Monday, May 24, 2010

GK

F.G.Banting - ಇನ್ಸುಲಿನ್ ಕಂಡುಹಿಡಿದರು
Joseph Lister - ಸೆಪ್ಟಿಕ್ ಆಗದಂತೆ ತಡೆಯಲು ಕಾರ್ಬೋಲಿಕ್ ಆಸಿಡ್ ಬಳಕೆ ಕಂಡುಹಿಡಿದರು
Edward Jenner - ಸಿಡುಬಿಗೆ ಲಸಿಕೆ


ಇದರಲ್ಲಿ ಯಾವುದು ಹಕ್ಕಿ ಅಲ್ಲ
ಎ) ಬಾವಲಿ,  ಬಿ) ಎಮು,  ಸಿ) ಕಿವಿ,  ಡಿ) ಉಷ್ಟ್ರಪಕ್ಷಿ

ಪರಿಸರಕ್ಕೆ ಸಂಬಂಧಿಸಿದಂತೆ ರೆಡ್ ಡಾಟಾಬುಕ್ ಎಂದರೇನು
ಎ) ವಿವಿಧ ಪರಿಸರ ಹಾನಿಕಾರಕಗಳು ಪರಿಸರ ಹಾನಿಮಾಸಬಹುದಾದ ವಿವರಗಳ ಪುಸ್ತಕ, ಬಿ) ವಿನಾಶದ ಅಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಪುಸ್ತಕ,  ಸಿ) ನ್ಯೂಕ್ಲಿಯರ್ ಸ್ಥಾವರ ವಿವರಗಳ ಪುಸ್ತಕ,  ಡಿ) ಯಾವುದು ಅಲ್ಲ

ಇವುಗಳಲ್ಲಿ ಯಾವ ಖಾಯಿಲೆಯನ್ನು ಲಸಿಕೆ ಮೂಲಕ ಗುಣಪಡಿಸಬಹುದು
1.ಟೆಟಾನಸ್,  2.ಪೊಲಿಯೋ,  3.ಲೆಪ್ರೋಸಿ,  4.ಸಿಡುಬು
ಎ) 1&3,  ಬಿ)2&4,  ಸಿ) 1,2,&4,  ಡಿ) 1,2,3,&4

ಇದರಲ್ಲಿ ಮಾನವನ ಯಾವ ಗ್ರಂಥಿ ಅಯೋಡಿನ್ ಶೇಖರಿಸಲ್ಪಡುತ್ತದೆ
ಎ) ಪ್ಯಾರಾ ಥೈರಾಯ್ಡ್,  ಬಿ) ಥೈರಾಯ್ಡ್,  ಸಿ) ಪಿಟ್ಯುಟರಿ,  ಡಿ) ಅಡ್ರಿನಾಲ್

ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ವಿಟಮಿನ್ ಯಾವುದು
ಎ) ವಿಟಮಿನ್A,  ಬಿ) ವಿಟಮಿನ್B,  ಸಿ) ವಿಟಮಿನ್C, ಡಿ) ವಿಟಮಿನ್K

ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು
ಎ) ವಿಟಮಿನ್ A,  ಬಿ) ವಿಟಮಿನ್ B12,  ಸಿ) ವಿಟಮಿನ್ Cಡಿ) ವಿಟಮಿನ್ D

ಇದರಲ್ಲಿ OPEC ಸದಸ್ಯನಲ್ಲದ ರಾಷ್ಟ್ರ ಯಾವುದು
ಎ) ಅಲ್ಜೀರಿಯಾ,  ಬಿ) ಇಂಡೋನೇಷ್ಯಾ,  ಸಿ) ಮಲೇಷಿಯಾ,  ಡಿ) ನೈಜೀರಿಯಾ

ಭಾರತೀಯ ಸಂವಿಧಾನದ ಯಾವ ಅನುಸೂಚಿಯಲ್ಲಿ ಕೇಂದ್ರ ಮತ್ತು ರಾಜ್ಯಕ್ಕೆ ಅಧಿಕಾರ ಹಂಚಿರುವ 3 ಪಟ್ಟಿಗಳಿವೆ
ಎ) 5ನೇ,  ಬಿ) 6ನೇ,  ಸಿ) 7 ನೇ,  ಡಿ) 8ನೇ

