Tuesday, August 24, 2010

ಬೆರಳಚ್ಚು ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ-2010

ಸಂಚಿಯಲ್ಲಿನ ಸ್ತೂಪ ನಿರ್ಮಿಸಿದವರು ಯಾರು
ಎ) ಹರ್ಷವರ್ಧನ,  ಬಿ) ಅಶೋಕ,  ಸಿ) ಶಿವಾಜಿ,  ಡಿ) ಮಹಾವೀರ

ಭೂಮಿಯ ಮೇಲೆ ಅಂದಾಜು________ ನೀರಿನಿಂದ ಆವೃತ್ತವಾಗಿದೆ
ಎ) ಶೇ.50,  ಬಿ) ಶೇ60,  ಸಿ) ಶೇ 70,  ಡಿ) ಶೇ80

ಮ್ಯಾಕ್ ಮೋಹನ್ ರೇಖೆ ಈ ಗಡಿಪ್ರದೇಶದಲ್ಲಿದೆ
ಎ) ಭಾರತ & ಚೀನಾ,  ಬಿ) ಭಾರತ & ನೇಪಾಳ,  ಸಿ) ಭಾರತ & ಪಾಕಿಸ್ತಾನ,  ಡಿ) ಭಾರತ & ಬರ್ಮಾ

ಕೆಳಗಿನವುಗಳಲ್ಲಿ ಯಾವುದು ಮಂಜುಗಡ್ಡೆ ಖಂಡ
ಎ) ಗ್ರೀನ್ ಲ್ಯಾಂಡ್,  ಬಿ) ಅಂಟಾರ್ಟಿಕ,  ಸಿ) ಆಸ್ಟ್ರೇಲಿಯಾ,  ಡಿ) ನ್ಯೂಜಿಲ್ಯಾಂಡ್

ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಅವಶೇಷಗಳು ಎಲ್ಲಿ ದೊರೆತಿವೆ
ಎ) ಚಿತ್ತೂರು,  ಬಿ) ಅಮರಾವತಿ,  ಸಿ) ಹಂಪಿ,  ಡಿ) ಹಳೇಬೀಡು

ಕೆಳಗಿನವುಗಳಲ್ಲಿ ಯಾವುದು ಅತಿ ದೊಡ್ಡ ಬಂದರು
ಎ) ವಿಶಾಖ ಪಟ್ಟಣ,  ಬಿ) ಮುಂಬೈ,  ಸಿ) ಟುಟಿಕೋರಿನ್,  ಡಿ) ಖಾಂಡ್ಲ

ಭಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ
ಎ) ಕೋಸಿ,  ಬಿ) ಜೀಲಂ,  ಸಿ) ಬಿಯಾಸ್,  ಡಿ) ಸಟ್ಲೇಜ್

ಭಾರತದ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆಯಿರುವುದು
ಎ) ಪೂನಾ,  ಬಿ) ರಾಜಕೋಟ್,  ಸಿ) ಪಿಂಪ್ರಿ,  ಡಿ) ಪೆರಂಬೂರ್

ತಿರುಚನಾಪಳ್ಳಿಯಿರುವುದು ಈ ನದಿಯ ದಡದಲ್ಲಿ
ಎ) ಕಾವೇರಿ,  ಬಿ) ತಪತಿ,  ಸಿ) ಕೃಷ್ಣಾ,  ಡಿ) ಗಂಗಾ

ರೈಲ್ವೆ ಇಲಾಖೆಗೆ ಅಗತ್ಯವಿರುವ ಗಾಲಿ ಮತ್ತು ಅಚ್ಚುಗಳನ್ನು ನಿರ್ಮಿಸುವುದು
ಎ) ಬೆಂಗಳೂರು,  ಬಿ) ಮದ್ರಾಸ್,  ಸಿ) ವಾರಣಾಸಿ,  ಡಿ) ಮೈಸೂರು

ಜೋಗ್ ಜಲಪಾತ ಇರುವ ನದಿ
ಎ) ಗೋದಾವರಿ,  ಬಿ) ಗಂಗಾ,  ಸಿ) ಶರಾವತಿ,  ಡಿ) ಕೃಷ್ಣ

ಕಾರ್ಲ್ ಮಾರ್ಕ್ಸ್ನ ದೇಶಯಾವುದು
ಎ) ಇಟಲಿ,  ಬಿ) ಯುಗೋಸ್ಲೋವಿಯಾ,  ಸಿ) ರಷ್ಯ,  ಡಿ) ಜರ್ಮನಿ

ಎರಡನೇ ಪ್ರಪಂಚ ಮಹಾಯುದ್ಧ ಪ್ರಾರಂಭವಾದ್ದು
ಎ) 1930,  ಬಿ) 1935,  ಸಿ) 1939,  ಡಿ) 1940

ನೆಪೋಲಿಯನ್ ಬೊನಪಾರ್ಟೆಯ ಸ್ಥಳ
ಎ) ಫ್ರಾನ್ಸ್,  ಬಿ) ಆಸ್ಟ್ರಿಯಾ,  ಸಿ) ಜರ್ಮನಿ,  ಡಿ) ಇಂಗ್ಲೆಂಡ್

ಬುದ್ಧ ಜನಿಸಿದ್ದು
ಎ) ಲುಂಬಿನಿ,  ಬಿ) ಕಪಿಲವಸ್ತು,  ಸಿ) ವೈಶಾಲಿ,  ಡಿ) ಕೋಸಲ

ಗುಪ್ತ ಪರಂಪರೆಯ ಸ್ಥಾಪಕ ಯಾರು
ಎ) ಒಂದನೇ ಚಂದ್ರಗುಪ್ತ,  ಬಿ) ಎರಡನೇ ಚಂದ್ರಗುಪ್ತ,  ಸಿ) ಸಮುದ್ರಗುಪ್ತ,  ಡಿ) ಕುಮಾರಗುಪ್ತ

