Thursday, June 17, 2010

KAS Prelims 2010 GK

ರಾಜ್ಯ ಸಭೆಯು 2/3 ನೇ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು 312 ನೇ ಅನಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ
ಎ) ಕೇಂದ್ರ ಸಚಿವಾಲದ ಸೇವೆಯನ್ನು ಸೃಷ್ಟಿಸಬಹುದು,  ಬಿ) ಕೇಂದ್ರೀಯ ಸೇವೆಗಳನ್ನು ಸೃಷ್ಟಿಸಬಹುದು,                    ಸಿ) ಅಖಿಲ ಭಾರತ ಸೇವೆಯನ್ನು ಸೃಷ್ಟಿಸಬಹುದು & ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಗೊಳಿಸಬಹುದು,  ಡಿ) ಒಂದು ರಾಜ್ಯ ದ ಕೋರಿಕೆಯ ಮೇರೆಗೆ ರಾಜ್ಯ ಸೇವೆಯನ್ನು ಸೃಷ್ಟಿಸಬಹುದು

ಸಮ್ಮಿಶ್ರ ಸರ್ಕಾರಗಳು ಮತ್ತು ಅವುಗಳು ರಚನೆಯಾದ ವರ್ಷಗಳನ್ನು ಸರಿಹೊಂದಿಸಿ
AUPA1.1999
Bನ್ಯಾಷನಲ್ ಫ್ರಂಟ್2. 1996
CNDA3.2004
Dಯುನೈಟೆಡ್ ಫ್ರಂಟ್ 4. 1989 


A

B

C

D

1

1

3

4

2


2


3


4


1


2

3

4

3

1

2

4

4

3

2

1


ಸಂವಿಧಾನದ ಭಾಗ III ರಲ್ಲಿರುವ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತು
ಎ) ಗೋಲಕ್ ನಾಥ್ & ಪಂಜಾಬ್ ರಾಜ್ಯ 1967,  ಬಿ) ಕೇಶವಾನಂದ ಭಾರತಿ & ಕೇರಳ ರಾಜ್ಯ 1973,  ಸಿ) ಇಂದಿರಾ ಗಾಂಧಿ & ರಾಜ್ ನಾರಾಯಣ್ 1975,  ಡಿ) ಮಿನರ್ವಾ ಮಿಲ್ಸ್ & ಭಾರತ ಸರ್ಕಾರ 1980

ತೊಂಬತ್ತೆರಡನೇ ಸಂವಿಧಾನ ತಿದ್ದುಪಡಿ 2003ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು
ಎ) ಸಂಥಲಿ, ಬೋಡೋ, ಕೋಂಕಣಿ & ಉರ್ದು,  ಬಿ) ಬೋಡೋ, ಮಣಿಪುರಿ, ಭೋಜ್ ಪುರಿ & ಸಂಥಲಿ,  ಸಿ) ಬೋಡೋ, ಡೋಗ್ರಿ, ಮೈಥಿಲಿ & ಸಂಥಲಿ,  ಡಿ) ಕೊಂಕಣಿ, ತುಳು, ಕೊಡವ & ಭೋಜಪುರಿ

ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂದಕ್ಕೆ ಭಾರತದ ರಾಷ್ಟ್ರಪತಿಯವರು ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು  ತಡೆಹಿಡಿಯಬಹುದು
ಎ) ಅನುಚ್ಛೇದ 100,  ಬಿ) ಅನುಚ್ಛೇದ 111,  ಸಿ) ಅನುಚ್ಛೇದ 200,  ಡಿ) ಅನುಚ್ಛೇದ 222

ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು
ಎ) ಸಚಿವ ಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು,  ಬಿ) ರಾಜ್ಯ ಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ,  ಸಿ) ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ,  ಡಿ) ರಾಷ್ಟ್ರಪತಿಯವರ ಸಹಮತದೊಂದಿಗೆ ರಾಜ್ಯಸಭೆ

ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬಂಧಪಟ್ಟ ವಿಧಾನ ಸಭೆಗಳ ಒಟ್ಟು ಸ್ಥಾನಗಳ ಸಂಖ್ಯೆಯ ಶೇಕಡಾ 15 ರಷ್ಟಿರ ಬೇಕು ಎಂದು ಈ ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿಮಾಡಿದೆ
ಎ) 89ನೇ ತಿದ್ದುಪಡಿ 2003,  ಬಿ) ತೊಂಬತ್ತನೇ ತಿದ್ದುಪಡಿ 2003,  ಸಿ) 91 ನೇ ತಿದ್ದುಪಡಿ - 2003,  ಡಿ) 93ನೇ ತಿದ್ದುಪಡಿ 2005

ಸಂವಿಧಾನದ 120 ನೇ ಅನುಚ್ಛೇದದ ಪ್ರಕಾರ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನೆಡೆಸಬೇಕು
ಎ) ಹಿಂದಿ ಮಾತ್ರ,  ಬಿ) ಇಂಗ್ಲೇಷ್ ಮಾತ್ರ,  ಸಿ) ಹಿಂದಿ ಅಥವಾ ಇಂಗ್ಲೀಷ್,  ಡಿ) ಸಂವಿಧಾನದ 8 ನೇ ಅನುಸೂಚಿಯಲ್ಲಿ ಪಟ್ಟಿಮಾಡಿರುವ ಯಾವುದೇ ಭಾಷೆ

ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಭಾರತದ ಯಾವ ಪ್ರಧಾನ ಮಂತ್ರಿಯವರ ಅಧಕಾರಾವಧಿಯಲ್ಲಿ ಮೊದಲ ಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು
ಎ) ರಾಜೀವ್ ಗಾಂಧಿ,  ಬಿ) ಪಿ.ವಿ.ನರಸಿಂಹರಾವ್,  ಸಿ) ಎಚ್.ಡಿ.ದೇವಾಗೌಡ,  ಡಿ) ಅಟಲ್ ಬಿಹಾರಿ ವಾಜಪೇಯಿ

ಹೈದರಾಬಾದ್-ಕರ್ನಾಟಕದ ತ್ವರಿತ ಅಭಿವೃಧ್ಧಿಗಾಗಿ ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟಗಳ ಸಮನ್ವಯ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ
ಎ) 240,  ಬಿ) 244,  ಸಿ) 370,  ಡಿ) 371

ಈ ಕೆಳಗಿನ ಯಾವುದು WTO  ಒಪ್ಪಂದಗಳೊಂದಿಗೆ ಸಂಬಂಧಿಸಿಲ್ಲ
ಎ) GATT,  ಬಿ)TRIPS,  ಸಿ) GATS  ಡಿ) WIPO

ಕರ್ನಾಟಕದ ರಾಜ್ಯ ಆದಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
ಎ) ಕೇಂದ್ರ ಸಾಂಖ್ಯಿಕ ಸಂಸ್ಥೆ,  ಬಿ) ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯ,  ಸಿ) ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ,  ಡಿ) ರಾಷ್ಟ್ರೀಯ ಸಾಂಖ್ಯಿಕ ಆಯೋಗ

ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು
ಎ) ಭಾರತ ಸರ್ಕಾರ,  ಬಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,  ಸಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,  ಡಿ) ಯೋಜನಾ ಆಯೋಗ

ಕೇಂದ್ರ ಸರ್ಕಾರದ ಆದಾಯ ಕೊರತೆ ಎಂದರೆ
ಎ) ಒಟ್ಟು ಆದಾಯದ ಮೇಲೆ ಒಟ್ಟು ಖರ್ಚುಗಳ ಹೆಚ್ಚುವರಿ,  ಬಿ) ಒಟ್ಟು ಖರ್ಚುಗಳ ಮೇಲೆ ಆದಾಯ ಸ್ವೀಕೃತಿಗಳ ಹೆಚ್ಚುವರಿ,  ಸಿ) ಅದಾಯ ಸ್ವೀಕೃತಿಗಳ ಮೇಲೆ ಆದಾಯ ಖರ್ಚುಗಳ ಹೆಚ್ಚುವರಿ,  ಡಿ) ನಿವ್ವಳ ಎರವಲುಗಳಿಗೆ ಸಮಾನ

ಮಾರುಕಟ್ಟೆ ಬೆಲೆಗಳಲ್ಲಿ ಒಟ್ಟು ದೇಶೀಯ ಉತ್ಟನ್ನವು ಈ ಕೆಳಗಿನದನ್ನು ಒಳಗೊಳ್ಳುವುದಿಲ್ಲ
ಎ) ಪರೋಕ್ಷ ತೆರಿಗೆಗಳು,  ಬಿ) ಸಬ್ಸಿಡಿಗಳು,  ಸಿ) ಸವಕಳಿ,  ಡಿ) ವಿದೇಶದಿಂದ ನಿವ್ವಳ ಫ್ಯಾಕ್ಟರ್ ಆದಾಯ

ಪಡೆದುಕೊಳ್ಳುವ ಬೆಲೆಗಳು ಎಂದರೆ, ಭಾರತ ಸರ್ಕಾರವು ಈ ಕೆಳಕಂಡ ಉದ್ದೇಶಕ್ಕಾಗಿ ಯಾವ ಬೆಲೆಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುತ್ತದೋ ಅದು 
ಎ) PDS ಅನ್ನು ಕಾಯ್ದುಕೊಳ್ಳಲು,  ಬಿ) ಕಾಪು ದಾಸ್ತಾನುಗಳನ್ನು ನಿರ್ಮಿಸಲು,  ಸಿ) PDS ಅನ್ನು ಕಾಯ್ದುಕೊಳ್ಳಲು & ಕಾಪು ದಾಸ್ತಾನನ್ನು ನಿರ್ಮಿಸಲು,  ಡಿ) ರಫ್ತು ಪ್ರವರ್ಧನೆ

2010-11 ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ದಿನಾಂಕ
ಎ) 28-02-2010,  ಬಿ) 27-02-2010,  ಸಿ)01-03-2010,  ಡಿ) 28-02-2009

ಭಾರತದ 11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರತಿವರ್ಷಕ್ಕೆ ಗುರಿ ನಿರ್ಧಾರಿತವಾಗಿರುವ ಬೆಳವಣಿಗೆಯ ದರ
ಎ) 10%,  ಬಿ) 8%,  ಸಿ) 11%,  ಡಿ) 9%

ಭಾರತದ ಪ್ರಧಾನ ಮಂತ್ರಿಯವರು ಈ ಕೆಳಗಿನ ಯಾವ ಸ್ಥಾನಗಳನ್ನು ಹೊಂದಿರುತ್ತಾರೆ
ಎ) ಯೋಜನಾ ಆಯೋಗದ ಅಧ್ಯಕ್ಷರು,  ಬಿ) ಭಾರತದ ಏರ್ ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರು,  ಸಿ) ಹಣಕಾಸು ಆಯೋಗದ ಅಧ್ಯಕ್ಷರು,  ಡಿ) ರಾಜ್ಯ ಯೋಜನಾ ಮಂಡಳಿಗಳ ಅಧ್ಯಕ್ಷರು

ವಿಶ್ವ ಅಭಿವೃಧ್ಧಿ ವರದಿಯನ್ನು ಸಿದ್ಧಪಡಿಸುವವರು
ಎ) ವಿಶ್ವ ಆರ್ಥಿಕ ಫೋರಂ,  ಬಿ) ಐ.ಎಂ.ಎಫ್,  ಸಿ) ವಿಶ್ವಬ್ಯಾಂಕ್,  ಡಿ) ವಿಶ್ವ ವ್ಯಾಪಾರ ಸಂಸ್ಥೆ

