Friday, May 14, 2010

ವಿಜ್ಞಾನ

ಒಂದು ಸೆಮಿಕಂಡಕ್ಟರಿನ ಉಷ್ಣಾಂಶ ಹೆಚ್ಚಿದಂತೆ ಅದರ ನಿರೋಧತ್ವವು
ಎ) ಹೆಚ್ಚಾಗುತ್ತದೆ,  ಬಿ ಕಡಿಮೆಯಾಗುತ್ತದೆ,  ಸಿ) ಬದಲಾಗುವುದಿಲ್ಲ, ಡಿ) ಶೂನ್ಯಕ್ಕೆ ಇಳಿಯುತ್ತದೆ

MHO ಇದು ಯಾವುದರ ಪರಿಮಾಣ
ಎ) ನಿರೋಧತ್ವ,  ಬಿ) ನಿರ್ದಿಷ್ಟ ಪ್ರತಿರೋಧ, ಸಿ) ಶಾಖದ ಏರಿಳಿತ, ಡಿ) ಯಾವುದು ಅಲ್ಲ

ಒಂದು ಕಾರಿನಲ್ಲಿ ಕುಳಿತಿರುವ ಮನುಷ್ಯ ಒಂದು ನಿರ್ದಿಷ್ಟ ವೇಗದಲ್ಲಿ ಚಲಿಸುತ್ತಿದ್ದು ಒಂದು ಚೆಂಡನ್ನು ನೇರವಾಗಿ ಮೇಲಕ್ಕೆ ಎಸೆದಾಗ ಅಲ್ಲಿ ಗಾಳಿಗ ಪ್ರತಿರೋಧ ಇಲ್ಲದಿದ್ದರೆ ಚೆಂಡು ಬೀಳುವುದು
ಎ) ಮನುಷ್ಯನ ಮುಂಬಾಗಕ್ಕೆ,  ಬಿ) ಕಾರಿನ ಹೊರಗೆ,  ಸಿ) ಕಾರಿನ ಹಿಂಬಾಗಕ್ಕೆ  ಡಿ) ಸರಿಯಾಗಿ ಆ ಮನುಷ್ಯನ ಕೈಗೆ

ಈ ಕೆಳಗಿನ ವಿದ್ಯುತ್ ಕಾಂತೀಯ ಅಲೆಗಳನ್ನು ಏರಿಕೆಯ ಕ್ರಮದಲ್ಲಿ ತಿಳಿಸಿ
1.X ಕಿರಣ,  2. ಗಾಮಾಕಿರಣ,  3. ಮೈಕ್ರೋವೇವ್ಸ್,  4. ರೇಡಿಯೋತರಂಗ
ಎ) 4321,  ಬಿ) 1324, ಸಿ) 4213,  ಡಿ) 1432

ಕ್ಯೂಸೆಕ್ ಇದು ಹರಿಯುವಿಕೆಯ ಪರಿಮಾಣ,  byte ಇದು ಕಂಪ್ಯೂಟರ್ ದತ್ತಾಂಶ,  ರಿಕ್ಟರ್ ಇದು ಭೂಕಂಪನದ ತೀವ್ರತೆಯ ಮಾಪನ,  ಬಾರ್ ಇದು ಒತ್ತಡದ ಮಾಪನ


ಮೈಕ್ರೋಫೋನಿನಲ್ಲಿ ನೆಡೆಯುವ ಕಾರ್ಯ
ಎ) ಶಬ್ದ ತರಂಗಗಳು ನೇರವಾಗಿ ಪ್ರಸಾರಗೊಳ್ಳುತ್ತವೆ,  ಬಿ) ವಿದ್ಯುತ್ ಶಕ್ತಿ ನೇರವಾಗಿ ಶಬ್ದತರಂಗವಾಗುತ್ತದೆ,  ಸಿ)ಶಬ್ದ ತರಂಗ ವಿದ್ಯುತ್ ತರಂಗವಾಗಿ ಬದಲಾಗಿ ಮತ್ತೆ ಶಬ್ದತರಂಗವಾಗುತ್ತದೆ,  ಡಿ) ಯಾವ ಬದಲಾವಣೆಯು ಇಲ್ಲ

ಒಂದು ಕ್ರಿಕೇಟ್ ಚೆಂಡನ್ನು ಯಾವ ಕೋನದಲ್ಲಿ ಎಸೆದರೆ ಅತ್ಯಂತ ಹೆಚ್ಚುದೂರ ಹೋಗುತ್ತದೆ
ಎ) 22',  ಬಿ) 30',  ಸಿ) 45',  ಡಿ) 90'

ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ
ಎ) ನೀರಿನ ಕಣಗಳು ಬೇರೆ ಎಲ್ಲ ಬಣ್ಣಗಳನ್ನು ಹೀರಿಕೊಳ್ಳುವುದರಿಂದ,  ಬಿ) ನೀಲಿ ಬಣ್ಣವು ಪ್ರತಿಫಲನ ಗೊಳ್ಳುವುದರಿಂದ,  ಸಿ) ಸಮುದ್ರದ ನೀರಿನಲ್ಲಿ ನೀಲಿ ಆಕಾಶ ಪ್ರತಿಫಲನ ಗೊಳ್ಳುವುದು ಮತ್ತು ನೀರಿನ ಕಣಗಳು ನೀಲಿ ಬೆಳಕನ್ನು ಚೆದುರಿಸುವುದು,  ಡಿ)
ಯಾವುದು ಅಲ್ಲ


ಒಂದು ಹಡಗು ನದಿಯಿಂದ ಸಮುದ್ರಕ್ಕೆ ಬಂದಾಗ ಸ್ವಲ್ಪ ಏರುತ್ತದೆ ಇದಕ್ಕೆ ಕಾರಣ
ಎ) ಸಮುದ್ರದ ನೀರು ನದಿನೀರಿಗಿಂತ ಗಡುಸು,  ಬಿ) ಸಮುದ್ರದಲ್ಲಿ ಹೆಚ್ಚು ನೀರಿರುವುದರಿಂದ ಇದು ಮೇಲಕ್ಕೆ ತಳ್ಳುತ್ತದೆ,  ಸಿ) ಸಮುದ್ರ ನೀರಿನ ಸಾಂದ್ರತೆ ನದಿ ನೀರಿನ ಸಾಂದ್ರತೆಗಿಂತ ಕಡಿಮೆ,  ಡಿ) ಸಮುದ್ರ ನೀರಿನ ಸಾಂದ್ರತೆ ನದಿ ನೀರಿನ ಸಾಂದ್ರತೆಗಿಂತ ಹೆಚ್ಚು

ಒಂದು ಉರಿಯುತ್ತಿರುವ ಮೇಣದ ಬತ್ತಿಯ ಮೇಲೆ ಒಂದು ಗಾಜಿನ ಮಡಿಕೆಯನ್ನು ಮುಚ್ಚಿದಾಗ ಸ್ವಲ್ಪ ಸಮಯದಲ್ಲಿ ಮೇಣದ ಬತ್ತಿ ಆರಿಹೋಗಲು ಕಾರಣ
ಎ) ಅತಿಯಾದ ಬಿಸಿಯಿಂದ,  ಬಿ) ಗಾಜು ಪಾರದರ್ಶಕವಾಗಿರುವುದರಿಂದ,  ಸಿ) ಆಮ್ಲಜನಕದ ಕೊರತೆಯಿಂದ ಡಿ) ಯಾವುದು ಅಲ್ಲ

ರಾತ್ರಿವೇಳೆ ನಕ್ಷತ್ರಗಳು ಮಿನುಗಲು ಕಾರಣ
ಎ) ಅವು ಹೊರಸೂಸುವ ಬೆಳಕಿನಲ್ಲಿ ವ್ಯತ್ಯಾಸ,  ಬಿ) ಇದು ಕೇವಲ ಭ್ರಮೆ,  ಸಿ) ವಾತಾವರಣದ ಗಾಳಿಯ ಪದರಗಳ ಏರಿಳಿತ,  ಡಿ) ಭೂಮಿಯ ಚಲನೆಯಿಂದ

ಒಂದು ಕಂಬಳಿಯ ಹೊದಿಕೆಗಿಂತ ಎರಡು ಕಂಬಳಿಯ ಹೊದಿಕೆ ಹೆಚ್ಚು ಬೆಚ್ಚಗಿರಲು ಕಾರಣ
ಎ) ಎರಡು ಕಂಬಳಿಗಳು ಹಿಚ್ಚು ಉಣ್ಣೆಹೊಂದಿದ್ದು ಹೆಚ್ಚು ಶಾಖ ಇರುತ್ತದೆ,  ಬಿ) ಎರಡು ಕಂಬಳಿಗಳ ಮಧ್ಯೆ ಗಾಳಿಯ ಪದರವಿದ್ದು ಗಾಳಿ ಉತ್ತಮ ಉಷ್ಣವಾಹಕವಲ್ಲ,  ಸಿ) ಎರಡೂ ಸರಿ,  ಡಿ) ಎರಡೂ ತಪ್ಪು

