Tuesday, April 13, 2010

ರಿಸರ್ವ್ ಸಬ್ಇನ್ಸ್ಪೆಕ್ಟರ್ ಪ್ರಶ್ನೆಪತ್ರಿಕೆ - 2008


ಇತ್ತೀಚೆಗೆ ಮೃತಪಟ್ಟ ಜೈಪುರ್ ಕಾಲಿನ ಅನ್ವೇಷಕರ ಹೆಸರೇನು
ಎ) ಆರ್.ಕೆ.ಸಿನ್ಹಾ,  ಬಿ) ಎ)ಬಿ.ಕೆ.ಸೇಠಿ,  ಸಿ) ಎಸ್.ಕೆ.ಅಹುಜಾ,  ಡಿ) ಪಿ.ಕೆ.ಮಾಧವ

ಭಾರತದ ಮುಖ್ಯ ಚುನಾವಣಾ ಆಯುಕ್ತರು ಯಾರು?

ಪೆರಿಯಾರ್ ಸರೋವರ ಯಾವ ರಾಜ್ಯದಲ್ಲಿದೆ
ಎ) ಮಹಾರಾಷ್ಟ್ರ,  ಬಿ) ಕೇರಳ,  ಸಿ) ಆಂದ್ರಪ್ರದೇಶ, ಡಿ) ಒರಿಸ್ಸಾ

ಕೇಂದ್ರಾಡಳಿತ ಪ್ರದೇಶ ದಿಯುನ ನೆರೆರಾಜ್ಯ ಇದು
ಎ) ಮಹಾರಾಷ್ಟ್ರ,  ಬಿ) ಗುಜರಾತ್,  ಸಿ) ಕೇರಳ,  ಡಿ) ತಮಿಳುನಾಡು

6ನೇ ವೇತನ ಆಯೋಗದ ಮುಖ್ಯಸ್ಥರು ಯಾರು
ಎ) ಶ್ರೀಕೃಷ್ಣ.  ಬಿ) ಸಬರ್ ವಾಲ್,  ಸಿ) ವರ್ಮಾ,  ಡಿ) ವೆಂಕಟಾಚಲಯ್ಯ

ಅಖಿಲ ಭಾರತ ವಾಕ್ ಶ್ರವಣಸಂಸ್ಥೆ ಎಲ್ಲಿದೆ
ಎ) ಮೈಸೂರು,  ಬಿ) ನವದೆಹಲಿ,  ಸಿ) ಲಕ್ನೋ,  ಡಿ) ಹೈದರಾಬಾದ್


ಲೋಕಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಸ್ಥಾನಗಳಲ್ಲಿ ಅತಿ ಹೆಚ್ಚು ಸ್ಥಾನಗಳು ಈ ರಾಜ್ಯದಲ್ಲಿವೆ

ಎ) ಬಿಹಾರ್,  ಬಿ) ಗುಜರಾತ್,  ಸಿ) ಉತ್ತರ ಪ್ರದೇಶ, ಡಿ) ಮಧ್ಯಪ್ರದೇಶ


ಕೋಮಲ ಹಾಗು ಆಶಾ ಇವರಿಬ್ಬರ ಮಾಸಿಕ ಅದಾಯವು 4:3 ಅನುಪಾತದಲ್ಲಿದೆ.  ಅವರ ಮಾಸಿಕ ವೆಚ್ಚವು 3:2 ಅನುಪಾತದಲ್ಲಿದೆ ಇವರಿಬ್ಬರು ಪ್ರತಿ ತಿಂಗಳು 600 ರೂಗಳನ್ನು ಉಳಿಸುತ್ತಾರೆ.  ಇವರಿಬ್ಬರ ಒಟ್ಟಾರೆ ಆದಾಯವೇನು

ಎ) 8400,  ಬಿ) 5,600,  ಸಿ) 4,200,  ಡಿ) 2,800

ಒಂದು ಹಳ್ಳಿಯ ಜನಸಂಖ್ಯೆ 5000, ಇವರಲ್ಲಿ ಪುರುಷರು ಶೇ.10 ರಂತೆಯೂ ಸ್ತ್ರೀಯರು ಶೇ.15 ರಂತೆಯೂ ಪ್ರತಿವರ್ಷವು ಹೆಚ್ಚುತ್ತಾರೆ.  ಒಂದು ವರ್ಷದಲ್ಲಿ  ಹಳ್ಳಿಯ ಜನಸಂಖ್ಯೆ 5600 ಆದರೆ  ಆ ಹಳ್ಳಿಯಲ್ಲಿನ ಪುರುಷರ ಸಂಖ್ಯೆ ಎಷ್ಟು
ಎ) 2000,  ಬಿ) 3000,  ಸಿ) 4000,  ಡಿ) 2500