ಭಾರತದ ಸಂದಾಯಗಳ ಶಿಲ್ಕನ್ನು ಸಿದ್ಧಪಡಿಸುವವರು
ಎ) ಕೇಂದ್ರ ವಾಣಿಜ್ಯ ಸಚಿವ ಖಾತೆ,  ಬಿ) ಕೇಂದ್ರ ಹಣಕಾಸು ಸಚಿವ ಖಾತೆ,  ಸಿ) ಯೋಜನಾ ಆಯೋಗ,  ಡಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಯೋಗ ಮಂಡಲಿ (NRHM) ಯನ್ನು ಆರಂಭಿಸಿದ ವರ್ಷ
ಎ) 2005,  ಬಿ) 2000,  ಸಿ) 2004,  ಡಿ) 2006

ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ
ಎ) ಸೀಮಾ ಸುಂಕ,  ಬಿ) ಅಬ್ಕಾರಿ,  ಸಿ) ಸೇವಾತೆರಿಗೆ,  ಡಿ) ಕಾರ್ಪೋರೇಷನ್ ತೆರಿಗೆ

ಬ್ರಾಡ್ ಮನಿ ಯಾವುದನ್ನು ಸೂಚಿಸುತ್ತದೆ
ಎ) M1,  ಬಿ) M2, ಸಿ) M3, ಡಿ) M4

ಜವಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನ್ಯೂಯಲ್ ಮಿಷನ್ ಅನ್ನು ಆರಂಭಿಸಿದ ವರ್ಷ
ಎ) 2004-05,  ಬಿ) 2005-06,  ಸಿ) 2006-07,  ಡಿ) 2003-04

2001ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದ ಲಿಂಗ ಅನುಪಾತ
ಎ) 960,  ಬಿ) 963,  ಸಿ) 964,  ಡಿ) 957

ಸಗಟು ಮಾರಾಟ ಬೆಲೆ ಸೂಚಿಯ ಆಧಾರ ವರ್ಷವನ್ನು ಕೆಳಕಂಡ ವರ್ಷಕ್ಕೆ ಬದಲಾಯಿಸಲಾಗಿದೆ
ಎ) 2003-04,  ಬಿ) 2000-01,  ಸಿ) 2004-05,  ಡಿ) 2007-08

ಈ ಕೆಳಗಿನ ಯಾವ ವರ್ಷವು 11 ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ
ಎ) 2011-12,  ಬಿ) 2012-13,  ಸಿ) 2007-08,  ಡಿ) 2010-11

ಭಾರತದ ಭದ್ರತೆಗಳ ವಿನಿಮಯ ಮಂಡಳಿಯನ್ನು (SEBI) ಸ್ಥಾಪಿಸಿದ ವರ್ಷ
ಎ) 1988,  ಬಿ) 1987,  ಸಿ) 1990,  ಡಿ) 1995

ಸರ್ಕಾರದ ಅಥವಾ ಸರ್ಕಾರದ ಅನುದಾನಿತ ಶಾಲೆಗಳ ಮದ್ಯಾಹ್ನದ ಬಿಸಿಯೂಟ ಯೋಜನೆಗೆ ಹಣಕಾಸಿನ ಬೆಂಬಲ ಒದಗಿಸುವವರು
ಎ) ಸಾಮಾಜಿಕ ನ್ಯಾಯದ ಸಚಿವ ಖಾತೆ,  ಬಿ) ಮಾನವ ಸಂಪನ್ಮೂಲ ಅಭಿವೃಧ್ಧಿ ಖಾತೆ,  ಸಿ) ಹಣಕಾಸು ಸಚಿವ ಖಾತೆ,  ಡಿ) ಶಿಕ್ಷಣ ಸಚಿವ ಖಾತೆ

ಹಳದಿ ಬೆಳಕನ್ನು ಉತ್ಸರ್ಜಿಸುವ ನಕ್ಷತ್ರವೊಂದು ಭೂಮಿಯತ್ತ ವೇಗೋತ್ಕರ್ಷವಾಗಿ ಬರುವಾಗ ಭೂಮಿಯ ಮೇಲಿನಿಂದ ನೋಡಿದರೆ ಅದರ ಬಣ್ಣವು
ಎ) ಕ್ರಮೇಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ,  ಬಿ) ಕ್ರಮೇಣವಾಗಿ ನೇರಳೆ ಬಣ್ಣಕ್ಕೆ ತಿರುಗುತ್ತದೆ,  ಸಿ) ಯಾವುದೇ ಬದಲಾವಣೆ ಯಾಗುವುದಿಲ್ಲ,  ಡಿ) ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ


ಒಬ್ಬ ವ್ಯಕ್ತಿಯು ನಿಮಿಷಕ್ಕೆ 15 ಸಲ ಉಸಿರು ತೆಗೆದುಕೊಳ್ಳುತ್ತಾನೆ ಪ್ರತಿಯೊಂದು ಬಾರಿ ಆತ ಉಸಿರು ತೆಗೆದುಕೊಳ್ಳುವಾಗ ಅದರಲ್ಲಿರುವ ಗಾಳಿಯ ಗಾತ್ರ 450 ಮಿ.ಲೀ. ಮತ್ತು 20% ಗಾತ್ರದಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ಹೊರಗೆ ಹಾಕಿದ ಗಾಳಿಯಲ್ಲಿ 16% ಗಾತ್ರದಷ್ಟು ಆಮ್ಲಜನಕ ಇರುತ್ತದೆ.  ಆದ್ದರಿಂದ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಒಳಗೆ ತೆಗೆದುಕೊಂಡ ಆಮ್ಲಜನಕದ ಪ್ರಮಾಣ ಸುಮಾರು 

ಎ) 389 ಲೀ,  ಬಿ) 476 ಲೀ,  ಸಿ) 500 ಲೀ,  ಡಿ) 300 ಲೀ

0 ಡಿಗ್ರಿ C ಯಲ್ಲಿರುವ ನೀರನ್ನು 20 ಡಿಗ್ರಿ C ಗೆ ಕಾಯಿಸಲಾಗಿದೆ ಆಗ ಅದರ ಗಾತ್ರವು
ಎ) ಸತತವಾಗಿ ಹೆಚ್ಚಾಗುತ್ತದೆ,  ಬಿ) ಸತತವಾಗಿ ಕಡಿಮೆಯಾಗುತ್ತದೆ,  ಸಿ) ಮೊದಲು ಕಡಿಮೆಯಾಗಿ ನಂತರ ಹೆಚ್ಚಾಗುತ್ತದೆ,  ಡಿ) ಧಾರಕದ ಗಾತ್ರವನ್ನು ಅವಲಂಬಿಸಿ ಅದು ಹೆಚ್ಚಾಗಲೂ ಬಹುದು ಅಥವಾ ಕಡಿಮೆಯಾಗಲೂ ಬಹುದು


ಒಂದು ಸಮತಲವಾದ ಕನ್ನಡಿಯು ನಿಮ್ಮನ್ನು 10 cm/sec ರಲ್ಲಿ ಸಮೀಪಿಸುತ್ತಿದೆ.  ಇದರಲ್ಲಿ ನಿಮ್ಮ ಬಿಂಬವನ್ನು ಕಾಣಬಹುದು,  ಯಾವ ವೇಗದಲ್ಲಿ ನಿಮ್ಮನ್ನು ನಿಮ್ಮ ಬಿಂಬವು ಸಮೀಪಿಸುತ್ತದೆ

ಎ) 10 cm/sec,  ಬಿ) 5 cm/sec,  ಸಿ) 20 cm/sec,  ಡಿ) 15 cm/sec

ಒಬ್ಬ ವ್ಯಕ್ತಿಯು ಒಂದು ಘರ್ಷಣಾರಹಿತ ಸಮತಲದ ಮೈಲ್ಮೈ  ಮಧ್ಯದಲ್ಲಿ ಕುಳಿತಿದ್ದಾನೆ.  ಇದರಿಂದ ಹೊರಬರಬೇಕಾದರೆ
ಎ) ಮೇಲ್ಮೈಯನ್ನು ಗಟ್ಟಿಯಾಗಿ ಒತ್ತಬೇಕು,  ಬಿ) ಮೇಲ್ಮೈ ಮೇಲೆ ತೆವಳಬೇಕು,  ಸಿ) ಹೊರ ನೆಗೆಯಬೇಕು,  ಡಿ) ಆತ ಯಾವ ದಿಕ್ಕಿನೆಡೆ ಹೋಗಬೇಕಾಗಿದೆಯೋ ಅದರ ವಿರುದ್ಧ ದಿಕ್ಕಿಗೆ ತನ್ನ ಚೀಲವನ್ನು ಎಸೆಯಬೇಕು

ರೂ. 8800 ಗಳ ಸಾಲವನ್ನು ಮೊದಲ ತಿಂಗಳಲ್ಲಿ 250, ಎರಡನೇ ತಿಂಗಳಲ್ಲಿ 270,  ಮೂರನೆ ತಿಂಗಳಲ್ಲಿ 290ರೂಗಳಂತೆ ತೀರಿಸುತ್ತ ಬಂದರೆ ಸಂಪೂರ್ಣವಾಗಿ ತೀರಿಸಲು ಎಷ್ಟು ಕಾಲ ಬೇಕಾಗುತ್ತದೆ.
ಎ) 20 ತಿಂಗಳು,  ಬಿ) 24 ತಿಂಗಳು,  ಸಿ) 18 ತಿಂಗಳು,  ಡಿ) 36 ತಿಂಗಳು

ಯಾವ ಇಬ್ಬರು ಹುಡಿಗಿಯರು ಒಟ್ಟಿಗೆ ಇರದಂತೆ 5 ಹುಡುಗರು ಮತ್ತು 4 ಹುಡುಗಿಯರು ಒಂದು ಮೇಜಿನ ಸುತ್ತ ಎಷ್ಟು ವಿಧದಲ್ಲಿ ಕುಳಿತುಕೊಳ್ಳಬಹುದು
ಎ) 2880,  ಬಿ) 288,  ಸಿ) 1440,  ಡಿ) 144

ಇಬ್ಬರು ವ್ಯಕ್ತಿಗಳ A & B ಅವರ ಈಗಿರುವ ವಯಸ್ಸಿನ ಅನುಪಾತ 5:1 ಆಗಿದೆ.   ವರ್ಷಗಳ ನಂತರ ಅವರ ವಯಸ್ಸಿನ ಅನುಪಾತ 3 : 1 ಆಗುತ್ತದೆ.  ಆದ್ದರಿಂದ ಅವರಿಬ್ಬರ ವಯಸ್ಸಿನ ನಡುವೆ ಇರುವ ವ್ಯತ್ಯಾಸ
ಎ) 16 ವರ್ಷ,  ಬಿ) 12 ವರ್ಷ,  ಸಿ) 20 ವರ್ಷ,  ಡಿ) 18 ವರ್ಷ

ಫ್ಯೂಸ್ ತಂತಿಯನ್ನು ಯಾವುದರಿಂದ ಮಾಡಿರುತ್ತಾರೆ
ಎ) ತಾಮ್ರ,  ಬಿ) ಟಂಗ್ ಸ್ಟನ್,  ಸಿ) ಸೀಸ & ತವರ,  ಡಿ) ನೈಕ್ರೋಮ್

ಕಿಣ್ವಗಳು (ಎನ್ ಜೈಮ್) ಎಂದರೆ
ಎ) ಆಹಾರದ ಶಕ್ತಿಘಟಕ,  ಬಿ) ತೈಲ & ಕೊಬ್ಬುಗಳಲ್ಲಿ ಇರುತ್ತವೆ.  ಸಿ) ಜೀವಶಾಸ್ತ್ರೀಯ ವೇಗವರ್ಧಕಗಳು,  ಡಿ) ಜ್ವರವನ್ನು ನಿಯಂತ್ರಿಸುವ ಔಷಧಗಳು

