Thursday, August 26, 2010

ವೈರ್ಲೆಸ್ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ-2010

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ
ಎ) 25,  ಬಿ) 26,  ಸಿ) 30,  ಡಿ) 28

ರೇರ್ ಅರ್ತ್ ಕಾರ್ಖಾನೆ ಇರುವುದು
ಎ) ಅಲೆಪೆ,  ಬಿ) ಆಲ್ ವೆ,  ಸಿ) ಅಂಬರನಾಥ್,  ಡಿ) ಆವಡಿ

ಭಾರತದ ಮೊದಲ ಅಣುಶಕ್ತಿ ಸ್ಥಾವರ ಸ್ಥಾಪಿತವಾಗಿರುವುದು
ಎ) ಸೂರತ್,  ಬಿ) ತಾರಾಪರ,  ಸಿ) ಟ್ರಾಂಬೆ,  ಡಿ) ಶೋಲಾಪುರ

ರಾಣಾಪ್ರತಾಪ ಸಾಗರ(ರಾಜಸ್ಥಾನದಲ್ಲಿ) ಪ್ರಖ್ಯಾತವಾಗಿರುವುದು 
ಎ) ನ್ಯೂಕ್ಲಿಯರ್ ಶಕ್ತಿ ಸ್ಥಾವರ,  ಬಿ) ಅಲ್ಯುಮಿನಿಯಮ್ ಕಾರ್ಖಾನೆ,  ಸಿ) ತಾಮ್ರದ ಅಲಂಕಾರ ಸಾಮಗ್ರಿ,  ಡಿ) ಆಟದ ವಸ್ತುಗಳಿಗೆ

1ನೇ ಮಹಾಯುದ್ಧ ಪ್ರಾರಂಭವಾದದ್ದು.
ಎ) 1904,  ಬಿ) 1908,  ಸಿ)1910,  ಡಿ) 1914

ಮೊದಲ ಅಣುಬಾಂಬ್ ಹಿರೋಷಿಮಾದ ಮೇಲೆ ಬಿದ್ದದ್ದು.
ಎ) 6ನೇ ಆಗಸ್ಟ್ 1945,  ಬಿ) 9ನೇ ಆಗಸ್ಟ್ 1945,  ಸಿ) 9ನೇ ಆಗಸ್ಟ್ 1946,  ಡಿ) 6ನೇ ಆಗಸ್ಟ್ 1942

ಅಡೋಲ್ಫ್ ಹಿಟ್ಲರನ ದೇಶ
ಎ) ಫ್ರಾನ್ಸ್,  ಬಿ) ಜರ್ಮನಿ,  ಸಿ) ಆಸ್ಟ್ರಿಯ,  ಡಿ) ಇಂಗ್ಲೆಂಡ್

ಮಹಾವೀರ ಜನಿಸಿದ್ದು
ಎ) 600 ಕ್ರಿ.ಪೂ,  ಬಿ) 570 ಕ್ರಿ.ಪೂ,  ಸಿ) 540 ಕ್ರಿ.ಪೂ,  ಡಿ) 430 ಕ್ರಿ.ಪೂ

ಹಳೇಬೀಡು ಬೇಲೂರುಗಳಲ್ಲಿನ ದೇವಾಲಯಗಳನ್ನು ನಿರ್ಮಿಸಿದವರು
ಎ) ಚೋಳರು,  ಬಿ) ಹೊಯ್ಸಳರು,  ಸಿ) ಕಾಕತೀಯರು,  ಡಿ) ಪಲ್ಲವರು

ಭಾರತವನ್ನಾಳಿದ ಕೊನೆಯ ಮೊಘಲ್ ದೊರೆ
ಎ) ಅಕ್ಬರ್,  ಬಿ) ಎರಡನೇ ಬಹದ್ದೂರ್ ಷಾ,  ಸಿ) ಎರಡನೇ ಅಲಂಗೀರ್,  ಡಿ) ಎರಡನೇ ಶಾ ಅಲಂ

ದಂಡಿ ಸತ್ಯಾಗ್ರಹ ನೆಡೆದಿದ್ದು
ಎ) 1930,  ಬಿ) 1935,  ಸಿ) 1942,  ಡಿ) 1945

ಗಾಂಧೀಜಿಯವರ ದಂಡೀ ಸತ್ಯಾಗ್ರಹ ಶುರುವಾದದ್ದು
ಎ) ಬರ್ಡೋಲಿ,  ಬಿ) ಅಹಮದಾಬಾದ್,  ಸಿ) ಸೂರತ್,  ಡಿ) ಮುಂಬೈ

ಗಡಿಯಾರದಲ್ಲಿ ಗಂಟೆ 1.50 ಆದಾಗ ಕೋನದ ಅಳತೆ ಯಾವ ಡಿಗ್ರಿ
ಎ) 90,  ಬಿ) 95,  ಸಿ) 105,  ಡಿ) 115

10, 20, 30, 40 ಹಾಗು X ರ ಸರಾಸರಿ 60 ಆದರೆ X ನ ಬೆಲೆ ಏನು
ಎ) 50,  ಬಿ) 60,  ಸಿ) 100,  ಡಿ) 200

Power Point ಪ್ರದರ್ಶನದ ವಿಸ್ತಾರ
ಎ) .xls ಬಿ) .ppt  ಸಿ) .doc  ಡಿ) .bmp

ಗುಂಪಿಗೆ ಸೇರದ ಪದವನ್ನು ಗುರುತಿಸಿ
ಎ) ಕೋಆಕ್ಸಿಯಲ್ ಕೇಬಲ್,  ಬಿ) ಆಪ್ಟಿಕಲ್ ಫೈಬರ್,  ಸಿ) ಸುರುಳಿಯಿರುವ ಜೋಡಿ ತಂತಿ,  ಡಿ) ಮೈಕ್ತೋವೇವ್ಸ್