________ ಮೊಘಲ್ ಸಾಮ್ರಾಜ್ಯದ ಸ್ಥಾಪಕ
ಎ) ಅಕ್ಬರ್,  ಬಿ) ಹುಮಾಯುನ್,  ಸಿ) ಬಾಬರ್,  ಡಿ) ಅಲ್ಲಾವುದ್ದೀನ್ ಖಿಲ್ಜಿ

ಯಾವುದರಿಂದ ರಾಜಾ ತೋದರ್ ಮಲ್ಲನ ಹೆಸರು ಗುರುತಿಸಲ್ಪಡುವುದು
ಎ) ಸಂಗೀತ,  ಬಿ) ಸಾಹಿತ್ಯ,  ಸಿ) ಕಾನೂನು,  ಡಿ) ಭೂ ತೆರಿಗೆ ಸುಧಾರಣೆ

ಹಳೇಬೀಡು, ಬೇಲೂರುಗಳಲ್ಲಿನ ದೇವಾಲಯಗಳನ್ನು ನಿರ್ಮಿಸಿದವರು
ಎ) ಚೋಳರು,  ಬಿ) ಹೊಯ್ಸಳರು,  ಸಿ) ಕಾಕತೀಯರು,  ಡಿ) ಪಲ್ಲವರು

ಬ್ರಿಟೀಷರಿಗೆ ಗಾಂಧೀಜಿಯವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ವರ್ಷ
ಎ) 1940,  ಬಿ) 1942,  ಸಿ) 1941,  ಡಿ) 1943

ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳ
ಎ) ಆಗ್ರ,  ಬಿ) ಮೀರತ್,  ಸಿ) ಅಮೃತ್ಸರ,  ಡಿ) ಲಾಹೋರ್

ಬಂಗಾಳದಲ್ಲಿ ಶಾಶ್ವತ ಸಂಧಾನ ಆರಂಭಿಸಿದವರು
ಎ) ಲಾರ್ಡ್ ಬೆಂಟಿಂಕ್,  ಬಿ) ಲಾರ್ಡ್ ಕಾರ್ನ್ವಾಲೀಸ್,  ಸಿ) ಲಾರ್ಡ್ ವೆಲ್ಲೆಸ್ಲಿ,  ಡಿ) ಲಾರ್ಡ್ ಹೇಸ್ಟಿಂಗ್ಸ್

1906ರಲ್ಲಿ ಸ್ವರಾಜ್ಯ ಪದವನ್ನು ಬಳಸಿದ ಮೊದಲ ಭಾರತೀಯ ಯಾರು
ಎ) ಕಲ್ಕತ್ತಾದ ಸಮವೇಶದಲ್ಲಿ ಬಾಲಗಂಗಾಧರ ತಿಲಕ್  ಬಿ) ಕಲ್ಕತ್ತಾದ ಸಮವೇಶದಲ್ಲಿ ದಾದಾಬಾಯಿ ನವರೋಜಿ,  ಸಿ) 1885ರಲ್ಲಿ ಮುಂಬೈ ಸಮಾವೇಶದಲ್ಲಿ ಗೋಪಾಲ ಕೃಷ್ಣಗೋಖಲೆ,  ಡಿ) ಮೊದಲ ಭಾರತೀಯ ರಾಷ್ಟ್ರೀಯ ಸಮಾವೇಷದಲ್ಲಿ ಲಾಲಾ ಲಜಪತ್ ರಾಯ್

ಸ್ವತಂತ್ರ ಹೋರಾಟಗಾರರಲ್ಲಿ ಪಂಜಾಬಿನ ಹುಲಿ ಎಂದು ಖ್ಯಾತರಾಗಿದ್ದವರು
ಎ) ಭಗತ್ ಸಿಂಗ್,  ಬಿ) ಲಾಲಾ ಲಜಪತರಾಯ್,  ಸಿ) ಚಂದ್ರಶೇಖರ್ ಅಜಾದ್,  ಡಿ) ಲಾಲಾ ಹರದಯಾಳ್

ಕನಿಷ್ಕದ ರಾಜಧಾನಿ
ಎ) ಬನಾರಸ್,  ಬಿ) ಅಲಹಾಬಾದ್,  ಸಿ) ಸಾಯಾನಾಥ್,  ಡಿ) ಪುರುಷಪುರ

ILO ಪ್ರಧಾನ ಕಛೇರಿಯಿರುವುದು
ಎ) ಜಿನೀವ,  ಬಿ) ಹೇಗ್,  ಸಿ) ನ್ಯೂಯಾರ್ಕ್,  ಡಿ)ರೋಮ್

ಇಂಟರ್ ಪೋಲ್ ಪ್ರಧಾನ ಕಛೇರಿಯಿರುವುದು
ಎ) ರೋಮ್,  ಬಿ) ಲೆಯಾನ್ಸ್,  ಸಿ) ಪ್ಯಾರೀಸ್,  ಡಿ) ದೆಹಲಿ

ಡುರಾಂಡ್ ಕಪ್ ನೀಡುವುದು ಯಾವ ಆಟದಲ್ಲಿ
ಎ) ಹಾಕಿ,  ಬಿ) ಫುಟ್ ಬಾಲ್,  ಸಿ) ಬ್ಯಾಡ್ಮಿಂಟನ್,  ಡಿ) ಗಾಲ್ಫ್

ಮಂತ್ರಿ (Bishop) ಪದದ ಬಳಕೆ ಯಾವ ಆಟದ್ದು
ಎ) ಗಾಲ್ಫ್,  ಬಿ) ಚೆಸ್,  ಸಿ) ಬ್ರಡ್ಜ್,  ಡಿ) ಬಿಲಿಯರ್ಡ್ಸ್

ರಾಮನ್ ಮ್ಯಾಗ್ಸಸ್ಸೆ ಪ್ರಶಸ್ತಿ ಇರುವುದು ಯಾವ ದೇಶದ ಅಧ್ಯಕ್ಷರ ಹೆಸರಿನೊಂದಿಗೆ
ಎ) ಫಿಲಿಫೈನ್ಸ್,  ಬಿ) ಥೈಲ್ಯಾಂಡ್,  ಸಿ) ಇಂಡೊನೇಷ್ಯಾ,  ಡಿ) ಶ್ರೀಲಂಕ