1. ಉಪರಾಷ್ಟ್ರಪತಿಯವರು ರಾಷ್ಟ್ರಪತಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಜೊತೆಯಾಗಿಯೇ ರಾಷ್ಟ್ರಪತಿ ಮತ್ತು ರಾಜ್ಯಸಭಾಧ್ಯಕ್ಷರ ಕಾರ್ಯಗಳನ್ನು ಮಾಡಬಹುದು
2. ಎರಡೂ ಸದನಗಳ ಕಲಾಪಗಳನ್ನು ಹೊರತು ಪಡಿಸಿ ರಾಷ್ಟ್ರಾಧ್ಯಕ್ಷರು ಯಾವಾಗ ಬೇಕಾದರು ಸುಗ್ರೀವಾಜ್ಙೆ ಹೊರಡಿಸಬಹುದು
ಇವುಗಳಲ್ಲಿ ಯಾವುದು ಸರಿ
ಎ) ಒಂದು ಮಾತ್ರ,  ಬಿ) 2 ಮಾತ್ರ,  ಸಿ) 1 & 2,  ಡಿ) 1&2 ಎರಡೂ ಅಲ್ಲ

2010ರ ಏಷ್ಯನ್ ಗೇಮ್ಸ್ ನೆಡೆಯುವುದೆಲ್ಲಿ
ಎ) ಬೀಜಿಂಗ್,  ಬಿ) ಟೋಕಿಯೋ,  ಸಿ) ಶಾಂಗೈ,  ಡಿ) ದೆಹಲಿ

ಚಿಕೂನ್ ಗುನ್ಯ ಖಾಯಿಲೆಗೆ ಕಾರಣ ಯಾವುದು
ಎ) ಬ್ಯಾಕ್ಟೀರಿಯಾ,  ಬಿ) ಪ್ರೋಟೊಜೋವಾ,  ಸಿ) ವೈರೆಸ್,  ಡಿ) ಕೋಳಿ

ಹೋಂ ರೂಲ್ ಚಳುವಳಿಯನ್ನು ಆನಿಬೆಸೆಂಟ್ ಪ್ರಾರಂಭಿಸಿದ ನಂತರ ಅವರ ಅನುವರ್ತಿಯಾಗಿ ಮತ್ತೊಂದು ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದವರು
ಎ) ಅರವಿಂದೋ ಘೋಷ್,  ಬಿ) ಬಾಲಗಂಗಾಧರ ತಿಲಕ್,  ಸಿ) ಬಿಪಿನ್ ಚಂದ್ರಪಾಲ್,  ಡಿ) ಲಾಲಾ ಲಜಪತ ರಾಯ್

ವಾಟರ್ ಗ್ಯಾಸ್ ಇದನ್ನು ಹೊಂದಿದೆ
ಎ) ಕಾರ್ಬನ್ ಡೈ ಆಕ್ಸೈಡ್ & ಹೈಡ್ರೋಜನ್,  ಬಿ) ಕಾರ್ಬನ್ ಮೊನಾಕ್ಸೈಡ್ & ಹೈಡ್ರೋಜನ್,  ಸಿ) ಕಾರ್ಬನ್ ಮೋನಾಕ್ಸೈಡ್ & ಮೀಥೇನ್,  ಡಿ) ಕಾರ್ಬನ್ ಡೈ ಆಕ್ಸೈಡ್ & ಮೀಥೇನ್

ಸಿಗ್ಮೋಮೋನೋಮೀಟರ್ ಇದನ್ನು ಯಾವುದರ ಅಳತೆಮಾಡಲು ಉಪಯೋಗಿಸುವರು
ಎ) ರಕ್ತದೊತ್ತಡ,  ಬಿ) ದ್ರವಗಳ ಹರಿಯುವಿಕೆ,  ಸಿ) ಉಷ್ನಾಂಶ,  ಡಿ) ಘನವಸ್ತುವಿನ ಕೋನಗಳು