ಯೂರೋಪಿನ ಆಟದ ಮೈದಾನ ಇರುವುದು ಎಲ್ಲಿ
ಎ) ಲಂಡನ್,  ಬಿ) ಸ್ವಟ್ಜರ್ ಲ್ಯಾಂಡ್,  ಸಿ) ಲಾಸ್ ಏಂಜಲೀಸ್,  ಡಿ) ಜರ್ಮನಿ

Life Divine ಪುಸ್ತಕದ ಕರ್ತೃ
ಎ) ಜವಹಾರ್ ಲಾಲ್ ನೆಹರು,  ಬಿ) ಅರವಿಂದ ಘೋಶ್,  ಸಿ) ಜಾರ್ಜ್ ಬರ್ನಾಡ್ ಷಾ,  ಡಿ) ರುಡ್ಯಾರ್ಡ್ ಕಿಪ್ಲಿಂಗ್

ಸಂಗೀತ ನಾಡಕ ಅಕಾಡೆಮಿಯು ದೇಶದಲ್ಲಿನ ಸಂಗೀತ, ನಾಟಕ, ನೃತ್ಯಗಳ ಏಳಿಗೆಗೆ ಶ್ರಮಿಸುತ್ತಿದೆ ಇದು ಆರಂಭವದದ್ದು ಯಾವಾಗ
ಎ) 1958,  ಬಿ) 1959,  ಸಿ) 1960,  ಡಿ) 1961

ಭಾರತದ ಮೊದಲ ರಾಷ್ಟ್ರಪತಿ ಯಾರು
ಎ) ಎಸ್.ರಾಧಾಕೃಷ್ಣ,  ಬಿ) ರಾಜೇಂದ್ರಪ್ರಸಾದ್,  ಸಿ) ಜಾಕಿರ್ ಹುಸೇನ್,  ಡಿ) ವಿ.ವಿ.ಗಿರಿ

ಭಾರತದ ರಾಷ್ಟ್ರಪುಷ್ಪ ಯಾವುದು
ಎ) ಸೂರ್ಯಕಾಂತಿ, ಬಿ) ಗುಲಾಬಿ,  ಸಿ) ಕಮಲ,  ಡಿ) ಚೆಂಡು ಹೂ 

1954ರ ಮೊದಲ ಭಾರತರತ್ನ ಪ್ರಶಸ್ತಿ ಪಡೆದವರು ಯಾರು
ಎ) ಎಸ್. ರಾಧಾಕೃಷ್ಣನ್,  ಬಿ) ಸಿ.ರಾಜಗೋಪಾಲಚಾರಿ,  ಸಿ) ಸಿ.ವಿ.ರಾಮನ್,  ಡಿ) ಜವಹರಲಾಲ್ ನೆಹರು

ಸಲಾರ್ ಜಂಗ್ ಮತ್ತು ಸಂಗ್ರಹಾಲಯ ಇರುವ ಸ್ಥಳ
ಎ) ಹೈದರಾಬಾದ್,  ಬಿ) ನವ ದೆಹಲಿ,  ಸಿ) ಪೂನ,  ಡಿ) ಅಲಹಾಬಾದ್

LPG ಯಲ್ಲಿರುವ ಪ್ರಮುಖ ವಸ್ತು
ಎ) ಮಿಥೇನ್,  ಬಿ) ಪ್ರೊಪೇನ್,  ಸಿ) ಈಥೇನ್,  ಡಿ) ಬ್ಯೂಟೇನ್

ಯಾವುದೇ ವಸ್ತುವನ್ನು ನೇರವಾಗಿ ಆವಿಯಾಗಿ ಪರಿವರ್ತಿಸುವ ಕ್ರಿಯೆಗೆ ಹೀಗೆನ್ನುತ್ತಾರೆ
ಎ) ವೇಪರೈಸೇಷನ್,  ಬಿ) ಸಬ್ಲಿಮೇಷನ್,  ಸಿ) ಡಿಕಾಂಪೊಜಿಷನ್,  ಡಿ) ಐಯೊನೈಸೇಷನ್

ಸಮುದ್ರದ ನೀರಿನಲ್ಲಿರುವ ಉಪ್ಪು ಯಾವುದು
ಎ) ಕ್ಯಾಲ್ಷಿಯಂ ಕಾರ್ಬೋನೇಟ್,  ಬಿ) ಪೊಟಾಶಿಯಂ ಕ್ಲೋರೈಡ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಮೆಗ್ನೀಷಿಯಂ ಸಲ್ಫೇಟ್

ಕನ್ನಡಿಯ ಹಿಂಬಾಗಕ್ಕೆ ಈ ಲೋಹದ ತೆಳು ಲೇಪನ ಮಾಡಿರುತ್ತಾರೆ
ಎ) ಸಿಲ್ವರ್,  ಬಿ) ಪಾದರಸ,  ಸಿ) ರೆಡ್ ಆಕ್ಸೈಡ್,  ಡಿ) ಸಿಲ್ವರ್ ನೈಟ್ರೇಟ್

ಮಾನವ ಮೆದುಳಿನ ಬಹುದೊಡ್ಡ ಭಾಗ
ಎ) ಮೆಡುಲ್ಲಾ ಆಂಬ್ಲಗೇಟ,  ಬಿ) ಸೆರೆಬೆಲ್ಲಮ್,  ಸಿ) ಸೆರೆಬ್ರಮ್,  ಡಿ) ಮಧ್ಯ ಮೆದುಳು

ಹಿಮೋಗ್ಲೋಬಿನ್ ನಲ್ಲಿರುವ ಪ್ರಮುಖ ವಸ್ತು
ಎ) ಕ್ಲೋರಿನ್,  ಬಿ) ಕಬ್ಬಿಣ,  ಸಿ) ಕ್ಯಾಲ್ಷಿಯಂ,  ಡಿ) ತಾಮ್ರ

