Friday, May 14, 2010

GK

ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಭುತ್ವವನ್ನು ಬ್ರಿಟೀಷ್ ಆಡಳಿತಕ್ಕೆ ಹಸ್ತಾಂತರಿಸಿದ ಕಾಯ್ದೆಯ ವರ್ಷ
ಎ) 1813 ಕಾಯ್ದೆ,  ಬಿ) 1858ಕಾಯ್ದೆ,  ಸಿ)1773ಕಾಯ್ದೆ,  ಡಿ)1784ಕಾಯ್ದೆ

1935ರ ಗರ್ವನಮೆಂಟ್ ಆಫ್ ಇಂಡಿಯಾ ಕಾಯ್ದೆಯ ಪ್ರಕಾರ ಈ ಕೆಳಗಿನ ಯಾವುದು ಸಂಬಂಧಪಟ್ಟಿಲ್ಲ
ಎ) ಪ್ರಾಂತೀಯ ಸ್ವಯಮಾಡಳಿತ,  ಬಿ) ಭಾರತದ ರಾಜ್ಯಗಳ ಒಕ್ಕೂಟ,  ಸಿ) ದ್ವಿ ಶಾಸನ(Parliment)ಸಭೆ,  ಡಿ) ರಾಜ್ಯ ಮತ್ತು  ರಾಷ್ಟ್ರದಲ್ಲಿ ದ್ವಿಪದ್ದತಿ

ಭಾರತ ಒಂದು ರಾಜ್ಯಗಳ ಒಕ್ಕೂಟ(Union of States) ಇದನ್ನು ಈ ರಾಷ್ಟ್ರದಿಂದ ಅಳವಡಿಸಲಾಗಿದೆ
ಎ) ಅಮೇರಿಕ,  ಬಿ) ಯು.ಕೆ,  ಸಿ) ಐರ್ಲೆಂಡ್,  ಡಿ) ಕೆನಡ

ಭಾರತದ ಶಾಸನಾತ್ಮಕ ವಿಧಾನವು ಬ್ರಿಟೀಷ್ ಶಾಸನಾತ್ಮಕ ವಿಧಾನದಿಂದ ಕೆಳಕಂಡಂತೆ ಯಾವರೀತಿ ಬೇರೆಯಾಗಿದೆ
ಎ) ಸಂಪೂರ್ಣ ಜವಾಬ್ದಾರಿಯುತ ವ್ಯವಸ್ಥೆಯಾಗಿದೆ.  ಬಿ) ದ್ವಿ ಶಾಸನ ಪದ್ದತಿ,  ಸಿ) ನ್ಯಾಯಾಂಗ ವಿಮರ್ಶೆಯ ಪದ್ಧತಿ (Judicial review),  ಡಿ) ನಾಮಮಾತ್ರ ರಾಷ್ಟ್ರಾಧ್ಯಕ್ಷರು 

UNOದ ವ್ಯವಹಾರಿಕ ಭಾಷೆ
ಎ) ಇಂಗ್ಲೀಷ್ & ಫ್ರೆಂಚ್ ಮಾತ್ರ,  ಬಿ)  ಇಂಗ್ಲಿಷ್, ಫ್ರೆಂಚ್ & ರಷ್ಯನ್ ಮಾತ್ರ,  ಸಿ) ಇಂಗ್ಲಿಷ್, ಫ್ರೆಂಚ್,  ರಷ್ಯನ್, ಜರ್ಮನ್ &
ಚೈನೀಸ್ ಮಾತ್ರ,  ಡಿ) ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪಾನಿಷ್, ಚೈನೀಸ್ ಮತ್ತು ಅರೇಬಿಕ್ ಮಾತ್ರ


1961ರ ತನಕ ದಾರ್ದ ಮತ್ತು ನಾಗರ್ ಹವೇಲಿ ಯಾರ ಆಳ್ವಿಕೆಗೆ ಒಳಪಟ್ಟಿತ್ತು
ಎ) ಪೋರ್ಚುಗೀಸರು,  ಬಿ) ಫ್ರೆಂಚರು,  ಸಿ) ಬ್ರಿಟೀಷರು,  ಡಿ) ಯಾರು ಅಲ್ಲ

ಈ ಕೆಳಗಿನ ಯಾವ ಕಲಂ ಅಂತರ ರಾಷ್ಟ್ರೀಯ ಶಾಂತಿಗೆ ಸಂಬಂಧಿಸಿದೆ
ಎ) ಕಲಂ 51,  ಬಿ) ಕಲಂ 44,  ಸಿ) ಕಲಂ 45,  ಡಿ) ಕಲಂ 40