ಸೂರ್ಯನು ಹುಟ್ಟುವಾಗ ಅಥವಾ ಮುಳುಗುವಾಗ ಸಣ್ನದಾಗಿ ಕಾಣಲು ಕಾರಣ
ಎ) ಬೆಳಕಿನ ಚದುರುವಿಕೆ,  ಬಿ) ಒಟ್ಟಾದ ಆಂತರಿಕ ಪ್ರತಿಫಲನ,  ಸಿ) ವಕ್ರೀಭವನ,  ಡಿ) ಯಾವುದು ಅಲ್ಲ

ಮಂಜುಗಡ್ಡೆಯಿರುವ ಗಾಜಿನ ಲೋಟದ ಹೊರಮೈ ಮೇಲೆ ನೀರಿನ ಬಿಂದುಗಳು ಉಂಟಾಗಲು ಕಾರಣ
ಎ) ಲೋಟದ ಹೊರಮೈ ಜಲಜನಕದ ಒತ್ತಡಕ್ಕೆ ಒಳಗಾಗಿರುವುದು,  ಬಿ) ಒಳಗಿನ ಮಂಜುಗಡ್ಡೆಯು ಗಾಜಿನ ಮೂಲಕ ಸ್ವಲ್ಪಸ್ವಲ್ಪವೇ ಹೊರಗೆ ಬರುವುದು,  ಸಿ) ಗಾಳಿಯಲ್ಲಿರುವ ತೇವಾಂಶವು ಗಾಜಿನ ತಣ್ಣನೆಗೆ ಪ್ರತಿಕ್ರಯಿಸಿ ನೀರಿನ ಬಿಂದುವಾಗಿ
ಮಾರ್ಪಾಡಾಗುತ್ತದೆ
,  ಡಿ) ಮಂಜುಗಡ್ಡೆ ಕರಗುವುದರಿಂದ ಹೆಚ್ಚಾದ ನೀರು ಹೊರಗೆ ಬರುತ್ತದೆ


ಫೋಟೋಗ್ರಫಿಯಲ್ಲಿ ಬಳಸಲ್ಪಡುವ ರಾಸಾಯನಿಕ 
ಎ) ರಂಜಕ,  ಬಿ) ಗಂಧಕ,  ಸಿ) ಸೋಡಿಯಂ ಥೈ ಸಲ್ಫೀಟ್,  ಡಿ) ನೈಟ್ರೋಜನ್

MICA(ಅಭ್ರಕ)ವನ್ನು ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಬಳಸಲು ಕಾರಣ
ಎ) ಇದು ಉತ್ತಮ ವಿದ್ಯುತ್ ವಾಹಕ  ಬಿ) ಇದು ಉತ್ತಮ ವಿದ್ಯುತ್ ಅವಾಹಕ,  ಸಿ) ಇದು ಉತ್ತಮ ಉಷ್ಣವಾಹಕ,  ಡಿ) ಇದು ಉತ್ತಮ ಉಷ್ಣವಾಹಕ ಹಾಗೆಯೇ ವಿದ್ಯುತ್ ಅವಾಹಕ

ಪರ್ವತಗಳ ತುದಿಗೆ ಏರಿದಾಗ ಹೆಚ್ಚಾಗಿ ಸುಸ್ತಾಗಲು ಕಾರಣ
ಎ) ಕಡಿಮೆ ತಾಪಮಾನ,  ಬಿ) ದೇಹದ ಹೊರಗೆ ಹೆಚ್ಚಾಗಿರುವ ಒತ್ತಡ,  ಸಿ) ಹೊರಗೆ ಹೋಲಿಸಿದಲ್ಲಿ ದೇಹದ ಒಳಗೆ ಕಡಿಮೆ ಒತ್ತಡ,  ಡಿ) ಯಾವುದು ಅಲ್ಲ

ದೀಪದ ಬತ್ತಿಯಲ್ಲಿ ಎಣ್ಣೆಯು ಮೇಲ್ಮುಖವಾಗಿ ಏರಲು ಕಾರಣ
ಎ) ಎಣ್ಣೆಯು ಕಡಿಮೆ ತೂಕಯಿದೆ,  ಬಿ) ಬಾಹ್ಯ ಒತ್ತಡ,  ಸಿ) ಕೆಪಿಲರಿ ಪರಿಣಾಮ,  ಡಿ) ಮೇಲಿನ ಎಲ್ಲಾ