ಹಿಮೋಗ್ಲೋಬಿನ್ ನ ಪ್ರಮುಖ ಕೆಲಸ
ಎ) ಆಮ್ಲಜನಕ ಸಾಗಣೆ,  ಬಿ) ಬ್ಯಾಕ್ಟೀರಿಯಾವನ್ನು ನಾಶ ಪಡಿಸುವುದು, ಸಿ) ಅನಿಮಿಯಾ ತಡೆಗಟ್ಟುವುದು,  ಡಿ) ಶಕ್ತಿಯನ್ನು ಉಪಯೋಗಿಸುವುದು

ಮನುಷ್ಯ ಕೆಳಗಿನ ಯಾವ ರಕ್ತದ ಗುಂಪಿನವನಾಗಿದ್ದರೆ ಅವನನ್ನು ಸಾರ್ವತ್ರಿಕ ದಾನಿ ಎನ್ನಬಹುದು
ಎ) O,  ಬಿ) A+,  ಸಿ) AB+,  ಡಿ) B+

SICA ಎಂದರೆ
ಎ) ಸ್ಮಾಲ್ ಇಂಡಸ್ಟ್ರೀಸ್ ಕಂಪನೀಸ್ ಅಸೋಸಿಯೇಷನ್,  ಬಿ) ಸಿಕ್ ಇಂಡಸ್ಟ್ರೀಸ್ ಕಂಬೈಂಡ್ ಅಸೋಸಿಯೇಷನ್,  ಸಿ) ಸಿಕ್ ಇಂಡಸ್ಟ್ರೀಸ್ ಕಂಪನೀಸ್ ಆಕ್ಟ್,  ಡಿ) ಸಬ್ ಸಿಡರಿ ಇಂಡಸ್ಟ್ರೀಸ್ ಕಾರ್ಪೋರೇಟ್ ಅಸೋಸಿಯೇಷನ್

ಷೇರು ಸೂಚ್ಯಂಕದಲ್ಲಿ ಬೆಲೆ ಏರಿಕೆ ಎಂದರೆ
ಎ) ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ,  ಬಿ) ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಬೆಲೆಗಳ ಏರಿಕೆ,  ಸಿ) ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಗುಂಪು ಕಂಪನಿಯ ಷೇರುಗಳ ಒಟ್ಟಾರೆ ಏರಿಕೆ,  ಡಿ) ಮುಂಬೈ ಷೇರು ವಿನಿಮಯ ಕೆಂದ್ರದಲ್ಲಿ ದಾಖಲಾಗಿರುವ ಗುಂಪು ಕಂಪನಿಗೆ ಸೇರಿದ ಎಲ್ಲಾ ಕಂಪನಿಗಳ ಷೇರುಗಳ ವ್ಯವಹಾರದಲ್ಲಿ ಏರಿಕೆ

ಭಾರತದಲ್ಲಿ ನೋಟುಗಳ ಮುದ್ರೆ ಹಾಗು ಪೂರೈಕೆಯಾಗುವುದು.
ಎ) ನಾಸಿಕ್ ನ ಸೆಕ್ಯುರಿಟಿ ಪ್ರೆಸ್,  ಬಿ) ಮುಂಬೈನ ಸೆಕ್ಯುರಿಟಿ ಪ್ರೆಸ್,  ಸಿ) ನೊಯಡಾದ ಸೆಕ್ಯುರಿಟಿ ಪ್ರಸ್,  ಡಿ) ನವದೆಹಲಿಯ ಭಾರತೀಯ ರಿಸರ್ವ್  ಬ್ಯಾಂಕ್

ಕಂಪನಿಯ ಡಿಬೆಂಚರ್ ದಾರರೆಂದರೆ ಕಂಪನಿಯ
ಎ) ಷೇರುದಾರರು,  ಬಿ) ಸಾಲ ಕೊಟ್ಟವರು,  ಸಿ) ಸಾಲಗಾರರು,  ಡಿ) ನಿರ್ದೇಶಕರು

ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯ ಯಾರು
ಎ) ಸತೀಶ್ ಧವನ್,  ಬಿ) ರವಿ ಮಲ್ಹೋತ್ರ,  ಸಿ) ರಾಕೇಶ್ ಶರ್ಮ, ಡಿ) ರಾಕೇಶ್ ಮಲ್ಹೋತ್ರ

ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಇರುವುದು.
ಎ) ಡಾರ್ಜಿಲಿಂಗ್,  ಬಿ) ಡೆಹ್ರಾಡೂನ್,  ಸಿ) ಮರ್ಮಗೋವಾ,  ಡಿ) ದಿಸ್ಪುರ್

3Ö 2197=
ಎ) 15,  ಬಿ) 23,  ಸಿ) 13,  ಡಿ) 35

ಕೆಳಗಿನವುಗಳಲ್ಲಿ ಯಾವುದು ಮೂಲಭೂತ  ಹಕ್ಕುಅಲ್ಲ
ಎ) ಮುಷ್ಕರದ ಹಕ್ಕು,  ಬಿ) ಸಮಾನತೆಯ ಹಕ್ಕು,  ಸಿ) ಶೋಷಣೆಯ ವಿರುದ್ಧದ ಹಕ್ಕು,  ಡಿ) ಧಾರ್ಮಿಕ ಸ್ವಾತಂತ್ರದ ಹಕ್ಕು

ಇಂಡಸ್ ಕಣಿವೆ ನಾಗರೀಕತೆ ಸೇರಿದ್ದು
ಎ) ಪ್ಯಾಲಿಯೋ ಲಿತಿಕ್ ಯುಗ,  ಬಿ) ಮೀಸೋಲಿತಿಕ್ ಯುಗ,  ಸಿ) ಚಾಲ್ಕೋಲಿತಿಕ್ ಯುಗ,  ಡಿ) ನಿಯೋಲಿತಿಕ್ ಯುಗ

