Thursday, May 20, 2010

ನಾಗರಿಕ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ - 2008

ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ರೈಲು ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ಮಕ್ಕಳ ಅಭಿವೃದ್ಧಿ,  ಬಿ) ಹೆಚ್.ಐ.ವಿ / ಏಡ್ಸ್,  ಸಿ) ಪ್ರವಾಸೋದ್ಯಮ,  ಡಿ) ಯಾವುದು ಅಲ್ಲ

ಗೋಲ್ಡನ್ ಚಾರಿಯೇಟ್ ಎನ್ನುವುದು
ಎ) ಒಂದು ಐಷಾರಾಮಿ ರೈಲು,  ಬಿ) ದೆಹಲಿಯಿಂದ ಲಂಡನ್ ಗೆ ಹೋಗುವ ವಿಮಾನ,  ಸಿ) ಒಂದು ಐತಿಹಾಸಿಕ ರಥ,  ಡಿ) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಬಸ್

ಗುಂಪಿನ ಇತರರಿಗೆ ಹೋಲಿಸಿದರೆ ಈ ರಾಜ್ಯವು  ಏಡ್ಸ್ ಪಿಡುಗಿಗೆ ಹಚ್ಚು ಬಲಿಯಾಗಿಲ್ಲ
ಎ) ಕರ್ನಾಟಕ,  ಬಿ) ಆಂಧ್ರಪ್ರದೇಶ,  ಸಿ) ಮಣಿಪುರ,  ಡಿ) ಬಿಹಾರ

ಕೆಲವು ತಿಂಗಳಲ್ಲಿ 30 ದಿನ ಇದ್ದು ಕೆಲವು ತಿಂಗಳಲ್ಲಿ 31 ದಿನ ಇದ್ದು ವರ್ಷದ ಎಷ್ಟು ತಿಂಗಳಲ್ಲಿ 28 ದಿನ ಬರುತ್ತದೆ
ಎ) 3,  ಬಿ) 1,  ಸಿ) 2,  ಡಿ) 12

ಹತ್ತು ಜನರು ಒಂದು ಗೋಡೆಯನ್ನು ಎಂಟು ದಿನಗಳಲ್ಲಿ ಕಟ್ಟಬಲ್ಲರು.  ಈ ಕೆಲಸವನ್ನು ಅರ್ಧ ದಿನದಲ್ಲಿ ಮಾಡಿ ಮುಗಿಸಲು ಎಷ್ಟು ಜನ ಬೇಕು
ಎ) 100,  ಬಿ) 80,  ಸಿ) 120  ಡಿ) 160

ಭಾರತೀಯ ರಾಷ್ಟ್ರೀಯ ಪಂಚಾಗದ ಪ್ರಕಾರ ಈಗ(2010) ಎಷ್ಟನೇ ಶಕ ವರ್ಷ ನಡೆಯುತ್ತಿದೆ.
ಎ) 1970,  ಬಿ) 1960,  ಸಿ) 1942,  ಡಿ) 1932

ಈ ಕ್ರಿಯೆಯಿಂದ ಏಡ್ಸ್ ರೋಗ ಸೋಂಕುವುದಿಲ್ಲ 
ಎ) ಸಾರ್ವಜನಿಕ ಶೌಚಾಲಯದ ಬಳಕೆ,  ಬಿ) ಇನ್ಜೆಕ್ಷನ್ ಮೂಲಕ ಮಾದಕ ವಸ್ತು ಸೇವನೆ.  ಸಿ) ರಕ್ತ ಸ್ವೀಕಾರ,  ಡಿ) ರಕ್ಷಣೆ 
ರಹಿತ ಲೈಂಗಿಕ ಸಂಪರ್ಕ

ಒಂದು ದುಂಡು ಮೇಜಿನ ಸುತ್ತ 6 ಕುರ್ಚಿಗಳಲ್ಲಿ G, H, I, J, K,L ಕುಳಿತಿದ್ದಾರೆ G ಯು J ಮತ್ತು K ಮಧ್ಯ ಕುಳಿತಿದ್ದರೆ H ನು K ಎದುರಿಗೆ ಕುಳಿತಿದ್ದಾನೆ, H ಮತ್ತು I ಅಕ್ಕಪಕ್ಕದಲ್ಲಿ ಕುಳಿತಿಲ್ಲ, ಇದರಲ್ಲಿ ಯಾವುದು ಸರಿಯಾದುದು
ಎ) G ಯು H ಎದುರಿಗೆ ಕುಳಿತಿದ್ದಾನೆ,  ಬಿ) ಮತ್ತು J ಅಕ್ಕಪಕ್ಕದಲ್ಲಿ ಕುಳಿತಿಲ್ಲ,  ಸಿ) L G ಎದುರಿಗೆ ಕುಳಿತಿದ್ದಾನೆ,  ಡಿ)
H ಮತ್ತು K ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ

ಒಂದು ಹಾಕಿ ತಂಡದಲ್ಲಿ ಗೋಲ್ ಕೀಪರ್ ಹೊರತುಪಡಿಸಿ ಎಷ್ಟು ಜನ ಆಟಗಾರರಿರುತ್ತಾರೆ ಹಾಗೂ ಒಮದು ಹಾಕಿ ಪಂದ್ಯದ ಅವಧಿ ಎಷ್ಟು
ಎ) 10, 70 ನಿಮಿಷ,  ಬಿ) 11,  75 ನಿಮಿಷ,  ಸಿ) 11, 90 ನಿಮಿಷ,  ಡಿ) 10, 90 ನಿಮಿಷ

2012ರ ಒಲಂಪಿಕ್ ಪಂದ್ಯಗಳು ಯಾವ ದೇಶದಲ್ಲಿ ನೆಡೆಯುತ್ತವೆ
ಎ) ಅಮೇರಿಕ,  ಬಿ) ಸ್ಪೇನ್,  ಸಿ) ಫ್ರಾನ್ಸ್,  ಡಿ) ಇಂಗ್ಲೆಂಡ್

ಈ ಕೆಳಕಂಡ ವ್ಯಕ್ತಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿಲ್ಲ
ಎ) ಲಿಯಾಂಡರ್ ಪೇಸ್,  ಬಿ) ಸಚಿನ್ ತೆಂಡೂಲ್ಕರ್,  ಸಿ) ಮಹೇಂದ್ರ ಸಿಂಗ್ ಧೋನಿ,  ಡಿ) ಪಿ.ಟಿ.ಉಷಾ