ISRO ಎಂದರೆ
ಎ) ಇಂಟರ್ ನ್ಯಾಷನಲ್ ಸೈಂಟಿಫಿಕ್ ರೀಸರ್ಚ್ ಆರ್ಗನೈಸೇಷನ್,  ಬಿ) ಇಂಡಿಯನ್ ಸಾಲ್ಟ್ ರೀಸರ್ಚ್ ಆರ್ಗನೈಸೇಷನ್,  ಸಿ) ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಷನ್,  ಡಿ) ಇಂಟರ್ ನ್ಯಾಷನಲ್ ಸ್ಪೇಸ್ ರೀಸರ್ಚ್ ಆಗ್ರನೈಸೇಷನ್

ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು
ಎ) 1ನೇ ಜನವರಿ,  ಬಿ) 1 ನೇ ಏಪ್ರಿಲ್,  ಸಿ) 1 ನೇ ಜುಲೈ,  ಡಿ) 1ನೇ ಡಿಸಂಬರ್

ಭಾರತದ 10 ರೂ ನೋಟಿನಲ್ಲಿ ಯಾರ ಸಹಿಯಿರುತ್ತದೆ
ಎ) ಹಣಕಾಸು ಮಂತ್ರಿ,  ಬಿ) RBIನ ಗೌರ್ನರ್,  ಸಿ) ಕಾರ್ಯದರ್ಶಿ, ಹಣಕಾಸು ಇಲಾಖೆ,  ಡಿ) ಪ್ರಧಾನ ಮಂತ್ರಿ

ಶ್ರೀಹರಿ ಕೋಟಾ ಪ್ರಖ್ಯಾತವಾಗಿರುವುದು
ಎ) ಉಪಗ್ರಹ ಉಡಾವಣಾ ಕೇಂದ್ರದಿಂದ,  ಬಿ) ಉಷ್ಣ ಶಕ್ತಿ ಸ್ಥಾವರ,  ಸಿ) ಏರ್-ಬೇಸ್,  ಡಿ) ಜಲಶಕ್ತಿ ಸ್ಥಾವರ

ಪಿಂಕ್ ಸಿಟಿ ಎಂದು ಇದನ್ನು ಎನ್ನುವರು
ಎ) ಜೈಪುರ,  ಬಿ) ಶಿಮ್ಲಾ,  ಸಿ) ಜಾಮ್ ನಗರ್,  ಡಿ) ಅಲಹಾಬಾದ್

ಕಾಕ್ ಪಿಟ್ ಆಫ್ ಯೂರೋಪ್,  ಎಂದು ಇದನ್ನು ಕರೆಯುವರು
ಎ) ಜರ್ಮನಿ,  ಬಿ) ಬೆಂಗಳೂರು,  ಸಿ) ಬೆಲ್ಜಿಯಂ,  ಡಿ) ಬೆಳಗಾಂ

ಕಥಕ್ ನೃತ್ಯಪ್ರಕಾರದ ಪ್ರಮುಖ ಕೇಂದ್ರ
ಎ) ದಕ್ಷಿಣ ಭಾರತ, ಬಿ) ಪೂರ್ವ ಭಾರತ,  ಸಿ) ಉತ್ತರ ಭಾರತ,  ಡಿ) ಪಶ್ಚಿಮ ಭಾರತ

ಕೆಳಗಿನವುಗಳಲ್ಲಿ ಯಾವುದು ಅತಿ ಪ್ರಾಚೀನ ವೇದ
ಎ) ಋಗ್ವೇದ,  ಬಿ) ಅಥರ್ವಣ ವೇದ,  ಸಿ) ಸಾಮ ವೇದ,  ಡಿ) ಯಜುರ್ ವೇದ

ಭಾರತ ಸಂವಿಧಾನದಲ್ಲಿ ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿದ್ದು
ಎ) 15ನೇ ಆಗಸ್ಟ್ 1947,  ಬಿ) 2 ನೇ ಜುಲೈ 1947,  ಸಿ) 26ನೇ ಜನವರಿ 1950,  ಡಿ) 2ನೇ ಜನವರಿ 1950

ಶಕಾ ವರ್ಷದ ಕೊನಯ ತಿಂಗಳು
ಎ) ಫಾಲ್ಗುಣ,  ಬಿ) ಚೈತ್ರ,  ಸಿ) ಆಷಾಡ,  ಡಿ) ಶ್ರಾವಣ

ಮೌಂಟ್ ಎವರೆಸ್ಟನ್ನು 2ಬಾರಿ ಏರಿದ ಪ್ರಥಮ ಮಹಿಳೆ
ಎ) ಸಂತೋಷ ಯಾದವ್,  ಬಿ) ದೀನಾ ವಾಕೆಲ್,  ಸಿ) ಅನ್ನಾ ಚಾಂದಿ,  ಡಿ) ಪಿ.ಟಿ.ಉಷಾ

ಟೆಸ್ಟ್ ಕ್ರಿಕೇಟ್ ನಲ್ಲಿ ಶತಕ ಗಳಿಸಿರುವ ಅತಿ ಕಿರಿಯ ಆಟಗಾರ
ಎ) ಹನೀಫ್ ಮೊಹಮದ್,  ಬಿ) ಮೊಹಮ್ಮದ್ ಅಜರುದ್ದೀನ್,  ಸಿ) ಗವಾಸ್ಕರ್,  ಡಿ) ತೆಂಡೂಲ್ಕರ್

Ornithology ಎಂದರೆ
ಎ) ಮೂಳೆಗೆ ಸಂಬಂಧಿಸಿದ ಓದು,  ಬಿ) ಪಕ್ಷಿಗಳಿಗೆ ಸಂಬಂಧಿಸಿದ ಓದು,  ಸಿ) ವಾಸನೆಗೆ ಸಂಬಂಧಿಸಿದ ಓದು,  ಡಿ) ಕ್ರಿಮಿಗಳಿಗೆ ಸಂಬಂಧಿಸಿದ ಓದು