ಜಲಿಯನ್ ಬಾಗ್ ದುರಂತ ನೆಡೆದಿದ್ದು
ಎ) 14ನೇ ಆಗಸ್ಟ್ 1920,  ಬಿ) 13 ನೇ ಏಪ್ರಿಲ್ 1919,  ಸಿ) 30ನೇ ಜನವರಿ 1918,  ಡಿ) 15ನೇ ಆಗಸ್ಟ್ 1930

FAO ಪ್ರದಾನ ಕಛೇರಿ ಇರುವುದು ಎಲ್ಲಿ
ಎ) ನ್ಯೂಯಾರ್ಕ್,  ಬಿ) ವಾಷಿಂಗ್ಟನ್,  ಸಿ) ರೋಮ್,  ಡಿ) ಫ್ರಾನ್ಸ್

ಗ್ರೂಪ್ 77 ಎಂದರೆ
ಎ) ಆರ್ಥಿಕ ಗುಂಪು,  ಬಿ) ರಾಜಕೀಯ ಗುಂಪು,  ಸಿ) ಸಾಮಾಜಿಕ ಗುಂಪು,  ಡಿ) ಸಾಸ್ಕೃತಿಕ ಗುಂಪು

ಜಂಟಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಬಿಲ್ ಪಾಸಾಗಲು ಬೇಕಾದ ನಿರ್ಣಾಯಕ ಮತ ಚಲಾಯಿಸುವವರು
ಎ) ರಾಜ್ಯ ಸಭಾಧ್ಯಕ್ಷರು,  ಬಿ) ಡೆಪ್ಯುಟಿ ಲೋಕ ಸಭಾಧ್ಯಕ್ಷರು,  ಸಿ) ಲೋಕ ಸಭಾಧ್ಯಕ್ಷರು,  ಡಿ) ಪ್ರಧಾನ ಮಂತ್ರಿಗಳು

ಸಂವಿಧಾನದ ಆರ್ಟಿಕಲ್ 17 ಏನನ್ನು ಸೂಚಿಸುತ್ತದೆ
ಎ) ವ್ಯಕ್ತಿಗತ ಸ್ವಾತಂತ್ರದ ರಕ್ಷಣೆ,  ಬಿ) ಸಮಾನತೆಯ ಹಕ್ಕು ನೀಡುವಿಕೆ,  ಸಿ) ಅಸ್ಪೃಶ್ಯತಾ ನಿವಾರಣೆ,  ಡಿ) ಸಂವಿಧಾನಾತ್ಮಕ
ಪರಿಹಾರಗಳ ಹಕ್ಕು ನೀಡುವಿಕೆ

ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು
ಎ) ಚಿರತೆ,  ಬಿ) ಹುಲಿ,  ಸಿ) ಹಸು,  ಡಿ) ಸಿಂಹ

ಸಂವಿಧಾನದಲ್ಲಿ ಕೇಂದ್ರ ನಿರ್ವಹಣಾ ಅಧಿಕಾರ ಹೊಂದಿರುವವರು
ಎ) ಪ್ರಧಾನ ಮಂತ್ರಿಗಳು,  ಬಿ) ರಾಷ್ಟ್ರಪತಿಗಳು,  ಸಿ) ಕ್ಯಾಬಿನೆಟ್,  ಡಿ) ಕೇಂದ್ರ ಶಾಸಕಾಂಗ

ಈ ಆರ್ಟಿಕಲ್  ಅನ್ವಯ ಅಸ್ಟೃಶ್ಯತೆಯನ್ನು ರದ್ದು ಮಾಡಲಾಗಿದೆ ಹಾಗೂ ಇದರ ಆಚರಣೆ ಶಿಕ್ಷಾರ್ಹವಾದುದು
ಎ) 15,  ಬಿ) 16,  ಸಿ) 17,  ಡಿ) 18

ಸರ್ವೋಚ್ಛ ನ್ಯಾಯಾಲಯ ರಿಟ್ ಆಫ್ ಮ್ಯಾಂಡಮಸ್ ಹೊರಡಿಸುವುದು
ಎ) ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ಅಧಿಕಾರಿಗೆ ಯಾವುದೋ ಕೆಲಸವನ್ನು ಸಾರ್ವಜನಿಕ ಕೆಲಸವೆಂದು ಪರಿಗಣಿಸುವಂತೆ ಅದೇಶಿಸುವುದು,  ಬಿ) ಕಾನೂನು ಬಾಹಿರವಾಗಿ ಬಂಧಿತವಾಗಿರುವ ವ್ಯಕ್ತಿಯನ್ನು 24 ಗಂಟೆ ಒಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸುವುದು,  ಸಿ) ರಾಷ್ಟ್ರೀಯ ಹಿತಾಸಕ್ತಿಯ ಸಲುವಾಗಿ ಯಾವುದೇ
ವ್ಯಾಜ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ಅಧಿಕಾರಿಗೆ  ಆದೇಶಿಸುವುದು,  ಡಿ) ಮೇಲಿನ ಎಲ್ಲವು

