Monday, April 19, 2010

viceroys of India

ಲಾರ್ಡ್ ಕ್ಯಾನಿಂಗ್ (1856 -1862)
ಕಡೆಯ ಗೌರ್ನರ್ ಜನರಲ್ ಮತ್ತು  ಮೊದಲ ವೈಸರಾಯ್, ಸಿಪಾಯಿ ದಂಗೆ ಇರವ ಕಾಲದಲ್ಲಿ ಪ್ರಾರಂಭವಾಯಿತು, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಹಿಂತೆಗೆತುಕೊಳ್ಳಲಾಯಿತು, ಕಲ್ಕತ್ತ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟತು,  1861ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು

ಲಾರ್ಡ್ ಎಲ್ಜಿನ್ (1862-1863)

ಲಾರ್ಡ್ ಲಾರೆನ್ಸ್ (1864-1869)
1865ರಲ್ಲಿ ಬಾಂಬೆ, ಮದ್ರಾಸ್ ಮತ್ತು ಕಲ್ಕತ್ತಾ ದಲ್ಲಿ ಹೈಕೋರ್ಟ್ ಸ್ಥಾಪನೆಯಾಯಿತು,  ಭಾರತೀಯ ಅರಣ್ಯ ಇಲಾಖೆ ಸ್ಥಾಪನೆ ಆಯಿತು

ಲಾರ್ಡ್ ಮಯೋ (1869-1872)
ಆರ್ಥಿಕ ವಿಕೇಂದ್ರೀಕರಣ ಭಾರತದಲ್ಲಿ ಪ್ರಾರಂಭವಾಯಿತು, 1871ರಲ್ಲಿ ಮೊದಲಬಾರಿಗೆ ಜನಗಣತಿಕಾರ್ಯ ಪ್ರಾರಂಭವಾಯಿತು, ಭಾರತೀಯ ಅಂಕಿಅಂಶಗಳ ಸಮೀಕ್ಷೆ ಪ್ರಾರಂಭವಾಯಿತು

ಲಾರ್ಡ್ ನಾರ್ತ್ಬ್ರೂಕ್ (1872-1876)

ಲಾರ್ಡ್ ಲಿಟ್ಟನ್ನ್ (1876-1890)
1877ರಲ್ಲಿ ಡೆಲ್ಲಿದರ್ಬಾರ್ಅನ್ನು ನೆಡೆಸಿ ವಿಕ್ಟೋರಿಯಾ ರಾಣಿಗೆ ಕೈಸರ್-ಎ-ಹಿಂದ್ ಬಿರುದನ್ನು ನೀಡಲಾಯಿತು, 1878ರಲ್ಲಿ ಆಯುಧಗಳ ಕಾಯ್ದೆಯನ್ನು ಜಾರಿಗೆತರಲಾಯಿತು, 1878ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆ ಜಾರಿಯಾಯಿತು

ಲಾರ್ಡ್ ರಿಪ್ಪನ್ (1880-1894)(ಸ್ಥಳೀಯ ಸರ್ಕಾರಗಳ ಕಾಯ್ದೆಯ ಪಿತಾಮಹ)
1882ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಪುನರಾವರ್ತಿಸಲಾಯಿತು ಮತ್ತು ಸ್ಥಳೀಯ ಸರ್ಕಾರಗಳ ಕಾಯ್ದೆಯನ್ನು ಪ್ರಾರಂಭಿಸಲಾಗಿತು, ಹಂಟರ್ ಕಮಿಷನಿನಂತೆ  ಪ್ರಾಥಮಿಕ ವಿದ್ಯಾಭ್ಯಾಸವನ್ನು ಉತ್ತಮಪಡಿಸಲಾಯಿತು, ಕಾರ್ಖಾನೆಗಳ ಕಾಯ್ದೆ ಜಾರಿಗೆತಂದು ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಗೊಳಿಸಲಾಯಿತು, 1883ಯಲ್ಲಿ ಇಲ್ಬಿರ್ಟ್ ಬಿಲ್ ಜಾರಿಯಾಯಿತು

ಲಾರ್ಡ್ ಡರ್ಫಿನ್ (1884-1888)
1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭವಾಯಿತು

ಲಾರ್ಡ್ ಲ್ಯಾನ್ಸ್ಡೌನ್ (1888-1894)
2ನೇ ಕಾರ್ಖಾನೆ ಕಾಯ್ದೆಪ್ರಕಾರ  ವಾರದ ರಜಾದಿನ ಮಂಜೂರಾಗಿ ಕಾರ್ಖಾನೆ ವೇಳಾಪಟ್ಟಿ ಪ್ರಾರಂಭವಾಯಿತು, 1892ರ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು, ಡ್ಯುರಾಂಡ್  ಆಯೋಗದಂತೆ ಭಾರತ ಮತ್ತು ಆಫ್ಘಾನಿಸ್ಥಾನದ ಸೀಮೆ ಗುರುತಿಸಲಾಯಿತು

ಲಾರ್ಡ್ ಎಲ್ಜಿನ್ 2 (1894-1899)

ಲಾರ್ಡ್ ಕರ್ಜನ್ (1899-1905)
1905ರಲ್ಲಿ ಬಂಗಾಳದ ವಿಭಜನೆಯಾಯಿತು,  ಪೋಲೀಸ್ ಆಡಳಿತದಲ್ಲಿನ ಪರಿಶೀಲನೆಗಾಗಿ ಫ್ರೇಜರ್ ನನ್ನು ನೇಮಿಸಲಾಯಿತು, 1904ರಲ್ಲಿ ಪುರಾತನ ಪರಿಕರಗಳ ರಕ್ಷಣಾ ಕಾಯ್ದೆ ಜಾರಿಗೆತರಲಾಯಿತು, ಆರ್ಕಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸ್ಥಾಪಿಸಲಾಯಿತು, 1899ರಲ್ಲಿ ಭಾರತೀಯ ನಾಣ್ಯ ಮತ್ತು ಕಾಗದ ಹಣದ ಕಾಯ್ದೆ ಜಾರಿಮಾಡಲಾಯಿತು

ಲಾರ್ಡ್ ಮಿಂಟೋ (1905-1910)
ಕ್ರಾಂತಿಕಾರಿಗಳ ವಿರುದ್ಧ ಅನೇಕ ಪ್ರತಿಬಂಧಕ ಕಾಯ್ದೆಯನ್ನು ಜಾರಿಮಾಡಲಾಗಿತು, 1909 ರಲ್ಲಿ ಮಾರ್ಲೆ-ಮಿಂಟೋ ಕಾಯ್ದೆಯನ್ನು ಜಾರಿಮಾಡಲಾಯಿತು

ಲಾರ್ಡ್ ಹರ್ಡಿಂಜ್ (1910-1916)
1911ರಲ್ಲಿ ರಾಜ 5ನೇ ಜಾರ್ಜ್ ದರ್ಬಾರ್ ನೆಡೆಯಿತು ಮತ್ತು ಬಂಗಾಳದ ವಿಭಜನೆ ಕೊನೆಗೊಂಡಿತು, 1911ರಲ್ಲಿ  ರಾಜಧಾನಿ ಕಲ್ಕತ್ತದಿಂದ ಡೆಲ್ಲಿಗೆ ಸ್ಥಳಾಂತರಗೊಂಡಿತು, 1915ರಲ್ಲಿ ಗಾಂಧೀಜಿ ದ.ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರು,  ಅನಿಬೆಸೆಂಟ್ ಹೋಂ ರೂಲ್ ಚಳುವಳಿ ಪ್ರಾರಂಭಿಸಿದರು

ಲಾರ್ಡ್ ಚೆಲ್ಮ್ಸ್ ಫೋರ್ಡ್ (1916-1921)
1917ರಲ್ಲಿ ಆಗಸ್ಟ್ ಘೋಷಣೆ ಮಾಡಲಾಯಿತು,  1919ರಲ್ಲಿ ಗೌರ್ನಮೆಂಟ್ ಆಫ್ ಇಂಡಿಯಾ(ಮಾಂಟೆಗೋ-ಚೆಲ್ಮ್ಸ್ ಫರ್ಡ್) ಆಕ್ಟ್ ಘೋಷಣೆ, ರೌಲತ್ ಆಕ್ಟ್ ಜಾರಿ ಮತ್ತು ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್ ದುರಂತ ನೆಡೆಯಿತು, ಅಸಹಾಕಾರ ಚಳುವಳಿ ನೆಡೆಯಿತು, 1917ರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಸಡ್ಲರ್ ಆಯೋಗ ಸ್ಥಾಪನೆ.