ಹದಮಾಡಿದ ಹಿಟ್ಟಿಗೆ ಬೇಕಿಂಗ್ ಸೋಡ ಹಾಕಲು ಕಾರಣ
ಎ) ಹಿಟ್ಟಿನಲ್ಲಿ ತೇವ ಬಿಡುಗಡೆ ಗೊಳಿಸಲು,  ಬಿ) ಒಳ್ಳೆಯ ಸುವಾಸನೆಗಾಗಿ,  ಸಿ) ಒಳ್ಳೆಯ ಬಣ್ಣ ನೀಡುವುದಕ್ಕಾಗಿ,  ಡಿ) 
ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪತ್ತಿಮಾಡಲು

ಆಪ್ಟಿಕಲ್ ಫೈಬರ್ ಈ ಕೆಳಕಂಡ ಯಾವುದರ ಮುಖಾಂತರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಎ) ಪ್ರತಿಫಲನ,  ಬಿ) ಚದುರುವಿಕೆ,  ಸಿ) ಹೀರುವಿಕೆ,  ಡಿ) ಒಟ್ಟಾದ ಆಂತರಿಕ ಪ್ರತಿಫಲನ

O ರಕ್ತದ ಗುಂಪಿನ ಮಗುವಿನ ತಾಯಿಯ ರಕ್ತದ ಗುಂಪು O ಆದರೆ ಆ ಮಗುವಿನ ತಂದೆಯ ರಕ್ತದ ಗುಂಪು ಯಾವುದು
ಎ) O ಮಾತ್ರ,  ಬಿ) A or B or O,  ಸಿ) A or Bಡಿ) AB ಮಾತ್ರ

ಕಾಂಬೋಡಿಯಾ ರಾಷ್ಟ್ರದ ರಾಜಧಾನಿ ಯಾವುದು
ಎ) ಹೊ.ಚಿ.ಮಿಂಚ್ ಸಿಟಿ,  ಬಿ) ಹನೋಯ್,  ಸಿ) ಸೆಮರಾಂಗ್,  ಡಿ) ಫ್ನೋಂ ಪೆನ್ಹ್ (Phnom Penh)

ಇತ್ತೀಚಿನ ವರದಿಯ ಪ್ರಕಾರ ಭಾರತದ ಪುರುಷರ ಅಂದಾಜಿನ ಜೀವಿತಾವಧಿ
ಎ) 56 ವರ್ಷ,  ಬಿ) 58 ವರ್ಷ,  ಸಿ) 64 ವರ್ಷ,  ಡಿ) 68 ವರ್ಷ

ಭಾರತೀಯ ವಿದ್ಯಾಭವನವನ್ನು ಸ್ಥಾಪಿಸಿದ ಸ್ವತಂತ್ರ ಯೋಧ ಯಾರು
ಎ) ಮದನ ಮೋಹನ ಮಾಳವೀಯ,  ಬಿ) ನರೇಂದ್ರ ದೇವ,  ಸಿ) ಕೆ.ಎಂ.ಮುನ್ಕ್ಷಿ,  ಡಿ) ಜೆ.ಬಿ.ಕೃಪಲಾನಿ

1939ರ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸುಭಾಷ್ ಚಂದ್ರಭೋಸ್ ವಿರುಧ್ಧ ಸ್ಪರ್ಧಿಸಲು ಮಹಾತ್ಮಗಾಂಧಿಯವರು ಯಾರನ್ನು ಆರಿಸಿದರು
ಎ) ಜವಾಹರ್ ಲಾಲ್ ನೆಹರು,  ಬಿ) ಪಟ್ಟಾಭಿ ಸೀತಾರಾಮಯ್ಯ,  ಸಿ) ಗೋವಿಂದ ವಲ್ಲಭ ಪಂತ್,  ಡಿ) ಸರ್ದಾರ್ ಪಟೇಲ್

ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿಯಾಗಿ ಕ್ಯಾಪ್ಟನ್ ಹಾಕಿನ್ಸನು ಯಾರ ಆಸ್ಥಾನಕ್ಕೆ ಬಂದಿದ್ದನು
ಎ) ಅಕ್ಬರ್,  ಬಿ) ಜಹಂಗೀರ್,  ಸಿ) ಶಹಜಹಾನ್,  ಡಿ) ಔರಂಗಜೇಬ್