ಸರ್ವೋಚ್ಛ ನ್ಯಾಯಾಲಯವು ರಿಟ್ ಆಫ್ ಪ್ರಾಹಿಬಿಷನ್ ಹೊರಡಿಸುವುದು
ಎ) ಕೆಳಗಿನ ನ್ಯಾಯಾಲಯವು ತನ್ನ ವ್ಯಾಪ್ತಿಯನ್ನು ಮೀರದಂತೆ ಅಥವಾ ನೈಸರ್ಗಿಕ ನ್ಯಾಯದ ವಿರುದ್ಧ ಹೋಗದಂತೆ ತಡೆಯುವುದು,  ಬಿ) ಕೆಳಗಿನ ನ್ಯಾಯಾಲಯವು ನಡೆಸುತ್ತಿರುವ ವ್ಯಾಜ್ಯದ ದಾಖಲೆಗಳನ್ನು ತನ್ನ ಅವಗಾಹನೆಗೆ ತರುವಂತೆ
ಅದೇಶಿಸುವುದು,  ಸಿ) ಯಾವುದೇ ವ್ಯಕ್ತಿಯನ್ನು ಅವರ ಅಧಿಕಾರ ವ್ಯಾಪ್ತಿ ಕುರಿತು ಪ್ರಶ್ನಿಸುವುದು,  ಡಿ) ನ್ಯಾಯಾಲಯದ ಮುಂದೆ ಕಾನೂನು ಬಾಹಿರವಾಗಿ ಬಂಧಿತವಾಗಿರುವ ವ್ಯಕ್ತಿಯನ್ನು ಹಾಜರುಪಡಿಸುವಂತೆ ಆದೇಶಿಸುವುದು

ರಾಜ್ಯದ ನಿರ್ವಹಣಾ ಅಧಿಕಾರ ಇರುವುದು'
ಎ) ರಾಜ್ಯದ ಜನರಲ್ಲಿ,  ಬಿ) ರಾಜ್ಯದ ಮುಖ್ಯಮಂತ್ರಿಗಳಲ್ಲಿ,  ಸಿ) ರಾಜ್ಯದ ರಾಜ್ಯಪಾಲರಲ್ಲಿ,  ಡಿ) ರಾಜ್ಯ ಶಾಸಕಾಂಗದಲ್ಲಿ

ಬ್ರಾಂಕೈಟಿಸ್ ಎಂಬ ಖಾಯಿಲೆಗೆ ತುತ್ತಾಗುವ ಅಂಗ
ಎ) ರಕ್ತ,  ಬಿ) ಬ್ಲಾಡರ್,  ಸಿ) ಪಿತ್ತಜನಕಾಂಗ,  ಡಿ) ಉಸಿರಾಟದ ಪ್ರಾಂತ್ಯ

ಸಿ.ಟಿ.ಸ್ಕಾನಿಂಗ್ ಗೆ ಬಳಸುವುದು
ಎ) ಅಲ್ಟ್ರಾ ಸೌಂಡ್ ಅಲೆಗಳು,  ಬಿ) ಗಾಮಾ ಅಲೆಗಳು,  ಸಿ) ಎಕ್ಸ್ ರೇ ಕಿರಣಗಳು,  ಡಿ) ಆಲ್ ಫಾ ಕಿರಣಗಳು

ಬಿಳಿ ರಕ್ತಕಣಗಳ ಪ್ರಮುಖ ಕಾರ್ಯವೇನು
ಎ) ಪೋಷಕಾಂಶಗಳನ್ನು ಒಯ್ಯುವುದು,  ಬಿ) ಸೋಂಕಿನ ವಿರುದ್ಧ ಹೋರಾಡುವುದು,  ಸಿ) ಆಮ್ಲಜನಕ ಪೂರೈಸುವುದು,  ಡಿ) ಶಕ್ತಿ
ಒದಗಿಸುವುದು

ಟಿಬಿಯ ಎಂಬ ಮೂಳೆ ಇರುವುದು
ಎ) ತಲೆ ಬುರುಡೆಯಲ್ಲಿ,  ಬಿ) ತೋಳಿನಲ್ಲಿ,  ಸಿ) ಕಾಲಿನಲ್ಲಿ,  ಡಿ) ಮುಖದಲ್ಲಿ

ವೈಯುಕ್ತಿಕ ಸ್ವಾತಂತ್ರದ ದೊಡ್ಡ  ಚಿನ್ಹೆ
ಎ) ಮ್ಯಾಂಡಮಸ್,  ಬಿ) ಸರ್ಶಿಯೋರರಿ,  ಸಿ) ಕೊ-ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್

A, B ನ ಪೂರ್ವಕ್ಕೆ 27 ಕಿ.ಮೀಟರ್ ಗಳಿದ್ದರೆ, Cನ ದಕ್ಷಿಣಕ್ಕೆ 12 ಕಿ.ಮೀ ಇದ್ದರೆ Dಯ ಪಶ್ಚಿಮಕ್ಕೆ 9 ಕಿ.ಮೀ ಇದ್ದರೆ, A ಹಾಗು D ನಡುವಿನ ದೂರ ಎಷ್ಟು
ಎ) 20,  ಬಿ) Ö34,  ಸಿ) 5Ö41,  ಡಿ) 10 Ö13

2.5 + 0.5 (2-0.5) + 0.1 =
ಎ) 3.35,  ಬಿ) 33.5,  ಸಿ) 5.33,  ಡಿ) 3.53

ಒಂದು ಸಂಖ್ಯೆಯ 3/4 ಭಾಗ ಆ ಸಂಖ್ಯೆಯ 1/6 ಭಾಗಕ್ಕಿಂತ 7 ಸಂಖ್ಯೆ ಹೆಚ್ಚಾಗಿದ್ದರೆ ಆ ಸಂಖ್ಯೆಯ 5/3 ಭಾಗ ಎಷ್ಟು 
ಎ) 12,  ಬಿ) 15,  ಸಿ) 20,  ಡಿ) 18

ರೇಡಿಯೋ ಕಿರಣಗಳನ್ನು ನಿಯಮಿತ ಕಾಲದಲ್ಲಿ ಹೊಮ್ಮಿಸುವ ಹೆವನ್ಲೀ ಬಾಡಿ
ಎ) ಕ್ವಾಸರ್,  ಬಿ) ವೈಟ್ ಡ್ವಾರ್ಪ್,  ಸಿ) ರೆಡ್ ಜಯಂಟ್,  ಡಿ) ಪಲ್ಸರ್