ಸೈನಾ ನೆಹವಾಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ 
ಎ)ಬ್ಯಾಡ್ಮಿಂಟನ್.  ಬಿ) ಟೆನ್ನಿಸ್,  ಸಿ) ಕ್ರಿಕೇಟ್,  ಡಿ) ಬಾಸ್ಕೆಟ್ ಬಾಲ್

ಒಂದು ಗಾಜಿನ ಲೋಟದಲ್ಲಿ ಇರುವ ನೀರಿನ ಮೇಲೆ ತೇಲುತ್ತಿರುವ ಮಂಜುಗಡ್ಡೆಯ ತುಂಡು ಕರಗಿದಾಗ ಗಾಜಿನಲ್ಲಿರುವ ನೀರಿನ ಮಟ್ಟವು
ಎ) ಏರುತ್ತದೆ.  ಬಿ) ಇಳಿಯುತ್ತದೆ.  ಸಿ) ಇದ್ದಹಾಗೆಯೇ ಇರುತ್ತದೆ.  ಡಿ) ಮೊದಲು ಏರಿ ನಂತರ ಇಳಿಯುತ್ತದೆ

ರಾತ್ರಿಯ ವೇಳೆ ಅತ್ಯಂತ ಪ್ರಕಾಶಮಾನವಾಗಿರುವ ಗ್ರಹ
ಎ) ಗುರು,  ಬಿ) ಶನಿ,  ಸಿ) ಶುಕ್ರ,  ಡಿ) ಮಂಗಳ

ಹಾಲನ್ನು ಕೆಲ ಸಮಯ ಹೊರಗಡೆ ಇಟ್ಟಾಗ ಹಾಲು ಹುಳಿಯಾಗಲು ಕಾರಣ ಈ ಕೆಳಕಂಡ ಆಮ್ಲದ ಉತ್ಪತ್ತಿಯಿಂದ
ಎ) ಕಾರ್ಬಾನಿಕ್ ಆಮ್ಲ,  ಬಿ) ಸಿಟ್ರಿಕ್ ಆಮ್ಲ,  ಸಿ) ಲ್ಯಾಕ್ಟಿಕ್ ಆಮ್ಲ,  ಡಿ) ಮ್ಯಾಲಿಕ್ ಆಮ್ಲ

ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ
ಎ) ಪ್ಯಾರಾ ಥೈರಾಯಿಡ್ ಗ್ರಂಥಿ,  ಬಿ) ಅಡ್ರಿನಲ್ ಗ್ರಂಥಿ,  ಸಿ) ಪಿಟ್ಯುಟರಿ ಗ್ರಂಥಿ,  ಡಿ) ಪ್ಯಾಂಕ್ರಯಾಸ್ ಗ್ರಂಥಿ

ಭಾರತದ ಮಾನವ ಹಕ್ಕು ಆಯೋಗದ ಅಧ್ಯಕ್ಷರು

ಭಾರತದ ಸಂವಿಧಾನದಲ್ಲಿ ಎಷ್ಟು ಅನುಚ್ಛೇದಗಳು ಇವೆ
ಎ) 9,  ಬಿ) 10,  ಸಿ) 11,  ಡಿ) 12

ತನ್ನದೇ ಆದ ಹೈಕೋರ್ಟ್ ಹೊಂದಿರುವ ಕೇಂದ್ರಾಡಳಿತ ಪ್ರದೇಶ
ಎ) ದೆಹಲಿ,  ಬಿ) ಪಾಂಡಿಚೆರಿ,  ಸಿ) ಗೋವಾ,  ಡಿ) ಲಕ್ಷದ್ವೀಪ

ಭಾಷಾವಾರು ಪ್ರಾಂತ ವಿಭಜನೆ ಆದದ್ದು ಈ ವರ್ಷದಲ್ಲಿ
ಎ) 1947,  ಬಿ) 1951,  ಸಿ) 1956,  ಡಿ) 1966

ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾದಾಗ ಒಬ್ಬ ನಾಗರೀಕನು ಯಾವ ನ್ಯಾಯಾಲಯದ ಮೊರೆ ಹೋಗಬಹುದು
ಎ) ಮ್ಯಾಜಿಸ್ಟ್ರೇಟ್.  ಬಿ) ಜಿಲ್ಲಾ ಮ್ಯಾಜಿಸ್ಟ್ರೇಟ್,  ಸಿ) ಸೆಷನ್ಸ್,  ಡಿ) ಉಚ್ಛ ನ್ಯಾಯಾಲಯ

ಒಂದು ಕಾರು ಬೆಂಗಳೂರನ್ನು ಬೆಳಗಿನ 7.12 ಗಂಟೆಗೆ ಬಿಟ್ಟು 190 ಕಿ.ಮೀ ದೂರವಿರುವ ಗುಂಡ್ಲುಪೇಟೆಯನ್ನು ಬೆಳಗಿನ 10.57ಕ್ಕೆ ತಲುಪುತ್ತದೆ.  ಕಾರಿನ ಸರಾಸರಿ ವೇಗ ಪ್ರತಿ ಗಂಟೆಗೆ ಎಷ್ಟು ಕಿ.ಮೀ
ಎ) 44,  ಬಿ) 48,  ಸಿ) 46,  ಡಿ) 50

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರು ಯಾರು

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಸಂವಿಧಾನದ ಯಾವ ವಿಧಿ ಅನ್ವಯ ಕೊಡಬೇಕೆಂದು ಒತ್ತಾಯಿಸಲಾಯಿತು
ಎ) 367,  ಬಿ) 371,  ಸಿ) 376,  ಡಿ)381

ನಮ್ಮ ರಾಜ್ಯದಲ್ಲಿ ಪದೇ ಪದೇ ಕಾಡುವ ವಿದ್ಯುತ್ ಸಮಸ್ಯೆಗೆ ಮುಖ್ಯ ಕಾರಣ
ಎ) ವಿದ್ಯುತ್ ಕಳವು,  ಬಿ) ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯಗಳಿಂದ ಸರಬರಾಜಿನಲ್ಲಿ ವ್ಯತ್ಯಯ.  ಸಿ) ಡೀಸೆಲ್ ಹಾಗೂ ಕಲ್ಲಿದ್ದಲಿನ ಕೊರತೆ,  ಡಿ) ಮಳೆಯ ಕೊರತೆ

ರಾಷ್ಟ್ರದಲ್ಲಿ ಹಣದುಬ್ಬರಕ್ಕೆ ಕಾರಣಗಳು
ಎ) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ,  ಬಿ) ವ್ಯವಸಾಯರಂಗದ ವೈಫಲ್ಯ,  ಸಿ) ಸಿಮೆಂಟ್ ಮತ್ತು ಉಕ್ಕಿನ ಬೆಲೆಗಳಲ್ಲಿ ಏರಿಕೆ, ಡಿ) ಮೇಲಿನ ಮೂರು ಕಾರಣಗಳು