ಡೆಸಿಬಲ್ ಎಂಬ ಪ್ರಮಾಣವು ಸಂಬಂಧಿಸಿರುವುದು
ಎ) ಶಬ್ಧ,  ಬಿ) ಬೆಳಕು,  ಸಿ) ಉಷ್ಣ, ಡಿ) ವಿದ್ಯುತ್

ಮೀಟರಾಲಜಿ ಯಾವ ವಿಜ್ಞಾನಕ್ಕೆ ಸಂಬಂಧಿಸಿದೆ
ಎ) ಹವಾಮಾನ,  ಬಿ) ಮೀಟಿಯಾರ್ಸ್,  ಸಿ) ಲೋಹ,  ಡಿ) ಭೂಕಂಪ

ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ಯಾವುದು
ಎ) ಸ್ಪೆಕ್ಟ್ರೋಸ್ಕೋಪ್,  ಬಿ) ಟೆಲಿಸ್ಕೋಪ್,  ಸಿ) ಪೆರಿಸ್ಕೋಪ್,  ಡಿ) ಕೆಲಿಡಿಯೋಸ್ಕೋಪ್

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಕೆಳಗಿನ ಯಾವುದನ್ನು ಬಳಸುತ್ತಾರೆ
ಎ) ಸ್ಪ್ರೆಪ್ಟೋಮೈಸಿನ್,  ಬಿ) ಪೆನ್ಸಿಲಿನ್,  ಸಿ) ಇನ್ಸುಲಿನ್,  ಡಿ) ಕ್ರೋಸಿನ್

ಕೆಳಗಿನ ಯಾವುದು ಇಂಗಾಲದ ಅಂಶ ಹೊಂದಿಲ್ಲ
ಎ)  ಸಂಗಮರಿಕಲ್ಲು,  ಬಿ) ಸಕ್ಕರೆ,  ಸಿ) ಮರಳು,  ಡಿ) ಪೆಟ್ರೋಲಿಯಂ

ಮುಚ್ಚಳ ಮುಚ್ಚಿದ ಬಾಟಲ್ ನೀರು ಶೀತಲಗೊಳಿಸಿದಾಗ ಬಾಟಲ್ ಒಡೆಯಲು ಕಾರಣ
ಎ) ಶೀತಲ ಗೊಳಿಸಿದಾಗ ಬಾಟಲ್ ಸಣ್ಣದಾಗುತ್ತದೆ,  ಬಿ) ಶೀತಲ ಗೊಳಿಸಿದಾಗ ನೀರಿನ ಪ್ರಮಾಣ ಕಡಿಮೆಯಾಗುತ್ತದೆ,  ಸಿ) ಶೀತಲ ಗೊಳಿಸಿದಾಗ ನೀರಿನ ಪ್ರಮಾಣ ಹೆಚ್ಚುತ್ತದೆ,  ಡಿ) ಗಾಜು ಕೆಟ್ಟ ಉಷ್ಣವಾಹಕವಾಗಿದೆ

ಕೆಳಗಿನವುಗಳಲ್ಲಿ ಯಾವ ವಿದ್ಯುತ್ ಕಾಂತೀಯ ಅಲೆಗಳು ಹೆಚ್ಚಿನ ತರಂಗಾಂತರ ಹೊಂದಿದೆ
ಎ) ಬೆಳಕಿನ ಕಿರಣಗಳು,  ಬಿ) ಇನ್ಫ್ರಾರೆಡ್ ಕಿರಣಗಳು,  ಸಿ) ಗಾಮಾ ಕಿರಣಗಳು,  ಡಿ) ಅಲ್ಟ್ರಾ ವೈಲೆಟ್ ಕಿರಣಗಳು

ಇವುಗಳಲ್ಲಿ ಯಾವುದು ತಪ್ಪು
ಎ) ಪಾದರಸ-Hg,  ಬಿ) ಸಿಲ್ವರ್-Ag, ಸಿ) ಸೋಡಿಯಂ-Na,  ಡಿ) ಪೊಟಾಶಿಯಂ-Ka

ಲಾಫಿಂಗ್ ಅನಿಲದ ರಾಸಾಯನಿಕ ಹೆಸರು
ಎ) ನೈಟ್ರಸ್ ಆಕ್ಸೈಡ್,  ಬಿ) ನೈಟ್ರಿಕ್ ಆಕ್ಸೈಡ್,  ಸಿ) ನೈಟ್ರೋಜನ್ ಡೈ ಆಕ್ಸೈಡ್,  ಡಿ) ನೈಟ್ರೋಜನ್ ಪೆರಾಕ್ಸೈಡ್

ಅಡುಗೆ ಸೋಡಾವನ್ನು ಹೀಗೂ ಕರೆಯಬಹುದು
ಎ) ಸೋಡಿಯಂ ಬೈ ಕಾರ್ಬೋನೇಟ್,  ಬಿ) ಸೋಡಿಯಂ ಕಾರ್ಬೋನೇಟ್,  ಸಿ) ಕ್ಯಾಲ್ಶಿಯಂ ಕ್ಲೊರೈಡ್,  ಡಿ) ಕ್ಯಲ್ಶಿಯಂ ಕಾರ್ಬೋನೇಟ್

ಸೋಲ್ಡರ್ ಯಾವುದರ ಮಿಶ್ರಲೋಹ
ಎ) ತವರ ಹಾಗೂ ಸೀಸ,  ಬಿ) ತವರ ಹಾಗೂ ಸತು,  ಸಿ) ಸತು ಹಾಗೂ ಸೀಸ,  ಡಿ) ಸತು ಹಾಗೂ ತಾಮ್ರ

ಎನ್ಜೈಮ್ ಒಂದು
ಎ) ಕಾರ್ಬೋಹೈಡ್ರೇಟ್,  ಬಿ) ಪ್ರೊಟೀನ್,  ಸಿ) ಫ್ಯಾಟಿ ಆಸಿಡ್,  ಡಿ) ನ್ಯೂಕ್ಲಿಕ್ ಆಸಿಡ್