ಒಂದು ರೈಲು ಗಂಟೆಗೆ ಸರಾಸರಿ 40 ಕಿ.ಮೀ ಓಡಿದರೆ ತಾನು ಮುಟ್ಟಬೇಕಾದ ಸ್ಥಳವನ್ನು  ಸರಿಯಾದ ಸಮಯಕ್ಕೆ ತಲುಪುತ್ತದೆ.  ಇದೇ ರೈಲಿನ ಸರಾಸರಿ ವೇಗ ಗಂಟೆಗೆ 35 ಕಿ.ಮೀ. ಆದರೆ ಅದು ತನ್ನ ಸ್ಥಳವನ್ನು 15 ನಿಮಿಷ ತಡವಾಗಿ ತಲುಪುತ್ತದೆ.  ಈ ರೈಲು ಕ್ರಮಿಸುವ ದೂರ ಕಿ.ಮೀ.ಗಳಲ್ಲಿ ಎಷ್ಟಾಗುತ್ತದೆ
ಎ) 40,  ಬಿ) 70,  ಸಿ) 30,  ಡಿ) 80

15000 ರೂ ಬಂಡವಾಳದಮೇಲೆ 3 ವರ್ಷಕ್ಕೆ ಗಳಿಸಿದ ಸಾಮಾನ್ಯ ಬಡ್ಡಿ 5400 ರೂ ಆದರೆ ವಾರ್ಷಿಕ ಬಡ್ಡಿಯದರ ಏನು
ಎ) 14,  ಬಿ) 18,  ಸಿ) 16,  ಡಿ) 12


ನೀವು ಆತಂಕವಾದಿಗಳ ವಿರುದ್ಧ ನೆಡೆಸಲಾಗುತ್ತಿರುವ ಕಾರ್ಯಾಚರಣೆಯೊಂದರ ತಂಡದ ಮುಖ್ಯಸ್ಥರಾಗಿ ಹೋಗುತ್ತಿರುತ್ತೀರಿ ಕೆಲವು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ನೀವು ನೋಡುತ್ತೀರಿ.  ಆ ವ್ಯಕ್ತಿಗಳು ನಿರಾಯುಧರಾಗಿರುತ್ತಾರೆ.  



ನಿಮ್ಮನ್ನು ನೋಡಿ ಅವರು ಓಡಲು ಆರಂಭಿಸುತ್ತಾರೆ ಆಗ ನೀವು


ಎ) ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಲು ಪ್ರಯತ್ನಿಸುತ್ತೀರಿ,  ಬಿ) ಕಾಡಿನ ಹಾದಿ ಬಗ್ಗೆ ನಿಮಗೆ ತಿಳಿಯದೇ ಇರುವುದರಿಂದ ಅವರುಗಳು ಓಡಿಹೋಗಲೆಂದು  ಸುಮ್ಮನಾಗುತ್ತೀರಿ, 
ಸಿ) ನಿಲ್ಲಿರಿ ಎಂದು ಕೂಗಿ ಅವರನ್ನು ತಡೆಯಲು ಪ್ರಯತ್ನಿಸುತ್ತೀರಿ,  
ಡಿ)ಅವರ ಮೇಲೆ ಗುಂಡನ್ನು ಹಾರಿಸುತ್ತೀರಿ


ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಯಾರು


PREMONITION ಎಂಬುದನ್ನು 68530492904 ಎನ್ನುವ ಸಂಕೇತದಲ್ಲಿ ಬರೆದರೆ MONITOR ಎನ್ನುವುದನ್ನು ಯಾವ ಸಂಕೇತದಲ್ಲಿ ಬರೆಯಬಹುದು
ಎ) 1234567,  ಬಿ) 3049208,  ಸಿ) 3029408, ಡಿ) 3049258

ವರಲಕ್ಷ್ಮಿಯು ಪ್ರತಿ ತಂಗಳ ಮೊದಲನೆಯ ಕೆಲಸದ ದಿನದಂದು ಆಕಸ್ಮಿಕ ರಜೆಯನ್ನು ಪಡೆಯುತ್ತಾಳೆ.  ಆಕೆಯ ಕಛೇರಿಗೆ ಶನಿವಾರ ಹಾಗೂ ಭಾನುವಾರಗಳು ರಜಾ ದಿನಗಳು.  30 ದಿನಗಳ ಮಾಸವೊಂದರಲ್ಲಿ ಮೊಟ್ಟಮೊದಲ ದಿನ ಮಂಗಳವಾರವಾಗಿರುತ್ತದೆ.  ವರಲಕ್ಷ್ಮಿಯು ತನ್ನ ಮುಂದಿನ ಆಕಸ್ಮಿಕ ರಜೆಯನ್ನು ಯಾವ ದಿನದಂದು ತೆಗೆದುಕೊಳ್ಳುತ್ತಾಳೆ
ಎ) ಬುಧವಾರ,  ಬಿ) ಗುರುವಾರ,  ಸಿ) ಶುಕ್ರವಾರ, ಡಿ) ಸೋಮವಾರ

ಕ್ರಿ.ಶ.2008 ಶಾಲಿವಾಹನ ಶಕೆಯ ಅನ್ವಯ ಯಾವ ವರ್ಷವಾಗುತ್ತದೆ
ಎ) 2010,  ಬಿ) 2022,  ಸಿ) 2086, ಡಿ) 2031