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ

ಹೂಜಿ(HUJI) ಎಂದು ಕರೆಯಲಾಗುವ ಸಂಘಟನೆ ಏತಕ್ಕೆ ಸಂಬಂಧಿಸಿದೆ
ಎ) ಅಣು ಇಂಧನ ಸರಬರಾಜಿಗೆ, ಬಿ) ಅಂತರ ರಾಷ್ಟ್ರೀಯ ಪೊಲೀಸ್ ಸಂಘಟನೆಗೆ,  ಸಿ) ಭಯೋತ್ಪಾದನೆಗೆ,  ಡಿ) ಬೇಹುಗಾರಿಕೆಗೆ

ಪಾಟೇಲ್ ದಂಪತಿಗಳ ಮನೆಯಲ್ಲಿ ಎರಡು ತೊಲದ ಬಂಗಾರದ ಚೈನ್ ಕಾಣೆಯಾಗುತ್ತದೆ.  ಪಾಟೀಲರಿಗೆ ತಮ್ಮ ಮನೆಯಲ್ಲಿ ಕೆಲಸ ಮಾಡುವ 10 ವರ್ಷ ವಯಸ್ಸಿನ ಕಲಾವತಿಯ ಮೇಲೆ ಸಂಶಯ.  ಪಾಟೀಲರು ಕಲಾವತಿಯನ್ನು ತಮ್ಮ ಜೊತೆ ದರದರನೇ ಪೊಲೀಸ ಠಾಣೆಗೆ ಎಳೆದುಕೊಂಡು ಬಂದು ಸರ ಕಳೆದ ಬಗ್ಗೆ ತಿಳಿಸುತ್ತಾರೆ.  ಆಗ ಪೊಲೀಸರು ಏನು ಮಾಡಬೇಕು?
(ಸೂಚನೆ: ಬಾಲ ಕಾರ್ಮಿಕರನ್ನು ಇಟ್ಟುಕೊಳ್ಳುವುದು ಅಪರಾಧ ಹಾಗು 7 ವರ್ಷದ ಮೇಲ್ಪಟ್ಟ ಮಕ್ಕಳು ಅಪರಾಧ ಮಾಡಿದರೆ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಬಹುದು)
ಎ) ಬಾಲ ಕಾರ್ಮಿಕರನ್ನು ನೀವು ಇಟ್ಟುಕೊಂಡಿದ್ದೀರಿ ಎಂದು ಗದರಿಸಿ, ಪಾಟೀಲ್ ದಂಪತಿಗಳನ್ನು ಠಾಣೆಯಿಂದ ಹೊರಗೆ ಕಳುಹಿಸ ಬೇಕು,  ಬಿ) ಕಲಾವತಿ ಕಳ್ಳತನ ಮಾಡಿದ ಬಗ್ಗೆ ನಿಮ್ಮಲ್ಲಿ ಸಬೂತು ಏನಿದೆ ಎಂದು ಪಟೇಲರನ್ನು ಕೇಳಿ ಅವರ ಬಳಿ ಸಬೂತು ಇಲ್ಲದ್ದರಿಂದ ಅವರನ್ನು ಮನೆಗೆ ಕಳುಹಿಸಬೇಕು,  ಸಿ)ಕಲಾವತಿಯ ತಂದೆ ತಾಯಿಯರನ್ನು  ಕರೆಯಿಸಿ ಅವರ ಮುಂದೆ ಆಕೆಯನ್ನು ವಿಚಾರಣೆಮಾಡಿ, ಆಕೆ ಕಳ್ಳತನ ಮಾಡಿದ್ಧಾಳೆಯೇ ಇಲ್ಲವೇ ಎಂದು ಕಂಡುಹಿಡಿದು ಆಕೆ ಕಳ್ಳತನ ಮಾಡಿದ್ದರೆ ಅವಳ ಮೇಲೆ ಕೇಸ್ ಮಾಡಬೇಕು,  ಡಿ) ಕಲಾವತಿ ಕಳ್ಳತನ ಮಾಡಿದ್ದರೆ ಕಲಾವತಿಯ ಮೇಲೆ ಕೇಸು ಮಾಡುವುದಲ್ಲದೇ, ಪಾಟೀಲ್ ದಂಪತಿಗಳ ಮೇಲೂ ಕೇಸ್ ಮಾಡಬೇಕು

ತನು ಕರಗದವರಲ್ಲಿ ಪುಷ್ಪವನು ಒಲ್ಲೆಯಯ್ಯ ನೀನು ಎನ್ನುವ ವಚನವನ್ನು ಬರೆದವರು
ಎ) ಬಸವಣ್ಣನವರು,  ಬಿ) ಅಕ್ಕಮಹಾದೇವಿ,  ಸಿ) ಅಲ್ಲಮ ಪ್ರಭು,  ಡಿ) ಸರ್ವಜ್ಞ

ಭಾರತ ಮಾಡಿಕೊಳ್ಳುತ್ತಿರುವ ಅಣು ಒಪ್ಪಂದದ ಮುಖ್ಯ ಕಾರಣ
ಎ) ವಿದ್ಯುತ್ ಶಕ್ತಿ ಕೊರತೆ ನೀಗಿಸಲು,  ಬಿ) ಅಣು ಬಾಂಬ್ ತಯಾರಿಸಲು,  ಸಿ) ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿಸಲು.  ಡಿ)
ಮಿಲಿಟರಿ ಉದ್ದೇಶಕ್ಕಾಗಿ

ಪೆನ್ ಡ್ರೈವ್ ಎಂದು ಕರೆಯುವುದು
ಎ) ಕಾರಿನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವಾಗ ಬರೆಯುವಂತಹ ಪೆನ್,  ಬಿ) ಕಂಪ್ಯೂಟರ್ನಲ್ಲಿ ಉಪಯೋಗಿಸುವ ಹಾರ್ಡ್ ವೇರ್,  ಸಿ) ಕ್ಯಾಲಿಫೋರ್ನಿಯಾದಲ್ಲಿ ಇರುವ ಒಂದು ರಸ್ತೆ,  ಡಿ) ಪೆನ್ನಿನ ಒಂದು ಬಿಡಿಭಾಗ