ಲಾರ್ಡ ರೀಡಿಂಗ್ (1921-1926)
ಅಸಹಕಾರ ಚಳುವಳಿಯನ್ನು ಮಟ್ಟಹಾಕಲಾಯಿತು, 1921ರಲ್ಲಿ ವೇಲ್ಸ್ ರಾಜಕುಮಾರ ಭಾರತಕ್ಕೆ ಭೇಟಿನೀಡಿದನು,  ಮೋಪ್ಲ ದಂಗೆಯನ್ನು ಅಡಗಿಸಲಾಯಿತು, ಸ್ವರಾಜ್ ಪಕ್ಷ ಸ್ಥಾಪನೆ, 1921ರಲ್ಲಿ ಎಂ.ಎನ್.ರಾಯ್ ರ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆ, 1925 ಕಕ್ರಾಯಿ ರೈಲು ದರೋಡೆ, 1923ರಲ್ಲಿ ಕೋಮುಗಲಭೆ, 

ಲಾರ್ಡ್ ಇರ್ವಿನ್ (1926-1931)
1928ರಲ್ಲಿ ಸೈಮನ್ ಆಯೋಗದ ಭಾರತದ ಭೇಟಿ, 1929 ಕಾಂಗ್ರೆಸ್ ನಿಂದ ಭಾರತೀಯ ಸಂಕಲ್ಪ ನಿರ್ಣಯ, 1930 ಮಾರ್ಚ್ 12 ಉಪ್ಪಿನ ಸತ್ಯಾಗ್ರಹ, 1930 ಅಸಹಕಾರ ಚಳುವಳಿ ಮತ್ತು ಇಂಗ್ಲೆಂಡಿನಲ್ಲಿ ಮೊದಲ ದುಂಡುಮೇಜಿನ ಸಭೆ, 1931 ಗಾಂಧಿ-ಇರ್ವಿನ್ ಒಪ್ಪಂದ, 1929 64ದಿನಗಳ ಉಪವಾಸದ ನಂತರ ಜತಿನ್ ದಾಸ್ ಅವರ ಮರಣ

ಲಾರ್ಡ್ ವಿಲ್ಲಿಂಗ್ಟನ್ (1931-1936)
1931 ಲಂಡನ್ ನಲ್ಲಿ 2ನೇ ದುಂಡುಮೇಜಿನ ಸಭೆ, 1932 ಕೋಮುಗಲಭೆ ಇದರ ವಿರುದ್ಧ ಗಾಂಧೀಜಿಯ ಉಪವಾಸ ಸತ್ಯಾಗ್ರಹ, 1932ರಲ್ಲಿ 3ನೇ ದುಂಡುಮೇಜಿನ ಸಭೆ,  1953 ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಚಾಲನೆಗೆ ತೀರ್ಮಾನ

ಲಾರ್ಡ್ ಲಿಂಗ್ಲಿತ್ಗೋ (1936-1944)
1942 ಕ್ರಿಪ್ಸ್ ಮಿಷನ್ ಜಾರ್, 1942 ಆಗಸ್ಟ್ 8 ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭ

ಲಾರ್ಡ್ ವೇವೆಲ್ (1944-1947)
1945 ಜೂನ್25 ಶಿಮ್ಲಾ ಸಮಾವೇಶ, ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ಮೇ 16, 

ಲಾರ್ಡ್ ಮೌಂಟ್ ಬ್ಯಾಟನ್ (1947)
ಕಡೆಯ ಬ್ರಿಟೀಷ್ ವೈಸ್ರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್,  ಜೂನ್3 ಭಾರತ ವಿಭಜನೆಯ ನಿರ್ಧಾರ, ಜುಲೈ4 ಭಾರತ ಸ್ವಾತಂತ್ರ ಕಾಯ್ದೆಯ ಅನುಷ್ಠಾನ ಇದರ ಪ್ರಕಾರ ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ, ಇವರ ನಂತರ ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್ಲರಾಗಿ ಸಿ.ರಾಜಗೋಪಾಲಚಾರಿ ನೇಮಕ ಇವರೇ ಕಡೆಯ ಗೌರ್ನರ್ ಜನರಲ್