Friday, September 3, 2010

General Knowledge

1934 ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು "Planned Economy for India" ಎಂಬ ಪುಸ್ತಕ ಬರೆದರು

ದಾದಾಬಾಯಿ ನವರೋಜಿಯವರು Economic Drain Theory ಎಂಬ ಪುಸ್ತಕ ಬರೆದರು

1938ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಜವಾಹರ್ ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು

1950ರಲ್ಲಿ ಯೋಜನಾ ಆಯೋಗವು ಜವಾಹರ್ ಲಾಲ್ ನೆಹರುವರವ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು, ಯಾವಾಗಲು ಇದರ ಅಧ್ಯಕ್ಷರು ಪ್ರಧಾನಮಂತ್ರಿಯಾಗಿರುತ್ತಾರೆ

1945ರಲ್ಲಿ People's Plan ಇದು M.N.Roy ರವರಿಂದ ಪ್ರಾರಂಭಿಸಲ್ಪಟ್ಟಿತು

1952ರಲ್ಲಿ National Development Council ಪ್ರಾರಂಭಿಸಲಾಯಿತು

ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆ 1951-56 ಪ್ರಾರಂಬಿಸಲಾಗಿ ಈ ಯೋಜನೆಯಲ್ಲಿ ಕೃಷಿಗೆ ಒತ್ತನ್ನು ಕೊಡಲಾಯಿತು, ಪಂಚವಾರ್ಷಿಕ ಯೋಜನೆಯು ರಷ್ಯಾದ ಪರಿಕಲ್ಪನೆಯಾಗಿದೆ.

1966-69 ನ್ನು ಪಂಚವಾರ್ಷಿಕ ಯೋಜನೆಯ ಯೋಜನಾ ರಜೆಯೆಂದು ಘೋಷಿಸಲಾಗಿದೆ

1974-79ರ 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಬಡತನದ ನಿರ್ಮೂಲನೆಗಾಗಿ ಯೋಜನೆಯನ್ನು ರೂಪಿಸಿ ಅದಕ್ಕೆ 'ಗರೀಬಿ ಹಟಾವೊ' ಎಂದು ಹೆಸರಿಸಲಾಯಿತು

ಪ್ರಸ್ಥುತ 2007-2012ರ 11ನೇ ಪಂಚವಾರ್ಷಿಕ ಯೋಜನೆ ಜಾರಿಯಲ್ಲಿದೆ

ಭಾರತದಲ್ಲಿ ಬಡತನವನ್ನು ಒಬ್ಬರು ಒಂದು ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೊರಿಗಳ ಮೇಲೆ ಅಳೆಯಲಾಗುತ್ತದೆ. ಇದು ಗ್ರಾಮಾಂತರದಲ್ಲಿ 2400 ಕ್ಯಾಲೊರಿ ಮತ್ತು ನಗರ ಪ್ರದೇಶದಲ್ಲಿ 2100 ಕ್ಯಾಲೋರಿಗೆ ಸೀಮಿತವಾಗಿದ್ದು ಇದಕ್ಕಿಂತ ಕಡಿಮೆ ಕ್ಯಾಲೊರಿ ಪಡೆಯುವವರನ್ನು ಬಡತನ ರೇಖೆಗಿಂತ (BPL) ಕೆಳಗಿರುವವರು ಎಂದು ಗುರುತಿಸಲಾಗುತ್ತದೆ.

BPL ಎಂದರೆ Below Poverty Line
NSSO ಎಂದರೆ National Sample Survey Organisation
NCLP ಎಂದರೆ National Child Labour Project Scheme
SGRY ಎಂದರೆ Swarnajayanti Gram Swarozgar Yojana
IRDP ಎಂದರೆ Integrated Rural Development Programme
PMGSY ಎಂದರೆ Pradan Mantri Gram Sadak Yojana
MGNREGS ಎಂದರೆ Mahatma Gandhi National Rural Employment Guarantee Scheme
BNY ಎಂದರೆ Bharath Nirman Yojana
JNNURM ಎಂದರೆ Jawaharlal Neharu National Urban renewal mission

SSA ಎಂದರೆ Sarva Shiksha Abhiyan ಈ ಯೋಜನೆಯಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದಾಗಿದೆ

CAPRAT - ಎಂದರೆ Caouncil for Advancement of Peoples Action & Rural Technology - ಇದು ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮಾಂತರ ಪ್ರದೇಶವನ್ನು ಅಭಿವೃಧ್ದಿ ಪಡಿಸುವುದಾಗಿದೆ.

