Monday, March 29, 2010

GK about Karnataka

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ

ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)

ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ

ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ

ಕರ್ನಾಟಕದ ಕಾಶ್ಮೀರ ಕಾರವಾರ

ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್

ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ

ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ

ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ

ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ

ಕರ್ನಾಟಕ ಎಂದು ನಾಮಕರಣವಾದದ್ದು 1-11-1973

ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು

ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್

ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ

ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ

ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ

ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ

ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ

ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ

ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ

ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ

ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು

ಅಶೋಕನ ಗುರು ಉಪಗುಪ್ತ

ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ

ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ

ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ

ಕದಂಬ ವಂಶದ ಸ್ಥಾಪಕ ಮಯೂರ ವರ್ಮ

ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು

ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ

ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ

ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ

ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ

ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು

ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ

ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ

ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ

ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ

ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ

ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ

ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ

ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ

ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ

ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ

ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು

ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು

ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು

ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು

ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ

ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ

ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ

ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು

ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು

ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ

ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ

ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ

ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ

ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್

ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ

ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ

ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ

ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ

ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,

ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್

ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ

ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್

ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು

ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ

ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ

ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು

ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು

ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ

1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು

2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ

3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್

4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು

ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು

ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ

ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