ಇದರಲ್ಲಿ ಯಾವುದು ಸಮುದ್ರಗುಪ್ತನ ಸಾಧನೆಯನ್ನು ಉಲ್ಲೇಖಿಸಿದೆ
ಎ) ಅಲಹಾಬಾದ್ ಸ್ಥಂಭ ಶಾಸನ,  ಬಿ) ಜುನಾಗಡ್ ಶಾಸನ,  ಸಿ) ಮೆಹ್ರೋಲಿ ಕಬ್ಬಿಣದ ಸ್ಥಂಭಶಾಸನ,  ಡಿ) ಹಾಥಿಗುಂಪ ಶಾಸನ

1946 ರ ಮಧ್ಯಂತರ ಸರ್ಕಾರ ರಚಿಸಲು ಲಾರ್ಡ್ ವೇವೆಲ್ಲನು  ಯಾರನ್ನು ಆಮಂತ್ರಿಸಿದನು
ಎ) ಸಿ.ರಾಜಗೋಪಾಲ ಚಾರಿ,  ಬಿ) ಸರ್ದಾರ್ ಪಟೇಲ್,  ಸಿ) ನೆಹರು,  ಡಿ) ರಾಜೆಂದ್ರಪ್ರಸಾದ್

ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಅನ್ನು ಯಾವ ವೈಸ್ರಾಯ್ ಕಾಲದಲ್ಲಿ ತೆಗೆದುಹಾಕಲ್ಪಟ್ಟಿತು
ಎ) ಬೆಂಟಿಕ್,  ಬಿ) ಕ್ಯಾನಿಂಗ್,  ಸಿ) ರಿಪ್ಪನ್,  ಡಿ) ಡರ್ಫಿನ್

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಈ ಕೆಳಕಂಡವರಲ್ಲಿ ಯಾರು ಸೌಮ್ಯವಾದಿ(moderate)ಗಳಾಗಿದ್ದರು
ಎ) ಬಾಲಗಂಗಾಧರ ತಿಲಕ್,  ಬಿ) ಬಿಪಿನ್ ಚಂದ್ರಪಾಲ್,  ಸಿ) ಲಾಲಾ ಲಜಪತರಾಯ್,  ಡಿ) ಗೋಪಾಲಕೃಷ್ಣ ಗೋಖಲೆ

ರವಿಂದ್ರನಾಥ ಟ್ಯಾಗೂರರು ತಮ್ಮ ನೈಟ್ಹುಡ್ ಪದವಿಯನ್ನು ಯಾವಕಾರಣಕ್ಕಾಗಿ ಹಿಂತಿರುಗಿಸಿದರು
ಎ) ರಾಜಕೀಯ ನಾಯಕರನ್ನು ಜೈಲಿನಲ್ಲಿಟ್ಟು ದಮನ ಮಾಡುವುದರ ವಿರುದ್ಧ,  ಬಿ) ರೌಲತ್ ಕಾಯ್ದೆ ವಿರುದ್ಧ,  ಸಿ) ಜಲಿಯನ್ ವಾಲಾಬಾಗ್ ಹಿಂಸೆಯ ವಿರುದ್ಧ,  ಡಿ) ಬಂಗಾಳದ ವಿಭಜನೆಯ ವಿರುದ್ಧ

1764ರ ಬಕ್ಸಾರ್ ಕದನಕ್ಕೆ ಸಂಬಂಧಿಸಿದವರು ಯಾರು
ಎ) ಔರಂಗ ಜೇಬ್,  ಬಿ) ಫಾರೂಕ್ ಕೈಸರ್,  ಸಿ) ಮೊಹಮ್ಮದ್ ಷಾ,  ಡಿ) ಷಾ ಆಲಂ II