CSO ಎಂದರೆ Central Statistical Organisation
NSO ಎಂದರೆ National Statistical Organisation
SICA ಎಂದರೆ Sick Industrial Companies Act
BIFR ಎಂದರೆ Board for Industrial & Financial Reconstruction

ರಾಷ್ಟ್ರೀಯ ತಲಾದಾಯವು ಒಟ್ಟು ರಾಷ್ಟ್ರೀಯ ವರಮಾನವನ್ನು ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದಾಗ ಬರುತ್ತದೆ

ಹಸಿರು ಕ್ರಾಂತಿ ಇದು ನಾರ್ಮನ್ ಬೋರ್ಲಾಗ್ ರವರಿಂದ ಪ್ರಾರಂಭವಾಗಿ ಮೊದಲಬಾರಿ ಮೆಕ್ಸಿಕೋದಲ್ಲಿ ಜಾರಿಯಾಯಿತು. ಭಾರತದಲ್ಲಿ ಹಸಿರು ಕ್ರಾಂತಿಗೆ ಕಾರಣಕರ್ತರು ಎಂ.ಎಸ್.ಸ್ವಾಮಿನಾಥನ್, ಹಸಿರು ಕ್ರಾಂತಿಯಲ್ಲಿ ಬಳಸಿದ ಬೆಳೆ ಗೋಧಿ

ಭಾರತದಲ್ಲಿ 2ನೇ ಹರಿಸು ಕ್ರಾಂತಿಯನ್ನು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ

ಕೆಲವು ಕೃಷಿಕ್ರಾಂತಿಗಳು
ಶ್ವೇತ ಕ್ರಾಂತಿ - ಹಾಲಿಗೆ ಸಂಬಂಧಿಸಿದೆ,
ನೀಲಿ ಕ್ರಾಂತಿ - ಮೀನುಗಾರಿಕೆಗೆ ಸಂಬಂಧಿಸಿದೆ
ಹಳದಿ ಕ್ರಾಂತಿ - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ
ಪಿಂಕ್ ಕ್ರಾಂತಿ - ಸೀಗಡಿಗೆ ಸಂಬಂಧಿಸಿದೆ
ಬೂದು ಕ್ರಾಂತಿ - ಉಣ್ಣೆಗೆ ಸಂಬಂದಿಸಿದೆ
ಸ್ವರ್ಣಕ್ರಾಂತಿ - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ
ಕಪ್ಪು ಕ್ರಾಂತಿ - ಪೆಟ್ರೋಲಿಯಂಗೆ ಸಂಬಂಧಿಸಿದೆ
ಕೆಂಪು ಕ್ರಾಂತಿ - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ
ಬೆಳ್ಳಿಕ್ರಾಂತಿ - ಮೊಟ್ಟೆಗೆ ಸಂಬಂಧಿಸಿದೆ
Round Revolution - ಆಲುಗೆಡ್ಡೆಗೆ ಸಂಬಂಧಿಸಿದೆ

ಭಾರತದಲ್ಲಿ ಶ್ವೇತ ಕ್ರಾಂತಿಯು ವರ್ಗೀಸ್ ಕುರಿಯನ್ ರವರ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚು ಮಾಡಲು ಪ್ರಾರಂಭಿಸಲಾಯಿತು

ಭಾರತದಲ್ಲಿ ಸುಮಾರು 7500 ಕಿಮೀ ಉದ್ದದ ಸಮುದ್ರತೀರ ಪ್ರದೇಶವಿದೆ ಕರ್ನಾಟಕದಲ್ಲಿ ತೀರ ಪ್ರದೇಶವು ಸುಮಾರು 300 ಕಿ.ಮೀಯಿದೆ.