ಮರುಭೂಮಿಯಲ್ಲಿ ರಾತ್ರಿಯ ವೇಳೆ ತಂಪಾಗಿರಲು ಕಾರಣ
ಎ) ಭೂಮಿಗೆ ಹೋಲಿಸಿದಲ್ಲಿ ಮರಳು ನಿಧಾನವಾಗಿ ಉಷ್ಣ ಬಿಡುಗಡೆಗೊಳಿಸುತ್ತದೆ,  ಬಿ) ರಾತ್ರಿಯಲ್ಲಿ ಆಕಾಶ ಶುಭ್ರವಾಗಿರುತ್ತದೆ,  ಸಿ) ಭೂಮಿಗೆ ಹೋಲಿಸಿದಲ್ಲಿ ಮರಳು ವೇಗವಾಗಿ ಉಷ್ಣ ಪಸರಿಸುತ್ತದೆ,  ಡಿ) ರಾತ್ರಿಯಲ್ಲಿ ಗಾಳಿ ಹೆಚ್ಚಾಗಿರುತ್ತದೆ

ಶೀತ ವಾಯುಗುಣದಲ್ಲಿ ನೀರಿನ ಕೊಳವೆಗಳು ಕೆಲವೊಮ್ಮೆ ಸಿಡಿಯಲು ಕಾರಣ
ಎ) ಶೀತ ಹವಾಮಾನ ಹೆಚ್ಚು ಒತ್ತಡದಿಂದಿರುತ್ತದೆ,  ಬಿ) ಪೈಪು ಶೀತಕ್ಕೆ ಸ್ಪಂದಿಸುತ್ತದೆ, ಸಿ) ಪೈಪಿನಲ್ಲಿರುವ ನೀರು ಅಧಿಕ ಶೀತದಿಂದ ಹಿಗ್ಗುತ್ತದೆ.  ಡಿ) ಇದು ಬರೀ ಭ್ರಮೆ

ನೀರನ್ನು 0' ಯಿಂದ 100' ಗೆ ಕಾಯಿಸಿದಾಗ ನೀರು
ಎ) ಸ್ವಲ್ಪ ಹಿಗ್ಗುತ್ತದೆ,  ಬಿ) ಸ್ವಲ್ಪ ಕುಗ್ಗುತ್ತದೆ.  ಸಿ) ಮೊದಲು ಹಿಗ್ಗಿ ನಂತರ ಕುಗ್ಗುತ್ತದೆ,  ಡಿ) ಮೊದಲು ಕುಗ್ಗಿ ನಂತರ ಹಿಗ್ಗುತ್ತದೆ

ಒಂದು ವಸ್ತುವಿನ ತೂಕವು ಭೂಮಿಯ ಈ ಭಾಗದಲ್ಲಿ ಅತಿ ಕಡಿಮೆ ಇರುತ್ತದೆ
ಎ) ಸಮಭಾಜಕ ವೃತ್ತದಲ್ಲಿ,  ಬಿ) ಉತ್ತರ ದೃವದಲ್ಲಿ,  ಸಿ) ದಕ್ಷಿಣದೃವದಲ್ಲಿ,  ಡಿ) ಭೂ ಮದ್ಯದಲ್ಲಿ

ಶಬ್ದದ ವೇಗವು ದ್ರವಕ್ಕಿಂತಲೂ ಘನದಲ್ಲಿ ಹೆಚ್ಚಾಗಿರಲು ಮುಖ್ಯ ಕಾರಣ
ಎ) ಘನದಲ್ಲಿರುವ ಅಣುಗಳು ಸ್ಥಿರವಾಗಿವೆ,  ಬಿ) ದ್ರವದಲ್ಲಿರುವ ಅಣುಗಳು ವಿರಳವಾಗಿವೆ,  ಸಿ) ಘನ ವಸ್ತುವು ಅಧಿಕ ಸ್ಥಿತಿಸ್ಥಾಪಕ ಗುಣ ಹೊಂದಿದೆ,  ಡಿ) ದ್ರವವು ಅಧಿಕ ಸ್ಥಿತಿ ಸ್ಥಾಪಕತ್ವ ಹೊಂದಿದೆ

ಸಬ್ ಮೇರಿನ ಮೂಲಕ ವಸ್ತುಗಳನ್ನು ನೋಡಲು ಬಳಸುವುದು
ಎ) ಪೆರಿಸ್ಕೋಪ್,  ಬಿ) ಟೆಲಿಸ್ಕೋಪ್,  ಸಿ) ಮೈಕ್ರೋಸ್ಕೋಪ್,  ಡಿ) ಸ್ಟೆತಾಸ್ಕೋಪ್