ಹಗುರವಾದ ಮತ್ತು ಭಾರವಾದ ವಸ್ತುಗಳು ಸಮಾನ ಚಲನಾ ಶಕ್ತಿಯನ್ನು ಹೊಂದಿರುತ್ತದೆ.  ಇವುಗಳಲ್ಲಿ ಯಾವುದು ತೀವ್ರಗತಿ ಹೊಂದಿರುತ್ತದೆ
ಎ) ಭಾರವಾದ ವಸ್ತು,  ಬಿ) ಹಗುರವಾದ ವಸ್ತು,  ಸಿ) ಎರಡೂ,  ಡಿ) ಎರಡೂ ಅಲ್ಲ

ಗಾಳಿಯಲ್ಲಿನ ಶಬ್ದದ ವೇಗದ ಅಂದಾಜು ಪ್ರಮಾಣ
ಎ) 3 ಮೀ/ಸೆ,  ಬಿ) 30 ಮೀ/ಸೆ,  ಸಿ) 330 ಮಿ/ಸೆ,  ಡಿ) 3000 ಮೀ/ಸೆ

ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಬಣ್ಣವಲ್ಲ
ಎ) ನೀಲಿ,  ಬಿ) ಹಸಿರು,  ಸಿ) ಕೆಂಪು,  ಡಿ) ಕಪ್ಪು

ರಾಷ್ಟ್ರೀಯ ಹೆದ್ದಾರಿ 4 ಕೂಡಿಸುವುದು
ಎ) ಮುಂಬೈ-ನಾಗಪುರ,  ಬಿ) ಮುಂಬೈ-ಚೆನ್ನೈ,  ಸಿ) ನಾಗಪುರ-ಹೈದರಾಬಾದ್,  ಡಿ) ಬೆಂಗಳೂರು-ಮೈಸೂರು

ಕೆಳಗಿನವುಗಳಲ್ಲಿ ಯಾವ ರೈಲು ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದು ಹೋಗುತ್ತದೆ
ಎ) ಹಿಮಸಾಗರ್ ಎಕ್ಸ್ ಪ್ರೆಸ್,  ಬಿ) ಜಿ.ಟಿ.ಎಕ್ಸ್ಪ್ರೆಸ್,  ಸಿ) ಶತಾಬ್ದಿ ಎಕ್ಸ್ಪ್ರೆಸ್,  ಡಿ) ಕರ್ನಾಟಕ ಎಕ್ಸ್ಪ್ರೆಸ್

ಗೀತಾಂಜಲೆ ಎಕ್ಸ್ಪ್ರೆಸ್ ಓಡಾಡುವುದು
ಎ) ಹೌರಾ-ಪುರಿ,  ಬಿ) ಹೌರಾ-ಜಮ್ಮು,  ಸಿ) ಹೌರಾ-ಮುಂಬೈ,  ಡಿ) ಹೌರಾ-ಜೈಪುರ

ರೈಲ್ವೆ ಬ್ರಾಡ್ಗೇಜ್ ನ ಸರಾಸರಿ ವಿಸ್ತಾರ
ಎ) 2.00ಮೀ,  ಬಿ) 1.83 ಮೀ,  ಸಿ) 1.67 ಮೀ,  ಡಿ) 1.33 ಮೀ

ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲಿಗೆ ಪರಿಚಯಿಸಿದವರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಜವಹರ್ ಲಾಲ್ ನೆಹರು,  ಸಿ) ಇಂದಿರಾಗಾಂಧಿ,  ಡಿ) ಲಾಲ್ ಬಹದ್ದೂರ್ ಶಾಸ್ತ್ರಿ

ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರು
ಎ) ಪಂಡಿತ್ ನೆಹರು,  ಬಿ) ರಾಧಾಕೃಷ್ಣನ್,  ಸಿ) ರಾಜೇಂದ್ರ ಪ್ರಸಾದ್,  ಡಿ) ಗುಲ್ಜಾರಿ ಲಾಲ್ ನಂದ

ಮೊದಲ ಭಾರತೀಯ ಬ್ಯಾಂಕ್ 
ಎ) ಟ್ರೇಡರ್ಸ್ ಬ್ಯಾಂಕ್,  ಬಿ) ಇಂಪಿರಿಯಲ್ ಬ್ಯಾಂಕ್,  ಸಿ) ಕೊಲ್ಕತ್ತ ಪ್ರಸಿಡೆನ್ಸಿ ಬ್ಯಾಂಕ್,  ಡಿ) ಕೆನರಾ ಬ್ಯಾಂಕ್

20 ಅಂಶಗಳ ಕಾರ್ಯಕ್ರಮಗಳನ್ನು ಮೊದಲಿಗೆ ಜಾರಿಗೆ ತಂದವರು
ಎ) ಜವಹರ್ ಲಾಲ್ ನೆಹರು,  ಬಿ) ಲಾಲ್ ಬಹದ್ದೂರ್ ಶಾಸ್ತ್ರಿ,  ಸಿ) ಇಂದಿರಾ ಗಾಂಧಿ,  ಡಿ) ಸಂಜಯ್ ಗಾಂಧಿ

ಅಡುಗೆ ಸೋಡವು
ಎ) ಪೊಟಾಷಿಯಂ ಕಾರ್ಬೋನೇಟ್,  ಬಿ) ಸೋಡಿಯಂ ಹೈಡ್ರಾಕ್ಸೈಡ್,  ಸಿ) ಸೋಡಿಯಂ ಬೈ ಕಾರ್ಬೋನೇಟ್,  ಡಿ) ಸೋಡಿಯಂ ಕಾರ್ಬೋನೇಟ್