ಈ ಕೆಳಗಿನ ಯಾವ ಸದಸ್ಯರು ರಾಷ್ಟ್ರಪತಿಗಳ ಆಯ್ಕೆಯ ಚುನಾವಣೆಯಲ್ಲಿ  ಭಾಗಿಯಾಗಬಹುದಾಗಿದ್ದು ಅವರ ಮಹಾಭಿಯೋಗದಲ್ಲಿ ಭಾಗಿಯಾಗುವಹಾಗಿಲ್ಲ
ಎ) ಲೋಕಸಭೆ,  ಬಿ) ರಾಜ್ಯಸಭೆ,  ಸಿ) ರಾಜ್ಯ ವಿಧಾನ ಸಭೆ,  ಡಿ) ರಾಜ್ಯ ವಿಧಾನ ಪರಿಷತ್

 ಭಾರತೀಯ ಸಂಸತ್ತು ಇದನ್ನು ಹೊಂದಿದೆ
ಎ) 250ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು,  552ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಬಿ) 230ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು,  575ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಸಿ) 350ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು, 550ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಡಿ) 200ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ & 550ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು

 ಒಂದು ರಾಜ್ಯದ ಮುಖ್ಯಮಂತ್ರಿಯು ಈ ಕಾರಣದಿಂದ ರಾಷ್ಟ್ರಪತಿಗಳ ಚುನಾವಯಲ್ಲಿ ಭಾಗವಹಿಸಲಾಗುವುದಿಲ್ಲ
ಎ) ಅವರೇ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾಗ,  ಬಿ) ರಾಜ್ಯದ ಮೇಲ್ಮನೆ ಸದಸ್ಯರಾಗಿದ್ದಾಗ,  ಸಿ) ಎರಡೂ,  ಡಿ) ಯಾವುದು ಅಲ್ಲ

 ಅಂಡಮಾನ್-ನಿಕೊಬಾರ್ ದ್ವೀಪವು ಯಾವ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ
ಎ) ಆಂದ್ರಪ್ರದೇಶ,  ಬಿ) ಕಲ್ಕತ್ತಾ,  ಸಿ) ಮಡ್ರಾಸ್,  ಡಿ) ಒರಿಸ್ಸಾ

 ಭಾರತದ ಸಂವಿಧಾನದಲ್ಲಿ ರಾಜ್ಯಗಳು ಮತ್ತು ಅದರ ಭಾಗಗಳನ್ನು ಯಾವ ಪಟ್ಟಿಯಲ್ಲಿ ವಿವರಿಸಲಾಗಿದೆ
ಎ) ಒಂದನೇ,  ಬಿ) ಎರಡನೇ,  ಸಿ) ಮೂರನೇ,  ಡಿ) ನಾಲ್ಕನೇ

 ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಹಾಗೂ ಎಸ್.ಸಿ., ಎಸ್.ಟಿ ವರ್ಗಗಳು ಇಡುವ ಸೆಕ್ಯುರಿಟಿ ಡಿಪಾಸಿಟ್ ಮೊತ್ತವೆಷ್ಟು
ಎ) 5000 & 25000,  ಬಿ) 10000 & 5000,  ಸಿ) 15000 & 7500,  ಡಿ) 10000 & 25000

 ಸಂವಿಧಾನ ಸಭೆಯ ಮೊದಲ ಸಭೆ ನೆಡೆದಿದ್ದು ಈ ದಿನಾಂಕದಂದು
ಎ) 6-10-1946,  ಬಿ) 9-12-1946,  ಸಿ) 26-11-1949,  ಡಿ) 26-01-1950

 ಮಂತ್ರಿಮಂಡಲವು ಒಟ್ಟಾಗಿ ಇದಕ್ಕೆ ಜವಾಬ್ದಾರಿಯಾಗಿದೆ
ಎ) ಪ್ರಧಾನಮಂತ್ರಿಗೆ,  ಬಿ) ಜನರಿಗೆ,  ಸಿ) ಪಾರ್ಲಿಮೆಂಟಿಗೆ,  ಡಿ) ರಾಷ್ಟ್ರಪತಿಗೆ

 ಸಂವಿಧಾನದ ಪ್ರಕಾರ ಮಂತ್ರಿಗಳು ಇಲ್ಲಿಯವರೆಗೆ ಅಧಿಕಾರದಲ್ಲಿರಬಹುದು
ಎ) ಪ್ರಧಾನಮಂತ್ರಿಯ ಇಚ್ಛೆಯಿರುವವರೆಗೆ,  ಬಿ) ಸಂಸತ್ತಿನ ಇಚ್ಛೆಯಿರುವವರೆಗೆ,  ಸಿ) ರಾಷ್ಟ್ರಪತಿಯವರ ಇಚ್ಛೆಯಿರುವವರೆಗೆ,  ಡಿ) ಲೋಕಸಭೆ ಸ್ಪೀಕರ್ ಇಚ್ಛಯಿರುವವರೆಗೆ