ವಾಹನಗಳಲ್ಲಿ ಬಳಸಲ್ಪಡುವ ಹೈಡ್ರಾಲಿಕ್ ಬ್ರೇಕ್ಗಳು ಯಾವುದರ ನಿಯಮದ ಪ್ರಕಾರ
ಎ) ಆರ್ಕಿಮಿಡೀಸ್ ನಿಯಮ,  ಬಿ) ಬರ್ನೂಲಿ ನಿಯಮ,  ಸಿ) ಪ್ಯಾಸ್ಕಲ್ ನಿಯಮ,  ಡಿ) ಪೈಥಾಗರಸ್ ನಿಯಮ

ಒಂದು ಮೈಕ್ರಾನ್ ಎಂದರೆ
ಎ) 10ನೇ 1 ಮಿ.ಮೀ,  ಬಿ) 100 ನೇ 1 ಮಿ.ಮೀ,  ಸಿ) 1000ನೇ 1 ಮಿ.ಮೀ,  ಡಿ) 500ನೇ 1 ಮಿ.ಮೀ

ಒಂದು ಅಶ್ವಶಕ್ತಿಯು ಯಾವುದಕ್ಕೆ ಸಮ
ಎ) 736 ವ್ಯಾಟ್ಸ್,  ಬಿ) 756 ವ್ಯಾಟ್ಸ್,  ಸಿ) 1000 ವ್ಯಾಟ್ಸ್,  ಡಿ) 746 ವ್ಯಾಟ್ಸ್

ನೀವು ಒಂದು ಕಿ.ಮೀ ನೆಡೆದರೆ ಎಷ್ಟು ಮೈಲಿ ನೆಡೆದಿರೆಂದರ್ಥ
ಎ) 0.5,  ಬಿ) 1.72,  ಸಿ) 0.62,  ಡಿ) 0.92

ಭೂಮಿ ಮತ್ತು ಸೂರ್ಯನ ನಡುವಿನ ದೂರ ಪ್ರಕಾಶ ವರ್ಷಗಳಲ್ಲಿ,  ಅಣುಗಳ ಅಂತರವನ್ನು ಆಂಗ್ ಸ್ಟಾರ್ಮ್,  ನ್ಯೂಕ್ಲಿಯಸ್ ಗಾತ್ರವನ್ನು ಫೆರ್ಮಿಯಲ್ಲಿ,  ಇನ್ ಫ್ರಾರೆಡ್ ಬೆಳಕಿನ ತರಂಗಾಂತರವನ್ನು ಮೈಕ್ರಾನ್ ಗಳಲ್ಲಿ ಅಳಿಯುವರು


ಲೇಸರ್ ಕಿರಣಗಳನ್ನು ಅವಿಷ್ಕರಿಸದವರು
ಎ) ಫ್ರಾಂಕ್ ವಿಟ್ಲೆ,  ಬಿ) ಫ್ರೆಡ್ ಮಾರಿಸನ್,  ಸಿ) ಚಾರ್ಲ್ಸ್ H ಟೋನ್ಸ್,  ಡಿ) ಸೆಮ್ಗಾಲ್ ಕ್ರೇ

ಒಂದು ಖಗೋಳಮಾನ ಇದರ ನಡುವಿನ ದೂರದ ಪರಿಮಾಣ
ಎ)ಭೂಮಿ & ಸೂರ್ಯ,  ಬಿ) ಭೂಮಿ & ಚಂದ್ರ,  ಸಿ) ಗುರು & ಶನಿ,  ಡಿ) ಫ್ಲೂಟೊ & ಸೂರ್ಯ

25' ಸೆಂಟಿಗ್ರೇಡ್ ನಲ್ಲಿ ನೀರಿನ PHಮೌಲ್ಯ 7 ಆಗಿದ್ದು ನೀರನ್ನು 100' ಸೆಂಟಿಗ್ರೇಡ್ಗೆ ಕಾಯಿಸಿದಾಗ ಅದರ PH ಮೌಲ್ಯ
ಎ) ಕುಗ್ಗುತ್ತದೆ.  ಬಿ) ಹಿಗ್ಗುತ್ತದೆ,  ಸಿ) ಬದಲಾಗುವುದಿಲ್ಲ,  ಡಿ) ನಾಲ್ಕರಷ್ಟಾಗುತ್ತದೆ