ಸರೋದ್ ವಾದ್ಯ ನುಡಿಸುವುದರಲ್ಲಿ ಹೆಸರು ಮಾಡಿದವರು
ಎ) ಪಂಡಿತ್ ಶಿವಕುಮಾರ ಶರ್ಮಾ,  ಬಿ) ಪಂಡಿತ್ ರವಿಶಂಕರ್,  ಸಿ) ಉಸ್ತಾದ್ ಬಿಸ್ಮಿಲ್ಲಾಖಾನ್,  ಡಿ) ಅಮ್ಜಾದ್ ಆಲಿ ಖಾನ್

ಗುಂಪಿಗೆ ಸೇರದವನ್ನು ಗುರುತಿಸಿ
ಎ) ಎಂ.ಎಸ್.ಸುಬ್ಬಲಕ್ಷ್ಮಿ,  ಬಿ) ಗಂಗೂಬಾಯಿ ಹಾನಗಲ್,  ಸಿ) ಭೀಮ್ ಸೇನ್ ಜೋಷಿ,  ಡಿ) ಬ್ರಿಜುಮಹಾರಾಜ್

ಕರ್ನಾಟಕ ಹೈಕೋರ್ಟ್ ನ ಈಗಿನ ಮುಖ್ಯ ನ್ಯಾಯಮೂರ್ತಿ ಯಾರು

ನವರಸಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ
ಎ) ಬಾಗಲಕೋಟೆ,  ಬಿ) ಬಿಜಾಪುರ,  ಸಿ) ಬಳ್ಳಾರಿ,  ಡಿ) ಉತ್ತರ ಕನ್ನಡ

ಕರ್ನಾಟಕವನ್ನು ಆಳಿದ ಗಂಗರ ರಾಜಧಾನಿ
ಎ) ಬಾದಾಮಿ,  ಬಿ) ಮೈಸೂರು,  ಸಿ) ಕೋಲಾರ,  ಡಿ) ಬನವಾಸಿ

ಶೃಂಗೇರಿಯಲ್ಲಿರುವ ಶಾರದಾ ಪೀಠವನ್ನು ಸ್ಥಾಪಿಸಿದವರು
ಎ) ಮಧ್ವಾಚಾರ್ಯರು,  ಬಿ) ರಾಮಾನುಜಾಚಾರ್ಯರು,  ಸಿ) ರಾಘವೇಂದ್ರ ಸ್ವಾಮೀಜಿ,  ಡಿ) ಆದಿ ಶಂಕರಾಚಾರ್ಯರು

ಈ ರಾಜ್ಯದಲ್ಲಿ ಅಣುಶಕ್ತಿ ಸ್ಥಾವರ ಇಲ್ಲ
ಎ) ರಾಜಸ್ಥಾನ,  ಬಿ) ಕೇರಳ,  ಸಿ) ಕರ್ನಾಟಕ,  ಡಿ) ತಮಿಳುನಾಡು

ಇವರು ರಾಜಕಾರಣಕ್ಕೆ ಸೇರುವ ಮುನ್ನ ಪೊಲೀಸ್ ಅಧಿಕಾರಿಯಾಗಿದ್ದರು
ಎ) ಡಿ.ಟಿ.ಜಯಕುಮಾರ್,  ಬಿ) ಟಿ.ಜಯಚಂದ್ರ,  ಸಿ) ಜಯಪ್ರಕಾಶ್ ಹೆಗಡೆ,  ಡಿ) ಜಯವಂತ್

ಭಯೋತ್ಪಾದನೆಗೆ ಸಂಬಂಧಿಸಿದಂತೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಈಗ ಚಾಲ್ತಿಯಲ್ಲಿರುವ ಶಾಸನ

ಗ್ರಾಂಡ್ ಟ್ರಂಕ್ ರಸ್ತೆ ಎಂದು ಕರೆಯಲ್ಪಡುವ ರಸ್ತೆಯ ನಿರ್ಮಾತೃ ಯಾರು
ಎ) ವಿಲಿಯಂ ಬೆಂಟಿಕ್,  ಬಿ) ಶೇರ್ ಶಾ ಸೂರಿ,  ಸಿ) ಅಕ್ಬರ್,  ಡಿ) ವಾರನ್ ಹೇಸ್ಟಿಂಗ್ಸ್

ಹಾಲ್ಡಿಯಾ ಬಂದರು ಯಾವ ರಾಜ್ಯದಲ್ಲಿದೆ
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಆಂದ್ರಪ್ರದೇಶ,  ಡಿ) ಗುಜರಾತ್

ವಿದ್ಯುತ್ ಪ್ರವಾಹದ ಘಟಕವನ್ನು ಈ ರೀತಿ ವ್ಯಕ್ತಪಡಿಸಲಾಗುತ್ತದೆ
ಎ) ಓಹಂ,  ಬಿ) ಆಂಪಿಯರ್,  ಸಿ) ಜೂಲ್,  ಡಿ) ಓಲ್ಟ್

ಓಜೋನ್ ಪದರವು ನಮ್ಮನ್ನು ಇದರಿಂದ ರಕ್ಷಿಸುತ್ತದೆ
ಎ) ನೇರಳಾತೀತ ಕಿರಣಗಳಿಂದ,  ಬಿ) ಅವಕೆಂಪು ಕಿರಣಗಳಿಂದ,  ಸಿ) ಸೌರಮಾರುತಗಳಿಂದ,  ಡಿ) ಸೂಕ್ಷ್ಮ ತರಂಗಗಳಿಂದ

ತಾಮ್ರದ ಪರಮಾಣು ಸಂಖ್ಯೆ
ಎ) 33,  ಬಿ) 23,  ಸಿ) 29,  ಡಿ) 31

ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡುಬರುವುದು
ಎ) ಕಾರ್ಬನ್ ಡೈಆಕ್ಸೈಡ್,  ಬಿ) ಮೀಥೇನ್,  ಸಿ) ಅಸಿಟಿಲಿನ್,  ಡಿ) ಎಥಲೀನ್

ಈ ವರ್ಷ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದವರು ಯಾರು

ಕಳಸ-ಬಂಡೂರಿ ಯಾವ ನದಿಯ ಉಪನದಿ
ಎ) ಮಹಾದಾಯಿ,  ಬಿ) ಘಟಪ್ರಭ,  ಸಿ) ಮಲಪ್ರಭ,  ಡಿ) ಕೃಷ್ಣ

ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮಕರಣಗೊಂಡಿರುವ ರಾಜ್ಯ ವಿಧಾನಸಭಾ ಸದಸ್ಯರು ಯಾರು
ಎ) ರೋಜರ್ ಬಿನ್ನಿ,  ಬಿ) ಡೆರಿಕ್ ಫುಲೀನ್,  ಸಿ) ಟಾಮ್ ಆಲ್ಟರ್,  ಡಿ) ಡಯಾನ ಹೇಡನ್