ಮೀನು ಉಸಿರಾಡುವುದು ಇದರ ಸಹಾಯದಿಂದ
ಎ) ಮೂಗು,  ಬಿ) ಶ್ವಾಸಕೋಶ,  ಸಿ) ಕಿವಿರು,  ಡಿ) ಈಜುರೆಕ್ಕೆ

ಕಂಚು ಯಾವುದರ ಮಿಶ್ರಲೋಹ
ಎ) ತಾಮ್ರ ಹಾಗು ಸತು,  ಬಿ) ತಾಮ್ರ ಹಾಗು ತವರ,  ಸಿ) ತವರ ಹಾಗು ಸತು, ಡಿ) ಕಬ್ಬಿಣ ಹಾಗು ಸತು

ಗಿಡದ ಯಾವ ಭಾಗದಲ್ಲಿ ಪುಷ್ಪರೇಣು ಉತ್ಪನ್ನ ವಾಗುತ್ತದೆ
ಎ) ಬೇರು,  ಬಿ) ಎಲೆ,  ಸಿ) ಹೂವು,  ಡಿ) ಕಾಂಡ

ಮಾಗಿರದ ಹಣ್ಣುಗಳ ಒಗರು ರುಚಿಗೆ ಕಾರಣ ಅತಿಯಾದ
ಎ) ಫೆನಾಯಿಕ್ ಮಿಶ್ರಣ,   ಬಿ) ವೊಲಾಟೈಲ್ ಮಿಶ್ರಣ,  ಸಿ) ಅರ್ಗಾನಿಕ್ ಆಸಿಡ್ಗಳು,  ಡಿ) ಸ್ಟಾರ್ಚ್

ಮರದ ವಯಸ್ಸನ್ನು ಇದರಿಂದ ಹೇಳಬಹುದು
ಎ) ಕಾಂಡದಲ್ಲಿನ ಉಂಗುರಗಳನ್ನು ಎಣಿಕೆಮಾಡಿ,  ಬಿ) ಮರದ ಎಲೆಗಳನ್ನು ಎಣಿಕೆಮಾಡಿ,  ಸಿ) ಮರದ ಕೊಂಬೆಗಳನ್ನು ಎಣಿಕೆಮಾಡಿ,  ಡಿ) ಮರದ ಗಾತ್ರವನ್ನು ಅಳತೆಮಾಡಿ

ಬದುಕಿರುವ ಅತಿದೊಡ್ಡ ಹಕ್ಕಿ ಯಾವುದು
ಎ) ಆಸ್ಟ್ರಿಚ್, ಬಿ) ನವಿಲು,  ಸಿ) ಡೊಡೊ, ಡಿ) ಟರ್ಕಿ

ALZHEIMER ಖಾಯಿಲೆ
ಎ) ಲಿವರ್ ಮೇಲೆ ಪರಿಣಾಮ ಬೀರುತ್ತದೆ,  ಬಿ) ಮೂತ್ರಕೋಶದ ಮೇಲೆ ಪರಿಣಾಮ ಬೀರುತ್ತದೆ,  ಸಿ) ಆಂತರಿಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ,  ಡಿ) ಮೆದುಳಿನ ಅವ್ಯವಸ್ಥೆಯನ್ನು ಬೀರುತ್ತದೆ

ಕೆಳಗಿನವುಗಳಲ್ಲಿ ಯಾವುದು ಜೈವಿಕ ರಸಗೊಬ್ಬರ
ಎ) ಕಾಂಪೋಸ್ಟ್,  ಬಿ) ಆಲ್ಗೆ ಹಾಗು ನೀಲಿ-ಹಸಿರು ಆಲ್ಗೆ,  ಸಿ) ಅಮೋನಿಯಂ ಸಲ್ಫೇಟ್,  ಡಿ) ಯೂರಿಯಾ

ಮೆದುಳಿನ ಚಟುವಟಿಕೆಗಳನ್ನು ದಾಖಲು ಮಾಡಿಕೊಳ್ಳುವುದು
ಎ) ಇ.ಸಿ.ಜಿ.  ಬಿ) ಇ.ಇ.ಜಿ,  ಸಿ) ಎಂ.ಇ.ಟಿ,  ಡಿ) ಸಿ.ಟಿ

ರಾತ್ರಿಯ ಹೊತ್ತು ಚಟುವಟಿಕೆಯಿಂದಿರುವ ಪ್ರಾಣಿಗಳನ್ನು ಹೇಗೆ ಕರೆಯುತ್ತಾರೆ
ಎ) ಡಯುರ್ನಲ್ ( ಹಗಲು)  ಬಿ) ನಾಕ್ಟರ್ನಲ್ ( ರಾತ್ರಿ)  ಸಿ) ಪರೋಪಜೀವಿ ( ಪ್ಯಾರಸೈಟ್),  ಡಿ) ನಾಕ್ಟ್-ಡಯುರ್ನಲ್(ರಾತ್ರಿ-ಹಗಲು)

Antibiotic ಔಷಧವನ್ನು ಬಳಸುವುದು
ಎ) ಬ್ಯಾಕ್ಟೀರಿಯಾ ಖಾಯಿಲೆಗೆ,  ಬಿ) ಕ್ಯಾನ್ಸರ್ಗೆ,  ಸಿ) ಮಲೇರಿಯಾಗೆ,  ಡಿ) ನರದೌರ್ಬಲ್ಯಕ್ಕೆ

ಷಟ್ಬುಜಗಳುಳ್ಳ ಘನಾಕೃತಿಯ ಮೇಲ್ಮೈ ಪ್ರದೇಶ 54 ಆದರೆ,  ಅದರ ವಿಸ್ತಾರ
ಎ) 9,  ಬಿ) 27,  ಸಿ) 54,  ಡಿ) 81

