಿಮೆಗೊಳಿಸಲು,  ಸಿ) ಕೋಲಿನ ಸಹಾಯದಿಂದ ಹಗ್ಗದ ಮೇಲಿನ ಭಾರವನ್ನು ಹೆಚ್ಚಿಸಿ ಹಗ್ಗವನ್ನು ಬಿಗಿಗೊಳಿಸಲು,  ಡಿ) ಕೋಲಿನ ಸಹಾಯದಿಂದ ತನ್ನ ಗುರುತ್ವ ಕೇಂದ್ರವನ್ನು ಸರಿದೂಗಿಸಲು

ಬಿಸಿಲಿನಲ್ಲಿ ಮಳೆಬಂದು ಬೆಳಕು ನೀರಿನ ಮೂಲಕ ಹಾಯ್ದಾಗ ಬಾನಿನಲ್ಲಿ ಕಾಮನಬಿಲ್ಲು ಮೂಡಲು ಕಾರಣ
ಎ) ಬೆಳಗಿನ ಹೀರುವಿಕೆ,  ಬಿ) ಬೆಳಗಿನ ಚದುರುವಿಕೆ,  ಸಿ) ಬೆಳಕಿನ ವಕ್ರೀಭವನ & ಆಂತರಿಕ ಪ್ರತಿಫಲನ,  ಡಿ) ಬೆಳಕು & ನೀರಿನ ಸಮ್ಮಿಲನ 

ಒಂದು ಉರಿಯುತ್ತಿರುವ ಬಲ್ಬಿನಲ್ಲಿ ಉಷ್ಣಾಂಶವು 1500 ಡಿಗ್ರಿ ಸೆ.ಗಿಂತಲೂ ಹೆಚ್ಚಾಗಿದ್ದರೂ ಬಲ್ಬ್ ಒಳಗಿರುವ ವಸ್ತುವು ಸುಟ್ಟುಹೋಗದಿರಲು ಕಾರಣ
ಎ) ಅದರಲ್ಲಿರುವ ಲೋಹವು ಶಾಖನಿರೋಧಕವಾಗಿದೆ,  ಬಿ) ಒಂದು ವಸ್ತುವು ಉರಿಯಲು ಆಮ್ಲಜನಕವು ಅಗತ್ಯವಾಗಿದ್ದು ಅಲ್ಲಿ ಆಮ್ಲಜನಕವಿರದೆ ಜಡಅನಿಲ ಇರುವುದು,  ಸಿ) ಬಲ್ಬ್ ಸಂಪೂರ್ಣ ಮುಚ್ಚಿಕೊಂಡಿರುವುದು,  ಡಿ) ಯಾವುದು ಅಲ್ಲ

ಒಂದು ಹೂಜಿಯಲ್ಲಿರುವ ನೀರಿಗೆ ಮಂಜುಗಡ್ಡೆಯನ್ನು ಹಾಕಿದ ನಂತರ ಮಂಜುಗಡ್ಡೆಯು ಕರಗಿದಾಗ ಹೂಜಿಯಲ್ಲಿರುವ ನೀರಿನ ಪ್ರಮಾಣವು
ಎ) ಕಡಿಮೆಯಾಗುತ್ತದೆ,  ಬಿ) ಹೆಚ್ಚಾಗುತ್ತದೆ,  ಸಿ) ಅಷ್ಟೇಇರುತ್ತದೆ,  ಡಿ) ಮಂಜುಗಡ್ಡೆಯ ಗಾತ್ರಕ್ಕೆ ತಕ್ಕಂತೆ ಹೆಚ್ಚು ಕಡಿಮೆಯಾಗುತ್ತದೆ

Hydroponics ಎಂದರೆ
ಎ) ನೀರಿನಲ್ಲಿ ಶಬ್ದವನ್ನು ಹರಡುವುದು,  ಬಿ) ನೀರಿನಲ್ಲಿ ಗಿಡಗಳನ್ನು ಬೆಳೆಸುವ ವಿಧಾನ,  ಸಿ) ನೀರನ್ನು ಕಂಡರೆ ಭಯಪಡುವ ಖಾಯಿಲೆ ಗುಣಪಡಿಸುವುದು,  ಡಿ) ನೀರಿನಲ್ಲಿರುವ ಜೀವಿಗಳ ಅಧ್ಯಯನ