ಇದರಲ್ಲಿ ಸರಿಯಾದ ಕಾಲಾನುಕ್ರಮಣಿಕೆಯನ್ನು ಬರೆಯಿರಿ
1 ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ವರ್ಗಾವಣೆಯಾದದ್ದು,  2. ಸೂರತ್ ಅಧಿವೇಷಣದಲ್ಲಿ ಕಾಂಗ್ರೆಸ್ ವಿಭಜನೆಯಾದದ್ದು, 
3.ಬಂಗಾಳದ ವಿಭಜನೆ,  4. ಹೋಂ ರೂಲ್ ಪ್ರಾರಂಭ

ಎ) 1-2-4-3,  ಬಿ) 3-2-1-4,  ಸಿ) 1-2-3-4,  ಡಿ) 3-2-4-1

ಇದರಲ್ಲಿ ಇಲ್ಬಿರ್ಟ್ ಬಿಲ್ ಯಾವುದಕ್ಕೆ ಸಂಬಂಧಿಸಿದೆ
ಎ) ಉದ್ಯೋಗದಲ್ಲಿ ವರ್ಣಾಂಧತೆಯನ್ನು ತೊಡೆಯಲು,  ಬಿ) ಭಾರತೀಯ ಜಿಲ್ಲಾ & ಸೆಷೆನ್ಸ್ ಮ್ಯಾಜೆಸ್ಟ್ರೇಟರು ಯೂರೋಪಿಯನ್ನರನ್ನು ವಿಚಾರಣೆ ಮಾಡುವುದು,  ಸಿ) ಬಿಳಿಯರಿಂದ ರೈತರನ್ನು ರಕ್ಷಿಸಲು,  ಡಿ) ಭಾರತೀಯ ನಾಗರೀಕ ಸೇವೆಯನ್ನು ಒದಗಿಸಲು

ಯಾವ ಸಭೆಯಲ್ಲಿ GATT ಇದು WTO ಆಗಿ ಬದಲಾಯಿತು
ಎ) ಸಿಂಗಾಪುರ,  ಬಿ) ಉರುಗ್ವೆ,  ಸಿ) ಟೋಕಿಯೋ,  ಡಿ) ಅಮೇರಿಕಾ

ಭಾರತೀಯ ಸಂವಿಧಾನದ ಪ್ರಕಾರ ಪಕ್ಷಾಂತರದ ಆರೋಪದ ಮೇಲೆ ಯವ ಶೆಡ್ಯೂಲಿನ ಪ್ರಕಾರ ಅವರನ್ನು ಅನರ್ಹ ಗೊಳಿಸಬಹುದು
ಎ) 8ನೇ,  ಬಿ) 9ನೇ,  ಸಿ) 7ನೇ,  ಡಿ) 10ನೇ

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಈ ಕೆಳಕಂಡಂತೆ ಯಾರು
ಎ) ಸಂಸತ್ತಿನ ಸದಸ್ಯ,  ಬಿ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ,  ಸಿ) ಮಾನವ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಮಾಜ ಸೇವಕ,  ಡಿ) ಹೈಕೋರ್ಟ್ ಅಥವ ಸುಪ್ರಿಂ ಕೋರ್ಟ್ ನ್ಯಾಯಾಧೀಷರು

ಭಾರತದಲ್ಲಿ ರಾಜ್ಯ ಹಣಕಾಸು ಆಯೋಗವನ್ನು ಸ್ಥಾಪಿಸುವವರು ಯಾರು
ಎ) ರಾಷ್ಟ್ರಪತಿ,  ಬಿ) ರಾಜ್ಯಪಾಲರು,  ಸಿ) ರಾಷ್ಟ್ರದ ವಿತ್ತಮಂತ್ರಿ,  ಡಿ) ರಾಷ್ಟ್ರೀಯ ಮಂತ್ರಿಮಂಡಲ

ಇವುಗಳಲ್ಲಿ ಯಾವುದು ನರಸಿಂಹನ್ ಕಮಿಟಿ ವರದಿ 1991 & 1998 ಕ್ಕೆ ಸಂಬಂಧಿಸಿದೆ
ಎ) ಆಡಳಿತಾತ್ಮಕ ಸುಧಾರಣ ಆಯೋಗ,  ಬಿ) ಬ್ಯಾಂಕಿಂಗ್ ಸುಧಾರಣೆ,  ಸಿ) ಸಂವಿಧಾನ ಸುಧಾರಣೆ,  ಡಿ) ಚುನಾವಣಾ ಸುಧಾರಣೆ