 ಭಾರತೀಯ ಸಂಸತ್ತು ಇವರನ್ನು ಹೊಂದಿದೆ
ಎ) ನೇರವಾಗಿ ಆಯ್ಕೆಯಾದ ಸದಸ್ಯರನ್ನು,  ಬಿ) ನೇರವಾಗಿ & ನೇರವಲ್ಲದೆ ಆಯ್ಕೆಯಾದ ಸದಸ್ಯರನ್ನು,  ಸಿ) ನೇರವಾಗಿ & ನೇಮಕ ಮಾಡಿದ ಸದಸ್ಯರನ್ನು,  ಡಿ) ನೇರವಾಗಿ, ನೇರವಲ್ಲದೆ & ನೇಮಕ ಮಾಡಿದ ಸದಸ್ಯರನ್ನು

 ಆ ಮನೆಯ ಸದಸ್ಯನಾಗದೆ ಅದರ ಅಧ್ಯಕ್ಷನಾಗುವ ಮನೆಯಾವುದು
ಎ) ಲೋಕಸಭೆ,  ಬಿ) ರಾಜ್ಯಸಭೆ,  ಸಿ) ವಿಧಾನ ಸಭೆ,  ಡಿ) ವಿಧಾನ ಪರಿಷತ್

 ರಾಜ್ಯಸಭೆಯ ಅಧ್ಯಕ್ಷರು
ಎ) ಓಟಿನ ಹಕ್ಕನ್ನು ಹೊಂದಿಲ್ಲ,  ಬಿ) ಎಲ್ಲರಂತೆ ಒಂದು ಓಟಿನ ಹಕ್ಕನ್ನು ಹೊಂದಿದ್ದಾರೆ,  ಸಿ) ಸಮಬಲವಿದ್ದಾಗ ಮಾತ್ರ ಓಟನ್ನು ಮಾಡುತ್ತಾರೆ,  ಡಿ) ಯಾವುದು ಅಲ್ಲ

 ಸ್ಥಳೀಯ ಮಂಡಲಿಗಳ ಸಭೆಯು ಯಾರ ಅಧ್ಯಕ್ಷತೆಯಲ್ಲಿ ನೆಡೆಯುತ್ತದೆ
ಎ) ಪ್ರಧಾನ ಮಂತ್ರಿ,  ಬಿ) ರಾಷ್ಟ್ರ ಗೃಹಮಂತ್ರಿ  ಸಿ) ಮುಖ್ಯಮಂತ್ರಿ  ಡಿ) ರಾಜ್ಯಪಾಲರು

 ಪಂಚಾಯತ್ ರಾಜನ್ನು ಭಾರತದಲ್ಲಿ ಎಂದು ಪರಿಚಯಿಸಲಾಯಿತು
ಎ) 1969,  ಬಿ) 1950,  ಸಿ) 1957,  ಡಿ) 1967

 ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರುವಲ್ಲಿ ರಾಜ್ಯಪಾಲರು ರಾಷ್ಟ್ರಾಧ್ಯಕ್ಷರಿಗೆ ವರದಿ ಸಲ್ಲಿಸುವುದು
ಎ) ತಮ್ಮ ಸ್ವಇಚ್ಛೆಯ ಮೇರೆಗೆ,  ಬಿ) ಮುಖ್ಯಮಂತ್ರಿಗಳ ಸಲಹೆಮೇರೆಗೆ,  ಸಿ) ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ,  ಡಿ) ರಾಷ್ಟ್ರಪತಿಗಳ ಕೋರಿಕೆಯ ಮೇರೆಗೆ

 ಇದರಲ್ಲಿ ಯಾವ ತಿದ್ದುಪಡಿಯು ಸಂವಿಧಾನವನ್ನು ತಿದ್ದುಪಡಿ ಮಾಡಬಹುದೆಂದು ತಿಳಿಸುತ್ತದೆ
ಎ) 42ನೇ, ಬಿ) 24ನೇ,  ಸಿ) 44ನೇ,  ಡಿ) 61ನೇ ತಿದ್ದುಪಡಿ

ಸಂಸತ್ತಿಗೆ ಗರಿಷ್ಟ ಎಷ್ಟುಜನ ಸದಸ್ಯರನ್ನು ನೇಮಕ ಮಾಡಬಹುದು
ಎ) 12,  ಬಿ) 14,  ಸಿ) 20,  ಡಿ) 2