ಟ್ರಾನ್ಸ್ ಫಾರ್ಮರ್ ಒಳಭಾಗ ಇದರಿಂದ ಮಾಡಲ್ಪಟ್ಟಿದೆ
ಎ) ಮೆದು ಕಬ್ಬಿಣ,  ಬಿ) ಸ್ಟೀಲ್,  ಸಿ) ತಾಮ್ರ,  ಡಿ) ಅಲ್ಯುಮಿನಿಯಂ

ಈ ಲೋಹಗಳಲ್ಲಿ ಅತಿ ಹೆಚ್ಚಾದ ಡೆನ್ಸಿಟಿ ಹೊಂದಿರುವ ಲೋಹ
ಎ) ಚಿನ್ನ,  ಬಿ) ಕಬ್ಬಿಣ,  ಸಿ) ಪ್ಲಾಟಿನಂ,  ಡಿ) ತಾಮ್ರ

ಅತಿ ಹೆಚ್ಚು ನೈಟ್ರೋಜನ್ನನ್ನು ಹೊಂದಿರುವ ರಾಸಾಯನಿಕ ಗೊಬ್ಬರ ಯಾವುದು
ಎ) ಯೂರಿಯಾ ಬಿ) ಅಮೋನಿಯಂ ನೈಟ್ರೇಟ್,  ಸಿ) ಪೊಟಾಷಿಯಂ ನೈಟ್ರೇಟ್,   ಡಿ) ಅಮೋನಿಯಂ ಫಾಸ್ಪೇಟ್

ಥರ್ಮಾಮೀಟರಿನಲ್ಲಿ ಪಾದರಸವನ್ನು ಬಳಸಲು ಮುಖ್ಯ ಕಾರಣ ಅದು ನೀರಿಗಿಂತ ಹೆಚ್ಚಿನ ನಿರ್ಧಿಷ್ಟ ತಾಪಮಾನ ಹೊಂದಿದೆ & ಅದು ಗಾಜಿಗೆ ಅಂಟಿಕೊಳ್ಳುವುದಿಲ್ಲ

ಅಮಾಲ್ಗಂ ಇವುಗಳ ಮಿಶ್ರಣವಾಗಿದೆ
ಎ) ಕ್ಲೋರಿನಿನೊಂದಿಗೆ ಯಾವುದೇ ಲೋಹ,  ಬಿ) ನೈಟ್ರೇಟ್ ನೊಂದಿಗೆ ಯಾವುದೇ ಲೋಹ,  ಸಿ) ತಾಮ್ರದೊಂದಿಗೆ ಯಾವುದೇ ಲೋಹ,  ಡಿ) ಪಾದರಸದೊಂದಿಗೆ ಯಾವುದೇ ಲೋಹ

ಇವುಗಳಲ್ಲಿ ಯಾವ ವಸ್ತುವು ಬೆಂಕಿಯಲ್ಲಿ ಬಣ್ಣಗಳುಂಟಾಗಲು ಸಹಾಯಮಾಡುತ್ತದೆ
ಎ) ಜಿಂಕ್ & ಗಂಧಕ,  ಬಿ) ಪೊಟಾಷಿಯಂ & ಪಾದರಸ,  ಸಿ) ಸ್ಟ್ರೋಂಟಿಯಂ & ಬೇರಿಯಂ,  ಡಿ) ಕ್ರೋಮಿಯಂ & ನಿಕ್ಕಲ್

ಹೊಂದಿಸಿ ಬರೆಯಿರಿ

a

CNG

1

ಕಾರ್ಬನ್ ಮೊನಾಕ್ಸೈಡ್ & ಹೈಡ್ರೋಜನ್

b

Coal Gas

2

ಬೂಟೇನ್ & ಪ್ರೋಪೇನ್

c

LPG

3

ಮೀಥೇನ್ & ಈಥೇನ್

d

Water Gas

4

ಹೈಡ್ರೋಜನ್, ಮೀಥೇನ್ & ಕಾರ್ಬನ್ ಮೊನಾಕ್ಸೈಡ್




a

b

c

d

A

2

1

3

4

B

3

4

2

1

C

2

4

3

1

D

3

1

2

4