ಕಾವೇರಿನದಿಗೆ ಸಂಬಂಧಿಸಿದಂತೆ ಯಾವ ರಾಜ್ಯಗಳು ವಾಜ್ಯದಲ್ಲಿ ತೊಡಗಿವೆ
ಎ) ಕರ್ನಾಟಕ & ತಮಿಳುನಾಡು ಮಾತ್ರ,  ಬಿ) ಕರ್ನಾಟಕ, ಆಂದ್ರ & ತಮಿಳುನಾಡು,  ಸಿ) ಕೇರಳ, ಕರ್ನಾಟಕ, ತಮಿಳುನಾಡು & ಪಾಂಡಿಚೆರಿ, ಡಿ) ಕೇರಳ, ಗೋವ, ಕರ್ನಾಟಕ & ತಮಿಳುನಾಡು

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ
1. ದಕ್ಷಿಣ ಗಂಗೋತ್ರಿ ಇದು ಮೈತ್ರಿಯ ನಂತರ ಅಂಟಾರ್ಟಿಕಾದಲ್ಲಿ ಸ್ಥಾಪಿಸಲ್ಪಟ್ಟ ಎರಡನೇ ಮಾನವನಿರ್ಮಿತ ಭಾರತೀಯ ವಿಜ್ಞಾನ ಕೇಂದ್ರ 2. ರಾಷ್ಟ್ರೀಯ ಅಂಟಾರ್ಟಿಕ ಮತ್ತು ಸಾಗರ ಸಂಶೋಧನಾ ಕೇಂದ್ರ ಗೋವಾದಲ್ಲಿದೆ
ಎ) 1ಮಾತ್ರ,  ಬಿ) 2ಮಾತ್ರ,  ಸಿ) 1&2 ಮಾತ್ರ,  ಡಿ) ಎರಡೂಅಲ್ಲ

ಇವುಗಳಲ್ಲಿ 1780ರಲ್ಲಿ ಭಾರತದಲ್ಲಿ ಪ್ರಾರಂಭವಾದ ಮೊದಲ ಇಂಗ್ಲೀಷ್ ಪತ್ರಿಕೆ ಯಾವುದು
ಎ) ಕಲ್ಕತ್ತಾ ಗೆಜೆಟ್,  ಬಿ) ಬೆಂಗಾಲ್ ಗೆಜೆಟ್,  ಸಿ) ಬೆಂಗಾಲ್ ಜರ್ನಲ್,  ಡಿ) ಬಾಂಬೆ ಹೆರಾಲ್ಡ್

ಇವುಗಳಲ್ಲಿ ಕರ್ನಾಟಕದ ಮೊದಲ ವಾರ್ತಾ ಪತ್ರಿಕೆ ಯಾವುದು
ಎ) ಪ್ರಜಾವಾಣಿ,  ಬಿ) ಮಂಗಳೂರು ಸಮಾಚಾರ,  ಸಿ) ಸಂಯುಕ್ತ ಕರ್ನಾಟಕ,  ಡಿ) ಉದಯವಾಣಿ

ಇದರಲ್ಲಿ ಯಾವ ಕಾಯ್ದೆಯು ಭಾರತೀಯ ಹೈ ಕಮಿಷನರನ್ನು ಮೊದಲ ಬಾರಿಗೆ ಬ್ರಿಟನ್ ನಲ್ಲಿ ನೇಮಕ ಮಾಡುವ ಅವಕಾಶ ಕಲ್ಪಿಸಿತು
ಎ) 1892ರ ಭಾರತೀಯ ಕೌನ್ಸಿಲ್ ಕಾಯ್ದೆ,  ಬಿ) 1909ರ ಭಾರತೀಯ ಕೌನ್ಸಿಲ್ ಕಾಯ್ದೆ,  ಸಿ) 1919ರ ಭಾರತ ಸರ್ಕಾರ ಕಾಯ್ದೆ,  ಡಿ) 1935ರ ಭಾರತ ಸರ್ಕಾರ ಕಾಯ್ದೆ