Wall Street ಎಂದರೆ ಕೆಳಗಿನವುಗಳಲ್ಲಿ ಯಾವುದನ್ನು ಅರ್ಥೈಸಬಹುದು
ಎ) ಅಮೇರಿಕಾದ ಅಧ್ಯಕ್ಷರ ನಿವಾಸ ವೈಟ್ ಹೌಸ್ ಇರುವ ರಸ್ತೆ,  ಬಿ) ಬ್ರಿಟನ್ ಪ್ರಧಾನ ಮಂತ್ರಿಗಳ ನಿವಾಸವಿರುವ ರಸ್ತೆ,  ಸಿ) ಲಂಡನ್ ಷೇರು ಮಾರುಕಟ್ಟೆ ಇರುವ ರಸ್ತೆ,  ಡಿ) ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

ಕಳಪೆ ಮಟ್ಟದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ
ಎ) ಕುಸಿಯುತ್ತದೆ,  ಬಿ) ಹೆಚ್ಚುತ್ತದೆ,  ಸಿ) ಯಾವುದೇ ಬದಲಾವಣೆಯಿಲ್ಲ,  ಡಿ) ಮೇಲಿನ ಎರಡೂ

ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಘಟಕಗಳಿವೆ
ಎ) 8,  ಬಿ) 9,  ಸಿ) 11,  ಡಿ) 14

ಮಾರಾಟ ಮಾರುಕಟ್ಟೆಯು ಸೂಚಿಸುವ ಸ್ಥಿತಿಯೆಂದರೆ
ಎ) ವಸ್ತುಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ದೊರೆಯುತ್ತದೆ,  ಬಿ) ಮಾರಾಟ ಹಾಗು ಬೇಡಿಕೆ ಸಮತೋಲನದಲ್ಲಿರುತ್ತದೆ,  ಸಿ) ಬೇಡಿಕೆ ಮಾರಾಟಕ್ಕಿಂತ ಹೆಚ್ಚಿರುತ್ತದೆ,  ಡಿ) ಮಾರಾಟ ಹಾಗು ಬೇಡಿಕೆ ಸಮತೋಲನಬಾಗಿಲ್ಲದಿರುವಿಕೆ

ಬಂಡವಾಳ ಆರ್ಧಿಕತೆಯಲ್ಲಿ ಉತ್ಪನ್ನವನ್ನು ನಿಶ್ಚಯಿಸುವುದು
ಎ) ಬೇಡಿಕೆ ಹಾಗು ಮರಾಟಗಳ ಶಕ್ತಿಯಿಂದ,   ಬಿ) ಕೇಂದ್ರೀಯ ಅಧಿಕಾರದಿಂದ,  ಸಿ) ಕೈಗಾರಿಕಾ ಮಾಲೀಕರ ನಿರ್ಣಯದಂತೆ,  ಡಿ) ತೆರಿಗೆ ಅನ್ವಯದಂತೆ

Law of Demand ಹೇಳುವುದು
ಎ) ಆದಾಯ ಹೆಚ್ಚುವುದರೊಂದಿಗೆ ಬೇಡಿಕೆಯು ಹೆಚ್ಚುತ್ತದೆ,  ಬಿ) ಆದಾಯ ಮತ್ತು ಬೆಲೆ ಹೆಚ್ಚಿದಾಗ ಬೇಡಿಕೆಯು ಹೆಚ್ಚುತ್ತದೆ,  ಸಿ) ಬೆಲೆ ಕುಸಿದಾಗ, ಬೇಡಿಕೆ ಹೆಚ್ಚುತ್ತದೆ,  ಡಿ) ಬೆಲೆ ಹೆಚ್ಚಿದಾಗ ಬೇಡಿಕೆ ಹೆಚ್ಚುತ್ತದೆ

NNPಯು ಇದಕ್ಕೆ ಸಮವಾಗಿದೆ
ಎ) GNP+ಸವಕಳಿ,  ಬಿ) GNP-ಸವಕಳಿ,  ಸಿ) GNP+ರಫ್ತು,  ಡಿ) GNP-ರಫ್ತು

ಚೆನೈನಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ
ಎ) ಪಾಲಂ,  ಬಿ) ಡಂ ಡಂ,  ಸಿ) ಸಾಂತಾಕ್ರೂಸ್,  ಡಿ) ಮೀನಂಬಾಕಂ

ದೇಶದ ಅತಿವೇಗದ ರೈಲು ಕೆಳಗಿನವುಗಳಲ್ಲಿ ಯಾವುದು
ಎ) ತಾಜ್ ಎಕ್ಸ್ಪ್ರಸ್,  ಬಿ) ಶತಾಬ್ದಿ ಎಕ್ಸ್ಪ್ರಸ್,  ಸಿ) ರಾಜಧಾನಿ ಎಕ್ಸ್ಪ್ರಸ್,  ಡಿ) ಜಿ.ಟಿ.ಎಕ್ಸ್ಪ್ರಸ್

ದಕ್ಷಿಣ-ಕೇಂದ್ರೀಯ ರೈಲುವಲಯದ ಪ್ರಧಾನ ಕಛೇರಿಯಿರುವುದು
ಎ) ಕೊಲ್ಕತ್ತ,  ಬಿ) ಸಿಕಂದರಬಾದ್,  ಸಿ) ಹೈದರಾಬಾದ್,  ಡಿ) ಗೋರಖ್ ಪುರ

National Defence Academy ಇರುವುದು
ಎ) ಹೈದರಾಬಾದ್,  ಬಿ) ನವದೆಹಲಿ, ಸಿ) ಖಡಕ್ ವಾಸ್ಲಾ,  ಡಿ) ಮೌಂಟ್ ಅಬು

Indian Military Academy ಇರುವುದು
ಎ) ಡೆಹ್ರಾಡೂನ್,  ಬಿ) ಮೌಂಟ್ ಅಬು,  ಸಿ) ಹೈದರಾಬಾದ್,  ಡಿ) ಉಧಮ್ ಪುರ