ಗುಪ್ತರ ಕಾಲಕ್ಕೆ ಈ ಸಾಹಿತಿ ಸೇರಿಲ್ಲ
ಎ) ಕಾಳಿದಾಸ  ಬಿ) ಬಾಣಭಟ್ಟ,  ಸಿ) ಭಾಸ,  ಡಿ) ಶೂದ್ರಕ

ಪಾಂಡ್ಯರಾಜರ ರಾಜಧಾನಿ ಈಗಿನ _______ ಗೆ ಸಮ
ಎ) ಕನ್ಯಾಕುಮಾರಿ,  ಬಿ) ತಂಜಾವೂರು,  ಸಿ) ಮಧುರೈ, ಡಿ) ಮಹಾಬಲೀಪುರ

ತನ್ನ ಶಾಲೆಗೆ ತಲುಪಬೇಕಾದರೆ ಪ್ರಸಾದ್ 7 ರಸ್ತೆಗಳನ್ನು ದಾಟಬೇಕು.  ಆತನ ಮನೆ ಹಾಗೂ ಮಹಾತ್ಮಗಾಂಧಿ ರಸ್ತೆಯ ಮಧ್ಯದಲ್ಲಿ  ನೆಹರು ರಸ್ತೆಯಿದೆ.  ಅವನ ಶಾಲೆಯಿಂದ ಮೂರನೆಯದು ಶಾಸ್ತ್ರಿರಸ್ತೆ,  ಇಂದಿರಾ ರಸ್ತೆ ಪಾರ್ಕ್ ರಸ್ತೆಯ ಪಕ್ಕದರಸ್ತೆ,  ಪ್ರಸಾದ್ ಪಾಟೇಲ್  ರಸ್ತೆಯನ್ನು ಕಡೆಯದಾಗಿ ದಾಟಬೇಕು,  ಮಹಾತ್ಮ ಗಾಂಧಿ ರಸ್ತೆ, ನೆಹರು ರಸ್ತೆ ಹಾಗೂ ಇಂದಿರಾ ರಸ್ತೆಯ ಮಧ್ಯದಲ್ಲಿದೆ.  ತಿಲಕ್ ರಸ್ತೆ ಪ್ರಸಾದ್ ಮನೆಯಿಂದ 6ನೇ ರಸ್ತೆ.  ಹಾಗಾದರೆ ಈ ಕೆಳಗಿನವುಗಳನ್ನು ಉತ್ತರಿಸಿ ?

ಮಹಾತ್ಮ ಗಾಂಧಿ ರಸ್ತೆ ಮತ್ತು ತಿಲಕ್ ರಸ್ತೆ ಮಧ್ಯೆ ಎಷ್ಟು ರಸ್ತೆಗಳಿವೆ
ಎ) 1,  ಬಿ) 2,  ಸಿ) 3  ಡಿ) 4

ಪಾರ್ಕ್ ರಸ್ತೆಯನ್ನು ದಾಟಿದ ಬಳಿಕ ಪ್ರಸಾದ್ ತನ್ನ ಶಾಲೆ ತಲುಪಲು ಎಷ್ಟು ರಸ್ತೆಗಳನ್ನು  ದಾಟುತ್ತಾನೆ

ಎ) 4,  ಬಿ) 3,  ಸಿ) 2,  ಡಿ) 1

ನೆಹರು ರಸ್ತೆಯನ್ನು ದಾಟಿದ ನಂತರ ಪ್ರಸಾದನು ಮನೆ ತಲುಪಲು ಎಷ್ಟು ರಸ್ತೆಗಳನ್ನು  ದಾಟಬೇಕು

ಎ) 4,  ಬಿ) 6,  ಸಿ) 2,  ಡಿ) ಯಾವುದು ಅಲ್ಲ

ಪಾರ್ಕ್ ರಸ್ತೆ ಮತ್ತು ತಿಲಕ್ ರಸ್ತೆ ನಡುವೆ ಯಾವ ರಸ್ತೆಯಿದೆ

ಎ) ನೆಹರು ರಸ್ತೆ,  ಬಿ) ಮಹಾತ್ಮಗಾಂಧಿ ರಸ್ತೆ,  ಸಿ) ಶಾಸ್ತ್ರಿ ರಸ್ತೆ,  ಡಿ) ಇಂದಿರಾ ರಸ್ತೆ


ಮೊದಲನೆ ದುಂಡು ಮೇಜಿನ ಮಾತುಕತೆ ನಡೆದ ಸ್ಥಳ ಮತ್ತು ದಿನಾಂಕ
ಎ) ಲಂಡನ್ 12-3-1930,  ಬಿ) ಎಡಿನ್ ಬರೋ 14-2-1930,  ಸಿ) ಲಂಡನ್ 13-04-1920,  ಡಿ) ಲಂಡನ್ 24-9-1932



ಸಂವಿಧಾನದ ಯಾವ ಅನಚ್ಛೇದದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳನ್ನು ಸ್ಥಾಪಿಸಲಾಗಿದೆ

ಎ) 312,  ಬಿ) 320,  ಸಿ) 315,  ಡಿ) 380


ಭಾರತದ ನಾಗರೀಕರ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಯಾವ ವರ್ಷ ಅಳವಡಿಸಲಾಯಿತು