ಸೋಪ್ ತಯಾರಿಸುವಲ್ಲಿ ಪ್ರಮುಖವಾಗಿ ಉಪಯೋಗಿಸುವ ಕಚ್ಚಾವಸ್ತು
ಎ) ಸೋಪಿನ ಕಲ್ಲು,  ಬಿ) ಎಣ್ಣೆ,  ಸಿ) ಲಿಂಬೆರಸ,  ಡಿ) ಸುಗಂಧ ದ್ರವ್ಯ

ಕೈಗಾರಿಕಾ ಉದ್ದೇಶಗಳ ಆಲ್ಕೋಹಾಲ್ಗೆ ಈ ಕೆಳಕಂಡನ್ನು 5% ಸೇರಿಸುವ ಮೂಲಕ ಮಾನವ ಸೇವನೆಗೆ ಅನರ್ಹವಾಗುವಂತೆ ಮಾಡಲಾಗುತ್ತದೆ
ಎ) ಹೈಡ್ರೋಕ್ಲೋರಿಕ್ ಆಮ್ಲ,  ಬಿ) ಸೋಡಿಯಂ ಕ್ಲೋರೈಡ್,  ಸಿ) ಮೈಥೈಲ್ ಆಲ್ಕೋಹಾಲ್,  ಡಿ) ಇಥೆನಾಲ್

ಆಹಾರದ ಪಿಷ್ಟ ಪದಾರ್ಥದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು
ಎ) ಪ್ರೋಟೀನ್,  ಬಿ) ಜೀವಸತ್ವ,  ಸಿ) ಗ್ಲಿಸರೈಡ್,  ಡಿ) ಕಾರ್ಬೋಹೈಡ್ರೈಡ್

ಚಾರಿತ್ರಿಕವಾಗಿ ಅತ್ಯಂತ ಪರಿಶುದ್ಧ ಗುಣ ಹೊಂದಿರುವ ವಾಣಿಜ್ಯ ಕಬ್ಬಿಣದ ರೂಪ
ಎ) ನಾಡು ಕಬ್ಬಿಣ,  ಬಿ) ಎರಕ ಹೊಯ್ದ ಕಬ್ಬಿಣ,  ಸಿ) ಉಕ್ಕು,  ಡಿ) ಬೀಡು ಕಬ್ಬಿಣ

ಜೀವಕೋಶದ ಶಕ್ತಿ ಗೃಹ ಯಾವುದು
ಎ) ಮೈಟೋಕಾಂಡ್ರಿಯಾ,  ಬಿ) ಲೈಸೋಸೋಮ್,  ಸಿ) ರೈಬೋಸೋಮ್, ಡಿ) ಗಾಲ್ಗಿ ಸಂಕೀರ್ಣ

HIV ಯು ಈ ಕೆಳಕಂಡ ಮೂಲಕ ದೇಹದ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು  ಕಡಿಮೆ ಮಾಡುತ್ತದೆ
ಎ) ಕೆಂಪು ರಕ್ತಕಣಗಳನ್ನು ನಾಶಮಾಡುವ ಮೂಲಕ,  ಬಿ) ಪ್ರತಿಕಾಯ (antibodies) ಗಳನ್ನು ನಾಶಮಾಡುವ ಮೂಲಕ,  ಸಿ) T-ಲಿಂಪೋಸೈಟ್ಗಳ ಮೇಲೆ ದಾಳಿ ಮಾಡುವ ಮೂಲಕ,  ಡಿ) B-ಲಿಂಪೋಸೈಟ್ಗಳ ಮೇಲೆ ದಾಳಿಮಾಡುವ ಮೂಲಕ


ಬಿಳಿಗಿರಿ ರಂಗನ ರಾಷ್ಟ್ರೀಯ ಉದ್ಯಾನವನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಬೇಧ ಯಾವುದು
ಎ) ಹುಲಿ,  ಬಿ) ವಿವಿಧ ಪ್ರಭೇದಗಳ ಹಕ್ಕಿಗಳು,  ಸಿ) ಆನೆ,  ಡಿ) ಸಿಂಹ

ಸಸ್ಥನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
ಎ) ಹೆಚ್ಚುವರಿ ನೀರನ್ನು ತೆಗೆದು ಹಾಕುವುದು,  ಬಿ) ದೇಹದ ಉಷ್ಣಾಂಶ ನಿಯಂತ್ರಣ,  ಸಿ) ಹೆಚ್ಚುವರಿ ಉಪ್ಪನ್ನು ತೆಗೆದು ಹಾಕುವುದು,  ಡಿ) ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು

Red Data Book ಯಾವುದಕ್ಕೆ ಸಂಬಂಧಿಸಿದೆ
ಎ) ಸ್ಥಳೀಯ ರೋಗದ ಸಸ್ಯಗಳು ಹಾಗೂ ಪ್ರಾಣಿಗಳು,  ಬಿ) ನಶಿಸಿ ಹೋದ ಸಸ್ಯಗಳು ಹಾಗೂ ಪ್ರಾಣಿಗಳು,  ಸಿ) ಪ್ರಕಾಶಾವಧಿ ಸ್ಪಂದನ ಸಾಮರ್ಥ್ಯ ತೋರಿಸುವ ಸಸ್ಯಗಳು & ಪ್ರಾಣಿಗಳು,  ಡಿ) ಅಳಿವಿನಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು

ಒಂದು ವೃಕ್ಷದ ಹಳೆಯ ಕಾಂಡವನ್ನು ಅಡ್ಡಡ್ಡವಾಗಿ ಕತ್ತರಿಸಿದಾಗ ದ್ವಿತೀಯ ದಾರುವಿನ ಹೊರ ವಲಯವು ತಿಳಿಯಾದ ಬಣ್ಣದಲ್ಲಿರುವುದು ಕಂಡುಬರುತ್ತದೆ ದಾರುವಿನ ಈ ವಲಯವನ್ನು ಏನೆಂದು ಕರೆಯುತ್ತಾರೆ
ಎ) ಕಾಂಡದ ಮಧ್ಯ ಭಾಗ,  ಬಿ) ಕಾಂಡದ ಹೊರ ಭಾಗ,  ಸಿ) ವಸಂತ ಕಾಲ ಕಾಂಡ,  ಡಿ) ಶರತ್ ಕಾಲ ಕಾಂಡ

ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಎಷ್ಟೋವೇಳೆ
ಎ) ವಾಯುಮಾಲೀನ್ಯ ಉಂಟಾಗುತ್ತದೆ,  ಬಿ) ಜಲಮಾಲೀನ್ಯ ಉಂಟಾಗುತ್ತದೆ,  ಸಿ) ರೇಡಿಯೋ ಆಕ್ಟೀವ್ ರೇಟಿಯೇಷನ್ ಮಾಲಿನ್ಯ ಉಂಟಾಗುತ್ತದೆ,  ಡಿ) UV ರೇಡಿಯೇಷನ್ ಮಾಲೀನ್ಯ ಉಂಟಾಗುತ್ತದೆ

ಜಪಾನಿನಲ್ಲಿ ಇಟಾಯಿ-ಇಟಾಯಿ ರೋಗ ಈ ಕೆಳಕಂಡ ಅಂಶದಿಂದ ಕಲುಷಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು
ಎ) ಪಾದರಸ,  ಬಿ) ಕ್ಯಾಡ್ಮಿಯಂ,  ಸಿ) ಕಬ್ಬಿಣ,  ಡಿ) ಕ್ಯಾಲ್ಶಿಯಂ

ಯಾವ ಹಂತದಲ್ಲಿ ನೈಟ್ರೇಟ್ಗಳು ಹಾಗೂ ಫಾಸ್ಫೇಟ್ ಗಳನ್ನು ನಿವಾರಿಸಲಾಗುತ್ತದೆ
ಎ) ಪ್ರಾಥಮಿಕ ಸಂಸ್ಕರಣೆ,  ಬಿ) ದ್ವಿತೀಯ ಸಂಸ್ಕರಣೆ,  ಸಿ) ತೃತೀಯ ಸಂಸ್ಕರಣೆ,  ಡಿ) ಪೂರ್ವ ಭಾವಿ ಸಂಸ್ಕರಣೆ

26, 52, 91, 117, 141,  195,  234 ಈ ಸರಣಿಯಲ್ಲಿ  ತಪ್ಪು ಸಂಖ್ಯೆ ಯಾವುದು
ಎ) 91,  ಬಿ) 195,  ಸಿ) 117,  ಡಿ) 141


ಒಂದು ತ್ರಿಕೋನವು 14 ಸೆಂಮೀ ಆಧಾರವನ್ನು ಹೊಂದಿದೆ ಮತ್ತು 7 ಸೆಂಮೀ ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ Õ = 22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು

ಎ) 11 ಸೆಂಮೀ,  ಬಿ) 22 ಸೆಂಮೀ,  ಸಿ) 33 ಸೆಂಮೀ,  ಡಿ) 22/7 ಸೆಂಮೀ

ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ಅವಧಿಗೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು
ಎ) ರೂ.14,641,  ಬಿ) ರೂ.18,641,  ಸಿ) ರೂ. 17,641,  ಡಿ) ರೂ.15,000

ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ.  ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು, ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ.  ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ, ಒಟ್ಟು ಗುಂಪುಗಳ ಸಂಖ್ಯೆ ಎಷ್ಟು
ಎ) 26,  ಬಿ) 29,  ಸಿ) 36,  ಡಿ) 58

ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯೂ ಬೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಅಥವಾ ಎರಡನ್ನೂ ತೆಗೆದುಕೊಂಡಿದ್ದರು.  ಭೌತಶಾಸ್ತ್ರವನ್ನು ತೆಗೆದುಕೊಂಡವರು 65% ಇದ್ದರು, ಗಣಿತ ಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು.  ಒಟ್ಟು ಅಭ್ಯರ್ಥಿಗಳ ಸಂಖ್ಯೆ 2000.  ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯರ್ಥಿಗಳ ಸಂಖ್ಯೆ ಎಷ್ಟು
ಎ) 750,  ಬಿ) 500,  ಸಿ) 250,  ಡಿ) 125


ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ.  ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರವೃತ್ತಾಕಾರದ ಭೂಭಾಗವನ್ನು ಸೇರಿಸಲಾಗಿದೆ.  ಪ್ರತಿ ಗಂಟೆಗೆ 4.32 ಕಿಮೀ. ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ, ಈ ಪ್ರದೇಶದ ಸುತ್ತ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ

ಎ) 4 ನಿಮಿಷ,  ಬಿ) 6 ನಿಮಿಷ,  ಸಿ) 8 ನಿಮಿಷ, ಡಿ) 8 ನಿಮಿಷ 10 ಸೆಕೆಂಡು

AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ.  P ಎಂಬ ಬಿಂದುವು ಈ ರೇಖೆಯ ಮೇಲೆ A & B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ) ABಗೆ ಸಮನಾಂತರವಾಗಿರುವ ರೇಖೆ,  ಬಿ) AB ಯ ಲಂಬಾತ್ಮಕ ಸಮಭಾಜಕವಾಗಿರುವಂಥ ರೇಖೆ,  ಸಿ) A & B ಯ ಮೂಲಕ ಹಾದು ಹೋಗುವಂಥ ವೃತ್ತ,  ಡಿ) A & B ಮೂಲಕ ಹಾದು ಹೋಗುವಂಥ ಎರಡು ವಕ್ರಗಳು

A ಎಂಬ ತೊಟ್ಟಿಯಲ್ಲಿ 1\2 ದಷ್ಟು ನೀರಿದೆ.  A ತೊಟ್ಟಿಯ ಎರಡರಷ್ಟು  ಸಾಮರ್ಥ್ಯವಿರುವ  B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ
ಎ) 9/20,  ಬಿ) 3/10,  ಸಿ) 7/10,  ಡಿ) 7/10