ಮೊಸರು ಹುಳಿಯಾಗಲು ಕಾರಣ
ಎ) ಟರ್ಟಾರಿಕ್ ಆಸಿಡ್,  ಬಿ) ಅಕ್ಸಾಲಿಕ್ ಆಸಿಡ್,  ಸಿ) ಅಸೆಟಿಕ್ ಆಸಿಡ್,  ಡಿ) ಲ್ಯಾಕ್ಟಿಕ್ ಆಸಿಡ್

ಹಾಲು ನೈಸರ್ಗಿಕ
ಎ) ದ್ರಾವಣ,  ಬಿ) ಸಸ್ಪೆನ್ಷನ್,  ಸಿ) ಮಿಶ್ರಣ,  ಡಿ) ಜಿಡ್ಡಿನ ಪದಾರ್ಥ

ಮೂಳೆಗಳು ಇದರಿಂದ ಮಾಡಲ್ಪಟ್ಟಿದೆ
ಎ) ಕ್ಯಾಲ್ಷಿಯಂ ಹಾಗೂ ಫಾಸ್ಫರಸ್,  ಬಿ) ಕ್ಯಾಲ್ಷಿಯಂ ಹಾಗು ಸಲ್ಫರ್,  ಸಿ) ಕ್ಯಾಲ್ಷಿಯಂ & ಮೆಗ್ನೀಷಿಯಂ,  ಡಿ) ಕ್ಯಾಲ್ಷಿಯಂ & ಕಬ್ಬಿಣ

ಕೆಳಗಿನವುಗಳಲ್ಲಿ ಗಾಂಧೀಜಿಯವರು ಬರೆದಿರುವ ಪುಸ್ತಕ
ಎ) ಡಿಸ್ಕವರಿ ಆಫ್ ಇಂಡಿಯಾ,  ಬಿ) ಮೈ ಎಕ್ಸಪರಿಮೆಂಟ್ ವಿತ್ ಟ್ರೂತ್,  ಸಿ) ಇಂಡಿಯ ವಿನ್ಸ್ ಫ್ರೀಡಮ್,  ಡಿ) ಫ್ರೀಡಮ್ ಅಟ್ ಮಿಡ್ ನೈಟ್

As You Like It ನ ಕರ್ತೃ ಯಾರು
ಎ) ಬರ್ನಾಡ್ ಷಾ,  ಬಿ) ವಿಲಿಯಂ ಶೆಕ್ಸಪಿಯರ್,  ಸಿ) ಲಿಯೋ ಟಾಲ್ ಸ್ಟಾಯ್,  ಡಿ) ಮುಲ್ಕ್ ರಾಜ್ ಆನಂದ್

Post Office ನ ಕರ್ತೃ ಯಾರು
ಎ) ಆರ್.ಕೆ.ನಾರಾಯಣ್,  ಬಿ) ಕುವೆಂಪು,  ಸಿ) ಆರ್.ಕೆ.ಲಕ್ಷ್ಮಣ್,  ಡಿ) ರವೀಂದ್ರನಾಥ ಟಾಗೂರ್

ಪ್ರಾಚೀನ ಒಲಂಪಿಕ್ ಆಟ ಆರಂಭಿಸಿದವರು ಯಾರು
ಎ) ರೋಮನ್ನರು,  ಬಿ) ಗ್ರೀಕರು,  ಸಿ) ಈಜಿಪ್ಷಿಯನ್ನರು,  ಡಿ) ಭಾರತೀಯರು

ಸೂರ್ಯನ ಸುತ್ತ ಸುತ್ತುತ್ತಿರುವ ಅತಿ ದೊಡ್ಡ ಗ್ರಹ ಯಾವುದು
ಎ) ಸ್ಯಾರ್ಟನ್,  ಬಿ) ಜ್ಯೂಪಿಟರ್(ಗುರು),  ಸಿ) ನೆಫ್ಚೂನ್,  ಡಿ) ಫ್ಲೂಟೊ

ಭೂಮಿಯ ನೈಸರ್ಗಿಕ ಉಪಗ್ರಹ
ಎ) ಮಂಗಳ,  ಬಿ) ಚಂದ್ರ,  ಸಿ) ಶುಕ್ರ,  ಡಿ) ಫ್ಲೂಟೊ

ರೊಡೇಸಿಯಾದ ನೂತನ ಹೆಸರು
ಎ) ಝೈರ್,  ಬಿ) ಜಿಂಬಾಬ್ವೆ,  ಸಿ) ಟನ್ಜೇನಿಯಾ,  ಡಿ) ಸ್ವಿಡ್ಜರ್ ಲ್ಯಾಂಡ್

ಘಾನಾ ಪಕ್ಷಿಧಾಮ ಇರುವುದು ಎಲ್ಲಿ
ಎ) ಮಧ್ಯಪ್ರದೇಶ,  ಬಿ) ರಾಜಸ್ತಾನ,  ಸಿ) ಪಶ್ಚಿಮ ಬಂಗಾಳ,  ಡಿ) ಕೇರಳ

Oncology ಈ ವಿಷಯಕ್ಕೆ ಸಂಬಂಧಿಸಿದ್ದು
ಎ) ಹಕ್ಕಿಗಳು,  ಬಿ) ಕ್ಯಾನ್ಸರ್,  ಸಿ) ಸಸ್ತನಿಗಳು,  ಡಿ) ಮಣ್ಣು

ಉಷ್ಣತೆಯನ್ನು SI ಯುನಿಟ್ ನಲ್ಲಿ ಅಳೆಯುವುದು
ಎ) ಕೆಲ್ವಿನ್,  ಬಿ) ಸೆಲಿಶಿಯಸ್,  ಸಿ) ಸೆಂಟಿಗ್ರೇಡ್,  ಡಿ) ಫ್ಯಾರನ್ ಹೀಟ್