ಒಲಂಪಿಕ್ ಪದಕವನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ
ಎ) ಪಿ.ಟಿ.ಉಷಾ,  ಬಿ) ಕರ್ಣಂ ಮಲ್ಲೇಶ್ವರಿ,  ಸಿ) ಶೈನಿ ಅಬ್ರಹಾಂ,  ಡಿ) ಅಶ್ವಿನಿ ನಾಚಪ್ಪ

ಸೆಪ್ಟೆಂಬರ್ 2008ರಲ್ಲಿ ಜಮ್ಮುವಿನಲ್ಲಿ ನೆಡೆದ ಗಲೆಭೆಗಳು ಆದ ಕಾರಣ
ಎ) ರಾಷ್ಟ್ರಪತಿ ಆಳ್ವಿಕೆ ಜಾರಿಯಾದದ್ದು,  ಬಿ) ಅಮರನಾಥ ದೇವಾಲಯ ಆಡಳಿತಕ್ಕೆ ಕೊಟ್ಟ ಜಮೀನು ವಾಪಸ್ಸಾತಿ,  ಸಿ) ಅಮರನಾಥ ದೇವಾಲಯಕ್ಕೆ ಹೋಗುವ ಯಾತ್ರಾರ್ಥಿಗಳ ಮೇಲೆ ಆತಂಕವಾದಿಗಲ ದಾಳಿ,  ಡಿ) ಬೆಲೆ ಏರಿಕೆ

ಪೆನಿಸಿಲಿನ್ ಔಷಧಿಯನ್ನು ಕಂಡುಹಿಡಿದವರು ಯಾರು
ಎ) ಅಲೆಕ್ಸಾಂಡರ್ ಗ್ರಹಂಬೆಲ್,  ಬಿ) ಅಲೆಗ್ಸಾಂಡರ್ ಪ್ಲೆಮಿಂಗ್,  ಸಿ) ಅಲೆಕ್ಸಾಂಡರ್ ಪಾರ್ಕ್ಸ್,  ಡಿ) ಗ್ರೆಗೋರ್ ಮೆಂಡಲ್

ನಾಲ್ಕು ಮಹಾಸಾಗರಗಳಲ್ಲಿ ಅತಿ ದೊಡ್ಡದು ಯಾವುದು
ಎ) ಹಿಂದೂ ಮಹಾಸಾಗರ,  ಬಿ) ಆರ್ಕಟಿಕ್ ಮಹಾಸಾಗರ,  ಸಿ) ಫೆಸಿಫಿಕ್ ಮಹಾಸಾಗರ,  ಡಿ) ಅಟ್ಲಾಂಟಿಕ್ ಮಹಾಸಾಗರ

ಸಾರ್ಕ್ನಲ್ಲಿ ಎಷ್ಟು ರಾಷ್ಟ್ರಗಳಿವೆ
ಎ) 6,  ಬಿ) 7,  ಸಿ) 8,  ಡಿ) 9

ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಇಷ್ಟು ಇರುತ್ತದೆ
ಎ) 19KHz,  ಬಿ)20Hz,  ಸಿ) 30Hz, ಡಿ)30KHz


ಅನಿಮೋಮೀಟರ್ ಅನ್ನು ಏನನ್ನು ಅಳೆಯಲು ಉಪಯೋಗಿಸುತ್ತಾರೆ
ಎ) ದೇಹದ ಉಷ್ಣಾಂಶ,  ಬಿ) ಗಾಳಿಯ ವೇಗ,  ಸಿ) ಒಂದು ಪ್ರದೇಶದ ಎತ್ತರ,  ಡಿ) ದೇಹದಲ್ಲಿರುವ ಕೊಬ್ಬಿನ ಅಂಶ

ಗುಂಪಿಗೆ ಸೇರದ ವಸ್ತುವನ್ನು ಗುರುತಿಸಿ
ಎ) ಶುಂಠಿ,  ಬಿ) ವನಿಲ್ಲಾ,  ಸಿ) ಅರಿಶಿನ,  ಡಿ) ಕ್ಯಾರೆಟ್

ಗಾಂಧೀಜಿಯವರ ಆತ್ಮಚರಿತ್ರೆಯ ಹೆಸರೇನು
ಎ) ಡಿಸ್ಕವರಿ ಆಫ್ ಇಂಡಿಯಾ,  ಬಿ) ಮೈ ಎಕ್ಸ್ಪೆರಿಮೆಂಟ್ ವಿತ್ ಟ್ರೂಥ್,  ಸಿ) ರೋಸಸ್ ಇನ್ ಡಿಸೆಂಬರ್,  ಡಿ) ವಿಂಗ್ಸ್
ಆಫ್ ಫಯರ್

ಭಾರತದ ಚಿನ್ಹೆಯಲ್ಲಿರುವ ಸತ್ಯಮೇವ ಜಯತೇ ಎನ್ನುವುದರ ಮೂಲ
ಎ) ಮುಂಡಕ ಉಪನಿಷತ್,  ಬಿ) ಭಗವದ್ಗೀತೆ,  ಸಿ) ಕಠೋಪನಿಷತ್,  ಡಿ) ರಾಮಾಯಣ

ಪಂಪನು ಬರೆದ ಕೃತಿಯ ಹೆಸರು
ಎ) ಅಜಿತನಾಥ ಪುರಾಣ,  ಬಿ) ಶಾಂತಿನಾಥ ಪುರಾಣ,  ಸಿ) ಆದಿ ಪುರಾಣ,  ಡಿ) ಮಲ್ಲನಾಥ ಪುರಾಣ

ಕೆಳಕಂಡವರಲ್ಲಿ ಹೆಸರಾಂತ ಚಿತ್ರಕಾರ
ಎ) ಯು.ಎಸ್.ಕೃಷ್ಣರಾವ್,  ಬಿ) ಕೆ.ಕೆ.ಹೆಬ್ಬಾರ್,  ಸಿ) ಆರ್,ಕೆ.ಸೂರ್ಯನಾರಾಯಣ್,  ಡಿ) ಆರ್.ನಾಗೇಂದ್ರ ರಾವ್

ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ನೆಡೆಯಲಿರುವ ಸ್ಥಳ  

ಸಂಧ್ಯಾ ಸುರಕ್ಷಾ ಎಂಬ ಸರ್ಕಾರಿ ಯೋಜನೆ ಸಂಬಂಧಿಸಿರುವುದು
ಎ) ಸ್ತ್ರೀಯರಿಗೆ,  ಬಿ) ಶಾಲಾ ಬಾಲಕರಿಗೆ,  ಸಿ) ವೃದ್ಧರಿಗೆ,  ಡಿ) ರೈತರಿಗೆ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರು

ಕನಕದಾಸರ ಜನ್ಮಸ್ಥಳ ಈ ಜಿಲ್ಲೆಯಲ್ಲಿದೆ
ಎ) ದ.ಕ,  ಬಿ) ಹಾವೇರಿ, ಸಿ) ಗದಗ,  ಡಿ) ಶಿವಮೊಗ್ಗ

ಅಂತರ ರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಇರುವ ಸ್ಥಳ
ಎ) ನ್ಯೂಯಾರ್ಕ್,  ಬಿ) ರೋಮ್,  ಸಿ)ವಿಯನ್ನ,  ಡಿ) ಲಂಡನ್

ಜಮ್ಮು-ಕಾಶ್ಮೀರದ ಈಗಿನ ಮುಖ್ಯಮಂತ್ರಿ ಯಾರು

ಈ ದಿನಗಳಲ್ಲಿ ಹಣದುಬ್ಬರದ ಶೇಕಡಾ ಅಂದಾಜು ಪ್ರಮಾಣ

ದೋಹಾ ಯಾವ ದೇಶದ ರಾಜಧಾನಿ
ಎ) ಮಾಲ್ಡೀವ್ಸ್,  ಬಿ) ಕತಾರ್,  ಸಿ) ಫಿಲಿಫೈನ್ಸ್,  ಡಿ) ಸೌದಿ ಅರೇಬಿಯಾ

ದಾರಿಯಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬನು ಕಸದ ಬದಿಯಲ್ಲಿ ಆಗತಾನೆ ಹುಟ್ಟಿದ ಮಗುವೊಂದನ್ನು ನೋಡುತ್ತಾನೆ.  ಅವನು ಮಾಡುವ ಯಾವ ಕೆಲಸ ಸರಿಯಾದುದು
ಎ) ಮಗುವನ್ನು ತನ್ನ ಮನೆಗೆ ಒಯ್ದು ಅದನ್ನು ಸಾಕುತ್ತಾನೆ,  ಬಿ) ಮಗು ಬಿದ್ದಿರುವ ಬಗ್ಗೆ ಹತ್ತಿರದ ಆಸ್ಪತ್ರೆಗೆ ಫೋನ್ ಮಾಡುತ್ತಾನೆ,  ಸಿ) ಮಗು ಬಿದ್ದಲ್ಲೇ ಬಿದ್ದಿರಲಿ ಎಂದು ತನ್ನ ಪಾಡಿಗೆ ತಾನು ಹೊರಟುಹೋಗುತ್ತಾನೆ,  ಡಿ) ಮಗು ಬಿದ್ದಿರುವ ಬಗ್ಗೆ ಹತ್ತಿರದ ಪೊಲೀಸರಿಗೆ ತಿಳಿಸುತ್ತಾನೆ

ಹರಪ್ಪ ನಗರವು ಈಗ ಪಾಕಿಸ್ಥಾನದ
ಎ) ಲಾಹೋರ್ ಬಳಿ ಇದೆ,  ಬಿ) ಕರಾಚಿ ಬಳಿ ಇದೆ,  ಸಿ) ಪೇಷಾವರ್ ಬಳಿಯಿದೆ,  ಡಿ) ರಾವಲ್ ಪಿಂಡಿ ಬಳಿಯಿದೆ

ಡಚ್ ಈಸ್ಟ್ ಇಂಡಿಯಾ ಕಂಪನಿ 1605ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ
ಎ) ಪುಲಿಕಾಟ್,  ಬಿ) ಸೂರತ್,  ಸಿ) ಮಚಲಿಪಟ್ಟಣ,  ಡಿ) ಕೊಚ್ಚಿ

ದೊರೆ ಅಲೆಕ್ಸಾಂಡರ್ ಸಿಂಧೂನದಿ ತೀರಕ್ಕೆ ಬಂದ ವರ್ಷ
ಎ) ಕ್ರೀ.ಪೂ.305,  ಬಿ) ಕ್ರಿ.ಪೂ.326,  ಸಿ) ಕ್ರಿ.ಪೂ 316,  ಡಿ) ಕ್ರಿ.ಪೂ.323

ಚೀನಾ ದೇಶದ ಯಾತ್ರಿಕ ಫಾ-ಹಿಯಾನ್ ಭಾರತಕ್ಕೆ ಭೇಟಿನೀಡಿದಾಗ ಆಳುತ್ತಿದ್ದ ರಾಜ
ಎ) ಚಂದ್ರಗುಪ್ತ ವಿಕ್ರಮಾದಿತ್ಯ,  ಬಿ) ಅಶೋಕ,  ಸಿ) ಕಾನಿಷ್ಕ,  ಡಿ) ಚಂದ್ರಗುಪ್ತ ಮೌರ್ಯ

ಮೊದಲನೆ ಪಾಣಿಪಟ್ ಕದನ ನೆಡೆದಿದ್ದು
ಎ) ಬಾಬರ್ ಮತ್ತು ಇಬ್ರಾಹಿಂ ಲೋದಿ ನಡುವೆ ಬಿ) ಅಕ್ಬರ್ ಮತ್ತು ಹೇಮು ನಡುವೆ,  ಸಿ) ಔರಂಗ ಜೇಬ್ ಮತ್ತು ಶಿವಾಜಿ ನಡುವೆ,  ಡಿ) ಯಾವುದು ಅಲ್ಲ

ಮುಂದಿನ ಸಂಖ್ಯೆ ಏನು?  87, 81, 75, 69, 63
ಎ) 57,  ಬಿ) 56,  ಸಿ) 62,  ಡಿ) 55

ಗುಂಪಿಗೆ ಸೇರದಿರುವ ಸಂಖ್ಯೆಯನ್ನು ಗುರುತಿಸಿ
ಎ) 3,  ಬಿ) 9,  ಸಿ) 19,  ಡಿ) 24

20ರ ಶೇಕಡಾ 30 ರಷ್ಟನ್ನು 30ರ ಶೇಕಡಾ 20ರಷ್ಟನ್ನು ಕೂಡಿದರೆ ಬರುವ ಸಂಖ್ಯೆ
ಎ) 600 ರ ಶೇಕಡಾ 10,  ಬಿ) 1200 ರ ಶೇಕಡಾ 10,  ಸಿ) 1200 ರ ಶೇಕಡಾ 1,  ಡಿ) 600 ರ ಶೇಕಡಾ 1