ಒಂದು ಡಬ್ಬಿಯಲ್ಲಿ ಒಂದು ರೂ ನಾಣ್ಯಗಳು 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ.  ಒಟ್ಟು ಮೊಬಲಗು 341 ಆದರೆ, ಈ ಡಬ್ಬಿಯಲ್ಲಿರುವ ನಾಣ್ಯಗಳ ಸಂಖ್ಯೆ ಎಷ್ಟು
ಎ) 417,  ಬಿ) 437,  ಸಿ) 517,  ಡಿ) 527

ಒಬ್ಬ ವ್ಯಕ್ತಿಯು 6 ಲಕ್ಷ ರೂಗಳಿಗೆ ಜಾಗವನ್ನು ಖರೀದಿಸಿದ.  ವೆಚ್ಚದ 30% ರಷ್ಟನ್ನು ಆತ ಈ ಜಾಗದ ಅಭಿವೃದ್ಧಿಗಾಗಿ ಖರ್ಚುಮಾಡಿ ಆದನ್ನು 25 ಫ್ಲಾಟ್ ಗಳಾಗಿ ವಿಭಜಿಸಿದ.  ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ, ಪ್ರತಿಯೊಂದು ಫ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು
ಎ) 35,000,  ಬಿ) 39000,  ಸಿ) 43000,  ಡಿ) 45000


ಭಾರತ ಸರ್ಕಾರವು ಐದು ದೇಶಗಳ ಪ್ರಜೆಗಳಿಗಾಗಿ ಇತ್ತೀಚೆಗೆ 'Visa on arrival' ಎಂಬುದನ್ನು  ಅನುಗ್ರಹಿಸಿದೆ.  ಈ ಪಟ್ಟಿಯಲ್ಲಿರುವ ಏಷ್ಯದ ಎರಡು ದೇಶಗಳು ಯಾವುವು

ಎ) ಶ್ರೀಲಂಕ & ಸಿಂಗಪುರ,  ಬಿ) ಪಾಕಿಸ್ಥಾನ ಮತ್ತು ಜಪಾನ್, ಸಿ) ಥಯಲ್ಯಾಂಡ್ & ಪಾಕಿಸ್ಥಾನ,  ಡಿ) ಜಪಾನ್ & ಸಿಂಗಪುರ

ದಂತಕಥೆಯಾಗಿರುವ ಹಾಡುಗಾರ ಮತ್ತು ರಚನೆಕಾರ ಸಿ.ಅಶ್ವತ್ ಅವರ ನಿಧನವು ಯಾವುದರೊಂದಿಗೆ ತಾಳೆಯಾಯಿತು
ಎ) ಅವರ ಜನ್ಮದಿನ,  ಬಿ) ಬೇಂದ್ರೆಯವರ ಜನ್ವದಿನ,  ಸಿ) ವಿಷ್ಣುವರ್ದನ್ ಅವರ ಸಾವಿನ ದಿನ,  ಡಿ) ಕ್ರಿಸ್ಮಸ್ ದಿನ

ಜನವರಿ 2011 ಕ್ಕೆ ಅನುಸೂಚಿತವಾಗಿರುವ ಗ್ರಾಂಡ್ ಸ್ಲಾಮ್ ಟೆನ್ನೀಸ್ ಪಂದ್ಯ ಯಾವುದು
ಎ) ವಿಂಬಲ್ಡನ್,  ಬಿ) ಯು.ಎಸ್.ಓಪನ್,  ಸಿ) ಫ್ರೆಂಚ್ ಓಪನ್,  ಡಿ) ಆಸ್ಟ್ರೇಲಿಯನ್ ಓಪನ್

ಈ ಕೆಳಗಿನವುಗಳಲ್ಲಿ ಯಾವುದು ಸರಿ
ಆಟೋ ಎಕ್ಸಪೋ2010         : ನವದೆಹಲಿ
97ನೇ ಭಾರತೀಯ ವಿಜ್ಞಾನ ಸಮಾವೇಶ : ತಿರುವನಂತಪುರಂ
ಬಯೋ ಏಷಿಯಾ 2010  :  ಬೆಂಗಳೂರು
ಎ) 1 & 2 ಮಾತ್ರ,  ಬಿ) 2 & 3 ಮಾತ್ರ,  ಸಿ) 1 & 3  ಮಾತ್ರ,  ಡಿ) 1, 2, & 3

ಕೋಪನ್ ಹೇಗನ್ನಿನ ಜಾಗತಿಕ ಶೃಂಗ ಸಭೆಯು ಈ ಕೆಳಕಂಡ ಭಾರಿ ಪ್ರಮಾಣದ ಬಿಕ್ಕಟ್ಟಿನ ಸುತ್ತ ಕೇಂದ್ರೀಕೃತವಾಗಿತ್ತು
ಎ) ಭಯೋತ್ಪಾದನೆ,  ಬಿ) ಏಡ್ಸ್,  ಸಿ) H1N1,  ಡಿ) ಹವಾಮಾನ ಬದಲಾವಣೆ

ಕರ್ನಾಟಕದ ಈ ಕೆಳಗಿನ ಸ್ಥಳದಲ್ಲಿ ಒಂದು ಏರೋಸ್ಪೇಸ್ SEZ ನ್ನು ಆರಂಭಿಸಲಾಗಿದೆ
ಎ) ಬೆಳಗಾಂ,  ಬಿ) ಹುಬ್ಬಳ್ಳಿ,  ಸಿ) ಬೀದರ್,  ಡಿ) ಮಂಗಳೂರು

ಹಿಂದಿಯ 3 ಈಡಿಯಟ್ಸ್ ಎಂಬ ಸಿನೆಮಾದ ಮೂಲವನ್ನು ಕುರಿತಂತೆ ಹುಟ್ಟಿಕೊಂಡಿರುವ ವಿವಾದವು ಯಾವುದಕ್ಕೆ ಸಂಬಂಧಿಸಿದೆ
ಎ) ಅರವಿಂದ ಅಡಿಗ ಅವರ 'The White Tiger', ಬಿ) ಚೇತನ್ ಭಗತ್ ಅವರ 'Five Point Someone'ಸಿ) ಸೌಮ್ಯ ಭಟ್ಟಾಚಾರ್ಯ ಅವರ 'If I Could Tell You',  ಡಿ) ಅರಿಂದಮ್ ಚೌಧರಿ ಅವರ 'The Great Indian Dream'

ಅಮನ್ ಕೀ ಆಶಾ ಎಂಬುದು ಈ ಕೆಳಕಂಡ ಪತ್ರಿಕೆಯವರು ಆರಂಭಿಸಿದ ಭಾರತ-ಪಾಕ್ ಶಾಂತಿ ಪರಿಯೋಜನೆ
ಎ) ದಿ ಹಿಂದೂ,  ಬಿ) ಡೆಕ್ಕನ್ ಕ್ರಾನಿಕಲ್,  ಸಿ) ದಿ ಟೈಮ್ಸ್ ಆಫ್ ಇಂಡಿಯಾ,  ಡಿ) ದಿ ಸ್ಟೇಟ್ಸ್ ಮನ್

ಕರ್ನಾಟಕದ ವನ್ಯಜೀವಿ ಮಂಡಲಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಕ್ರಿಕೇಟ್ ತಂಡದ ಮಾಜಿನಾಯಕ
ಎ) ರಾಹುಲ್ ದ್ರಾವಿಡ್,  ಬಿ) ಅನಿಲ್ ಕುಂಬ್ಳೆ,  ಸಿ) ಜಿ.ಆರ್. ವಿಶ್ವನಾಥ್,  ಡಿ) ಎಸ್.ಎಮ್.ಹೆಚ್.ಕಿರ್ಮಾನಿ

ಅತ್ಯಧಿಕ ವೇಗದ, ತಡೆರಹಿತ,  ಸಾಪ್ತಾಹಿಕ ರೈಲು ಯಶವಂತಪುರ ಹಾಗೂ __________ ನಡುವೆ ಸಂಚರಿಸುತ್ತದೆ
ಎ) ಹೌರಾ,  ಬಿ) ಜೈಪುರ,  ಸಿ) ಲಕ್ನೋ,  ಡಿ) ಚೆನ್ನೈ

18-12-2009 ರಂದು ನಿಧನರಾದ ಟಿ.ಎಸ್.ಸತ್ಯನ್ ಅವರು ಏನಾಗಿದ್ದರು
ಎ) ಗೀತರಚನೆಕಾರ,  ಬಿ) ಸಂಗೀತ ನಿರ್ದೇಶಕ,  ಸಿ) ಸಿನಿಮಾ ನಿರ್ದೇಶಕ,  ಡಿ) ಛಾಯಾಗ್ರಾಹಕ

Connecting People ಎನ್ನುವುದು ಕೆಳಕಂಡದ್ದರ ಘೋಷಣೆ
ಎ) ಏರ್ಟೆಲ್,  ಬಿ) ನೋಕಿಯಾ,  ಸಿ) ರಿಲಯನ್ಸ್,  ಡಿ) ಬಿಎಸ್ಎನ್ಎಲ್

2010 ಜನವರಿ 4 ರಂದು ಉದ್ಘಾಟನೆಯಾದ ಜಗತ್ತಿನ ಅತಿ ಎತ್ತರದ ಕಟ್ಟಡ ಯಾವುದು
ಎ) ಬುರ್ಜ್ ಖಲೀಫಾ,  ಬಿ) ಬುರ್ಜ್ ಅಲ್ ಅರಬ್,  ಸಿ) ಬಿನ್ ದುಬಾಯ್,  ಡಿ) ಅಲ್ ಖಲೀಫಾ

ವೆಂಕಟರಾಮನ್ ರಾಮಕೃಷ್ಣನ್ ಅವರು ತಮ್ಮ ನೊಬೆಲ್ ಬಹುಮಾನವನ್ನು ಇಸ್ರೇಲ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಇತರ ಇಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು.  ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ
ಎ) ವೈದ್ಯಕೀಯ,  ಬಿ) ರಸಾಯನ ಶಾಸ್ತ್ರ,  ಸಿ) ಶಾಂತಿ,  ಡಿ) ಭೌತಶಾಸ್ತ್ರ

ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆಮಾಡಿ

A
ದೀಪಕ್
ಪರೇಖ್

1
ಕಿಂಗ್
ಫಿಶರ್

B
ಕ್ರಿಸ್.
ಗೋಪಾಲಕೃಷ್ಣನ್

2

ICICI ಬ್ಯಾಂಕ್

C
ವಿಜಯ್ ಮಲ್ಯ
3

HDFC ಬ್ಯಾಂಕ್

D
ಚಂದಾ
ಕೊಚ್ಚಾರ್

4
ಇನ್ಫೋಸಿಸ್


A

B

C

D

1

1

2

3

4

2

3

2

4

1

3


3


4


1


2

4

4

3

2

1

ಪ್ರೊ. ಉಪಿಂದರ್ ಸಿಂಗ್ ಅವರು ಈ ಕೆಳಕಂಡ ಕ್ಷೇತ್ರದ ಇನ್ಫೋಸಿಸ್ ವಿಜ್ಞಾನ ಸಂಸ್ಥಾಪನಾ ಬಹುಮಾನ 2009,  ಪಡೆದುಕೊಂಡರು
ಎ) ಇತಿಹಾಸ,  ಬಿ) ಮಾಹಿತಿ ವಿಜ್ಙಾನ,  ಸಿ) ಸಾಫ್ಟ್ ವೇರ್ ಅಭಿವೃದ್ಧಿ,  ಡಿ) ನೆಟ್ ವರ್ಕ್ ಕಮ್ಯುನಿಕೇಷನ್