ಎ) 1952,  ಬಿ) 1975,  ಸಿ) 1979,  ಡಿ) 1981

ಸಂವಿಧಾನದ 370ನೇ ಅನುಚ್ಛೇದ ಯಾವ ರಾಜ್ಯಕ್ಕೆ ಅನ್ವಯಿಸುತ್ತದೆ
ಎ) ಕರ್ನಾಟಕ,  ಬಿ) ಬಿಹಾರ,  ಸಿ) ಜಮ್ಮು ಕಾಶ್ಮೀರ, ಡಿ) ತಮಿಳುನಾಡು


ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಯಾವ ತಿದ್ದುಪಡಿ ಅನ್ವಯ ಸಂವಿಧಾನದ ಪೀಠಿಕಾ ಭಾಗಕ್ಕೆ ಸೇರಿಸಲಾಯಿತು

ಎ) 24,  ಬಿ) 44,  ಸಿ) 34,  ಡಿ) 42

ಗಿಡದ ಯಾವ ಭಾಗದಿಂದ ಅರಿಶಿನವನ್ನು ಪಡೆಯಲಾಗುತ್ತದೆ
ಎ) ಬೇರು,  ಬಿ) ಕಾಂಡ,  ಸಿ) ಹೂವು,  ಡಿ) ಎಲೆ

ನಾವು ಉಸಿರಾಡುವ ಗಾಳಿಯಲ್ಲಿ ಆಮ್ಲಜನಕದ ಅಂದಾಜು ಶೇಕಡಾ ಪ್ರಮಾಣ
ಎ) 1,  ಬಿ) 20,  ಸಿ) 60,  ಡಿ) 80

ಬಾಯಿ ಮತ್ತು ಕಾಲಿನ ರೋಗವು ಸಾಮಾನ್ಯವಾಗಿ ಕಂಡುಬರುವುದು
ಎ) ಜಾನುವಾರುಗಳಲ್ಲಿ,  ಬಿ) ಜಾನುವಾರು ಮತ್ತು ಕುರಿಗಳಲ್ಲಿ, ಸಿ) ಹಂದಿಗಳಲ್ಲಿ,  ಡಿ) ಜಾನುವಾರು, ಕುರಿ ಮತ್ತು ಹಂದಿಗಳಲ್ಲಿ


ಮೊಟ್ಟೆಗಳನ್ನು ಇಡುವ ಸಸ್ತನಿ
ಎ) ಕಾಂಗರು,  ಬಿ) ಪ್ಲಾಟಿಪಸ್,  ಸಿ) ಓಪೋಸಂ,  ಡಿ) ಓಟರ್

ಕೆಳಕಂಡ ಯಾವ ಕೋಳಿಯ ತಳಿ ಅತಿ ಹೆಚ್ಚಿನ ಮೊಟ್ಟೆ ಇಡುತ್ತದೆ.
ಎ) ಆಸ್ಟ್ರೋ ವೈಟ್,  ಬಿ) ಬ್ರಹ್ಮ,  ಸಿ) ಕರಿಮಿನೋರ್ಕಾ, ಡಿ) ಬಿಳಿ ಲೆಗ್ಹಾರ್ನ್

ವಿಶ್ವದಲ್ಲೇ ಅತ್ಯಂತ ಚಿಕ್ಕ ಹಕ್ಕಿ ಯಾವುದು
ಎ) ಹಮ್ಮಿಂಗ್ ಬರ್ಡ್,  ಬಿ) ಗುಬ್ಬಚ್ಚಿ,  ಸಿ) ಉಷ್ಟ್ರಪಕ್ಷಿ,  ಡಿ) ಆರ್ಟಿಕ್ ಟರ್ನ್


ಈ ಕೆಳಗಿನ ಯಾವ ಗುಂಪಿನ ರಕ್ತ ಹೊಂದಿದವನು ಯಾರಿಗೆ ಬೇಕಾದರೂ ತನ್ನ ರಕ್ತವನ್ನು ದಾನ ಮಾಡಬಹುದು

ಎ) AB,  ಬಿ)A,  ಸಿ) B,  ಡಿ) O

ಆಭರಣಗಳನ್ನು ಮಾಡುವಾಗ ಚಿನ್ನಕ್ಕೆ ಸಾಮಾನ್ಯವಾಗಿ ಬೆರೆಸುವ ಲೋಹ
ಎ) ಜಿಂಕ್,  ಬಿ) ಕಬ್ಬಿಣ,  ಸಿ) ಬೆಳ್ಳಿ,  ಡಿ) ತಾಮ್ರ

ಪ್ಲಾಸ್ಟಿಕ್ ಉದ್ದಿಮೆಯಲ್ಲಿ ಪಿ.ವಿ.ಸಿ. ಎಂದು ಕರೆಯಲಾಗುವ ವಸ್ತು
ಎ) ಪಾಲಿ ವಿನೈಲ್ ಕಾರ್ಬೋನೇಟ್,  ಬಿ) ಪಾಲಿ ವಿನೈಲ್ ಕ್ಲೋರೈಡ್,  ಸಿ) ಫಾಸ್ಳೋವಿನೈಲ್ ಕ್ಲೋರೈಡ್,                  ಡಿ) ಪ್ಯಾರಾ ವಿನೈಲ್ ಕ್ಲೋರೋ ಬೆನ್ಜಿನ್