ಇವುಗಳಲ್ಲಿ ಅತಿ ದೊಡ್ಡ ಭಿನ್ನಾಂಕ ಯಾವುದು
ಎ) 3/4,  ಬಿ) 7/8,  ಸಿ) 4/5,  ಡಿ) 7/9

ಪರಿಸರ ಮಾಲೀನ್ಯ ತಪ್ಪಿಸಲು  ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಎಥೆನಾಲ್ ಅನ್ನು ಯಾವುದರಿಂದ ತಯಾರಿಸಲಾಗುವುದಿಲ್ಲ
ಎ) ಮೆಕ್ಕೆಜೋಳ,  ಬಿ) ಕಬ್ಬು,  ಸಿ) ಗೋಧಿ,  ಡಿ) ಶೇಂಗಾ ಬೀಜ


ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು 8 ಕಿ.ಮೀ ಪಶ್ಚಿಮಕ್ಕೆ ಕ್ರಮಿಸಿ ಮತ್ತೆ 2 ಕಿಮೀ ದಕ್ಷಿಣಕ್ಕೆ ಕ್ರಮಿಸುತ್ತಾನೆ.  ಅನಂತರ ಅವನು ಮತ್ತೆ 6 ಕಿ.ಮೀ ಉತ್ತರಕ್ಕೆ ಪ್ರಯಾಣ ಮಾಡುತ್ತಾನೆ.  ಆತ ತಾನು ಚಲಿಸಲು ಪ್ರಾರಂಭಿಸಿದ ಸ್ಥಳದಿಂದ ಎಷ್ಟು ಕಿಮೀ ದೂರದಲ್ಲಿ ಇರುತ್ತಾನೆ.
ಎ) 5,  ಬಿ) 6,  ಸಿ) 7,  ಡಿ) 8

ಒಂದು ಸಂಸ್ಥೆಯಲ್ಲಿ 9 ಜನ ಕೆಲಸ ಮಾಡುತ್ತಾರೆ - ರಾಮ, ಲಕ್ಷ್ಮಣ, ಭರತ, ಶತೃಘ್ನ, ಇಬ್ರಾಹಿಂ, ಅಬ್ದುಲ್, ಜಾನ್, ಮಹಾವೀರ್ ಹಾಗೂ ಶಾಂತಲ ಅವರುಗಳು ಸಂಸ್ಥೆಯಲ್ಲಿ ಈ ಕೆಳಕಂಡಂತೆ ಸೇವೆ ಸಲ್ಲಿಸಿರುತ್ತಾರೆ.  ಜಾನನು ಲಕ್ಷ್ಮಣನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಮಹಾವೀರನು ಭರತನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ ರಾಮನು ಜಾನ್ ಹಾಗೂ ಶಾಂತಲಾಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ. ಅಬ್ದುಲನು ಇಬ್ರಾಹಿಂಗಿಂತ ಹೆಚ್ಚು ಸೇವೆ ಸಲ್ಲಿಸಿರುತ್ತಾನೆ.  ಇಬ್ರಾಹಿಂನು ರಾಮನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಶತೃಘ್ನಜು ಎಲ್ಲರಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಹಾಗಾದರೆ ಶಾಂತಲ ಹಾಗೂ ಮಹಾವೀರ್ ಇಬ್ಬರೂ ಸಮನಾಗಿ ಸೇವೆ ಸಲ್ಲಿಸಿದ್ದರೆ, ಶಾಂತಲಾಗಿಂತ ಕಡಿಮೆ ಸೇವೆ ಸಲ್ಲಿಸಿರುವ ಜನರ ಸಂಖ್ಯೆ ಎಷ್ಟು
ಎ) 2,  ಬಿ) 3,  ಸಿ) 1,  ಡಿ)4

ಮಹಾವೀರನಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ ಜನರ ಸಂಖ್ಯೆ ಎಷ್ಟು
ಎ) 6,  ಬಿ) 3,  ಸಿ) 5, ಡಿ) 2

ಪ್ರಿಯನ ಗಂಡನ ತಾಯಿಯ ಅಕ್ಕ ತನ್ನ ಮಗನನ್ನು ರಮೇಶನ ತಂದೆಯ ಸೋದರಿ ಪುಷ್ಪಳಿಗೆ ಲಗ್ನ ಮಾಡಿಕೊಟ್ಟಿದ್ದಾಳೆ.  ಪ್ರಯಾಳ ತಾಯಿಯು ಪುಷ್ಪಳ ಸೋದರಿಯಾದರೆ ಪ್ರಿಯಾಳಿಗೂ ರಮೇಶ್ ಗೂ ಇರುವ ಸಂಬಂಧ ಏನು 
ಎ) ಅವರಿಬ್ಬರೂ ಸ್ನೇಹಿತರು,  ಬಿ) ಅವರಿಬ್ಬರೂ ಸೋದರ ಸಂಬಂಧಿಗಳು,  ಸಿ) ರಮೇಶ್ ಪ್ರಿಯಾಳ ಮಾವ,  ಡಿ) ಪ್ರಿಯಾ ರಮೇಶನ ಅತ್ತೆ