ಎ.ಆರ್.ರೆಹಮಾನ್ ಅವರಲ್ಲದೇ ಇನ್ನೂ ಇಬ್ಬರು ಭಾರತೀಯ ಸಂಗೀತಗಾರರು ಗ್ರಾಮಿ ಬಹುಮಾನ 2010 ಕ್ಕೆ ನಾಮ ನಿರ್ದೇಶಿತರಾಗಿದ್ದರು.  ಅವರನ್ನು ಗುರುತಿಸಿ
ಎ) ಜಸ್ರಾಜ್ ಮತ್ತು ಜಾಕೀರ್ ಹುಸೇನ್,  ಬಿ) ಜಸ್ರಾಜ್ & ಯು.ಶ್ರೀನಿವಾಸ್,  ಸಿ) ಜಾಕೀರ್ ಹುಸೇನ್ &  ಅಮ್ಜದ್ ಆಲಿ ಖಾನ್,  ಡಿ) ಅಮ್ಜದ್ ಆಲಿ ಖಾನ್ & ಎಲ್.ಸುಬ್ರಮಣ್ಯಂ

ರೀನಾ ಕೌಶಲ್ ಧರ್ಮಶಕ್ತು ಅವರು ಈ ಕೆಳಕಂಡ ಸ್ಥಳಕ್ಕೆ ಸ್ಕಿ-ಟ್ರೆಕ್ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ
ಎ) ದಕ್ಷಿಣ ದೃವ,  ಬಿ) ಎವರೆಸ್ಟ್,  ಸಿ) ಕಿಲಿಮಾಂಜರೋ.  ಡಿ) ವೆಸೂವಿಯಸ್

ಉತ್ತರ ಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ.  ಉತ್ತರ ಕನ್ನಡದ ಈ ಪ್ರದೇಶ ಯಾವುದು
ಎ) ಕಾರವಾರ,  ಬಿ) ಅಂಕೋಲ,  ಸಿ) ಶಿರಸಿ,  ಡಿ) ಹೊನ್ನಾವರ

ವಿಶ್ವ ಆಹಾರ ಬಹುಮಾನವನ್ನು 2009ರ ಸಾಲಿಗಾಗಿ ಡಾ.ಗೆಬಿಸಾ ಎಜಿಟಾ ಅವರಿಗೆ ನೀಡಲಾಯಿತು, ಈ ಬಹುಮಾನವನ್ನು ಸ್ಥಾಪಿಸಿದವರು ಯಾರು
ಎ) ಡಾ.ಫಿಲಿಫ್ ನೆಲ್ಸನ್,  ಬಿ) ಡಾ.ಎಂ.ಎಸ್.ಸ್ವಾಮಿನಾಥನ್,  ಸಿ) ಡಾ.ಮಹಮ್ಮದ್ ಯೂನಸ್,  ಡಿ) ಡಾ.ನಾರ್ಮನ್ ಬೊರ್ಲಾಂಗ್

ಇತ್ತೀಚೆಗೆ ನಡೆದ ICC 2009 ಚಾಂಪಿಯನ್ಸ್ ಕ್ರಿಕೇಟ್ ಟ್ರೋಫಿಯ ಅಗ್ರಗಣ್ಯ ಆಟಗಾರರಲ್ಲೊಬ್ಬರು, ಫ್ಲಾಯ್ಡ್ ರೀಫರ್ ಅವರು ಯಾವ ತಂಡಕ್ಕಾಗಿ ಆಡಿದರು
ಎ) ವೆಸ್ಟ್ ಇಂಡೀಸ್,  ಬಿ) ಇಂಗ್ಲೆಂಡ್,  ಸಿ) ದಕ್ಷಿಣ ಆಫ್ರಿಕಾ,   ಡಿ) ನ್ಯೂಜಿಲೆಂಡ್

ಪೊಲಾರ್ ಸ್ಯಟಿಲೈಟ್ ಲಾಂಚ್ ವೆಹಿಕಲ್ (PSLV-C14) ನ್ನು 2009ರ ಸೆಪ್ಟಂಬರ್ ನಲ್ಲಿ ಅನೇಕ ಉಪಗ್ರಹಗಳೊಂದಿಗೆ ಉಡಾಯಿಸಲಾಯಿತು.  ಇದುವರೆಗೆ ಈ ಹಿಂದಿನ ಎಷ್ಟು PSLV ಯೋಜನೆಗಳು ವಿಫಲವಾಗಿವೆ
ಎ) ಸೊನ್ನೆ,  ಬಿ) ಒಂದು,  ಸಿ) ಎರಡು,  ಡಿ) ಮೂರು

ಇತ್ತೀಚೆಗೆ 2009 ರಲ್ಲಿ ಒಬ್ಬ ಭಾರತೀಯರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು ಅವರ ಹೆಸರೇನು
ಎ) ಪಂಕಜ್ ಅದ್ವಾನಿ, ಬಿಲಿಯರ್ಡ್ಸಗಾಗಿ,  ಬಿ) ದೀಪಿಕಾ ಪಲ್ಲಿಕಾಲ್, ಸ್ಕ್ವಾಶ್ ಗಾಗಿ,  ಸಿ) ವಿಶ್ವನಾಥನ್ ಆನಂದ್, ಚೆಸ್ ಗಾಗಿ,  ಡಿ) ಗೀತ್ ಸೇಥಿ, ಸ್ನೂಕರ್ ಗಾಗಿ

ಇತ್ತೀಚಿನ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ಥಿ ಪ್ರದಾನ ಕಾರ್ಯಕ್ರಮದಲ್ಲಿ ಅಡೂರ್ ಗೋಪಾಲ ಕೃಷ್ಣನ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದರು.  ಇದಕ್ಕೆ ಮೊದಲು ಅವರು ಎಷ್ಟುಸಲ ಈ ಬಹುಮಾನ ಪಡೆದಿದ್ದಾರೆ
ಎ) ಒಂದು ಸಲ,  ಬಿ) ಎರಡು ಸಲ,  ಸಿ) ಮೂರು ಸಲ,  ಡಿ) ನಾಲ್ಕು ಸಲ

ಭಾರತದ ಆರನೇ ವೇತನ ಆಯೋಗದ ಶಿಫಾರಸುಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಉದ್ಯೋಗಿಗಳು ತುಂಬಾ ಹರ್ಷಿತರಾಗಿದ್ದಾರೆ.  ಈ ಕೆಳಗಿನ ಯಾರು ಈ ಆಯೋಗದ ಸದಸ್ಯರಲ್ಲ
) ರತ್ನವೇಲ್ ಪಾಂಡ್ಯನ್,  ಬಿ) ಬಿ.ಎನ್.ಶ್ರೀಕೃಷ್ಣ,  ಸಿ) ರವೀಂದ್ರ ದೊಲಾಕಿಯಾ,  ಡಿ) ಜೆ.ಎಸ್.ಮಾಥುರ್

ಯುನೆಸ್ಕೋ ಅಂಗಸಂಸ್ಥೆಯು ಇತ್ತೀಚೆಗೆ ಶ್ರೀಮತಿ. ಇರಿನಾ ಬೊಕೋವಾ ಅವರನ್ನು ತನ್ನ ಮಹಾ ನಿರ್ದೇಶಕರನ್ನಾಗಿ ಆಯ್ಕೆಮಾಡಿದೆ.  ಈ ಹುದ್ದೆಯಲ್ಲಿ ಇವರಿಗಿಂತ ಮೊದಲಿದ್ದವರು ಯಾರು
ಎ) ಕೊಯಿಚಿರೋ ಮತ್ಸೂರ,  ಬಿ) ಫರೂಕ್ ಹೋಸ್ನೆ,  ಸಿ) ಫೆಡೆರಿಕೋ ಮೇಯರ್,  ಡಿ) ಅಮೊಡು-ಮಹ್ತರ್ ಎಂಬೋ

ಲಿಯಾಂಡರ್ ಪೇಸ್ ಅವರು ಇತ್ತೀಚೆಗೆ ಯು.ಎಸ್.ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಅವರ ಜೊತೆ ಆಟಗಾರರಾಗಿದ್ದವರು ಯಾರು
ಎ) ಲೈಸೆಲ್ ಹೂಬರ್,  ಬಿ) ಕಾರಾ ಬ್ಲಾಕ್,  ಸಿ) ಲುಕಾಸ್ ಡ್ಲೌಹಿ,  ಡಿ) ಮಾರ್ಕ್ಸ್ ನೋವೆಲ್ಸ್,  

G-20 ಗುಂಪಿನ ದೇಶಗಳ ನಾಯಕರು ಅಂತರರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚಿಸುವುದಕ್ಕಾಗಿ 2009 ರ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರಿದ್ದರೆ.  ಈ ಗುಂಪಿನಲ್ಲಿ ಕೆಳಕಂಡ ಯಾವ ದೇಶವು ಪ್ರತಿನಿಧಿಸಿರಲಿಲ್ಲ
ಎ) ಸೌದಿ ಅರೇಬಿಯಾ,  ಬಿ) ಸ್ವಿಟ್ಜರ್ ಲ್ಯಾಂಡ್,  ಸಿ) ಇಂಡೋನೇಷಿಯಾ,  ಡಿ) ಮೆಕ್ಸಿಕೋ

ಈ ಕೆಳಗಿನ ಯಾವ ಕೀರ್ತಿವೆತ್ತ ವ್ಯಕ್ತಿಯು ತಾನು 2010 ರ ಕಾಮನ್ ವೆಲ್ತ್ ಕ್ರೀಡೆಗಳ ಪ್ರಾರಂಭೋತ್ಸವದಲ್ಲಿ ಪ್ರದರ್ಶನ ನೀಡುವುದಾಗಿ ಘೋಷಿಸಿದರು
ಎ) ಅಮೀರ್ ಖಾನ್,  ಬಿ) ಶಾರುಕ್ ಖಾನ್,  ಸಿ) ಸೈಫ್ ಆಲಿ ಖಾನ್,  ಡಿ) ಇಮ್ರಾನ್ ಖಾನ್

ಹಸಿರು ಮನೆ ಅನಿಲ ಉತ್ಸರ್ಜನೆಯ ದೃಷ್ಟಿಯಿಂದ ಪಟ್ಟಿಯ ಅಗ್ರಸ್ಥಾನದಲ್ಲಿರುವ ನಗರ ಯಾವುದು
ಎ) ಜಮಶೆಡ್ ಪುರ,  ಬಿ) ಗುರ್ ಗಾಂವ್,  ಸಿ) ದೆಹಲಿ,  ಡಿ) ಪಾಟ್ನಾ

ಕಡಿಮೆ ವೆಚ್ಛದ ವಿಮಾನಯಾನ ಏರ್ ಏಷಿಯಾ ದ ನೆಲೆ ಯಾವುದು
ಎ) ಸಿಂಗಪುರ,  ಬಿ) ಮಲೇಶಿಯಾ,  ಸಿ) ಥಯ್ಲ್ಯಾಂಡ್,  ಡಿ) ಬ್ಯಾಂಕ್ಕಾಕ್

ಯೂರೋಪಿನ ಮಾಲಿಕ್ಯುಲರ್ ಬಯಾಲಜಿ ಸಂಸ್ಥೆಯಿಂದ ಯುವ ಸಂಶೋಧಕರೆಂದು ಆಯ್ಕೆಯಾದ ಭಾರತೀಯ ವ್ಯಕ್ತಿಯ ಹೆಸರು
ಎ) ಜಿ.ಸ್ಮಿತ್,  ಬಿ) ಜೋಸೆಫ್ ಡಿಗೋರಿ,  ಸಿ) ಎಂ.ಮದನ್ ಬಾಬು,  ಡಿ) ತಪಸಿ ಮುಖರ್ಜಿ