ಸಮುದ್ರದ ನೀರಿನಲ್ಲಿ ಅತಿ ಹೆಚ್ಚಾಗಿ ಸಿಗುವಂತಹ ವಸ್ತು
ಪೊಟಾಷಿಯಂ ಕ್ಲೋರೈಡ್,  ಬಿ) ಸಾಮಾನ್ಯ ಉಪ್ಪು, ಸಿ) ಮರಳು,  ಡಿ) ಆಸ್ಕಾರಿಕ್ ಆಮ್ಲ

ಹೈಡ್ರೋಕಾರ್ಬನ್ ಗಳನ್ನು ಎಷ್ಟು ಮುಖ್ಯ ರೂಪಗಳಲ್ಲಿ ವಿಂಗಡಿಸಲಾಗಿದೆ
ಎ) 3,  ಬಿ) 2,  ಸಿ) 4  ಡಿ) ಕ್ಯಾಲ್ಸಿಯಂ ಕಾರ್ಬೋನೇಟ್

ವಿಟಮಿನ್ ಸಿ ಎನ್ನುವುದು
ಎ) ಅಸಿಟಿಕ್ ಆಮ್ಲ,  ಬಿ) ಸಿಟ್ರಿಕ್ ಆಮ್ಲ,  ಸಿ) ಲಾಕ್ಟಿಕ್ ಆಮ್ಲ,  ಡಿ) ಅಸ್ಕಾರ್ಬಿಕ್ ಆಮ್ಲ

ಶಬ್ದ ಮತ್ತು ಬೆಳಕಿನ ಅಲೆಗಳ ಸಮನಾದ ಹೋಲಿಕೆ ಏನೆಂದರೆ
ಎ) ಎರಡೂ ಅಡ್ಡಲೆಗಳಾಗಿರುತ್ತದೆ,  ಬಿ) ಎರಡೂ ನೀಲಳೆಗಳಾಗಿರುತ್ತದೆ  ಸಿ) ಎರಡು ಶ್ರೇಣಿಗಳಾಗಿ ಒಡೆಯಬಹುದು,        ಡಿ) ಎರಡನ್ನೂ ದೃವೀಕರಿಸಬಹುದು

ಭಾರತದಲ್ಲಿ ವಿದ್ಯುತ್ ಪ್ರಸರಣದಲ್ಲಿ ಯಾವ ಗುಣವಾಚಕ ಸ್ಥಿರವಾಗಿರುತ್ತದೆ
ಎ) ವೋಲ್ಟೇಜ್,  ಬಿ) ಕರೆಂಟ್,  ಸಿ) ತರಂಗ, ಡಿ) ಶಕ್ತಿ

ಹವಾಮಾನ ಬದಲಾವಣೆಯ ಬಗ್ಗೆ ವಿಶ್ವಸಂಸ್ಥೆಯಿಂದ ಯೋಜಿತವಾದ ಅಂತರರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನೆಡೆಯಿತು


ಪೃಥ್ವಿಯು ಸೂರ್ಯನಿಂದ ಅತಿ ಹೆಚ್ಚು ದೂರ ಈ ದಿನಾಂಕದಂದು ಬರುತ್ತದೆ
ಎ) ಜುಲೈ-4,  ಬಿ) ಜನವರಿ-30,  ಸಿ) ಸೆಪ್ಟೆಂಬರ್-22,  ಡಿ) ಡಿಸೆಂಬರ್-22

ಮಾನವ ಹಕ್ಕುಗಳಲ್ಲಿ ಈ ಹಕ್ಕು ಸೇರಿಲ್ಲ
ಎ) ಸ್ವಾತಂತ್ರದ ಹಕ್ಕು,  ಬಿ) ಜೀವದ ಹಕ್ಕು,  ಸಿ) ಗೌರವದ ಹಕ್ಕು,  ಡಿ) ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು


ಇತ್ತೀಚೆಗೆ ರಷ್ಯಾದೇಶದ ಪಾರ್ಲಿಮೆಂಟಿಗಾಗಿ ಚುನಾವಣೆ ನೆಡೆಯಿತು.  ಸದರಿ ಪಾರ್ಲಿಮೆಂಟಿನ ಹೆಸರೇನು

ಎ) ಡ್ಯೂಮಾ,  ಬಿ) ಪೀಪಲ್ಸ್ ಕೌನ್ಸಿಲ್,  ಸಿ) ಡಯಟ್,  ಡಿ) ನೆಸೆಟ್

ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದಿಲ್ಲ
ಎ) ಬೀದರ್,  ಬಿ) ತುಮಕೂರು,  ಸಿ) ಬಾಗಲಕೋಟೆ,  ಡಿ)ಕೊಡಗು