ಇತ್ತೀಚೆಗೆ ದಾದ ಸಹೇಬ್ ಪ್ರಶಸ್ತಿ  ಪಡೆದವರು ಯಾರು

ಈ ಕೆಳಕಂಡ ದೂರು ಪೊಲೀಸ್ ಠಾಣೆಯೊಂದಕ್ಕೆ ಬರುತ್ತದೆ ನಮ್ಮ ಊರು ಹಿರಿಯೂರು. ಪಕ್ಕದ ಊರು ಕಿರಿಯೂರು.  ಈ ಎರಡು ಊರಿನ ಗೌಡರಿಗೆ ಮನಸ್ತಾಪವಿದೆ ನಿನ್ನೆ ಅಮವಾಸ್ಯೆಯ ರಾತ್ರಿ ಕಿರಿಯೂರಿನ ಹದಿನೈದು ಮಂದಿ ನೇತೃತ್ವದಲ್ಲಿ ಕೇಕೆ ಹಾಕುತ್ತಾ ನಮ್ಮ ಊರಿಗೆ ಬಂದು ನಮ್ಮ ಗೌಡನ ಹೊಲದಲ್ಲಿ ಬೆಳೆದಿದ್ದ ಪೈರನ್ನು ನಾಶ ಮಾಡುತ್ತಿದ್ದಾಗ ನಾವು ಎಂಟು ಜನ ರಾಮೇಗೌಡನ ಮುಂದಾಳತ್ವದಲ್ಲಿ ಅಲ್ಲಿಗೆ ಹೋದಾಗ ನಮ್ಮ ಎರಡೂ ಗುಂಪಿನ ನಡುವೆ ಹೊಡೆದಾಟವಾಯಿತು.  ಬಂಗಾರಪ್ಪ, ರಾಮೇಗೌಡನ ಶರ್ಟನ್ನು ಹಿಡಿದುಕೊಂಡು ಅವನಿಗೆ ಕೊಡಲಿಯಿಂದ ತಲೆಗೆ ಹೊಡೆದ.  ಸಿಂಗಾರಪ್ಪ ರಾಮೇಗೌಡನ ಅಣ್ನ ಕೃಷ್ಣೇಗೌಡನಿಗೆ ಮಚ್ಚಿನಿಂದ ಹೊಡೆದು ಬೆರಳು ಕತ್ತರಿಸಿದ.  ರಾಮೇಗೌಡನ ತಮ್ಮ ಬಚ್ಚೇಗೌಡ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದಾಗ ಅವರೆಲ್ಲರೂ ಓಡಿಹೋದರು.  ಗುಂಡು ಹನುಮೇಗೌಡನ ತಮ್ಮ ಶಿವಲಿಂಗೇಗೌಡನ ಕಾಲಿಗೆ ತಾಕಿ ಆತ ಗಾಯಗೊಂಡ.ಶಿವಲಿಂಗೇಗೌಡನ ಊರು ಯಾವುದು ಹಾಗೂ ಅವನ ಜೊತೆ ಎಷ್ಟು ಜನ ಇದ್ದರು
ಎ) ಕಿರಿಯೂರು - 14 ಜನ,  ಬಿ) ಹಿರಿಯೂರು - 15ಜನ,  ಸಿ) ಕಿರಿಯೂರು - 15ಜನ,  ಡಿ) ಹಿರಿಯೂರು - 13 ಜನ

ರಾಮೇಗೌಡನ ಜೊತೆ ಇದ್ದ ಅವನ ಸೋದರರು ಎಷ್ಟು ಹಾಗೂ ರಾಮೇಗೌಡನಿಗೆ ಎಲ್ಲಿ ಯಾವ ಆಯುಧದಿಂದ ಗಾಯವಾಯಿತು
ಎ) ಮೂರು - ಬೆರಳಿಗೆ ಮಚ್ಚಿನಿಂದ ಗಾಯ,  ಬಿ) ಎರಡು - ತಲೆಗೆ ಕೊಡಲಿಯಿಂದ ಗಾಯ,  ಸಿ) ಒಬ್ಬ - ಕಾಲಿಗೆ ಗುಂಡಿನ ಗಾಯ,  ಡಿ) ಎರಡು - ಬೆರಳಿಗೆ ಕೊಡಲಿಯಿಂದ

ನೀವು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವಾಗ ಠಾಣೆಗೆ ದೂರು ಕೊಡಲು ಯುವತಿ ಬರುತ್ತಾಳೆ.  ನಿಮ್ಮ ಠಾಣೆಯ ಮುಖ್ಯಾಧಿಕಾರಿಯಾದ ಇನ್ಸ್ಪಕ್ಟರ್ ಆ ಯುವತಿಯ ಜೊತೆ ಅಸಭ್ಯವಾಗಿ ನೆಡೆದುಕೊಂಡು ಆಕೆಯ ಮಾನಭಂಗಕ್ಕೆ ಪ್ರಯತ್ನಿಸುತ್ತಾನೆ.  ಆಗ ನೀವು
ಎ) ನಿಮ್ಮ ಪಾಡಿಗೆ ಇರುತ್ತೀರಿ,  ಬಿ) ಯುವತಿಯ ರಕ್ಷಣೆಗೆ ಧಾವಿಸುತ್ತೀರಿ,  ಸಿ) ಈ ರೀತಿ ಮಾಡಬಾರದು ಎಂದು ಇನ್ಸ್ಪೆಕ್ಟರ್ಗೆ ಬುದ್ಧಿ ಹೇಳುತ್ತೀರಿ,  ಡಿ) ಘಟನೆ ನೆಡೆದ ನಂತರ ಮೇಲಾಧಿಕಾರಿಗಳಿಗೆ ಅನಾಮಧೇಯ ಅರ್ಜಿ ಸಲ್ಲಿಸುತ್ತೀರಿ

ನೀವು ಟ್ರಾಫಿಕ್ ಕರ್ತವ್ಯ ಮಾಡುವಾಗ ಒಬ್ಬ ವ್ಯಕ್ತಿ ಮೋಟಾರ್ ಸೈಕಲ್ನಲ್ಲಿ ಬಂದು ನೀವು ನಿಲ್ಲುವ ಸೂಚನೆ ಕೊಟರೂ ನಿಲ್ಲದೇ, ನಿಮ್ಮ ಮೇಲೆಯೇ ವಾಹನ ಹರಿಸುವಂತೆ ಮಾಡಿ ನಿಮ್ಮ ಕೈಯಲ್ಲಿದ್ದ ವಾಕಿಟಾಕಿ ಸೆಟ್ ಕಸಿದುಕೊಂಡು ಹೋಗುತ್ತಾನೆ
ಆಗ ನೀವು
ಎ) ಅವನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅವನಿಗೆ ಲಾಠಿಯಿಂದ ಹೊಡೆದು ಅವನ ಕೈ ಮುರಿಯುತ್ತೀರಿ.  ಬಿ) ನಿಮ್ಮ ಸಹೋದ್ಯೋಗಿ ಬಳಿ ಇದ್ದಂತಹ ಬಂದೂಕಿನಿಂದ ಅವನತ್ತ ಗುಂಡು ಹಾರಿಸುತ್ತೀರಿ,  ಸಿ) ನಿಮ್ಮ ಮೇಲಾಧಿಕಾರಿಗೆ ವಿಷಯ ತಿಳಿಸಿ ಸುಮ್ಮನಾಗುತ್ತೀರಿ,  ಡಿ) ಆ ವ್ಯಕ್ತಿಯ ವಾಹನದ ನಂಬರ್ ಬರೆದುಕೊಮಡು ಆ ವ್ಯಕ್ತಿಯನ್ನು  ಪತ್ತೆ ಹಚ್ಚಿ ಕಾನೂನಿನ ಕ್ರಮ ಜರುಗಿಸುತ್ತೀರಿ