ಧಾರ್ಮಿಕ ಮೂರ್ತಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಉಲ್ಲೇಖಗಳಿರುವ ಇತಿಹಾಸದ ಪಠ್ಯ ಪುಸ್ತಕವನ್ನು ರಚಿಸಿದಕ್ಕಾಗಿ FIR ವಿಧಿಸಲ್ಪಟ್ಟವರಾರು
ಎ) ರಾಮಿಲಾ ಥಾಪರ್,  ಬಿ) ಕೆ.ಎಂ.ಶ್ರೀಮಾಲಿ,  ಸಿ) ಸತೀಶ್ ಚಂದ್ರ,  ಡಿ) ಇರ್ಫಾನ್ ಹಬೀಬ್

ಜಾಗತಿಕ ತಾಪಮಾನದ ಏರಿಕೆಯ ಕಾರಣದಿಂದಾಗಿ ಹಿಮಾಲಯದಲ್ಲಿರುವ ಹಿಮನದಿಗಳಿಗೆ ಅಪಾಯ ಉಂಟಾಗಿದೆ ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಮೌಂಟ್ ಎವರೆಸ್ಟ್ ಮೇಲೆ ತನ್ನ ಸಂಪುಟ ಸಭೆಯನ್ನು ನೆಡೆಸಿದ ರಾಷ್ಟ್ರ ಯಾವುದು
ಎ) ಭೂತಾನ್,  ಬಿ) ಬಾಂಗ್ಲಾದೇಶ್,  ಸಿ) ಭಾರತ,  ಡಿ) ನೇಪಾಳ

ಸರ್ಚ್ ಎಂಜಿನ್ ಗೂಗಲ್ ಅನ್ನು ರೂಪಿಸಿದವರು, ಆರಂಭಿಸಿದವರು ಲ್ಯಾರಿ ಪೇಜ್ ಮತ್ತು ಸೆರ್ಬಿ ಬ್ರಿನ್. ಗೂಗಲ್ ಅನ್ನು ಆರಂಭಿಸಿದಾಗ ಅವರು ಏನಾಗಿದ್ದರು

ಎ) ಸಾಫ್ಟ್ ವೇರ್ ಪ್ರೊಫೆಶನಲಗಳು,  ಬಿ) Ph.D ವಿದ್ಯಾರ್ಥಿಗಳು,  ಸಿ) ಕಂಪ್ಯೂಟರ್ ಪ್ರೊಫೆಸರ್,  ಡಿ) ಹಣಕಾಸು ಮಾರುಕಟ್ಟೆ ಪ್ರೊಫೆಸರ್


ಅಂತರಿಕ್ಷದ ಆಳದಲ್ಲಿ ಆಕಾಶವು ಹೇಗೆ ಕಾಣುತ್ತದೆ
ಎ) ಕತ್ತಲು,  ಬಿ) ನೀಲಿ,  ಸಿ) ತಿಳಿ ಹಳದಿ,  ಡಿ) ಕೆಂಪು

ಈ ಕೆಳಗಿನ ನಾಲ್ವರು ವಿಜ್ಙಾನಿಗಳಲ್ಲಿ ಪ್ರತಿಯೊಬ್ಬರೂ ಎರಡೆರಡು ಸಲ ನೊಬೆಲ್ ಬಹುಮಾನಗಳಿಸಿದ್ದಾರೆ.  ಇವರಲ್ಲಿ ಯಾರಿಗೆ ವಿಜ್ಞಾನೇತರ ತರಗರಿಗಾಗಿ ನೊಬಲ್ ಬಹುಮಾನ ನೀಡಲಾಗಿದೆ
ಎ) ಜಾನ್ ಬರ್ದಿನ್,  ಬಿ) ಮೇರಿ ಕ್ಯೂರಿ,  ಸಿ) ಲೈನಸ್ ಪಾಲಿಂಗ್,  ಡಿ) ಫ್ರಡ್ರಿಕ್ ಸ್ಯಾಂಗರ್

ಭೂಮಿಯ ಗಟ್ಟಿಕವಚವು ಆಕ್ಸೈಡುಗಳ ರೂಪದಲ್ಲಿ ಸವೃದ್ಧವಾದ ಆಮ್ಲಜನಕವನ್ನು ಹೊಂದಿದೆ ಇವುಗಳಲ್ಲಿ ಅತಿಹೆಚ್ಚು ಪ್ರಮಾಣದ ಆಕ್ಸೈಡು ಯಾವುದು
ಎ) ಸಿಲಿಕಾನ್ ಡೈ ಆಕ್ಸೈಡ್,  ಬಿ) ಅಲ್ಯುಮಿನಿಯಂ ಆಕ್ಸೈಡ್,  ಸಿ) ಕ್ಯಾಲ್ಶಿಯಂ ಆಕ್ಸೈಡ್,  ಡಿ) ಮೆಗ್ನೀಶಿಯಂ ಆಕ್ಸೈಡ್

ಪ್ರತಿ ಘಟಕ ವೆಚ್ಛಕ್ಕೆ ಕಂಪ್ಯೂಟಿಂಗ್ ನಿರ್ವಹಣೆಯು ಪ್ರತಿ ಇಪ್ಪತ್ನಾಲ್ಕು ತಿಂಗಲುಗಳಿಗೆ ಇಮ್ಮಡಿಯಾಗುತ್ತದೆ.  ಈ ಹೇಳಿಕೆಯು ಯಾವ ನಿಯಮಕ್ಕೆ ಸಂಬಂಧಿಸಿದೆ
ಎ) ಮೂಯರ್ ನಿಯಮ,  ಬಿ) ಮೂರ್ ನಿಯಮ,  ಸಿ) ಮರ್ಫಿಯ ನಿಯಮ ,  ಡಿ) ಶಾನನ್ ನಿಯಮ

ಸಿಲಿಂಡ್ರಿಕಲ್ ಮಸೂರಗಳನ್ನು ಕೆಳಕಂಡ ಸೋಷದ ಸರಿಪಡಿಕೆಗಾಗಿ ಬಳಸಲಾಗುತ್ತದೆ
ಎ) ಸಮೀಪ ದೃಷ್ಟಿ,  ಬಿ) ಅತಿ ದೂರ ದೃಷ್ಟಿಯ ರೋಗ,  ಸಿ) ಅಸಮ ದೃಷ್ಟಿ,  ಡಿ) ಕೋಮಾ

ಈ ಕೆಳಗೆ ಕೊಟ್ಟಿರುವ ಪಟ್ಟಿಯಿಂದ ಅಶೋಕನ ರಾಜಶಾಸನಗಳನ್ನು ಯಾವ ಲಿಪಿಯಲ್ಲಿ ಬರೆಯಲಾಗಿದೆ
1. ಬ್ರಾಹ್ಮಿ,  2. ಖರೋಷ್ಠಿ,  3. ಗ್ರೀಕ್,  4. ಅರಾಮಿಯಿಕ್
ಸರಿಯಾದ ಉತ್ತರ  :  ಎ) 1 & 2,  ಬಿ) 1, 2, & 3,  ಸಿ) 1, 2, & 4,  ಡಿ) 1, 2, 3, & 4

ಯವನಪ್ರಿಯ (ಯವನರಿಗೆ ಪ್ರಿಯವಾದುದು) ಎಂಬ ಬದವನ್ನು ಸಂಸ್ಕೃತದಲ್ಲಿ ಈ ಕೆಳಕಂಡ ವಿಷಯವನ್ನು ವರ್ಣಿಸುವುದಕ್ಕಾಗಿ ಬಳಸಲಾಗಿದೆ
ಎ) ದ್ರಾಕ್ಷಾರಸ,  ಬಿ) ಮೆಣಸು,  ಸಿ) ಶ್ರೀಗಂಧ,  ಡಿ) ಚಿನ್ನ

ಕರ್ನಾಟಕದಲ್ಲಿ ಆಳ್ವಿಕೆಯಲ್ಲಿ ನಡೆಸಿದ ಈ ಕೆಳಕಂಡ ರಾಜವಂಶಗಳನ್ನು ಚಾರಿತ್ರಿಕ ಕಾಲಾನುಕ್ರಮದಲ್ಲಿ ತಿಳಿಸಿ
1. ಸಾತವಾಹನರು,  2. ಬಾದಾಮಿಯ ಚಾಲುಕ್ಯರು,  3. ರಾಷ್ಟ್ರಕೂಟರು,  4. ಕಲ್ಯಾಣದ ಚಾಲುಕ್ಯರು
ಸರಿಯಾದ ಕ್ರಮ : ಎ) 1, 2, 3, & 4,  ಬಿ) 1, 4, 3 & 2,  ಸಿ) 2, 1, 3 & 4,  ಡಿ)  1, 3, 2 & 4

ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು
ಎ) ಶಿವನಸಮುದ್ರಂ,  ಬಿ) ಗಂಗೈಕೊಂಡಚೋಳಪುರಂ,  ಸಿ) ಕಣ್ಣೂರ್-ಕುಪ್ಪಂ,  ಡಿ) ಶ್ರೀರಂಗಪಟ್ಟಣಂ

ಚೋಳರ ಶಾಸನಗಳನ್ನು ಈ ಕೆಳಗಿನ ವಿದ್ವಾಂಸರು ಕಂಪ್ಯೂಟರ್ ಸಹಾಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ
ಎ) ಎಸ್. ಶೆಟ್ಟರ್,  ಬಿ) ಐ ಮಹದೇವನ್,  ಸಿ) ವೈ ಸುಬ್ಬರಾಯಲು,  ಡಿ) ಬಿ.ಆರ್.ಗೋಪಾಲ್

ಋಗ್ವೇದದಲ್ಲಿರುವ ಪುರುಷಸೂಕ್ತದಲ್ಲಿ ಏನಿದೆ
ಎ) ಪುರಷ ಪ್ರಧಾನ್ಯತೆಯ ಒಂದು ಪ್ರನಾಳಿಕೆ,  ಬಿ) ಗಂಡು ಮಗುವಿನ ಜನನಕ್ಕಾಗಿ ಒಂದು ಪ್ರಾರ್ಥನೆ,  ಸಿ) ಪುರುಷತ್ವ ಸಂಕ್ರಮಣಕ್ಕೆ ಸಂಬಂಧಿಸಿದ ಮತ ಸಂಸ್ಕಾರಗಳ ವಿವರಗಳು,  ಡಿ) ನಾಲ್ಕು ವರ್ಣಗಳ ಮೊತ್ತ ಮೊದಲ ಉಲ್ಲೇಖ

ಪ್ರತಿಪಾದನೆ (A) ಯನ್ನು ಕಾರಣ (R) ವಿವರಿಸ ಬೇಕಾಗಿದೆ.  ಇವುಗಳ ಬಗೆಗಿನ ಯಾವ ವಿವರಣೆ ಸರಿಯಾಗಿದೆ ಎಂಬುದನ್ನು ತಿಳಿಸಿ
ಪ್ರತಿಪಾದನೆ (A) ವಿಜಯನಗರವನ್ನು ಆಳಿದ ಒಂದ ಸಂಗಮ ವಂಶವು ಪ್ರಮುಖ ರಾಜವಂಶ. ಕಾರಣ (R) ಇವರು ಸಂಗಮ ಸಾಹಿತ್ಯದ ಪೋಷಕರಾಗಿದ್ದರು 
ಎ) A & R ಎರಡೂ ಸರಿ ಮತ್ತು A ಯ ಕಾರಣದಿಂದ R ಯಿದೆ,  ಬಿ) A & R ಎರಡೂ ಸರಿ ಆದರೆ A ಯ ಕಾರಣದಿಂದ R ಇಲ್ಲ,  ಸಿ)  A ಸರಿ R ತಪ್ಪು,  ಡಿ) A & R ಎರಡೂ ತಪ್ಪು