ಚರಕ ಸಂಹಿತ ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ರಾಜಕಾರಣ,  ಬಿ) ಗಣಿತ ಶಾಸ್ತ್ರ,  ಸಿ) ಅರ್ಥಶಾಸ್ತ್ರ,  ಡಿ) ವೈದ್ಯಕೀಯಶಾಸ್ತ್ರ

ಅನುಚ್ಛೇದ 14ರಲ್ಲಿ ಹೇಳಿರುವ ಯಾವುದೇ ವ್ಯಕ್ತಿಗೆ ಕಾನೂನು ಸಮಾನತೆ ಹಾಗೂ ಸಮಾನ ಕಾನೂನು ರಕ್ಷಣೆಗೆ ರಾಜ್ಯ ಬದ್ಧವಾಗಿದೆ ಎಂಬಲ್ಲಿ ಯಾವುದೇ ವ್ಯಕ್ತಿ ಎಂದರೆ
ಎ) ಭಾರತದಲ್ಲಿ ನೆಲೆಸಿರುವ ನಾಗರಿಕರು ಹಾಗೂ ಅನಿವಾಸಿ ನಾಗರಿಕರು,  ಬಿ) ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು,  ಸಿ) ನೈಸರ್ಗಿಕ ವ್ಯಕ್ತಿಗಳು ಅಸ್ವಾಭಾವಿಕ ವ್ಯಕ್ತಿಗಳಲ್ಲ,  ಡಿ) ನೈಸರ್ಗಿಕ ವ್ಯಕ್ತಿಗಳು ಮಾತ್ರ

ಭಾರತದಲ್ಲಿ ಸಿಖ್ಖರು ಕಿರ್ಪಾನ್ ಇಟ್ಟಕೊಳ್ಳಲು ಅನುಮತಿ ಇರುವುದು ಕೆಳಗಿನ ಯಾವ ಮೂಲಭೂತ ಹಕ್ಕಿನಿಂದ ದೊರೆಯುತ್ತದೆ
ಎ) ಸ್ವಾತಂತ್ರದ ಹಕ್ಕು,  ಬಿ) ಬದುಕುವ ಹಾಗೂ ಅನಿರ್ಬಂಧತೆಯ ಹಕ್ಕು,  ಸಿ) ಧಾರ್ಮಿಕ ಸ್ವಾತಂತ್ರದ ಹಕ್ಕು,  ಡಿ) ಸಮಾನತೆಯ ಹಕ್ಕು

ರಿಟ್ ಆಫ್ ಸರ್ಟಿಯೋರರಿ ಯನ್ನು ಸರ್ವೋಚ್ಛ ನ್ಯಾಯಾಲಯ ಹೊರಡಿಸುವುದು 
ಎ) ನಿಗದಿತ ವಾಜ್ಯದಲ್ಲಿ ಮುಂದಿನ ಕಲಾಪಗಳನ್ನು ನಿಲ್ಲಿಸುವಂತೆ ತನ್ನ ಅಧೀನ ನ್ಯಾಯಾಲಯಕ್ಕೆ ನೀಡುವ ಆದೇಶ,  ಬಿ) ನಿಗದಿತ ವ್ಯಾಜ್ಯದ ದಾಖಲೆಗಳನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸುವುದು,  ಸಿ) ನಿಗದಿತ ಕಛೇರಿಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವ ಹಕ್ಕನ್ನು ಅಧಿಕಾರಿಗೆ ನೀಡುವ ಆದೇಶ,  ಡಿ) 24 ಗಂಟೆಗಳ ಒಳಗೆ ವ್ಯಕ್ತಿಯೊಬ್ಬನನ್ನು ಹಾಜರು 
ಪಡಿಸುವಂತೆ ಸಾರ್ವಜನಿಕ ಅಧಿಕಾರಿಗೆ ಸೂಚಿಸುವ ಅದೇಶ

ರಾಜ್ಯಪಾಲರು ಈ ವ್ಯವಸ್ಥೆಯ ಅವಿಭಾಜ್ಯ ಅಂಗ
ಎ) ಸಂಸತ್ತು,  ಬಿ) ರಾಜ್ಯ ಶಾಸನ ಸಭೆ,  ಸಿ) ರಾಜ್ಯ ನ್ಯಾಯಾಂಗ,  ಡಿ) ಕೇಂದ್ರೀಯ ನ್ಯಾಯಾಂಗ

ನಿಗದಿತ ವಿಷಯಕ್ಕೆ ಸಂಬಂಧಿಸಿದ ಹಕ್ಕು ಚಲಾವಣೆ ಇರುವುದು
ಎ) ರಾಜ್ಯಗಳಿಗೆ,  ಬಿ) ಕೇಂದ್ರ ಹಾಗು ರಾಜ್ಯಗಳಿಗೆ,  ಸಿ) ಸಂವಿಧಾನ,  ಡಿ) ರಾಷ್ಟ್ರಪತಿಗಳು

State Public Service Commissionನ ಛೇರ್ಮನ್ ಹಾಗು ಸದಸ್ಯರುಗಳನ್ನು ತೆಗೆಯುವವರು
ಎ) ರಾಷ್ಟ್ರಪತಿಗಳು,  ಬಿ) ರಾಜ್ಯಪಾಲರು,  ಸಿ) ಪ್ರಧಾನ ಮಂತ್ರಿಗಳು,  ಡಿ) ವಿಧಾನಸಭೆ

ಪಂಚಾಯತ್ ರಾಜ್ ಎಂದರೆ
ಎ) ಪ್ರಜಾಪ್ರಭುತ್ವದಲ್ಲಿ ಗ್ರಾಮೀಣ ಜನತೆಯ ಕಾರ್ಯಾಚರಣೆ,  ಬಿ) ಭಾರತದಲ್ಲಿ ಗ್ರಾಮೀಣ ಜನತೆಯ ಸ್ವಸರ್ಕಾರ,  ಸಿ) ಗ್ರಾಮೀಣ ಹಾಗು ಪ್ರಾದೇಶಿಕ ಮಿಶ್ರ ಸರ್ಕಾರ,  ಡಿ) ಗ್ರಾಮೀಣ ಆಡಳಿತಕ್ಕೆ ಕ್ರಮಾಗತ ವ್ಯವಸ್ಥೆ