ಮಹಾತ್ಮಾ ಗಾಂದಿಯವರ ಹಾದ ತಪ್ಪಿದ ಹಿರಿಯ ಮಗನ ಹೆಸರೇನು
ಎ) ರಸಿಕ ಲಾಲ್,  ಬಿ) ರಾಮ್ ಲಾಲ್,  ಸಿ) ಹರಿಲಾಲ್,  ಡಿ) ರಘುಪತಿಲಾಲ್

ಕಟ್ಟಕಡೆಯ ವರೆಗೂ ಭಾರತದ ಒಕ್ಕೂಟವನ್ನು ಸೇರಲು ತಿರಸ್ಕರಿಸಿದ ರಾಜಾಳ್ವಿಕೆಯಲ್ಲಿದ್ದ ಪ್ರದೇಶ
ಎ) ಜುನಾಗಢ್,  ಬಿ) ಊಜ್ ಕೋಟ್,  ಸಿ) ಹೈದರಾಬಾದ್,  ಡಿ) ಕಾಶ್ಮೀರ

ಮಾಡು ಇಲ್ಲವೇ ಮಡಿ ಎಂಬ ಘೋಷಣೆ ಮಾಡಿದವರು ಯಾರು
ಎ) ಗಾಂಧೀಜಿ,  ಬಿ) ಜವಾಹರ್ ಲಾಲ್ ನೆಹರು,  ಸಿ) ಬಾಲ ಗಂಗಾಧರ ತಿಲಕ್,  ಡಿ) ಸುಭಾಷ್ ಚಂದ್ರ ಬೋಸ್

ಸದ್ಯದ ದರಗಳ ಪ್ರಕಾರ ಒಂದು ಅಮೇರಿಕನ್ ಡಾಲರ್ಗೆ ಅಂದಾಜು ಎಷ್ಟು ಭಾರತದ ರೂಗಳಾತ್ತದೆ

ಇವರಲ್ಲಿ ಯಾರಿಗೆ ಭಾರತ ರತ್ನ ಪ್ರಶಸ್ತಿ ದೊರೆತಿಲ್ಲ
ಎ) ಎಂ.ಎಸ್.ಸುಬ್ಬಲಕ್ಷ್ಮಿ,  ಬಿ) ಪಂಡಿತ್ ರವಿಶಂಕರ್, ಸಿ) ಲತಾ ಮಂಗೇಶ್ಕರ್,  ಡಿ) ಪರ್ವೀನ್ ಸುಲ್ತಾನ್

ನೊಬೆಲ್ ಪ್ರಶಸ್ತಿಯನ್ನು ಎಷ್ಟು ವಿಷಯಗಳಿಗೆ ಕೊಡಲಾಗುತ್ತದೆ
ಎ) 6,  ಬಿ) 7,  ಸಿ) 5,  ಡಿ) 8

ಗುಂಪಿಗೆ ಸೇರದವರನ್ನು ಗುರುತಿಸಿ
ಎ) ಮೇಘನಾಥ್ ಸಹಾ,  ಬಿ) ವಿಕ್ರಂ ಸಾರಾಬಾಯಿ,  ಸಿ)ಶ್ರೀನಿವಾಸ ರಾಮಾನುಜಂ,  ಡಿ) ಸಿ.ಸುಬ್ರಮಣಿಯಂ

ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣ ಎಲ್ಲಿದೆ
ಎ) ಕಲ್ಕತ್ತಾ,  ಬಿ) ಮುಂಬೈ,  ಸಿ) ಕಾನ್ಪುರ,  ಡಿ)ದೆಹಲಿ

ಭಾರತದ ಯಾವ ಭಾಗದಲ್ಲಿ ಸೂರ್ಯ ಮೊದಲು ಗೋಚರಿಸುತ್ತಾನೆ
ಎ)ಪೋರ್ಟ್ ಬ್ಲೇರ್,  ಬಿ) ಇಟಾನಗರ,  ಸಿ) ಶಿಲ್ಲಾಂಗ್,  ಡಿ) ಕೊಲ್ಕತ್ತಾ

ವಿಶ್ವ ಏಡ್ಸ್ ದಿನವನ್ನು ಎಂದು ಆಚರಿಸಲಾಗುತ್ತದೆ
ಎ) ಡಿಸೆಂಬರ್-1,  ಬಿ)ಡಿಸೆಂಬರ್-31,  ಸಿ)ಜನವರಿ-31,  ಡಿ)ಫೆಬ್ರವರಿ-1

ನಾತುಲಾ ಯಾವ ರಾಜ್ಯದಲ್ಲಿದೆ
ಎ) ಪಶ್ಚಿಮ ಬಂಗಾಳ,  ಬಿ) ಉತ್ತರಾಂಚಲ,  ಸಿ) ಅರುಣಾಚಲ ಪ್ರದೇಶ,  ಡಿ) ಸಿಕ್ಕಿಂ

ಭಾರತೀಯ ಸೈನ್ಯ ಪಡೆಯ ಉತ್ತರ ಕಮಾಂಡ್ ಎಲ್ಲಿದೆ
ಎ) ದೆಹಲಿ,  ಬಿ) ಜಯಪುರ,  ಸಿ) ಚಂಡಿಮಹಲ್,  ಡಿ) ಉದಮ್ ಪುರ