ಉತ್ತರ ಭಾರತದ ಮೇಲೆ ಘೋರಿ ಸಾಧಿಸಿದ ವಿಜಯವು ಅತ್ಯಂತ ಸುಲಭವಾದ ವಿಜಯವಾಗಿತ್ತು ಎಂದು ಹೇಳಿದ ಇತಿಹಾಸ ತಜ್ಞರು
ಎ) ಸ್ಟಾನ್ಲಿ ಲೇನ್-ಪೂಲ್,  ಬಿ) ವುಲ್ಸೆಲೆ ಹೇಗ್,  ಸಿ) ಮಹಮ್ಮದ್ ಹಬೀಬ್,  ಡಿ) ಇರ್ಫಾನ್ ಹಬೀಬ್

ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯಶಿಲಾಯುಗ ವರ್ಣಚಿತ್ರಗಳಿಗೆ ಸಂಬಂಧಿಸಿದೆ
ಎ) ಮಸ್ಕಿ,  ಬಿ) ಬ್ರಹ್ಮಗಿರಿ,  ಸಿ) ಭೀಮ್ ಬೆಟ್ಟ,  ಡಿ) ಟಿ.ನರಸೀಪುರ

ಈ ಕೆಳಗೆ ಕೊಟ್ಟಿರುವ  ಕ್ರಿ.ಪೂ. 6ನೇ ಶತಮಾನದ ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳಲ್ಲಿ ಯವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ
ಎ) ಕಾಶಿ - ವಾರಣಾಸಿ,  ಬಿ) ಮಗಧ - ರಾಜಗೃಹ,  ಸಿ) ಅಂಗ - ಚಂಪ,  ಡಿ) ಅವಂತಿ - ವೈಶಾಲಿ

ಪ್ರಾಚೀನ ಭಾರತದ ಯಾವ ಅರಸನು ಗ್ರೀಕರಿಗೆ ಅಮಿತ್ರೋಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ
ಎ) ಅಶೋಕ,  ಬಿ) ಬಿಂದುಸಾರ,  ಸಿ) ಅಜಾತ ಶತ್ರು,  ಡಿ) ಚಂದ್ರಗುಪ್ತ ಮೌರ್ಯ

ಸುಲ್ತಾನರ ಅಧಿಪತ್ಯದ ಕಾಲದಲ್ಲಿದ್ದ ಗುಲಾಮಿ ಪದ್ದತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ ಎಂಬುದನ್ನು ಆಯ್ಕೆಮಾಡಿ
ಎ) ಫಿರೋಜ್ ತುಘಲಕ್ನಿಗೆ 180000 ಗುಲಾಮರಿದ್ದರು ಎಮದು ಹೇಳಲಾಗುತ್ತದೆ,  ಬಿ) ಬರಾನಿಯು ದೆಹಲಿಯಲ್ಲಿದ್ದ ಬಹುದೊಡ್ಡ ಗುಲಾಮ ಮಾರುಕಟ್ಟಯ ಬಗ್ಗೆ ವರ್ಣಿಸುತ್ತಾನೆ.  ಸಿ) ದಿವಾನ್-ಇ-ಬಂದಗಾನ್, ಎನ್ನುವುದು ಗುಲಾಮರಿಗಾಗಿಹೇ ಇದ್ದ ಒಂದು ಪ್ರತ್ಯೇಕ ಇಲಾಖೆಯಾಗಿತ್ತು,  ಡಿ) ಅಲ್ಲಾಉದ್ದೀನ್ ಖಿಲ್ಜಿಯು ಗುಲಾಮಿಪದ್ಧತಿಯನ್ನು ರದ್ದುಮಾಡಿದ


ತಾಳಗುಂದದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ ಎಂದು ಕರೆಯಲಾಗಿದೆ
ಎ) ಮೌರ್ಯ ಶರ್ಮ,  ಬಿ) ಕಾಕುಸ್ಥ ವರ್ಮ,  ಸಿ) ಶಾಂತಿ ವರ್ಮ,  ಡಿ) ಮೃಗೇಶ ವರ್ಮ

ಶ್ರವಣ ಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಸಂಬಂದಿಸಿದಂತೆ ಯಾವ ವಿವರಣೆ ತಪ್ಪಾಗಿದೆ
ಎ) ಈ ವಿಗ್ರಹವು ಕಮಲದ ಮೇಲೆ ನಿಂತಿದೆ,  ಬಿ) ಇದನ್ನು ಕ್ರಿ.ಶ. 982-83 ರಲ್ಲಿ ಸ್ಥಾಪಿಸಲಾಯಿತು,  ಸಿ) ಇದನ್ನು ಜಿನದೇವನು ಸ್ಥಾಪಿಸಿದನು,  ಡಿ) ಈ ಏಕಶಿಲಾವಿಗ್ರಹದ ಅನಂತರದ ಮತ್ತು ಚಿಕ್ಕದಾದ ಅನುಕರಣಗಳು ಕಾರ್ಕಳ, ವೇಣೂರು, ಧರ್ಮಸ್ಥಳದಲ್ಲಿವೆ

ಗದ್ಯ ಕಾರ್ಣಾಮೃತ ಎನ್ನಯವುದು ಈ ಕೆಳಕಂಡ ಅಧ್ಯಯನಕ್ಕೆ ಬಹುಮುಖ್ಯವಾದ ಆಕರ ಸಾಮಗ್ರಿಯಾಗಿದೆ
ಎ) ತರುವಾಯ ವರ್ಷಗಳಲ್ಲಿ ಹೊಯ್ಸಳ-ಪಾಂಡ್ಯ ಸಂಬಂಧಗಳು,  ಬಿ) ಆರಂಭಕಾಲದಲ್ಲಿ ಚೋಳ-ಪಲ್ಲವ ಸಂಬಂಧಗಳು,  ಸಿ) ಚಾಲುಕ್ಯ - ರಾಷ್ಟ್ರಕೂಟ ಸಂಬಂಧಗಳು,  ಡಿ) ಮೇಲಿನ ಯಾವುದು ಅಲ್ಲ

ಸುಲ್ತಾನಾ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು
ಎ) ತುಘಲಕ್,  ಬಿ) ಗುಲಾಮಿ,  ಸಿ) ಖಿಲ್ಜಿ,  ಡಿ) ಲೋದಿ

ಜಹಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜಮನೆತನದ ರಾಯಭಾರಿಯ ಹೆಸರು
ಎ) ಥಾಮಸ್ ಮನ್ರೋ,  ಬಿ) ಬೆಂಜಮಿನ್ ರೈಸ್,  ಸಿ) ಥಾಮಸ್ ರೋ,  ಡಿ) ಈ ಮೇಲಿನ ಯಾರು ಅಲ್ಲ

ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ

A

ದಾದಾಭಾಯ್ ನವರೋಜಿ

1

ಹಿಂದ್ ಸ್ವರಾಜ್

B

ಬಾಲ್ ಗಂಗಾಧರ ತಿಲಕ್

2

ಗಾಂಧಿ ಅಂಡ್ ಅನಾರ್ಕಿ

C

ಸರ್.ಸಿ.ಶಂಕರನಾಯರ್

3  

ಗೀತ-ರಹಸ್ಯ

D

ಎಂ.ಕೆ.ಗಾಂಧಿ

4

ಪಾವರ್ಟಿ & ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ
ಸಂಕೇತಗಳು

A

B

C

D

1

3

1

4

2

2.


4


3


2


1

3.

1

2

3

4

4.

4

3

1

2

ಈ ಕೆಳಗಿನ ಯಾವ ಎ.ಐ.ಸಿ.ಸಿ ಅಧಿವೇಶನದಲ್ಲಿ ಜವಹರಲಾಲ್ ನೆಹರು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಮೋತೀಲಾಲ್ ನೆಹರು ಅವರ ತರುವಾಯದ ಅಧ್ಯಕ್ಷರಾಗಿ ಆಯ್ಕೆಯಾದರು
ಎ) ಲಾಹೋರ್,  ಬಿ) ಅಮೃತಸರ್,  ಸಿ) ಪಾಟಿಯಾಲ,  ಡಿ) ತ್ರಿಪುರ

ಈ ಕೆಳಕಂಡವುಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ
1. ಜಲಿಯನ್ ವಾಲಾಬಾಗ್ ಹತ್ಯಾಕಾಂಡ,  2. ಮಲಬಾರ್ ಪ್ರತಿಭಟನೆ,  3. ಕೊಮಗಟ ಮರು ಘಟನೆ,  4. ಆರ್.ಎನ್.ಐ.ದಂಗೆ
ಎ) 3, 1, 2, & 4,  ಬಿ) 4, 3, 2 & 1,  ಸಿ) 1, 3, 2 & 4,  ಡಿ) 4, 2, 3 & 1

ಭಾರತದ ಏಕೀಕರಣ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು
ಎ) ವಿ.ಪಿ.ಮೆನನ್,  ಬಿ) ಕೆ.ಪಿ.ಎಸ್.ಮೆನನ್,  ಸಿ) ಸರ್.ಸಿ.ಶಂಕರನ್ ನಾಯರ್.  ಡಿ) ಎಂ.ಓ.ಮಥಾಯಿ,

ಜವಹರಲಾಲ್ ನೆಹರು ಅವರು ನ್ಯಾಯವಾದಿಯ ಕೋಟನ್ನು ಕೊನೆಯ ಬಾರಿಗೆ ಧರಿಸಿದ್ದು  ಯಾವ ಸಂದರ್ಭದಲ್ಲಿ
ಎ) ಮಹಾತ್ಮ ಗಾಂಧಿಯವರ ವಿಚಾರಣೆ,  ಬಿ) ಆರ್.ಐ.ಎನ್. ದಂಗೆಕೋರರ ವಿಚಾರಣೆ,  ಸಿ) ಐ.ಎನ್.ಎ. ಬಂದಿಗಳ ವಿಚಾರಣೆ,  ಡಿ) ಭಗತ್ ಸಿಂಗ್ ಪ್ರಕರಣದ ಪ್ರೀವಿ ಕೌನ್ಸಿಲ್ ಹಿಯರಿಂಗ್

ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878ರಲ್ಲಿ ಜಾರಿಗೊಳಿಸಿದವರು
ಎ) ಲಾರ್ಡ್ ರಿಪ್ಪನ್ನ್,  ಬಿ) ಲಾರ್ಡ್ ಲಿಟ್ಟನ್,  ಸಿ) ಲಾರ್ಡ್ ಕರ್ಜನ್,  ಡಿ) ಮೇಲಿನ ಯಾರು ಅಲ್ಲ

ಈ ಕೆಳಗಿನ ಸೌಮ್ಯವಾದಿಯನ್ನು high priest of Drain Theory ಎಂದು ಪರಿಗಣಿಸಲಾಗಿದೆ
ಎ) ದಿನ್ ಶಾ ವಚ್ಚಾ,  ಬಿ) ಆರ್.ಪಿ.ದತ್,  ಸಿ) ಗೋಪಾಲ ಕೃಷ್ಣ ಗೋಖಲೆ,  ಡಿ) ದಾದಾಬಾಯ್ ನವರೋಜಿ

ಭಾರತದಲ್ಲಿ ಹೋಂರೂಲ್ ಚಳುವಳಿ ಇಳಿಮುಖವಾಗುವುದಕ್ಕೆ ಈ ಕೆಳಗಿನ ಯಾವುದು ಅತಿಮುಖ್ಯ ಕಾರಣವಾಯಿತು
ಎ) ಮಾಂಟೆಗ್ಯು-ಚೆಲ್ಮ್ಸ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು,  ಬಿ) ಆನಿ ಬೆಸೆಂಟ್ ಅವರ ಬಂಧನ,  ಸಿ) ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೊಂದಾಯಿಸಿಕೊಂಡಿದ್ದು,  ಡಿ) ಲೋಕಮಾನ್ಯ ತಿಲಕರಿಂದ ಹೋಂರೂಲ್ ಚಳುವಳಿಯ ಸ್ಥಾಪನೆ