ಒಂದು ಮೊಟ್ಟೆಯು ಶುದ್ಧವಾದ ನೀರಿನಲ್ಲಿ ಮುಳುಗುತ್ತದೆ ಮತ್ತು ಲವಣಯುಕ್ತ ನೀರಿನಲ್ಲಿ ತೇಲುತ್ತದೆ.  ಇದಕ್ಕೆ ಕಾರಣ
ಎ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ ಹೆಚ್ಚಿನ ಸಾಂದ್ರತೆ ಹೊಂದಿದೆ,  ಬಿ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ
ಹಗುರವಾಗಿರುತ್ತದೆ,  ಸಿ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ ಹೆಚ್ಚು ಜಿಗುಟಾಗಿರುತ್ತದೆ,  ಡಿ) ಲವಣಯುಕ್ತ ನೀರಿನ ಸರ್ಫೇಸ್ ಟೆನ್ಷನ್ ಶುದ್ಧ ನೀರಿಗಿಂತ ಕಡಿಮೆಯಿರುತ್ತದೆ

ಕತ್ತಲೆ ಕೋಣೆಯಲ್ಲಿ ಕೆಂಪು ದೀಪದ ಬೆಳಕಿನಲ್ಲಿ ಹಸಿರು ಎಲೆ ಇಟ್ಟರೆ ಎಲೆಯ ಬಣ್ಣ ಯಾವುದಿರುತ್ತದೆ
ಎ) ಹಸಿರು,  ಬಿ) ಕೆಂಪು,  ಸಿ) ಹಳದಿ,  ಡಿ) ಕಪ್ಪು

ನಮ್ಮ ರಾಷ್ಟ್ರಧ್ವಜದ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ
ಎ) 23,  ಬಿ) 24,  ಸಿ) 25,  ಡಿ) 26

ಭಾರತದಲ್ಲಿ ಮೊದಲ ಚುನಾವಣೆ ವಿದ್ಯಮಾನ ನೆಡೆದಿದ್ದು
ಎ) 1948,  ಬಿ) 1952,  ಸಿ) 1950,  ಡಿ) 1951

ಶೇಖರಣಾ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು
ಎ) ಸೀಸ,  ಬಿ) ತಾಮ್ರ,  ಸಿ) ತವರ,  ಡಿ) ಕಬ್ಬಿಣ

ಭಾರತದಲ್ಲಿ ಮೊದಲ ಇಂಗ್ಲೀಷ್ ವಾರ್ತಾ ಪತ್ರಿಕೆ ಆರಂಭಿಸಿದ್ದು
ಎ) ದಾದಾ ಭಾಯ್ ನವರೋಜಿ,  ಬಿ) ಜೆ.ಎ.ಹಿಕೆ,  ಸಿ) ಲಾರ್ಡ್ ವಿಲಿಯಂ ಬೆಂಟಿಂಕ್,  ಡಿ) ರವೀಂದ್ರನಾಥ ಟ್ಯಾಗೂರ್

ದಿನ್-ಎ-ಇಲಾಹಿ ಎಂಬುದು ಯಾವುದರ ಹೆಸರು
ಎ) ಮಸೀದಿ,  ಬಿ) ಕುಟೀರ,  ಸಿ) ಸಂತ,  ಡಿ) ಧರ್ಮ

ವಿಜಯನಗರವನ್ನು ಆಳದಿದ್ದ ವಂಶ ಯಾವುದು
ಎ) ಸಾಳ್ವ,  ಬಿ) ತುಳುವ,  ಸಿ) ಹೊಯ್ಸಳ,  ಡಿ) ಅರವೀಡ

ಫಾ-ಹೈನ್ ಭಾರತಕ್ಕೆ ಬಂದ್ದು ಯಾರ ಕಾಲದಲ್ಲಿ
ಎ) ಅಶೋಕ,  ಬಿ) ಎರಡನೇ ಚಂದ್ರಗುಪ್ತ,  ಸಿ) ಹರ್ಷ,  ಡಿ) ಕಾನಿಷ್ಕ

ವಿಜಯನಗರ ವೈಭವಕ್ಕೆ ಹೆಸರಾದ ಸ್ಥಳ ಯಾವುದು
ಎ) ಶೃಂಗೇರಿ,  ಬಿ) ಹಳೇಬೀಡು,  ಸಿ) ಸೋಮನಾಥಪುರ,  ಡಿ) ಹಂಪೆ

ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ಹೆಸರು
ಎ) ಊರ್ವಶಿ,  ಬಿ) ಅಪ್ಸರ,  ಸಿ) ಕಾಮಿನಿ,  ಡಿ) ರೋಹಿಣಿ

1853 ರಲ್ಲಿನ ಮೊದಲ ಭಾರತೀಯ ರೈಲ್ವೆ ಸಂಚರಿಸಿದ್ದು
ಎ) ಬಾಂಬೆ ಪೂನಾ ನಡುವೆ,  ಬಿ) ಪೂನಾ ಅಹಮದಾಬಾದ್ ನಡುವೆ,  ಸಿ) ಬಾಂಬೆ ಥಾಣೆ ನಡುವೆ,  ಡಿ) ಹೌರಾ ಖರಗ್ ಪುರ ನಡುವೆ

ಭಾರತೀಯ ರೈಲ್ವೆಯಲ್ಲಿ ಎಷ್ಟು ವಿಭಾಗಗಳಿವೆ.
ಎ) 4,  ಬಿ) or 16,  ಸಿ) 6,  ಡಿ) 10

ಭಾರತದಲ್ಲಿ ಒಟ್ಟು ಎಷ್ಟು ಪಿನ್ ಕೋಡ್ ಪ್ರದೇಶಗಳಿವೆ
ಎ) 6,  ಬಿ) 7,  ಸಿ) 8,  ಡಿ) 9