ನಾಯಿ ಮರಿ ನಾಯಿ ಮರಿ ತಿಂಡಿಬೇಕೆ ಎಂಬ ಮಕ್ಕಳ ಪದ್ಯವನ್ನು ಬರೆದವರು
ಎ) ರಾಜರತ್ನಂ,  ಬಿ) ಬೇಂದ್ರೆ,  ಸಿ)ಕುವೆಂಪು,  ಡಿ) ಚಂದ್ರಶೇಖರ ಕಂಬಾರ

ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ್ ಕೈನಾ  ಇದನ್ನು ಬರೆದವರು
ಎ) ಬೇಂದ್ರೆ,  ಬಿ) ರಾಜರತ್ನಂ,  ಸಿ)ಜಯಂತ್ ಕಾಯ್ಕಿಣಿ,  ಡಿ) ದುಂಡಿರಾಜ್

ಮಾತೆಂಬುದು ಜೋತಿರ್ಲಿಂಗ ಎಂದು ಹೇಳಿದ ವಚನಕಾರ
ಎ) ಬಸವಣ್ಣ,  ಬಿ) ನಿರಂಜನ,  ಸಿ) ದೇ.ಜ.ಗೌ,  ಡಿ) ಹಾ.ಮಾ.ನಾಯಕ

ವಿಜ್ಞಾನ ಪ್ರಪಂಚ ವಿಶ್ವಕೋಶದ ಪ್ರಧಾನ ಸಂಪಾದಕರು
ಎ) ಶಿವರಾಮ ಕಾರಂತ,  ಬಿ) ನಿರಂಜನ,  ಸಿ) ರಾಜರತ್ನಂ,  ಡಿ) ದೇ.ಜ.ಗೌ

ಚಿಕ್ಕೋಡಿ ತಾಲ್ಲೂಕು ಯಾವ ಬೆಳೆಗೆ ಪ್ರಸಿದ್ಧಿ
ಎ) ಭತ್ತ,  ಬಿ) ಜೋಳ,  ಸಿ) ಹೊಗೆಸೊಪ್ಪು,  ಡಿ)ಕಬ್ಬು

ಸೈಂಟ್ ಮೇರಿ ಐಲ್ಯಾಂಡ್ ದ್ವೀಪವು ಯಾವ ಜಿಲ್ಲೆಯಲ್ಲಿದೆ
ಎ) ದಕ್ಷಿಣ ಕನ್ನಡ,  ಬಿ) ಉಡುಪಿ,  ಸಿ)ಉತ್ತರ ಕನ್ನಡ,  ಡಿ) ಯಾವುದು ಅಲ್ಲ

ಬಸ್ಸುಗಳನ್ನು ತಯಾರಿಸುವ ಓಲ್ವೋ ಸಂಸ್ಥೆ ಯಾವ ದೇಶಕ್ಕೆ ಸೇರಿದೆ
ಎ) ಇಂಗ್ಲೆಂಡ್,  ಬಿ) ಸ್ವೀಡನ್,  ಸಿ) ಫ್ರಾನ್ಸ್,  ಡಿ) ಜರ್ಮನಿ

ಕರ್ನಾಟಕದ ಈ ನಗರದಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯಿಲ್ಲ
ಎ) ಮೈಸೂರು,  ಬಿ) ಹುಬ್ಬಳಿ-ದಾರವಾಡ,  ಸಿ) ಬೆಂಗಳೂರು, ಡಿ) ಶಿವಮೊಗ್ಗ

ಸಂವಿಧಾನದ ಯಾವ ವಿಧಿಯ ಅನ್ವಯ ಒಂದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬಹುದು
ಎ) 356,  ಬಿ)365,  ಸಿ)256,  ಡಿ) 364

ರಾಮಾಯಣದಲ್ಲಿ ಕ್ಷತ್ರಿಯವಂಶವನ್ನು ನಾಶಮಾಡಲು ಪಣತೊಟ್ಟಿದ್ದ ಪಾತ್ರದ ಹೆಸರು
ಎ) ವಾಲಿ,  ಬಿ) ಕುಂಭಕರ್ಣ,  ಸಿ)ತಾಟಕ,  ಡಿ) ಪರಶುರಾಮ

ಬೆನಜೀರ್ ಭುಟ್ಟೋರನ್ನು ಇಲ್ಲಿ ಹತ್ಯೆ ಮಾಡಲಾಯಿತು
ಎ) ರಾವಲ್ ಪಿಂಡಿ,  ಬಿ) ಇಸ್ಲಮಾಬಾದ್,  ಸಿ)ಲಾಹೋರ್,  ಡಿ) ಕರಾಚಿ

ಭಾರತದ ಒಟ್ಟರೆ ವಿಸ್ತೀರ್ಣದಲ್ಲಿ ಕರ್ನಾಟಕದ ಅಂದಾಜು ಶೇಕಡ
ಎ) 5%,  ಬಿ)6%,  ಸಿ)7%,  ಡಿ)8%

ಕರ್ನಾಟಕದಲ್ಲಿ ಅತಿ ಹಿಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ
ಎ) ಉತ್ತರ ಕನ್ನಡ,  ಬಿ) ಮೈಸೂರು,  ಸಿ) ಕೊಡಗು,  ಡಿ) ಚಿಕ್ಕಮಗಳೂರು

ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು
ಎ) ಚಾಲುಕ್ಯ,  ಬಿ)ರಾಷ್ಟ್ರಕೂಟ,  ಸಿ) ಆದಿಲ್ ಷಾಹಿ,  ಡಿ) ವಿಜಯನಗರ

ಸಮರಸವೇ ಜೀವನ ಕೃತಿಯನ್ನು ಬರೆದವರು
ಎ) ರಾವ್ ಬಹದ್ದೂರ್,  ಬಿ) ಭಾರತೀಸುತ,  ಸಿ) ಇನಾಂದಾರ್, ಡಿ) ವಿ.ಕೃ.ಗೋಕಾಕ್

ಗುಂಪಿಗೆ ಸೇರದವರನ್ನು ಗುರುತಿಸಿ
ಎ) ಆರ್,ಕೆ.ಶ್ರೀಕಂಠನ್,  ಬಿ)ಗಂಗೂಬಾಯಿ ಹಾನಗಲ್,  ಸಿ) ಮಲ್ಲಿಕಾರ್ಜುನ ಮನ್ಸೂರ್,  ಡಿ) ಬಸವರಾಜ ರಾಜಗುರು

ಬ್ರಿಟೀಷರ ವಿರುದ್ಧ ಬಂಡಾಯ ಹೂಡಿದವರಲ್ಲಿ ಇವರು ಇಲ್ಲ
ಎ) ದೇಸಾಯಿ ಶಿವಲಿಂಗ ರುದ್ರಸರ್ಜ,  ಬಿ) ರಾಜ ವೆಂಕಟಪ್ಪ ನಾಯಕ,  ಸಿ) ನರಗುಂದದ ಭಾಸ್ಕರರಾವ್,  ಡಿ) ಮುಂಡರಗಿ ಭೀಮರಾಯ

ಧ್ವಜ ಸತ್ಯಾಗ್ರಹ ನಡೆದ ಶಿವಪುರ ಸಧ್ಯ ಈ ಜಿಲ್ಲೆಯಲ್ಲಿದೆ
ಎ) ಮೈಸೂರು,  ಬಿ) ಚಾಮರಾಜ ನಗರ,  ಸಿ) ಹಾಸನ  ಡಿ)ಮಂಡ್ಯ

ಭಾರತ ದೇಶದ ಹಂಗಾಮಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಕನ್ನಡಿಗ
ಎ) ಎಸ್. ನಿಜಲಿಂಗಪ್ಪ,  ಬಿ) ಆರ್.ದಿವಾಕರ್,  ಸಿ) ಕೆಂಗಲ್ ಹನುಮಂತಯ್ಯ,  ಡಿ) ಬಿ.ಡಿ.ಜತ್ತಿ

ಕೆ.ಕೆ.ಹಬ್ಬಾರ್ ಇವರು ಯಾವ ಕಲೆಗೆ ಪ್ರಸಿದ್ಧಿಯಾಗಿದ್ದಾರೆ
ಎ) ಚಿತ್ರಕಲೆ,  ಬಿ) ಶಿಲ್ಪಕಲೆ,  ಸಿ) ಪತ್ರಿಕೋದ್ಯಮ,  ಡಿ) ಸಂಗೀತ

ಕರ್ನಾಟಕದ ಮೊದಲ ಜಲವಿದ್ಯುತ್ ಯೋಜನೆ ಇದು
ಎ) ಕಾಳೀನದಿ,   ಬಿ) ಶಿವನ ಸಮುದ್ರ,  ಸಿ) ಭದ್ರಾ ಯೋಜನೆ,  ಡಿ) ಜೋಗ್ ಯೋಜನೆ

ಭಾರತದ ಮೊತ್ತಮೊದಲ ಮೀನುಗಾರಿಕೆ ಕಾಲೇಜನ್ನು ಇಲ್ಲಿ ಸ್ಥಾಪಿಸಲಾಗಿದೆ
ಎ) ಮಂಗಳೂರು,  ಬಿ) ಉಡುಪಿ,  ಸಿ)ಕಾರವಾರ, ಡಿ) ಅಂಕೋಲ

ಅಂತರ ರಾಷ್ಟ್ರೀಯ ಅಣುಶಕ್ತಿ ಆಯೋಗದ ಕೇಂದ್ರಸ್ಥಾನ ಎಲ್ಲಿದೆ
ಎ) ಪ್ಯಾರೀಸ್,  ಬಿ) ನ್ಯೂಯಾರ್ಕ್,  ಸಿ) ಲಂಡನ್, ಡಿ) ವಿಯನ್ನಾ

ಮಂಗಳೂರು-ಬೆಂಗಳೂರು ರೈಲು ಹಾದಿಯಲ್ಲಿ ಈ ನಿಲ್ದಾಣ ಬರುವುದಿಲ್ಲ
ಎ) ಹಾಸನ,  ಬಿ) ಮೈಸೂರು,  ಸಿ) ಮಂಡ್ಯ,  ಡಿ) ಉಡುಪಿ