ಗಾಂಧಿಯವರಿಗೆ ಕೈಸರ್-ಇ-ಹಿಂದ್ ಪ್ರಶಸ್ತಿಯ ಗೌರವವನ್ನು ಬ್ರಿಟೀಷರು ನೀಡಿದ್ದೇಕೆ

ಎ) ಅವರು ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ನೆಡೆಸಿದಕ್ಕೆ,  ಬಿ) ಬ್ರಿಟೀಷರ ಕೋರಿಕೆಯ ಮೇರೆಗೆ ಅವರು ದಕ್ಷಿಣ ಆಫ್ರಿಕಾವನ್ನು ಬಿಟ್ಟು ಬಂದಿದ್ದಕ್ಕೆ,  ಸಿ) ಮೊದಲ ಮಹಾಯುದ್ಧದಲ್ಲಿ ಗಾಂಧಿಯವರು ಬ್ರಿಟೀಷರಿಗೆ ಸಹಾಯ ಮಾಡಿದಕ್ಕೆ,  ಡಿ) ಅಸಹಕಾರ ಚಳುವಳಿಯನ್ನು ನಿಲ್ಲಿಸಿದಕ್ಕೆ


ಪ್ರಸಿದ್ಧವಾದ ದಂಡಿಯಾತ್ರೆಗೆ ಸಬರಮತಿ ಆಶ್ರಮದ ಎಷ್ಟು ಮಂದಿಯನ್ನು ಗಾಂಧಿಯವರು ಸೇರಿಸಿಕೊಂಡರು
ಎ) 72,  ಬಿ) 200,  ಸಿ) 78,  ಡಿ) 220

ಡೋಲ್ ಡ್ರಮ್ಸ್ ಎಂದರೇನು
ಎ) ವಾಣಿಜ್ಯ ಮಾರುತಗಳ ವಲಯ,  ಬಿ) ಅತ್ಯಧಿಕ ಆರ್ದ್ರತೆಯ ವಲಯ,  ಸಿ) ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ,  ಡಿ) ದ್ರುವೀಯ ಕಡಿಮೆ ಒತ್ತಡದ ಪ್ರದೇಶ

ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ
ಎ) ಜಮ್ಮೂ ಕಾಶ್ಮೀರ,  ಬಿ) ಹಿಮಾಚಲ ಪ್ರದೇಶ,  ಸಿ) ಉತ್ತರಾಂಚಲ,  ಡಿ) ಪಂಜಾಬ್

ಲಡಾಂಗ್ ಎನ್ನುವುದು
ಎ) ಇಂಡೊನೇಷಿಯಾದಲ್ಲಿ ಕಂಡುಬರುವ ಒಂದು ಬುಡಕಟ್ಟು,  ಬಿ) ಮಲೇಶಿಯಾದಲ್ಲಿ ಕಂಡುಬರುವ ಒಂದು ಬುಡಕಟ್ಟು,  ಸಿ) ಮಲೇಶಿಯಾದ ಕದಲು ಬೇಸಾಯ,  ಡಿ) ಇಂಡೋನೇಷಿಯಾದ ಕದಲು ಬೇಸಾಯ

ಮಾವುನಾ ಲೋಯಾ ಎಂಬುದು
ಎ) ಜೀವಂತ ಜ್ವಾಲಾಮುಖಿಗೆ ಉದಾಹರಣೆ,  ಬಿ) ಸುಪ್ತ ಜ್ವಾಲಾಮುಖಿಗೆ ಉದಾಹರಣೆ,  ಸಿ) ಅವಸಾನ ಜ್ವಾಲಾಮುಖಿಗೆ ಉದಾಹರಣೆ,  ಡಿ) ಒಂದು ಜ್ವಾಲಾಮುಖಿಯ ಪ್ರದೇಶದಲ್ಲಿರುವ ಪೀರಭೂಮಿ (Pleateau) ಗೆ ಉದಾಹರಣೆ

ಗಾಬ್ರೋ ಎನ್ನುವುದು
ಎ) ಅಗ್ನಿಶಿಲೆಗೆ ಉದಾಹರಣೆ,  ಬಿ) ಜಲಜ ಶಿಲೆಗಳಿಗೆ ಉದಾಹರಣೆ,  ಸಿ) ರೂಪಾಂತರಿ ಶಿಲೆಗಳಿಗೆ ಉದಾಹರಣೆ,  ಡಿ) ಇದ್ಯಾವುದು ಅಲ್ಲ

ಈ ಕೆಳಗಿನ ಯಾವುದು ಶೀತ ಪ್ರವಾಹ
ಎ) ಗಲ್ಫ್ ಸ್ಟ್ರೀಮ್,.  ಬಿ) ಅಗಲ್ಹಾಸ್ ಪ್ರವಾಹ,  ಸಿ) ಓಕೋಟ್ಸ್ಕ್ ಪ್ರವಾಹ,  ಡಿ) ಕುರೋಶಿಯೋ ಪ್ರವಾಹ

ಅವಸಾನ ಗೊಂಡಿರುವ ಅಥವಾ ಸುಪ್ತಾವಸ್ಥೆಯಲ್ಲಿರುವ ಅತಿ ದೊಡ್ಡ ಜ್ವಾಲಾಮುಖಿಯಾವುದು
ಎ) ಕಿಲಿಮಾಂಜಿರೊ,  ಬಿ) ಕೊಟೊಪಾಕ್ಸಿ,  ಸಿ) ಫ್ಯೂಜಿಯಾಮಾ,  ಡಿ) ಆಕೋಂಕಾಗುವಾ

ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ
1. ಸ್ಟ್ರಾಟೋಸ್ಫಿಯರ್,  2. ಟ್ರೋಪೋಸ್ಫಿಯರ್,  3. ಅಯಾನೊಸ್ಫಿಯರ್,  4. ಮಿಸೋಸ್ಫಿಯರ್
ಎ) 1, 2, 3, 4   ಬಿ) 2, 1, 3, 4  ಸಿ) 3, 1,  4, 2  ಡಿ) 2, 1, 4, 3,

ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ
ಎ) ಹಸಿರುಮನೆ ಪರಿಣಾಮ,  ಬಿ) ಭೂಪ್ರದೇಶದ ವಿಕಿರಣ,  ಸಿ) ಇನ್ಸೋಲೇಷನ್ (ಅತಪನ) ಡಿ) ಅಲ್ಟ್ರಾವಾಯ್ಲೆಟ್ ಕಿರಣಗಳು

ಈ ಕೆಳಗಿನ ಯಾವ ದೇಶಗಳು ಕಡಲುಗಳ್ಳತನದ ಗಲಭೆಯಲ್ಲಿ ಸೇರಿಕೊಂಡಿದೆ ಎಂಬ ಆರೋಪಕ್ಕೊಳಗಾಗಿವೆ
ಎ) ನೈಜೀರಿಯಾ,  ಬಿ) ಇಥಿಯೋಪಿಯಾ  ಸಿ) ಸೊಮಲಿಯಾ,  ಡಿ) ಸೂಡಾನ್

ಅಂತರರಾಜ್ಯ ನದಿ ನೀರಿನ ವಿವಾದದಲ್ಲಿ ಸೆರಿಕೊಂಡಿರುವ ನದಿ ತೀರದ  ಯಜಮಾನ ರಾಜ್ಯಗಳು ಯಾವುವು
ಎ) ರಾಜಸ್ಥಾನ & ಹಿಮಾಚಲ ಪ್ರದೇಶ,  ಬಿ) ಉತ್ತರ ಪ್ರದೇಶ & ಪಶ್ಚಿಮ ಬಂಗಾಳ,  ಸಿ) ಆಂದ್ರಪ್ರದೇಶ & ಕರ್ನಾಟಕ,  ಡಿ) ಮಧ್ಯಪ್ರದೇಶ & ಜಾರ್ಖಂಡ್

ಈ ಕೆಳಗಿನ ವಿವರಣೆಯನ್ನು ಗಮನಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆಮಾಡಿ
1. ಎಲ್ಲ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು,  2. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು,  3. ಯಾವ ಜಲಜ ಶಿಲೆಗಳು ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ,  4. ಎಲ್ಲ ಅಗ್ನಿಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
ಎ) 1 ಮಾತ್ರ ಸರಿ,  ಬಿ) 2 ಮಾತ್ರ ಸರಿ,  ಸಿ) 3 & 4 ಮಾತ್ರ ಸರಿ,  ಡಿ) 3 ಮಾತ್ರ ಸರಿ

ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಾಗೊಳ್ಳುತ್ತದೆ ಕಾರಣವೇನು
ಎ) ಭೂಮಿಯ ಪರಿಭ್ರಮಣ,  ಬಿ) ಭೂಮಿಯ ಅಕ್ಷದ ಬಾಗುವಿಕೆ,  ಸಿ) ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ,  ಡಿ) ಚಂದ್ರನ ಗುರುತ್ವಾಕರ್ಷಣ ಬಲ 

ಅಧಿಕ ಉಬ್ಬರವಿಳಿತವು
ಎ) ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ,  ಬಿ) ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ,  ಸಿ) ಪ್ರತಿ 6 ಗಂಟೆ ಗಳಿಗೊಮ್ಮೆ ಉಂಟಾಗುತ್ತದೆ,  ಡಿ) ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ

ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ
ಎ) ಅಮೇರಿಕಾ ಸಂವಿಧಾನ,  ಬಿ) ಬ್ರಿಟೀಷ್ ಸಂವಿಧಾನ,  ಸಿ) ಐರಿಶ್ ಸಂವಿಧಾನ,  ಡಿ) ಫ್ರೆಂಚ್ ಸಂವಿಧಾನ

ಕೊಡಗು ಭಾರತದ ಸಿ ಭಾಗದ ರಾಜ್ಯವಾಗಿದ್ದಾಗ 1952-1956ರ ವರೆಗೆ ಕೊಡಗು ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು
ಎ) ಕೆ.ಮಲ್ಲಪ್ಪ,  ಬಿ) ಬಿ.ಎಸ್.ಕುಶಾಲಪ್ಪ,  ಸಿ) ಸಿ.ಎಂ.ಪೂಣಚ್ಚ,  ಡಿ) ದಯಾ ಸಿಂಗ್ ಬೇಡಿ

ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲ ಬಾರಿಗೆ ಮೈಸೂರು ರಾಜ್ಯದಲ್ಲಿ(ಕರ್ನಾಟಕ) ವಿಧಿಸಿದ ವರ್ಷ ಯಾವುದು
ಎ) 1969,  ಬಿ)1970,  ಸಿ)1971,  ಡಿ)1973

ಈ ಕೆಳಗಿನ ಯಾವ ರಾಜ್ಯಗಳ ಗುಂಪಿನಲ್ಲಿ ಎರಡು ಸದನಗಳ ದ್ವಿಸದನ ಶಾಸನ ಸಭೆಯಿದೆ
ಎ) ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ,  ಬಿ) ಮಹಾರಾಷ್ಟ್ರ, ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ, ಉತ್ತರಪ್ರದೇಶ, ಆಂದ್ರಪ್ರದೇಶ,  ಸಿ) ಅರುಣಾಚಲಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಕೇರಳ,  ಡಿ) ಅಸ್ಸಾಂ, ಹರಿಯಾಣ, ಮಹಾರಾಷ್ಟ್ರ, ಆಂದ್ರಪ್ರದೇಶ, ಕರ್ನಾಟಕ, ಜಮ್ಮಕಾಶ್ಮೀರ