ಭಾರತದ ನವರತ್ನ ಕಂಪನಿಗಳು
Bharat Electronics Limited
Bharat Heavy Electricals Limited
Bharat Petroleum Corporation Limited
Coal India Limited
GAIL (India) Limited
Hindustan Aeronautics Limited
Hindustan Petroleum Corporation Limited
Indian Oil Corporation Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Mahanagar Telephone Nigam Limited
National Aluminium Company Limited
NMDC Limited
NTPC Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil and Natural Gas Corporation Limited----(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil India Limited
Power Finance Corporation Limited
Power Grid Corporation of India Limited
Rural Electrification Corporation Limited
Shipping Corporation of India Limited
Steel Authority of India Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Indian petrochemicals Corporation Ltd
Videsh Sanchar Nigam Ltd

ಭಾರತದಲ್ಲಿ ಮೊದಲು ಪ್ರಾರಂಭವಾದ ಬ್ಯಾಂಕ್ 1770 ರಲ್ಲಿ ಪ್ರಾರಂಭವಾದ ಬ್ಯಾಂಕ್ ಆಫ್ ಹಿಂದುಸ್ಥಾನ್, ನಂತರ 1806ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್, 1840ರಲ್ಲಿ ಬ್ಯಾಂಕ್ ಆಫ್ ಬಾಂಬೆ, 1843ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಪ್ರಾರಂಭವಾಯಿತು ಕ್ರಮೇಣ ಈ 3 ಬ್ಯಾಂಕ್ ಗಳು ಪ್ರಸಿಡೆನ್ಸಿ ಬ್ಯಾಂಕ್ಗಳೆಂದು ಕರೆಯಲ್ಪಟ್ಟವು, ನಂತರ 1955ರಲ್ಲಿ ರಾಷ್ಟ್ರೀಕರಣವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಆಯಿತು.

ಸಂಪೂರ್ಣ ಮೊದಲ ಭಾರತೀಯ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ 1894ರಲ್ಲಿ ಪ್ರಾರಂಭವಾಯಿತು

ಭಾರತೀಯ ರಿಸರ್ವ್ ಬ್ಯಾಂಕನ್ನು 1-4-1935 ರಂದು 5 ಕೋಟಿ ಬಂಡವಾಳದೊಂದಿಗೆ ಪ್ರಾರಂಭಿಸಿಲಾಯಿತು ಮತ್ತು 1-1-1949ರಂದು ರಾಷ್ಟ್ರೀಕೃತ ಗೊಳಿಸಲಾಯಿತು.

19 ಜುಲೈ 1969ರಂದು 14 ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು ನಂತರ 1980ರಲ್ಲಿ ಮತ್ತೆ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಪ್ರಸ್ತುತ 20 ರಾಷ್ಟ್ರೀಕೃತ ಬ್ಯಾಂಕುಗಳಿವೆ.

ಭಾರತದಲ್ಲಿ 1 ರೂ ನೋಟಿಗೆ ಮಾತ್ರ ಹಣಕಾಸು ಕಾರ್ಯದರ್ಶಿಯ ಸಹಿಯಿದ್ದು ಮಿಕ್ಕೆಲ್ಲ ನೋಟಿಗೂ RBI ಗೌರ್ನರ್ ಸಹಿಯಿರುತ್ತದೆ.

Bank Rate ಇದು RBI ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಕ್ರೆಡಿಟ್ ಬೆಲೆ.

Cash Reserve Ratio ಇದು ವಾಣಿಜ್ಯ ಬ್ಯಾಂಕುಗಳು RBI ನಲ್ಲಿ ಕಡ್ಡಾಯವಾಗಿ ಇಡಬೇಕಾದ ನಿರ್ದಿಷ್ಟ ಶೇಕಡಾಮೊತ್ತ.

Repo Rate ಇದು ವಾಣಿಜ್ಯ ಬ್ಯಾಂಕುಗಳಿಂದ RBI ಪಡೆಯುವ ಸಾಲ.

BSE- Bombay Stock Exchange ಇದು 30 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.

NSE- National Stock Exchange ಇದು 50 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.

SEBI - Security & Exchange Board of India ಇದು ಷೇರು ಮಾರುಕಟ್ಟಯಲ್ಲಿ ಅಕ್ರಮ ವಹಿವಾಟು ತಡೆಯುವ ಸಂಸ್ಥೆ.

IRDA - Insurance Regulatory & Development Authority
WPI - Wholesale Price Index.