ಭಾರತ ಸಂವಿಧಾನದ 7ನೇ ಷೆಡ್ಯೂಲ್ ನಲ್ಲಿ ಒಳಗೊಂಡಿರುವುದು
ಎ) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು,  ಬಿ) ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ವೇತನ,  ಸಿ) ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿಪಟ್ಟಿ,  ಡಿ) ರಾಜ್ಯ ಸಭೆಯಲ್ಲಿ ಸ್ಥಾನಗಳ ಹಂಚುವಿಕೆ

ಭಾರತದಲ್ಲಿ ಪ್ರಧಾನ ಲೆಕ್ಕ ಪರಿಶೋಧಕರನ್ನು ನೇಮಿಸುವವರು
ಎ) ರಾಷ್ಟ್ರಪತಿಗಳು,  ಬಿ) ಲೋಕಸಭೆಯ ಅಧ್ಯಕ್ಷರು,  ಸಿ) ರಾಜ್ಯಸಭೆಯ ಸಭಾಧ್ಯಕ್ಷರು,  ಡಿ) ಸಾರ್ವಜನಿಕ ಲೆಕ್ಕ ಪರಿಶೋಧನಾ ಸಂಸ್ಥೆಯ ಸಭಾಧ್ಯಕ್ಷರು

ರಾಜ್ಯ ಸಭೆಯ ಪದನಿಮಿತ್ತ ಸಭಾಧ್ಯಕ್ಷರು
ಎ) ರಾಷ್ಟ್ರಪತಿ,  ಬಿ) ಉಪ ರಾಷ್ಟ್ರಪತಿ,  ಸಿ) ಪ್ರಧಾನಮಂತ್ರಿ,  ಡಿ) ಗೃಹಮಂತ್ರಿ

ಉಚ್ಛ ನ್ಯಾಯಾಲಯ ಇರುವುದು
ಎ) ರಾಜ್ಯ ಪಟ್ಟಿ,  ಬಿ) ಒಪ್ಪಿಗೆ ಪಟ್ಟಿ,  ಸಿ) ಕೇಂದ್ರ ಪಟ್ಟಿ,  ಡಿ) ಯಾವುದು ಅಲ್ಲ

ಭಾರತದ ರಾಷ್ಟ್ರಪತಿ ಹಾಗು ಉಪರಾಷ್ಟ್ರಪತಿ ಹುದ್ದೆಗಳು ಖಾಲಿಯಿರುವಾಗ ಅವರ ಕೆಲಸಗಳನ್ನು ಮಾಡುವವರು ಯಾರು
ಎ) ಲೋಕ ಸಭಾದ್ಯಕ್ಷರು,  ಬಿ) ಭಾರತದ ಮುಖ್ಯ ನ್ಯಾಯಾಧೀಶರು,  ಸಿ) ಪ್ರಧಾನ ಮಂತ್ರಿಗಳು,  ಡಿ) ಮುಖ್ಯಮಂತ್ರಿಗಳು

A City League 'd' ವಿಭಾಗಗಳಾಗಿ ವಿಂಗಡಿಸಲಾಗಿದೆ.  ಪ್ರತಿ ವಿಭಾಗ 't' ಗುಂಪನ್ನು ಹೊಂದಿದ್ದು ಪ್ರತಿ ಗುಂಪಿನಲ್ಲಿ 'p' ಆಟಗಾರರಿದ್ದಾರೆ. ಒಟ್ಟಾರೆ ಎಷ್ಟು ಆಟಗಾರರಿದ್ದಾರೆ
ಎ) d+t+p,  ಬಿ) dtp,  ಸಿ) pt/d,  ಡಿ)dt/p

1/a + 1/a + 1/a = 12 ಆದರೆ  a=
ಎ) 1/12,  ಬಿ) 1/4,  ಸಿ) 1/3,  ಡಿ) 3

3, 9, 27, _____ 243
ಎ) 81,  ಬಿ) 100,  ಸಿ) 10   ಡಿ) 216

3ದಶಾಂಶ30, 3ದಶಾಂಶ60 ಮತ್ತು 3ದಶಾಂಶ90 ರ ಸರಾಸರಿಯೇನು

ಇದು ಜೂನ್ ತಿಂಗಳಾಗಿದ್ದರೆ ಮುಂದಿನ 400 ನೇ ತಿಂಗಳು ಯಾವುದಾಗಿರುತ್ತದೆ
ಎ) ಏಪ್ರಿಲ್,  ಬಿ) ಜೂನ್,  ಸಿ) ಅಕ್ಟೋಬರ್,  ಡಿ) ಡಿಸೆಂಬರ್

ಇವುಗಳಲ್ಲಿ ಯಾವುದು ಮಾಡ್ಯುಲೇಷನ್ ಮತ್ತು ಡಿಮಾಡ್ಯುಲೇಷನ್ ಕಾರ್ಯ ಮಾಡುತ್ತದೆ
ಎ) ಮಾಡ್ಯುಲೇಷನ್,  ಬಿ) ಮಾರ್ಪಡಿಸುವಲ್ಲದಿರುವಿಕೆ,  ಸಿ) ಸಿಂಕ್ರನೈಜಿಂಗ್,  ಡಿ) ಮೊಡೆಮ್

Word documentation ನಲ್ಲಿ ಅದರೊಟ್ಟಿಗೆ ಬರುವ ವಿಸ್ತಾರ ಯಾವುದು
ಎ) .ext,  ಬಿ) .com  ಸಿ) .doc  ಡಿ) .xl

ಇವುಗಳಲ್ಲಿ ಯಾವುದು ಪ್ರೆಸೆಂಟೇಷನ್ ಗ್ರಾಫಿಕ್ಸ್ ಸಾಫ್ಟ್ವೇರ್
ಎ) MS-Windows,  ಬಿ) MS-Power Point,  ಸಿ) MS-Excel,  ಡಿ) MS-Word